Asianet Suvarna News Asianet Suvarna News

ಬದುಕಿನ ಬಂಡಿ ಎಳೆಯಲು ಕ್ಯಾಬ್ ಚಾಲಕಿಯಾದ ಅರ್ಚನಾ ಕತೆ ಇಂಟರ್‌ನೆಟ್‌ನಲ್ಲಿ ಸಖತ್ ವೈರಲ್

ಸೈಕಲ್ ಚಾಲನೆಯೂ ಬಾರದ ಹೆಣ್ಣು ಮಗಳೊಬ್ಬಳು ಬದುಕಿನ ಬಂಡಿ ಎಳೆಯುವುದಕ್ಕಾಗಿ ಕ್ಯಾಬ್‌ ಚಾಲಕಿಯಾಗಿ ಕೆಲಸ ಮಾಡುತ್ತಿದ್ದರು ಅವರ ಸ್ಟೋರಿಯೊಂದನ್ನು  ಡಿಜಿಟಲ್ ಕ್ರಿಯೇಟರ್‌ವೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ಸಖತ್ ವೈರಲ್ ಆಗಿದೆ. 

Ahmedabad Female Ola Cab Driver archana patil inspired internet by her life struggle and success akb
Author
First Published Aug 18, 2024, 10:38 AM IST | Last Updated Aug 18, 2024, 10:38 AM IST

ಅಹಮದಾಬಾದ್‌ನಲ್ಲಿ ಓಲಾ ಕ್ಯಾಬ್ ಚಾಲಕಿ ಅರ್ಚನಾ ಪಟೇಲ್ ಅವರೊಂದಿಗಿನ ತಮ್ಮ ಅನುಭವವನ್ನು ಡಿಜಿಟಲ್ ಕ್ರಿಯೇಟರ್‌ ಓಜಸ್ ದೇಸಾಯಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಹಿಂದೊಮ್ಮೆ ಸೈಕಲ್ ಚಾಲನೆಯೂ ಬಾರದ ಅರ್ಚನಾ ಅವರ ಈಗಿನ ಅದ್ಭುತ ಚಾಲನಾ ಕೌಶಲ್ಯ ಅವರನ್ನು ಎಷ್ಟು ಪ್ರಭಾವಿಸಿತು ಎಂದರೆ ಮೆಚ್ಚುಗೆ ವ್ಯಕ್ತಪಡಿಸದೆ ಇರಲಾರು ಸಾಧ್ಯವೇ ಇಲ್ಲ ಎಂದು ಓಜಸ್ ದೇಸಾಯಿ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ. 

ಸಾಮಾಜಿಕ ಮಾಧ್ಯಮದಲ್ಲಿ ಓಜಸ್ ದೇಸಾಯಿ ಅವರು ತಮ್ಮ ಫೇಸ್‌ಬುಕ್‌ನಲ್ಲಿ ಕ್ಯಾಬ್ ಚಾಲಕಿ ಅರ್ಚನಾ ಪಟೇಲ್ ಅವರ ಅದ್ಭುತ ಕಥೆಯನ್ನು ಹಂಚಿಕೊಂಡಿದ್ದಾರೆ. ಅರ್ಚನಾ ವಾಹನ ಚಾಲನೆ ಮಾಡುವ ಒಂದು ಚಿತ್ರವನ್ನು ಪೋಸ್ಟ್ ಮಾಡುತ್ತಾ ಅವರು ಬರೆದಿದ್ದಾರೆ: 'ಇಂದು ಅಹಮದಾಬಾದ್‌ನಲ್ಲಿ, ನಾನು ರೈಲು ನಿಲ್ದಾಣಕ್ಕೆ ಹೋಗಲು ಓಲಾ ಕ್ಯಾಬ್ ಬುಕ್ ಮಾಡಿದ್ದೆ. ದೃಢೀಕರಣ ಸಂದೇಶದಲ್ಲಿ ಚಾಲಕರ ಹೆಸರು ಅರ್ಚನಾ ಪಾಟೀಲ್ ಎಂದು ನಮೂದಿಸಲಾಗಿತ್ತು. ನಾನು ಸ್ವಲ್ಪ ಆಶ್ಚರ್ಯಚಕಿತನಾದೆ, ಏಕೆಂದರೆ ನಾನು ಈ ಮೊದಲು ಎಂದಿಗೂ ಮಹಿಳಾ ಕ್ಯಾಬ್ ಚಾಲಕಿಯೊಂದಿಗೆ ಪ್ರಯಾಣಿಸಿರಲಿಲ್ಲ. ಆದಾಗ್ಯೂ, ಅವರು ಎಷ್ಟು ಸರಾಗವಾಗಿ ಕಾರನ್ನು ಓಡಿಸಿದರು ಎಂದರೆ ನಾನು ಅರ್ಚನಾ ಅವರ ಅಭಿಮಾನಿಗಳ ಪಟ್ಟಿಗೆ ಸೇರದೆ ಇರಲು ಸಾಧ್ಯವಾಗಲಿಲ್ಲ' ಎಂದು ಬರೆದುಕೊಂಡಿದ್ದಾರೆ 

ಇದನ್ನೂ ಓದಿ: ದೇಶದ ಚಾಣಾಕ್ಷ ಮಹಿಳಾ ಡಿಟೆಕ್ಟಿವ್ ಕೊಲೆಗಾರನ ಮನೆಯಲ್ಲಿ 6ತಿಂಗಳು ಕೆಲಸದಾಳು, 80ಸಾವಿರ ಪ್ರಕರಣ ಬೇಧಿಸಿದ ನಾರಿಶಕ್ತಿ

 ಅರ್ಚನಾ ಪಟೇಲ್ ಕ್ಯಾಬ್ ಚಾಲನೆ ಆಯ್ಕೆ ಮಾಡಿಕೊಂಡಿದ್ದು ಏಕೆ?

ದೇಸಾಯಿ ಅವರು ಅರ್ಚನಾ ಪಟೇಲ್ ಅವರನ್ನು ಈ ವೃತ್ತಿ ಏಕೆ ಆಯ್ಕೆ ಮಾಡಿಕೊಂಡಿರಿ ಎಂದು ಕೇಳಿದಾಗ  ಅವರು ಭಾವುಕರಾದರು, ನಂತರ ಮಾತನಾಡಿದ ಅರ್ಚನಾ, ಇದಕ್ಕೂ ಮೊದಲು ಅರ್ಚನಾ ಅವರ ಪತಿ ಕ್ಯಾಬ್ ಚಾಲಕರಾಗಿದ್ದರು, ಆದರೆ ಆರೋಗ್ಯ ಸಮಸ್ಯೆಗಳಿಂದಾಗಿ ಅವರು ಈಗ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಕುಟುಂಬವನ್ನು ಪೋಷಿಸಲು ಯಾರಾದರೂ ಒಬ್ಬರು ಕೆಲಸ ಮಾಡಲೇಬೇಕು, ಹೀಗಾಗಿ ನಾನೇ ಏಕೆ ಮಾಡಬಾರದು ಎಂಬ ಆಲೋಚನೆಯೊಂದಿಗೆ ಅವರು ಮುಂದೆ ಬಂದರು. ಅವರಿಗೆ ಕೇವಲ ಸೈಕಲ್ ಓಡಿಸಲು ಮಾತ್ರ ಬರುತ್ತಿತ್ತು. ಆದಾಗ್ಯೂ, ಅವರು 6 ತಿಂಗಳು ಕಠಿಣ ಪರಿಶ್ರಮದಿಂದ ಕಾರು ಚಾಲನೆ ಕಲಿತರು. ಪರವಾನಗಿ ಪಡೆದು ಕ್ಯಾಬ್ ಚಾಲನೆ ಮಾಡಲು ಪ್ರಾರಂಭಿಸಿದರು ಎಂದು ಅರ್ಚನಾ ಹೇಳಿಕೊಂಡಿದ್ದಾರೆ. 

 

ಓಜಸ್ ದೇಸಾಯಿ ಮಹಿಳಾ ಕ್ಯಾಬ್ ಚಾಲಕಿಯ ಗುಣಗಳನ್ನು ವಿವರಿಸಿದ್ದಾರೆ

ಅರ್ಚನಾ ಪಟೇಲ್ ಅವರ ಚಾಲನೆಯ ಬಗ್ಗೆ ಓಜಸ್ ದೇಸಾಯಿ ಮಾತನಾಡಿ, ಇಷ್ಟು ಸಮರ್ಪಕವಾದ ಚಾಲನೆಯನ್ನು ತಾವು ಬಹಳ ವಿರಳವಾಗಿ ನೋಡಿದ್ದಾಗಿ ಹೇಳಿದ್ದಾರೆ. ಅವರು ಸಂಪೂರ್ಣ ಶಿಸ್ತಿನಿಂದ ಕಾರನ್ನು ಓಡಿಸಿದರು. ಇದಕ್ಕೂ ಮೊದಲು ಅವರು ಮಹಿಳೆಯರು ಆಟೋ ಓಡಿಸುವುದನ್ನು ನೋಡಿದ್ದರಂತೆ. ಆದರೆ ಕ್ಯಾಬ್ ಚಾಲಕಿಯಾಗಿ ಅರ್ಚನಾ ಚಾಲನೆ  ನೋಡಿ ಅವರು ರೋಮಾಂಚನಗೊಂಡರಂತೆ. ಓಜಸ್ ದೇಸಾಯಿ ಅವರ ಈ ಪೋಸ್ಟ್  ಈಗ ವೈರಲ್ ಆಗಿದೆ. ಬಳಕೆದಾರರು ಮಹಿಳೆಯ ಧೈರ್ಯವನ್ನು ಮೆಚ್ಚಿ ಪ್ರಶಂಸೆಗಳನ್ನು ವ್ಯಕ್ತಪಡಿಸಿದ್ದಾರೆ.  ವಾಹ್, ಇದು ನಿಜವಾದ ಸ್ತ್ರೀ ಶಕ್ತಿ ಎಂದು ಒಬ್ಬರು ಬರೆದಿದ್ದಾರೆ. ತಾಳ್ಮೆ ಮತ್ತು ದೃಢಸಂಕಲ್ಪದ ಒಂದು ನೈಜ ಉದಾಹರಣೆ. ಒಬ್ಬ ವ್ಯಕ್ತಿಯು ದೃಢನಿಶ್ಚಯ ಮಾಡಿದರೆ ಏನನ್ನೂ ಸಾಧಿಸಬಹುದು ಎಂದು ಮತ್ತೊಬ್ಬರು ಬರೆದಿದ್ದಾರೆ

ಇದನ್ನೂ ಓದಿ: ಶೀನಾ ರಾಣಿ : ಅಗ್ನಿ-5 ಯಶಸ್ಸಿನ ಹಿಂದೆ ಇರುವ ನಾರಿಶಕ್ತಿ ಇವರು
 

Latest Videos
Follow Us:
Download App:
  • android
  • ios