Asianet Suvarna News Asianet Suvarna News

Watch: 1 ವರ್ಷದ ಹೆಣ್ಣು ಮಗುವನ್ನು ಪೊದೆಯಲ್ಲಿ ಎಸೆದು ಹೋದ ಪಾಪಿಗಳು!

ಉತ್ತರ ಪ್ರದೇಶದ ಮೊರಾದಾಬಾದ್‌ನಲ್ಲಿ ಅಮಾನವೀಯ ಘಟನೆ ನಡೆದಿದ್ದು, 1 ವರ್ಷದ ಹೆಣ್ಣು ಮಗುವನ್ನು ಮುಳ್ಳಿನ ಪೊದೆಯಲ್ಲಿ ಎಸೆದ ಹೋದ ಘಟನೆ ನಡೆದಿದೆ. 
 

In UP Moradabad 1 Yr Old Baby Girl Found Dumped In Bushes san
Author
First Published Jul 12, 2023, 10:14 PM IST | Last Updated Jul 12, 2023, 10:16 PM IST

ನವದೆಹಲಿ (ಜು.12): ಹೃದಯ ಬಿರಿಯುವಂಥ ಘಟನೆಯಲ್ಲಿ ಒಂದು ವರ್ಷದ ಹೆಣ್ಣು ಮಗುವನ್ನು ಉತ್ತರ ಪ್ರದೇಶದ ಮೊರಾದಾಬಾದ್‌ ಜಿಲ್ಲೆ ಮಜೋಲಾ ಪಟ್ಟಣದ ಬಳಿ ಇರುವ ಪೊದೆಯಲ್ಲಿ ಎಸೆದು ಹೋದ ಘಟನೆ ನಡೆದಿದೆ. ಪೊಲೀಸರ ಪ್ರಕಾರ, ಮಜೋಲಾ ಪೊಲೀಸ್ ಠಾಣಾ ವ್ಯಾಪ್ತಿಯ ಡಿಪಿಎಸ್ ಶಾಲೆಯ ಬಳಿಯ ಪೊದೆಗಳಲ್ಲಿ ಪುಟ್ಟ ಮಗು ಪತ್ತೆಯಾಗಿದೆ. ಸಮೀಪದ ಕಾರ್ಖಾನೆಯ ವಾಚ್‌ಮನ್ ತನ್ನ ಸೈಕಲ್‌ನಲ್ಲಿ ತಡರಾತ್ರಿ ಆ ಪ್ರದೇಶವನ್ನು ಹಾದು ಹೋಗುತ್ತಿದ್ದಾಗ ಕುರುಚಲು ಗಿಡಗಳ ಪೊದೆಯ ಬಳಿಯಿಂದ ಮಗುವಿನ ಅಳು ಕೇಳಿ ಬರುತ್ತಿರುವುದನ್ನು ಗಮನಿಸಿದ್ದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ತಕ್ಷಣವೇ ಆ ವ್ಯಕ್ತಿ ತನ್ನ ಸೈಕಲ್‌ಅನ್ನು ನಿಲ್ಲಿಸಿ ಶಬ್ದ ಬಂದ ಕಡೆಗೆ ಹೋಗಲು ಪ್ರಾರಂಭ ಮಾಡಿದ್ದರು. ಈ ವೇಳೆ ಒಂದೇ ಸಮನೆ ಅಳುತ್ತಿದ್ದ ಮಗುವನ್ನು ಅವರು ಗಮನಿಸಿದ್ದರು. ತಕ್ಷಣವೇ ಹೆಣ್ಣು ಮಗುವನ್ನು ಅವರು ರಕ್ಷಣೆ ಮಾಡಿದ್ದರು.

ಆ ಬಳಿಕ ಪೊಲೀಸರಿಗೆ ಅವರು ಮಾಹಿತಿಯನ್ನು ತಿಳಿಸಿದ್ದು, ಪೊಲೀಸರು ಮಗುವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಮಗುವನ್ನು ಸದ್ಯ ಪೊಲೀಸ್‌ ಸ್ಟೇಷನ್‌ನಲ್ಲಿ ಇರಿಸಿಕೊಳ್ಳಲಾಗಿದ್ದು ಅಲ್ಲಿರುವ ಮಹಿಳಾ ಅಧಿಕಾರಿಗಳು ಮಗುವಿನ ಪಾಲನೆ ಮಾಡುತ್ತಿದ್ದಾರೆ.

ಪ್ರಸ್ತುತ ಬಾಲಕಿಯ ಪೋಷಕರನ್ನು ಪತ್ತೆಹಚ್ಚಲು ಪ್ರಯತ್ನಿಸಲಾಗುತ್ತಿದೆ ಮತ್ತು ಮಗುವನ್ನು ಯಾರೋ ಅಪಹರಿಸಿ ಆಕೆಯ ಪೋಷಕರ ವಿರುದ್ಧ ಸೇಡು ತೀರಿಸಿಕೊಳ್ಳಲು ಪೊದೆಗಳಲ್ಲಿ ಎಸೆದಿದ್ದಾರೆಯೇ ಅಥವಾ ಅವರು (ಪೋಷಕರು) ತಮ್ಮ ಸ್ವಂತ ಮಗುವನ್ನು ಪೊದೆಗಳಲ್ಲಿ ಬಿಟ್ಟು ಹೋಗಿದ್ದಾರೆಯೇ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅದಲ್ಲದೆ, ಹೆಣ್ಣು ಮಗುವನ್ನು ಬಲಿಕೊಡುವ ಪ್ರಯತ್ನ ಇದಾಗಿರಬಹುದೇ ಎನ್ನುವ ನಿಟ್ಟಿನಲ್ಲಿಯೂ ತನಿಖೆ ಮಾಡುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಯುವ ನಟನೊಂದಿಗೆ ಐಶ್ವರ್ಯಾ ರಜನಿಕಾಂತ್‌ ಎರಡನೇ ಮದುವೆ?

ಹೆಣ್ಣು ಮಗುವನ್ನು ಮಜೋಲಾ ಪೊಲೀಸ್ ಠಾಣೆಗೆ ಕರೆತರಲಾಗಿದ್ದು, ಅಲ್ಲಿ ಮಹಿಳಾ ಪೊಲೀಸ್ ಸಿಬ್ಬಂದಿ ಆರೈಕೆ ಮಾಡುತ್ತಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬಾಲಕಿ ಆರೋಗ್ಯವಾಗಿದ್ದು, ಯಾವುದೇ ಗಾಯಗಳಾಗಿಲ್ಲ ಎಂದು ತಿಳಿಸಿದ್ದಾರೆ. "ಅದೃಷ್ಟವಶಾತ್, ವಾಚ್‌ಮನ್‌ ಸರಿಯಾದ ಸಮಯಕ್ಕೆ ಮಗುವನ್ನು ಕಂಡಿದ್ದಾರೆ. ಕಾಡುಪ್ರಾಣಿಗಳು ಇರುವ ಪ್ರದೇಶ ಅದಾಗಿದ್ದು, ಪುಣ್ಯಕ್ಕೆ ಯಾವುದೇ ಪ್ರಾಣಿಗಳು ಅದನ್ನು ಗಮನಿಸಲಿಲ್ಲ. ಸಾಮಾನ್ಯವಾಗಿ ಬೇಟೆ ಪ್ರಾಣಿಗಳು ರಾತ್ರಿಯ ವೇಳೆಯಲ್ಲಿಯೇ ಬೇಟೆಯಾಡುತ್ತದೆ. ಅದರಲ್ಲೂ ಅಳುವಿನ ಶಬ್ದಗಳು ಇದ್ದಲ್ಲಿ ಅದಕ್ಕೆ ಕಾರ್ಯ ಇನ್ನಷ್ಟು ಸುಲಭವಾಗುತ್ತದೆ' ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಧಾನ ಮಂತ್ರಿ ಸುರಕ್ಷಾ ವಿಮೆ ತಿರಸ್ಕರಿಸಿದ ಯುನೈಟೆಡ್ ಇಂಡಿಯಾ ವಿಮಾ ಕಂಪನಿಗೆ ಬಿತ್ತು ಭರ್ಜರಿ ದಂಡ!

ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದು, ಮಗುವಿನ ಪೋಷಕರನ್ನು ಪತ್ತೆ ಹಚ್ಚಲಾಗುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. "ಹೆಚ್ಚಿನ ತನಿಖೆ ನಡೆಯುತ್ತಿದೆ" ಎಂದು ಅವರು ಹೇಳಿದರು.

Latest Videos
Follow Us:
Download App:
  • android
  • ios