Asianet Suvarna News Asianet Suvarna News

Culture : ಸಾಯೋವರೆಗೂ ಕೂದಲು ಕತ್ತರಿಸಲ್ಲ ಈ ಮಹಿಳೆಯರು!

ದಿನಕ್ಕೊಂದು ಹೇರ್ ಸ್ಟೈಲ್ ಪ್ರಸಿದ್ಧಿ ಪಡೆಯುತ್ತಿದೆ. ಉದ್ದದ ಕೂದಲಿಗೆ ಕತ್ತರಿ ಹಾಕಿ ಚೋಟುದ್ದ ಮಾಡಿಕೊಳ್ಳುವವರಿದ್ದಾರೆ. ಫ್ಯಾಷನ್ ಹೆಸರಿನಲ್ಲಿ ಮಹಿಳೆಯರು ದೇಹದ ಮೇಲಿನ ಕೂದಲನ್ನು ಶೇವ್ ಮಾಡ್ತಾರೆ. ಆದ್ರೆ ಆಧುನಿಕ ಜಗತ್ತಿನಲ್ಲೂ ಕೂದಲಿಗೆ ಕತ್ತರಿ ಹಾಕದ ಸಮುದಾಯವೊಂದಿದೆ. ಹುಟ್ಟಿದಾಗಿನಿಂದ ಸಾಯುವವರೆಗೂ ಈ ಮಹಿಳೆಯರು ಕೂದಲು ಕತ್ತರಿಸೋದಿಲ್ಲ, ಶೇವ್ ಮಾಡೋದಿಲ್ಲ.
 

Amish Women Are Neither Allowed To Cut Their Hair
Author
First Published Oct 13, 2022, 6:10 PM IST

ಜಗತ್ತು ಮಾಡರ್ನ್ ಆಗ್ತಿದೆ. ಜನರು ಫ್ಯಾಷನ್ ಜಗತ್ತಿಗೆ ಒಗ್ಗಿಕೊಳ್ತಿದ್ದಾರೆ. ಇದೇ ಕಾರಣಕ್ಕೆ ಅನೇಕ ಸಂಪ್ರದಾಯ, ಪದ್ಧತಿಗಳು ಮೂಲೆ ಸೇರಿವೆ. ಹಿಂದೂ ಧರ್ಮದಲ್ಲಿ ಕೂಡ ಮಹಿಳೆ ಕೂದಲು ಕತ್ತರಿಸುವುದನ್ನು ನಿಷೇಧಿಸಲಾಗಿದೆ. ಗಂಡು ಮಕ್ಕಳಿಗೆ ಮಾತ್ರ ಕೂದಲು ಕತ್ತರಿಸುವ ಅಧಿಕಾರವಿದೆ. ಆದ್ರೆ ಈ ಪದ್ಧತಿಯನ್ನು ಈಗ ಯಾರೂ ಪಾಲನೆ ಮಾಡ್ತಿಲ್ಲ ಅಂದ್ರೆ ಅತಿಶಯೋಕ್ತಿಯಲ್ಲ. ಬಹುತೇಕ ಮಹಿಳೆಯರು ಸೌಂದರ್ಯದ ದೃಷ್ಟಿಯಿಂದ ಕೂದಲು ಕತ್ತರಿಸಿಕೊಳ್ತಾರೆ. ಕೂದಲಿಗೆ ಕಲರಿಂಗ್ ಮಾಡ್ತಾರೆ. ಹಾಗೆ ದೇಹದ ಇತರ ಭಾಗದಲ್ಲಿರುವ ಕೂದಲನ್ನು ಕೂಡ ತೆಗೆಯುತ್ತಾರೆ. ಹೆಣ್ಮಕ್ಕಳು ಕೂದಲು ಕತ್ತರಿಸುವ ಪದ್ಧತಿ ಇಲ್ಲವಾದ್ರೂ ಅದು ಅಪರಾಧವಲ್ಲ. ಆದ್ರೆ ಜಗತ್ತು ಎಷ್ಟೇ ಮುಂದುವರೆದ್ರೂ ಕೆಲ ಪ್ರದೇಶದ ಜನರು ತಮ್ಮ ಸಂಪ್ರದಾಯವನ್ನು ಬಿಟ್ಟಿಲ್ಲ. ಹಿಂದಿನಿಂದ ನಡೆದುಬಂದ ಪದ್ಧತಿಯನ್ನು ಈಗ್ಲೂ ಆಚರಿಸಿಕೊಂಡು ಬರ್ತಿದ್ದಾರೆ. ಅಂಥವರಲ್ಲಿ ಅನಾಬ್ಯಾಪ್ಟಿಸಮ್ ಕ್ರಿಶ್ಚಿಯನ್ ಚರ್ಚ್‌ಗೆ ಸಂಬಂಧಿಸಿದ ಅಮಿಶ್ ಸಮುದಾಯ ಈಗ್ಲೂ ಒಂದು ನಿಯಮವನ್ನು ಪಾಲಿಸಿಕೊಂಡು ಬರ್ತಿದೆ. ಅಮಿಶ್ ಸಮುದಾಯದ ಹೆಣ್ಮಕ್ಕಳು ಈಗ್ಲೂ ಕೂದಲು ಕತ್ತರಿಸುವುದಿಲ್ಲ. ದೇಹದ ಮೇಲಿರುವ ಕೂದಲನ್ನು ತೆಗೆಯುವುದಿಲ್ಲ. 

ಯಸ್, ಆಶ್ಚರ್ಯವಾದ್ರೂ ಇದು ಸತ್ಯ. ಆಧುನಿಕ ಯುಗದಲ್ಲೂ ಇಲ್ಲಿನ ಜನರು ಸಂಪ್ರದಾಯ (Tradition) ಪಾಲನೆ ಮಾಡ್ತಿದ್ದಾರೆ. ಕೂದಲು (Hair ) ಕತ್ತರಿಸುವ ಬಗ್ಗೆ ಇವರಲ್ಲಿ ಕೆಲ ನಂಬಿಕೆಯಿದೆ.

ಕೂದಲು ಕತ್ತರಿಸುವುದನ್ನು ನಾಚಿಕೆಗೇಡು ಎಂದು ಭಾವಿಸ್ತಾರೆ ಇಲ್ಲಿನವರು: ಅಮಿಶ್ (Amish) ಸಮುದಾಯದ ಮಹಿಳೆಯರು ಕೂದಲಿನ ಬಗ್ಗೆ ಬೈಬಲ್ (Bible) ನಿಯಮಗಳನ್ನು ಅನುಸರಿಸುತ್ತಾರೆ. ಇದರ ಪ್ರಕಾರ, ಅವರು  ಕೂದಲನ್ನು ಕತ್ತರಿಸುವಂತಿಲ್ಲ. ಇಷ್ಟೇ ಅಲ್ಲ ಮಹಿಳೆಯರು ಕೂದಲನ್ನು ಸದಾ ಕಟ್ಟಿರಬೇಕು ಮತ್ತು ಬಟ್ಟೆಯಿಂದ ಮುಚ್ಚಬೇಕು. ಮನೆಯಿಂದ ಹೊರಗೆ ಹೋದಾಗ ಕೂದಲನ್ನು ಬಿಡುವ ಅಧಿಕಾರ ಆಕೆಗಿಲ್ಲ. ಮನೆಯಲ್ಲಿ ಮಾತ್ರ ಕೂದಲು ಬಿಚ್ಚುವ ಸ್ವಾತಂತ್ರ್ಯವಿದೆ. ಮಹಿಳೆ ತನ್ನ ಕೂದಲನ್ನು ಕತ್ತರಿಸಿದ್ರೆ ಇದನ್ನು ನಾಚಿಕೆಗೇಡಿ ಕೆಲಸವೆಂದು ಭಾವಿಸಲಾಗುತ್ತದೆ. ಇದನ್ನು ಅವಮಾನ ಎಂದುಕೊಳ್ತಾರೆ ಜನರು.

ದೇಹದ ಕೂದಲು ಮುಚ್ಚಿಟ್ಟುಕೊಳ್ತಾರೆ ಮಹಿಳೆಯರು: ಅಮಿಶ್ ಸಮುದಾಯದ ಮಹಿಳೆಯರಿಗೆ ಕೂದಲು ಕತ್ತರಿಸುವ ಅಧಿಕಾರ ಒಂದೇ ಅಲ್ಲ ಶೇವ್ ಮಾಡುವ ಅಧಿಕಾರ ಕೂಡ ಇಲ್ಲ. ಈ ಮಹಿಳೆಯರು ಸಂಪ್ರದಾಯದಂತೆ ದೇಹದ ಕೂದಲನ್ನು ತೆಗೆಯುವುದಿಲ್ಲ. ಇದನ್ನು ಮುಚ್ಚಿಡಲು ಉದ್ದ ತೋಳಿನ ಡ್ರೆಸ್ ಧರಿಸ್ತಾರೆ. ಮಂಡಿಯಿಂದ ಕೆಳಗೆ ಬರುವಂತಹ ಬಟ್ಟೆ ಹಾಕ್ತಾರೆ. ಹಾಗೆ ಪಾದಗಳಿಗೆ ಡಾರ್ಕ್ ಬಣ್ಣದ ಸಾಕ್ಸ್ ಹಾಕಿಕೊಳ್ತಾರೆ.

ಚರ್ಮದ ಆರೈಕೆಗೆ ವಿಟಮಿನ್ ಸಿ ಸಿರಮ್‌ ಬಳಸೋ ಮುನ್ನ ಇವಿಷ್ಟು ವಿಚಾರ ಗೊತ್ತಿರ್ಲಿ

ತಲೆ ಸ್ನಾನಕ್ಕಿಲ್ಲ ನಿಯಮ: ಅಮಿಶ್ ಸಮುದಾಯದ ಮಹಿಳೆಯರು ತಮ್ಮಿಷ್ಟದಂತೆ ತಲೆ ಸ್ನಾನ ಮಾಡಬಹುದು. ಇದಕ್ಕೆ ಯಾವುದೇ ವಿಶೇಷ ನಿಯಮವಿಲ್ಲ. ಉಳಿದ ಮಹಿಳೆಯರಂತೆ ಈ ಮಹಿಳೆಯರು ಕೂಡ ಮಾರುಕಟ್ಟೆಯಲ್ಲಿ ಸಿಗುವ ಶಾಂಪೂ ಬಳಸಿ ಹೇರ್ ವಾಶ್ ಮಾಡ್ತಾರೆ. 

ಅಂಡರ್ ಆರ್ಮ್ ಶೇವ್: ಮೊದಲೇ ಹೇಳಿದಂತೆ ದೇಹದ ಯಾವುದೇ ಭಾಗದ ಕೂದಲನ್ನು ಮಹಿಳೆಯರು ತೆಗೆಯುವಂತಿಲ್ಲ. ಅಂಡರ್ ಆರ್ಮ್ ಶೇವ್ ಮಾಡದ ಕಾರಣ ಬೆವರು ಹೆಚ್ಚಾಗಿ ಬರುತ್ತದೆ. ಅನೇಕ ಮಹಿಳೆಯರು ಬೆವರಿನ ವಾಸನೆಯಿಂದ ಮುಜುಗರಕ್ಕೊಳಗಾಗುವ ಸಾಧ್ಯತೆಯಿರುತ್ತದೆ. ಹಾಗಾಗಿ ಮಹಿಳೆಯರು ಡಿಯೋ ಬಳಕೆ ಮಾಡ್ತಾರೆ. ಈ ಮಹಿಳೆಯರು ಸೆಂಟ್ ಅಥವಾ ಡಿಯೋ ಬಳಸಬಹುದು. ಅದಕ್ಕೆ ಯಾವುದೇ ನಿಯಮವಿಲ್ಲ. ಆದ್ರೆ ಅಂಡರ್ ಆರ್ಮ್ ಶೇವ್ ಮಾಡಿದ್ರೆ ಶಿಕ್ಷೆಯಾಗುವ ಸಾಧ್ಯತೆಯೂ ಇರುತ್ತದೆ.

ಮಹಿಳೆಯರೇ ಹುಷಾರ್‌ ! ಗರ್ಭ ನಿರೋಧಕ ಮಾತ್ರೆ ಸೇವನೆಯಿಂದ ರಕ್ತಸ್ರಾವ ಆಗ್ಬಹುದು

ಇದಕ್ಕಿದೆ ರಿಯಾಯಿತಿ: ಅಮಿಶ್ ಸಮುದಾಯದ ಮಹಿಳೆಯರು ಕಟ್ಟುನಿಟ್ಟಾಗಿ ನಿಯಮ ಪಾಲನೆ ಮಾಡ್ತಿದ್ದಾರೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಸಮುದಾಯದ ಮುಖಂಡರೇ ಕೆಲ ನಿಯಮ ಸಡಿಲಗೊಳಿಸಿದ್ದಾರೆ. ಕೂದಲು ದಟ್ಟವಾಗಿದ್ದರೆ ಬಾಚಣಿಕೆ ಬಳಸಲು ಅನುಮತಿ ನೀಡಲಾಗಿದೆ. ಹಾಗೆಯೇ ಕೆಲ ಮಹಿಳೆಯರಿಗೆ ಶೇವಿಂಗ್ ಗೆ ಅನುಮತಿ ಸಿಕ್ಕಿದೆ. 
 

Follow Us:
Download App:
  • android
  • ios