ಮೈದುನ ಮಂಚಕ್ಕೆ ಕರೆದರೆ, ಗಂಡ ಅಡ್ಜಸ್ಟ್ ಮಾಡ್ಕೋ ಅಂತಾನೆ, ಕಣ್ಣೀರಿಟ್ಟ ಕಿರುತೆರೆ ನಟಿ!
ಮೊದಲ ಪತಿಗೆ ವಿಚ್ಛೇದನ ನೀಡಿದ್ದ ಸೀರಿಯಲ್ ನಟಿ ದೀಪಾ ಬಾಬು ತಮ್ಮ ಪುತ್ರನೊಂದಿಗೆ ಈ ವಿವಾಹದಿಂದ ಹೊರಬಂದಿದ್ದರು. ಅದಾದ ಬಳಿಕ ಸಾಯಿ ಗಣೇಶ್ ಬಾಬು ಅವರನ್ನು ದೀಪಾ ವಿವಾಹವಾಗಿದ್ದು ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು.
ಚೆನ್ನೈ (ಮಾ.12): ತಮಿಳಿನ ಪ್ರಖ್ಯಾತ ಸೀರಿಯಲ್ ನಟಿ ದೀಪಾ ಬಾಬು ಚೆನ್ನೈನ ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ತಮ್ಮ ಪತಿಯ ಸಹೋದರ ಹಾಗೂ ಅವರ ಕುಟುಂಬದ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ನಟಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಅದಲ್ಲದೆ, ತಮ್ಮ ಪತಿ ಎಂದರೆ ನನಗೆ ಇಷ್ಟ. ಅವರು ನನ್ನೊಂದಿಗೆ ಇರುವಂತೆ ಆದೇಶವನ್ನೂ ನೀಡಬೇಕು ಎಂದು ಮನವಿ ಮಾಡಿದ್ದಾರೆ. ಅಂಬೆ ಶಿವಂ, ಅತಿಪೂಕ್ಕುಕ್, ನಾಮ್ ಇರುವರ್ ಲಖು ಇರುವರ್, ಪ್ರಿಯಮನದೊಡ್ಡಿ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿ ಅಭಿಮಾನಿಗಳಲ್ಲಿ ದೀಪಾ ಫೇಮಸ್ ಆಗಿದ್ದಾರೆ. ಕಳೆದ ವರ್ಷ ಪಾಂಡ್ಯನ್ ಸ್ಟೋರ್ಸ್ ಮತ್ತು ಭಾಗ್ಯಲಕ್ಷ್ಮೀ ಸೀರಿಯಲ್ಸ್‌ನಲ್ಲಿ ಪ್ರೊಡಕ್ಷನ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಸಾಯಿ ಗಣೇಶ್ ಬಾಬು ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ಇವರಿಬ್ಬರು ರಿಜಿಸ್ಟರ್ ಮ್ಯಾರೇಜ್ ಆಗಿದ್ದು ತಮಿಳುನಾಡಿನಲ್ಲಿ ಸಖತ್ ಸುದ್ದಿಯಾಗಿತ್ತು. ಏಕೆಂದರೆ, ದೀಪಾಗೆ ಇದು 2ನೇ ಮದುವೆ. ಅದಲ್ಲದೆ, ತಮ್ಮಷ್ಟು ಎತ್ತರದ ಮಗ ಕೂಡ ಇದ್ದಾನೆ. ಮೊದಲ ಪತಿಗೆ ವಿಚ್ಛೇದನ ನೀಡಿದ ಬೆನ್ನಲ್ಲಿಯೇ ಅವರು 2023ರ ಫೆಬ್ರವರಿಯಲ್ಲಿ ಗಣೇಶ್ ಬಾಬು ಅವರನ್ನು ಮದುವೆಯಾಗಿದ್ದರು.
ಆದರೆ, 2ನೇ ಮದುವೆಯಿಂದಲೂ ದೀಪಾ ಬಾಬು ಖುಷಿಯಾಗಿಲ್ಲ ಎನ್ನುವುದು ಇತ್ತೀಚೆಗೆ ಸುದ್ದಿಯಾಗಿತ್ತು. ಇದೇ ಕಾರಣಕ್ಕಾಗಿ ಸಾಯಿ ಗಣೇಶ್ ಬಾಬು ಹಾಗೂ ದೀಪಾ ಬೇರೆ ಬೇರೆಯಾಗಿ ವಾಸ ಮಾಡುತ್ತಿದ್ದಾರೆ. ದೀಪಾ ತನ್ನ ಪುತ್ರನೊಂದಿಗೆ ವಾಸವಿದ್ದಾರೆ. ಇದರ ನಡುವೆ ಚೆನ್ನೈನ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಕೆ ಮಾಡಿದ್ದು, ಪತಿ ಸಾಯಿ ಗಣೇಶ್ ಬಾಬು ನನ್ನೊಂದಿಗೆ ಇರುವಂತೆ ಆದೇಶ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ಕೆಲವು ದಿನಗಳ ಹಿಂದೆ ಮಾಧ್ಯಮ ಸಂದರ್ಶನವೊಂದರಲ್ಲಿ ಮದುವೆಯ ಕುರಿತಾಗಿ ಮಾತನಾಡಿದ್ದರು. ಗಂಡನ ಮನೆಯಲ್ಲಿ ಆಗುತ್ತಿರುವ ಕಿರುಕುಳದ ಬಗ್ಗೆ ಎಳೆಎಳೆಯಾಗಿ ಮಾತನಾಡಿದ್ದರು. ಕಳೆದ ವರ್ಷದ ಫೆಬ್ರವರಿಯಲ್ಲಿ ನಾವು ಮದುವೆಯಾಗಿದ್ದೆವು. ರಿಜಿಸ್ಟರ್ ಮ್ಯಾರೇಜ್ ಆಗಿತ್ತು. ಅಂದಿನಿಂದಲೂ ಗಂಡನ ಸಹೋದರ ಹಾಗೂ ನನ್ನ ಅತ್ತೆ ನನ್ನನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತಿದ್ದಾರೆ. ನಾನು ಅನ್ಯಜಾತಿಯವಳು ಎಂದು ಕಿರುಕುಳ ನೀಡುತ್ತಿದ್ದಾರೆ ಎಂದಿದ್ದರು. ಈಗ ಗಂಡನ ಸಹೋದರ ರಾಮಕೃಷ್ಣನ್ ವಿರುದ್ಧ ಕ್ರಮ ಕೈಗೊಳ್ಳುವಂತೆ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.
ನನ್ನಲ್ಲಿದ್ದ ಆಭರಣಗಳನ್ನೆಲ್ಲಾ ಅವರು ಕಿತ್ತುಕೊಂಡಿದ್ದಾರೆ. ಬೆಡ್‌ರೂಮ್‌ನಲ್ಲಿ ಬಂದು ಮಲಗುವಂತೆ ಆತ ಹೇಳುತ್ತಾನೆ. ಪ್ರತಿದಿನ ಲೈಂಗಿಕ ಕಿರುಕುಳ ನೀಡುತ್ತಿದ್ದಾನೆ. ನನ್ನ ಅಣ್ಣನ ಬಗ್ಗೆ ಜಾಸ್ತಿ ಯೋಚನೆ ಮಾಡ್ಬೇಡ, ನಿನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದು ಹೇಳಿದ್ದಾನೆ ಎಂದು ದೀಪಾ ಬಾಬು ತಿಳಿಸಿದ್ದಾರೆ. ಈ ಬಗ್ಗೆ ನಾನು ಪತಿಗೆ ತಿಳಿಸಿದ್ದೆ. ಆದರೆ, ಆತ ಅಡ್ಜಸ್ಟ್ ಮಾಡಿಕೊಂಡು ಹೋಗು ಎನ್ನುವ ಮೂಲಕ ಯಾವುದಕ್ಕೂ ತಲೆಕೆಡಿಸಿಕೊಳ್ಳುತ್ತಿಲ್ಲ. ಮಾತೆತ್ತಿದರೆ ನನ್ನನ್ನು ನೆಮ್ಮದಿಯಾಗಿ ಇರಲು ಬಿಡು ಎಂದು ಹೇಳುತ್ತಾರೆ. ಕುಟುಂಬದ ಜೊತೆಯೇ ಇರುವಂಥೆ ಒತ್ತಾಯ ಮಾಡುತ್ತಿದ್ದಾರೆ. ನನ್ನ ಪತಿಯೊಂದಿಗೆ ಬದುಕುವುದು ನನಗೆ ಇಷ್ಟ. ಆದರೆ, ಅವರ ಮನೆಯಲ್ಲಿ ಬದುಕಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.
ಹುಡುಗ್ರು ಸೊಂಟದ ಮೇಲೆ ಕೈಯಿಟ್ಟರೆ ಕಂಪ್ಲೇಟ್ ಕೊಡಬೇಡಿ, ಎಂಜಾಯ್ ಮಾಡಿ: ನಟಿ ರೇಖಾ ನಾಯರ್ ಮಾತು!
ನನಗೆ ಬೆಂಬಲವಾಗಿ ನಿಂತವರು ನನ್ನ ತಂದೆ ಮಾತ್ರ. ಆದರೆ, ಈ ವಿಚಾರಗಳಿಂದ ನನ್ನ ತಂದೆಗೆ ಏನಾದರೂ ಸಮಸ್ಯೆ ಆಗಬಹುದು ಎನ್ನುವ ಆತಂಕ ನನಗೆ ಕಾಡುತ್ತಿದೆ. ಇನ್ನು ರಾಮಕೃಷ್ಣನ್ ವಿರುದ್ಧ ಸಾಕಷ್ಟು ಬಾರಿ ಪೊಲೀಸರಿಗೆ ದೂರು ನೀಡಿದ್ದೇನೆ. ಆದರೆ, ಹಣ ಕೊಟ್ಟು ಆತ ವಾಪಾಸ್ ಬರುತ್ತಾನೆ. ಈ ಕಾರಣಕ್ಕಾಗಿ ಕೋರ್ಟ್ ಮೆಟ್ಟಿಲೇರುವ ತೀರ್ಮಾನ ಮಾಡಿದ್ದೇನೆ ಎಂದು ಹೇಳಿದ್ದಾರೆ.
'ಸೊಂಟದ ವಿಷ್ಯ' ಮಾತಿಗೆ ಫುಲ್ ಟ್ರೋಲ್, ಕವಿತೆ ಬರೆದು ಸೈಲೆಂಟ್ ಮಾಡಿದ ಬಿಗ್ ಬಾಸ್ ಸ್ಪರ್ಧಿ!