Asianet Suvarna News Asianet Suvarna News

ನೀರಿಲ್ಲದ ಬಾವಿಗೆ ಎಸೆದ ಮಗುವನ್ನು ಕಾಪಾಡಿದ ನಾಗರಹಾವು, ಕಂದನ ಹೊಟ್ಟೆ ಸುತ್ತಿಕೊಂಡು ರಾತ್ರಿ ಇಡೀ ಕಾದ ಸರ್ಪ!

ಪವಾಡಗಳ ಕುರಿತು ಪುರಾಣಗಳಲ್ಲಿ ಓದಿರುತ್ತೇವೆ, ಕೇಳಿರುತ್ತೇವೆ. ಪವಾಡ ಶಕ್ತಿಗಳು ಮಾನವನಿಗೆ ರಕ್ಷಣೆ ನೀಡಿದ, ಕಾಪಾಡಿದ ಹಲವು ಕತೆಗಳು ಪುರಾಣಗಳಿಲ್ಲಿವೆ. ಇದೀಗ ಅದೇ ರೀತಿಯ ಘಟನೆಯೊಂದು ನಡೆದಿದೆ. ನೀರಿಲ್ಲದ 20 ಅಡಿ ಬಾವಿಗೆ ಎಸೆದ ಮಗುವನ್ನು ರಾತ್ರಿಯಿಡಿ ನಾಗರಹಾವು ಕಾಪಾಡಿದ ಘಟನೆ ನಡೆದಿದೆ. ಹುಟ್ಟಿದ ಬೆನ್ನಲ್ಲೇ ಮಗುವನ್ನು ಬಾವಿಗೆ ಎಸೆಯಲಾಗಿದೆ. ಸರ್ಪ ಕಾಪಾಡಿದ ಮಗು ಪತ್ತೆಯಾಗಿದ್ದು ಹೇಗೆ? ಮಗುವಿನ ಈಗಿನ ಸ್ಛಿತಿ ಹೇಗಿದೆ?

Abandoned baby survives whole night in 20 feet deep dry well infant rescued by a couple in Raebareli Uttar Pradesh ckm
Author
First Published Feb 27, 2023, 5:38 PM IST

ಈ ಸ್ಟೋರಿ ಓದಿದ್ರೆ ಖಂಡಿತ ನಿಮಗೆ ಯಾವುದೋ ಸಿನಿಮಾ ನೋಡಿದ ಅನುಭವ ಆಗದೇ ಇರದು. ಅಷ್ಟಕ್ಕೂ ಇದು, ಯಾವ ಫಿಲಂ ಕಥೆಗೂ ಕಡಿಮೆ ಇಲ್ಲದ ಪವಾಡ ಸದೃಶ ಸತ್ಯಕಥೆ. ಈ ಘಟನೆ ನಡೆದಿರೋದು ಉತ್ತರ ಪ್ರದೇಶದ ಬರೇಲಿಯ ಬುದೌನ್​​ ಎಂಬ ಪುಟ್ಟ ಗ್ರಾಮದಲ್ಲಿ. ಈ ಊರಿನ ರೈತ ಪ್ರೇಮ ರಾಜ್- ಸೌಮ್ವತಿ ದೇವಿಗೆ ಮೊನ್ನೆ ಅಚ್ಚರಿಯೊಂದು ಕಾದಿತ್ತು. ಹೊಲದಲ್ಲಿ ಕೆಲಸ ಮಾಡುತ್ತಿದ್ದ ದಂಪತಿಗೆ ಮಗುವಿನ ಅಳು ಕೇಳಿಸಿತು. ಮಗುವಿನ ದನಿ ಅರಸಿ ಹುಡುಕ ಹೊರಟ ದಂಪತಿಗೆ, ತಮ್ಮದೇ ಜಮೀನನ ಹಾಳುಬಿದ್ದ ಬಾವಿಯಲ್ಲಿ ಮಗು ಇರುವುದು ಪತ್ತೆಯಾಯ್ತು.

20 ಅಡಿ ಆಳದ ಈ ಬಾವಿಯ ತುಂಬೆಲ್ಲ, ಮುಳ್ಳು, ಗಿಡ ಗಂಟಿಗಳು. ಬಾವಿಯೊಳಗೆ ಇಳಿಯುವುದು ಅಷ್ಟು ಸುಲಭವಾಗಿರಲಿಲ್ಲ. ಆದರೂ, ಅಕ್ಕಪಕ್ಕದ ಜನರ ನೆರವು ಪಡೆದ ಪ್ರೇಮ್​‌ರಾಜ್, ಹಗ್ಗ ಕಟ್ಟಿಕೊಂಡು ಬಾವಿಯೊಳಗೆ ಇಳಿದರು. ಬಾವಿ ತಳಕ್ಕೆ ಇಳಿಯುತ್ತಿದ್ದಂತೆ ಅಲ್ಲಿನ ದೃಶ್ಯ ಕಂಡು ಕ್ಷಣ ಬೆಚ್ಚಿಬಿದ್ದ ಪ್ರೇಮ ರಾಜ್, ಕಕ್ಕಾಬಿಕ್ಕಿಯಾಗಿಬಿಟ್ರು. ಅಳುತ್ತಿದ್ದ ಗಂಡು ಮಗುವಿನ ಹೊಟ್ಟೆ ಸುತ್ತಿಕೊಂಡ ಹಾವು ಹೆಡೆ ಎತ್ತಿ ಕುಳಿತಿತ್ತು. 

ಅಪ್ಪನ 60 ವರ್ಷದ ಹಳೇ ಪಾಸ್​ಬುಕ್​ನಿಂದ ಮಗನಿಗೆ ಸಿಕ್ಕಿದ್ದು ಕೋಟಿ ಕೋಟಿ ರೂ.!

ದಂಗಾದ ಪ್ರೇಮರಾಜ್​, ಬೇರೆ ದಾರಿ ಕಾಣದೇ ಗಾಬರಿಯಾದರೂ. ಮಗು ಬಿಟ್ಟು ಬರುವಂತಿಲ್ಲ, ಹಾವನ್ನು ಓಡಿಸುವಂತೆಯೂ ಇಲ್ಲ. ಕ್ಷಣ ಹೊತ್ತು ಪ್ರೇಮರಾಜ್​ ಸುಮ್ಮನೆ ನಿಂತರು. ರಾತ್ರಿ ಇಡೀ ಮಗುವಿನ ಕಾವಲಿಗೆ ನಿಂತಿದ್ದ ಹಾವು, ಪ್ರೇಮರಾಜ್ ನೋಡುತ್ತಿದ್ದಂತೆ, ಮಗು ಬಿಟ್ಟು ನಿಧಾನವಾಗಿ ಸರಿದು ಹೋಯ್ತು. ಬಾವಿಯಲ್ಲೇ ಇದ್ದ ಬಿಲದ ಒಳಗೆ ನುಸುಳಿ ಕಣ್ಮರೆಯಾಯ್ತು. ಹಾವು ಮರೆಯಾಗುತ್ತಿದ್ದಂತೆ ಮಗುವನ್ನು ಎತ್ತಿಕೊಂಡ ಪ್ರೇಮ್​ರಾಜ್​ ಬಾವಿಯಿಂದ ಮೇಲೆ ಬಂದರು.

ವಿಷಯ ತಿಳಿಯುತ್ತಿದ್ದಂತೆ ಅಕ್ಕಪಕ್ಕದ ಗ್ರಾಮಗಳ ಜನರೂ ಬಾವಿಯತ್ತ ಧಾವಿಸಿದ್ರು. ಬಾವಿಗೆ ಎಸೆದಿದ್ದ ಮಗುವನ್ನು ನಾಗರಹಾವು ಕಾಪಾಡಿದೆ ಎಂದು ನಂಬಿದ್ರು. 20 ಅಡಿ ಮೇಲಿನಿಂದ ಎಸೆದರೂ ಮಗುವಿಗೆ ಏನೂ ಆಗಿಲ್ಲ ಅಂದರೆ, ಹಾವೇ ಮಗುವಿನ ಜೀವ ಉಳಿಸಿರಬೇಕು’ ಎಂದು ಮಾತಾಡಿಕೊಂಡ್ರು. ಮಗುವನ್ನು ಬಿಸಾಕಿ ಹೋದ ಹೆತ್ತವರಿಗೆ ಹಿಡಿಶಾಪ ಹಾಕಿದ್ರು. 
ಕೂಡಲೇ ಈ ವಿಚಾರದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ ಪ್ರೇಮರಾಜ್​ , ಮಗುವನ್ನು ಸಮುದಾಯ ಆರೋಗ್ಯ ಕೇಂದ್ರಕ್ಕೆ ರವಾನಿಸಿದರು. ಮಗುವಿನ ಕರುಳು ಬಳ್ಳಿಯನ್ನೂ ಕತ್ತರಿಸದೇ, ಹುಟ್ಟಿದ ಕೆಲವೇ ಗಂಟೆಗಳಲ್ಲಿ ಮಗುವನ್ನು ಬಾವಿಗೆ ಎಸೆದಿದ್ದಾರೆ.  ಮಗುವಿನ ತಲೆಯ ಬಳಿ ಸಣ್ಣ ಒಳ ಗಾಯ ಆಗಿರುವ ಸಾಧ್ಯತೆಇದ್ದು, ತಲೆಯಲ್ಲಿ ಊತ ಕಾಣಿಸಿದೆ. ಮೇಲಿನಿಂದ ಬಾವಿಯ ಒಳಗೆ ಎಸೆದಿದ್ದರಿಂದ ಊತ ಉಂಟಾಗಿದೆ. ಸ್ಕ್ಯಾನಿಂಗ್ ಮಾಡಲಾಗಿದೆ, ಯಾವುದೇ ತೊಂದರೆ ಇಲ್ಲ ಅಂತಾರೆ ಡಾಕ್ಟರ್​. 

ನಂಗೇಲಿ ಎಂಬ ನಿಗಿನಿಗಿ ಕೆಂಡ, ತೆರಿಗೆ ವಿರೋಧಿಸಿ ಸ್ತನವನ್ನೇ ಕತ್ತರಿಸಿ ಕಲೆಕ್ಟರ್ ಕೈಗಿಟ್ಟ ಧೀರೆ..!

ಈ ಮಗುವಿನ ಎಲ್ಲ ಚಿಕಿತ್ಸಾ ವೆಚ್ಚ ಭರಿಸುವುದಾಗಿ ಪ್ರೇಮ ರಾಜ್ ಹಾಗೂ ಸೌಮ್ವ ದಂಪತಿ ಹೇಳಿದ್ದಾರೆ. ಮಗುವನ್ನು ಬಾವಿಗೆ ಎಸೆದ ಕಿರಾತಕ ಪೋಷಕರನ್ನು ಪತ್ತೆ ಹಚ್ಚಲು ಮಕ್ಕಳ ರಕ್ಷಣಾ ತಂಡ ಕಾರ್ಯಪ್ರವೃತ್ತವಾಗಿದೆ.ಅತ್ತ,  ಬುದೌನ್ ಗ್ರಾಮದಲ್ಲಿ ಈಗ ಬಾವಿಯಲ್ಲಿ ಸಿಕ್ಕ ಮಗುವಿನದ್ದೇ ಸುದ್ದಿ. ಮಗುವನ್ನು ಕಾಪಾಡಿದ ಹಾವಿನ ಬಗ್ಗೆಯೂ ತರಹೇವಾರಿ ರೋಚಕ ಕಥೆಗಳು ಹುಟ್ಟಿಕೊಂಡಿವೆ. ಪವಾಡಸದೃಶ ರೀತಿಯಲ್ಲಿ, ಹಾವಿನ ರಕ್ಷಣೆಯಲ್ಲಿ ಸಿಕ್ಕ ಮಗು, ಬೆಳೆದು ದೊಡ್ಡವನಾದ ಮೇಲೆ ಇನ್ನೆಷ್ಟು ಪವಾಡ ಮಾಡಿಯಾನೋ ?

Follow Us:
Download App:
  • android
  • ios