ನಿವೇತಾ ಪೇತುರಾಜ್-ಉದಯನಿಧಿ ಸ್ಟ್ಯಾಲಿನ್ ಕುರಿತಾಗಿ 'ಬಿಗ್; ಗಾಸಿಪ್, 'ಇದೆಲ್ಲ ಸುಳ್ಳು..' ಎಂದ ನಟಿ!
ನಟಿ ನಿವೇತಾ ಪೇತುರಾಜ್ ಹಾಗೂ ಡಿಎಂಕೆ ನಾಯಕ ಮತ್ತು ತಮಿಳುನಾಡು ಸಿಎಂ ಎಂಕೆ ಸ್ಟ್ಯಾಲಿನ್ ಅವರ ಪುತ್ರ ಉದಯನಿಧಿ ಸ್ಟ್ಯಾಲಿನ್ ನಡುವಿನ ಗಾಸಿಪ್ ಸಖತ್ ಸದ್ದು ಮಾಡಿದೆ. ಈ ಕುರಿತಾಗಿ ಸ್ವತಃ ನಿವೇತಾ ಪೇತುರಾಜ್ ಕೆಲ ದಿನಗಳ ಹಿಂದೆ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.
ನಟಿ ನಿವೇತಾ ಪೇತುರಾಜ್ ಹಾಗೂ ಉದಯನಿಧಿ ಸ್ಟ್ಯಾಲಿನ್ ನಡುವೆ ರಿಲೇಷನ್‌ಷಿಪ್ ಇದೆ ಎನ್ನುವಂಥ ಬಿಗ್ ಗಾಸಿಪ್ ತಮಿಳುನಾಡಿನಲ್ಲಿ ಸುದ್ದಿಯಾಗಿದೆ. ಅದಕ್ಕೆ ಕಾರಣ ಯೂಟ್ಯೂಬ್ ಚಾನೆಲ್‌ನಲ್ಲಿ ವ್ಯಕ್ತಿಯೊಬ್ಬರು ನೀಡಿರುವ ಹೇಳಿಕೆ
ನಟಿ ಹಾಗೂ ರಾಜಕಾರಣಿ ನಡುವೆ ರಿಲೇಷನ್‌ಷಿಪ್ ಇದು ಮೊದಲೇನಲ್ಲ. ಅದಲ್ಲದೆ, ಉದಯನಿಧಿ ಸ್ಟ್ಯಾಲಿನ್ ನಟನಾಗಿಯೇ ಆರಂಭದಲ್ಲಿ ಗುರುತಿಸಿಕೊಂಡಿದ್ದವರು.
ಸವಕ್ಕು ಶಂಕರ್ ಅವರ ಯೂಟ್ಯೂಬ್ ಚಾನೆಲ್‌ನಲ್ಲಿ 31 ವರ್ಷದ ನಿವೇತಾ ಪೇತುರಾಜ್ ಹಾಗೂ ಉದಯನಿಧಿ ಸ್ಟ್ಯಾಲಿನ್ ನಡುವೆ ಸಂಬಂಧ ಇದೆ ಎನ್ನುವ ಅರ್ಥದಲ್ಲಿ ತಿಳಿಸಲಾಗಿತ್ತು.
ತೆಲುಗು ಹಾಗೂ ತಮಿಳು ಚಿತ್ರಗಳಲ್ಲಿ ನಟಿಸಿರುವ ನಿವೇತಾಗಾಗಿ ದುಬೈನಲ್ಲಿ ಉದಯನಿಧಿ ಸ್ಟ್ಯಾಲಿನ್ 2 ಸಾವಿರ ಚದರಅಡಿಯ ಫ್ಲ್ಯಾಟ್ ಗಿಫ್ಟ್ ನೀಡಿದ್ದು, ಇದರ ಮೌಲ್ಯ 50 ಕೋಟಿ ಎನ್ನಲಾಗಿದೆ.
ಅದರೊಂದಿಗೆ ನಿವೇತಾ ಪೇತುರಾಜ್ ವಿಚಾರದಲ್ಲಿ ಉದಯನಿಧಿ ಸ್ಟ್ಯಾಲಿನ್ ಲೆಕ್ಕವಿಲ್ಲದಷ್ಟು ಖರ್ಚು ಮಾಡುತ್ತಾರೆ. ಆಕೆಯ ರೇಸಿಂಗ್ ಆಸೆಗಳಿಗೆ ಇವರೇ ದುಡ್ಡು ಸುರಿಯುತ್ತಿದ್ದಾರೆ ಎಂದು ಆರೋಪಿಸಲಾಗಿತ್ತು. ಆಕೆ ಇರುವ ಅಪಾರ್ಟ್‌ಮೆಂಟ್‌ನಲ್ಲಿಯೇ ಲುಲು ಮಾಲ್‌ನ ಮಾಲೀಕರೂ ಇದ್ದಾರೆ. ನಿವೇತಾ ಕೂಡ, ಸ್ಟ್ಯಾಲಿನ್ ಕುರಿತಾಗಿ ತುಂಬಾ ಪೊಸೆಸಿವ್ ಇದ್ದಾರೆ ಎಂದು ತಿಳಿಸಲಾಗಿತ್ತು.
ದುಬೈನಲ್ಲಿ ಕುಟುಂಬದೊಂದಿಗೆ ವಾಸವಿರುವ ನಿವೇತಾ ಪೇತುರಾಜ್, ಸಿನಿಮಾಗಳು ಇಲ್ಲದೇ ಇದ್ದಲ್ಲಿ ಉದಯನಿಧಿ ಸ್ಟ್ಯಾಲಿನ್ ಅವರನ್ನು ಭೇಟಿಯಾಗುವ ಸಲುವಾಗಿಯೇ 2 ಬಾರಿ ತಮಿಳುನಾಡಿಗೆ ಭೇಟಿ ನೀಡುತ್ತಾರೆ ಎನ್ನಲಾಗಿದೆ.
ಆದರೆ, ನಿವೇತಾ ಪೇತುರಾಜ್ ಮಾತ್ರ ತಮ್ಮ ಮೇಲಿನ ಎಲ್ಲಾ ಆರೋಪಗಳು ಸುಳ್ಳು ಎಂದು ಹೇಳಿದ್ದಾರೆ.ಈ ಕುರಿತಾಗಿ ಟ್ವಿಟರ್‌ನಲ್ಲಿ ಸುದೀರ್ಘ ಪೋಸ್ಟ್‌ಅನ್ನೂ ಅವರು ಹಂಚಿಕೊಂಡಿದ್ದಾರೆ.
ನನ್ನ ಮೇಲೆ ಅದ್ದೂರಿಯಾಗಿ ಹಣ ಖರ್ಚು ಮಾಡಲಾಗುತ್ತಿದೆ ಎಂದು ಸುಳ್ಳು ಸುದ್ದಿ ಹರಡುತ್ತಿದೆ, ನಾನು ಈ ಬಗ್ಗೆ ಮೌನವಾಗಿದ್ದೆ. ಏಕೆಂದರೆ, ಹುಡುಗಿಯ ಜೀವನದ ಈ ಬಗ್ಗೆ ಮಾತನಾಡುವ ಜನರು ಇಂಥ ಹೇಳಿಕೆ ನೀಡುವ ಮುನ್ನ, ಮಾಹಿತಿಯನ್ನು ಪರಿಶೀಲಿಸಲು ಸ್ವಲ್ಪ ಮಾನವೀಯತೆ ಹೊಂದಿರುತ್ತಾರೆ ಎಂದು ನಾನು ಭಾವಿಸಿದೆ ಎಂದು ಬರೆದಿದ್ದಾರೆ.
ಕೆಲವು ದಿನಗಳಿಂದ ನನ್ನ ಕುಟುಂಬ ಮತ್ತು ನಾನು ತೀವ್ರ ಒತ್ತಡದಲ್ಲಿದ್ದೇವೆ. ಇಂತಹ ಸುಳ್ಳು ಸುದ್ದಿಗಳನ್ನು ಹರಡುವ ಮೊದಲು ದಯವಿಟ್ಟು ಯೋಚಿಸಿ ಎಂದು ಅವರು ಬರೆದಿದ್ದಾರೆ.
ತಾವು ಅತ್ಯಂತ ಗೌರವದ ಕುಟುಂಬದಿಂದ ಬಂದವರು ಮತ್ತು 16 ನೇ ವಯಸ್ಸಿನಿಂದ ಆರ್ಥಿಕವಾಗಿ ಸ್ವತಂತ್ರ ಮತ್ತು ಸ್ಥಿರವಾಗಿರುವುದಾಗಿ ಅವರು ಬರೆದಿದ್ದಾರೆ.
"ನನ್ನ ಕುಟುಂಬ ಇನ್ನೂ ದುಬೈನಲ್ಲಿ ನೆಲೆಸಿದೆ. ನಾವು 20 ವರ್ಷಗಳಿಂದ ದುಬೈನಲ್ಲಿದ್ದೇವೆ" ಎಂದು ಅವರು ಪೋಸ್ಟ್‌ನಲ್ಲಿ ಬರೆದಿದ್ದಾರೆ.
ನಾನು ತುಂಬಾ ಸರಳ ಜೀವನವನ್ನು ನಡೆಸುತ್ತಿದ್ದೇನೆ. ಜೀವನದಲ್ಲಿ ಸಾಕಷ್ಟು ಹೋರಾಟಗಳನ್ನು ಎದುರಿಸಿದ ನಂತರ, ನಾನು ಅಂತಿಮವಾಗಿ ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ ಉತ್ತಮ ಸ್ಥಾನದಲ್ಲಿದ್ದೇನೆ ಎಂದಿದ್ದಾರೆ.
ನಾನು ಇತರರಂತೆ ಗೌರವಯುತ ಮತ್ತು ಶಾಂತಿಯುತ ಜೀವನವನ್ನು ಮುಂದುವರಿಸಲು ಬಯಸುತ್ತೇನೆ. ಬಹುಃ ನಿಮ್ಮ ಕುಟುಂಬದ ಮಹಿಳೆ ಇದನ್ನೇ ಬಯಸುತ್ತಾರೆ ಎಂದುಕೊಂಡಿದ್ದೇನೆ ಎಂದು ನಿವೇತಾ ಬರೆದಿದ್ದಾರೆ.
ಈ ವಿಷಯದ ಬಗ್ಗೆ ತಾನು ಕಾನೂನು ಕ್ರಮ ಕೈಗೊಳ್ಳುವುದಿಲ್ಲ ಎಂದು ಹೇಳಿದ ನಟಿ, "ಪತ್ರಿಕೋದ್ಯಮದಲ್ಲಿ ಸ್ವಲ್ಪ ಮಾನವೀಯತೆ ಉಳಿದಿದೆ ಎಂದು ನಾನು ಇನ್ನೂ ನಂಬುತ್ತೇನೆ. ನನ್ನ ಕುರಿತಾಗಿ ಇಂಥ ಮಾನಹಾನಿ ವಿಚಾರಗಳು ಬರುವುದಿಲ್ಲ ಎಂದುಕೊಳ್ಳುತ್ತೇನೆ ಎಂದಿದ್ದಾರೆ.
ಈ ವಿಚಾರದಲ್ಲಿ ಬಗ್ಗೆ ನಿವೇತಾ ಪೇತುರಾಜ್ ಸ್ಪಷ್ಟನೆ ನೀಡಿದ್ದರೆ, ಡಿಎಂಕೆ ನಾಯಕ ಉದಯನಿಧಿ ಸ್ಟ್ಯಾಲಿನ್ ಮಾತ್ರ ಈ ಆರೋಪದ ಬಗ್ಗೆ ಮಾವುದೇ ಹೇಳಿಕೆ ನೀಡಿಲ್ಲ.