ಪಬ್ಲಿಕ್ ಸರ್ವೀಸ್ ಎಕ್ಸಾಂ ಪಾಸ್ ಮಾಡಿದ ವಿಶೇಷ ಚೇತನ, 25 ವರ್ಷದ ಹಿಂದೆ ಕಸದ ತೊಟ್ಟಿಯಲ್ಲಿ ಸಿಕ್ಕ ಮಾಲಾ!

25 ವರ್ಷದ ಹಿಂದೆ ಅನಾಥ ಮಗುವೊಂದು ಕಸದ ತೊಟ್ಟಿಯಲ್ಲಿ ಪತ್ತೆಯಾಗಿತ್ತು. ವಿಶೇಷ ಚೇತನ ಈ ಮಗು ಅನಾಥಾಶ್ರಮದಲ್ಲಿ ಬೆಳೆದು ಇದೀಗ ಪಬ್ಲಿಕ್ ಸರ್ವೀಸ್ ಪರೀಕ್ಷೆ ಪಾಸ್ ಮಾಡಿದೆ. ಕಣ್ಣಿಲ್ಲದಿದ್ದರೂ ಮಾಲಾ ಸಾಧನೆಗೆ ಮೆಚ್ಚುಗೆಯ ಸುರಿಮಳೆ ವ್ಯಕ್ತವಾಗಿದೆ.
 

Abandoned Special Abled child clear MPSC exam who found in dustbin 25 years ago ckm

ಮುಂಬೈ(ಮೇ.18) ಸರಿಸುಮಾರು 25 ವರ್ಷಗಳ ಹಿಂದೆ ಕಸದ ತೊಟ್ಟಿಯಲ್ಲಿ ಮಗುವಿನ ಅಳು ಶಬ್ದ ಕೇಳಿಬಂದಿತ್ತು. ಮಹಾರಾಷ್ಟ್ರದ ಜಲಗಾಂವ್ ರೈಲು ನಿಲ್ದಾಣದಲ್ಲಿನ ಕಸದ ತೊಟ್ಟಿ ಪರಿಶೀಲಿಸಿದ ಪೊಲೀಸರಿಗೆ ನವಜಾತ ಶಿಶು ಪತ್ತೆಯಾಗಿತ್ತು. ಈ ಮಗುವನ್ನು ಪೊಲೀಸರು ಆರೈಕೆಗಾಗಿ ಅನಾಥಾಶ್ರಮಕ್ಕೆ ನೀಡಿದ್ದರು. ಮಾಲಾ ಪಾಪಾಲ್ಕರ್ ಎಂದು ಹೆಸರಿಡಲಾಗಿತ್ತು. ದೃಷ್ಟಿ ಇಲ್ಲದ ಈ ಮಗು ಅನಾಥಾಶ್ರಮದಲ್ಲಿ ಬೆಳೆದು ಇದೀಗ ಮಹಾರಾಷ್ಟ್ರ ಪಬ್ಲಿಕ್ ಸರ್ವೀಸ್ ಎಕ್ಸಾಂ ಪಾಸ್ ಮಾಡಿದೆ. ಮಾಲಾ ಸಾಧನೆಗೆ ಮೆಚ್ಚುಗೆ ಸುರಿಮಳೆ ವ್ಯಕ್ತವಾಗುತ್ತಿದೆ.

ಕಠಿಣ ಅಭ್ಯಾಸ, ಮಾರ್ಗದರ್ಶನ, ಪ್ರೋತ್ಸಾಹದಿಂದ ಮಾಲಾ ಪಾಪಾಲ್ಕರ್ ಇದೀಗ ಅತೀ ಕಠಿಣ ಮಹಾರಾಷ್ಟ್ರ ಪಬ್ಲಿಕ್ ಸರ್ವೀಸ್ ಎಕ್ಸಾಂ ಪಾಸ್ ಮಾಡಿದ್ದಾರೆ. ಇದೀಗ ಮಹಾರಾಷ್ಟ್ರ ಸರ್ಕಾರದ ಸೆಕ್ರಟರಿಯೇಟ್‌ನಲ್ಲಿ ಕ್ಲರ್ಕ್ ಹಾಗೂ ಟೈಪಿಸ್ಟ್ ಆಗಿ ಕೆಲಸಕ್ಕೆ ಸೇರಲು ಸಜ್ಜಾಗಿದ್ದಾಳೆ. ಮಲಾ ಪಾಪಾಲ್ಕರ್‌ಗೆ ಎಲ್ಲೆಡೆಗಳಿಂದ ಶುಭಾಶಗಳು ಹರಿದು ಬರುತ್ತಿದೆ.

Watch: 1 ವರ್ಷದ ಹೆಣ್ಣು ಮಗುವನ್ನು ಪೊದೆಯಲ್ಲಿ ಎಸೆದು ಹೋದ ಪಾಪಿಗಳು!

ದೇವರೇ ಕಳುಹಿಸಿದ ದೇವತೆಗಳು ಬಂದು ನನ್ನನ್ನು ರಕ್ಷಿಸಿದ್ದರು. ಹೀಗಾಗಿ ನಾನು ಇಂದು ಇಲ್ಲಿದ್ದೇನೆ. ಎಂಪಿಎಸ್‌ಸಿ ಪರೀಕ್ಷೆಗೆ ನಾನು ತೃಪ್ತಿಯಾಗಿಲ್ಲ. ಯಪಿಎಸ್‌ಸಿ ಪರೀಕ್ಷೆ ಬರೆದು ಐಎಎಸ್ ಅಧಿಕಾರಿಯಾಗಬೇಕೆಂಬುದು ನನ್ನ ಆಸೆ ಎಂದು ಮಾಲಾ ಹೇಳಿದ್ದಾರೆ. ನಿರಂತರ ಪ್ರೋತ್ಸಾಹ, ಮಾರ್ಗದರ್ಶನ ನೀಡಿದ ಗುರುಗಳಾದ ಪದ್ಮಶ್ರಿ ಪ್ರಶಸ್ತಿ ಪುರಸ್ಕೃತ ಶಂಕರಬಾಬಾ ಪಾಪಾಲ್ಕರ್‌ಗೆ ಕೃತಜ್ಞತೆ ಅರ್ಪಿಸಿದ್ದಾಳೆ.

ಮಾಲಾ ಹೆಸರಿನಲ್ಲಿರುವ ಪಾಪಾಲ್ಕರ್ ಸರ್ನೇಮ್, ಇದೇ ಮೆಂಟರ್ ಶಂಕರಬಾಬಾ ಪಾಪಾಲ್ಕರ್‌ನಿಂದ ಬಂದಿದೆ. ಮಹಾರಾಷ್ಟ್ರದ ಜಲ್ಗಾಂವ್ ರೈಲು ನಿಲ್ದಾಣದ ಕಸದ ತೊಟ್ಟಿಯಿಂದ ಮಗುವಿನ ಅಳುವಿನ ಶಬ್ದ ಕೇಳಿಸುತ್ತಿತ್ತು. ರೈಲ್ವೇ ಪೊಲೀಸರು ಕಣ್ಣುಹಾಯಿಸಿದರೂ ಎಲ್ಲೂ ಕಾಣಲಿಲ್ಲ. ಅಳು ಶಬ್ದ ಕ್ಷೀಣಿಸಿತೊಡಗಿತ್ತು. ತಕ್ಷಣವೇ ರೈಲ್ವೇ ಪೊಲೀಸರು, ಮಹಾರಾಷ್ಟ್ರ ಪೊಲೀಸರ ನೆರವಿನೊಂದಿಗೆ ಹುಡಾಕಟ ನಡೆಸಿದಾಗ ಕಸದ ತೊಟ್ಟಿಯಲ್ಲಿ ನವಜಾತ ಮಗು ಪತ್ತೆಯಾಗಿತ್ತು.

ಈ ಮಗುವಿನ ತಂದೆ ತಾಯಿ ಯಾರು ಅನ್ನೋದು ಇದುವರೆಗೂ ಪತ್ತೆಯಾಗಿಲ್ಲ. ಮಗುವನ್ನು ಎತ್ತಿಕೊಂಡ ಪೊಲೀಸರು ಆಸ್ಪತ್ರೆಗೆ ದೌಡಾಯಿಸಿದ್ದಾರೆ. ಕಾರಣ ಇರುವೆ, ಕೀಟಗಳು ಮಗುವನ್ನು ಕಚ್ಚಿತ್ತು. ಕೆಲ ದಿನಗಳ ಚಿಕಿತ್ಸೆ ಬಳಿಕ ಮಗುವನ್ನು ಪೊಲೀಸರು ಜಲ್ಗಾಂವ್ ಆಶ್ರಮಕ್ಕೆ ನೀಡಿತ್ತು. ಬಳಿಕ ಪೊಲೀಸರು ಉತ್ತಮ ಸೌಲಭ್ಯವುಳ್ಳ ಅಮರಾವತಿಯಲ್ಲಿನ ಮಕ್ಕಳಅನಾಥಾಶ್ರಮಕ್ಕೆ ಹಸ್ತಾಂತರಿಸಿತ್ತು. ಈ ಮಗು ಅನಾಥಾಶ್ರಮದಲ್ಲಿ ಬೆಳೆದು ಇದೀಗ ಮಹಾರಾಷ್ಟ್ರ ಪಬ್ಲಿಕ್ ಸರ್ವೀಸ್ ಪರೀಕ್ಷೆ ಪಾಸ್ ಮಾಡಿದೆ. 

ನೀರಿಲ್ಲದ ಬಾವಿಗೆ ಎಸೆದ ಮಗುವನ್ನು ಕಾಪಾಡಿದ ನಾಗರಹಾವು, ಕಂದನ ಹೊಟ್ಟೆ ಸುತ್ತಿಕೊಂಡು ರಾತ್ರಿ ಇಡೀ ಕಾದ ಸರ್ಪ!
 

Latest Videos
Follow Us:
Download App:
  • android
  • ios