Asianet Suvarna News Asianet Suvarna News

ಸ್ತ್ರೀ ಸುನ್ನತಿ/ಯೋನಿ ಛೇದನಕ್ಕಾಗಿ 3 ವರ್ಷದ ಮಗಳ ಕೀನ್ಯಾಗೆ ಕರೆದೊಯ್ದ ಮಹಿಳೆಗೆ ಶಿಕ್ಷೆ

ಸ್ತ್ರೀ ಸುನ್ನತಿಗಾಗಿ ಮೂರು ವರ್ಷದ ಮಗಳನ್ನು ಕೀನ್ಯಾಗೆ ಕರೆದೊಯ್ದು ಸುನತಿ ಮಾಡಿಸಿದ ಬ್ರಿಟನ್ ಮಹಿಳೆಯನ್ನು ಪೊಲೀಸರು ಬಂಧಿಸಿದ್ದು, ಆಕೆಗೆ 7 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.

A woman who took 3 year old Baby to Kenya for  female genital mutilation and got jailed after 18 years akb
Author
First Published Feb 18, 2024, 12:34 PM IST

ಕೀನ್ಯಾ: ಸ್ತ್ರೀ ಸುನ್ನತಿಗಾಗಿ ಮೂರು ವರ್ಷದ ಮಗಳನ್ನು ಕೀನ್ಯಾಗೆ ಕರೆದೊಯ್ದು ಸುನತಿ ಮಾಡಿಸಿದ ಬ್ರಿಟನ್ ಮಹಿಳೆಯನ್ನು ಪೊಲೀಸರು ಬಂಧಿಸಿದ್ದು, ಆಕೆಗೆ 7 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.ಈಶಾನ್ಯ ಲಂಡನ್‌ನ 40 ವರ್ಷದ ಮಹಿಳೆ ಅಮೀನಾ ನೂರ್ ಅವರೇ ಹೀಗೆ ತನ್ನ ಮೂರು ವರ್ಷದ ಹೆಣ್ಣು ಮಗುವನ್ನು ಕೀನ್ಯಾಗೆ ಕರೆದೊಯ್ದು ಯೋನಿ ಚೇದನ ಅಥವಾ ಸ್ತ್ರೀ ಸುನ್ನತಿ ಮಾಡಿದಾಕೆ. 2006 ರಲ್ಲಿ ಈಕೆ  ಮಗಳನ್ನು ಕೀನ್ಯಾಗೆ ಕರೆದೊಯ್ದು ಅಲ್ಲಿನ ಖಾಸಗಿ ಮನೆಯೊಂದರಲ್ಲಿ ಈ ಪ್ರಕ್ರಿಯೆ ನಡೆಸಿದ್ದಳು ಎಂದು ಈಕೆಗೆ ಶಿಕ್ಷೆ ವಿಧಿಸಿದ್ದ ಕೋರ್ಟ್ ಹೇಳಿದೆ.  

ಈ ಹಿನ್ನೆಲೆಯಲ್ಲಿ ಒಲ್ಡ್ ಬೈಲೇಯಲ್ಲಿರುವ ನ್ಯಾಯಾಲಯ ಆಕೆಗೆ 7 ವರ್ಷದ ಜೈಲು ಶಿಕ್ಷೆ ವಿಧಿಸಿದೆ. ಸ್ತ್ರೀ ಸುನತಿ ನಿರ್ವಹಿಸಲು ಯುಕೆಯವರಲ್ಲ ವ್ಯಕ್ತಿಗೆ  ಸಹಕರಿಸಿದ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾದ ಮೊದಲ ವ್ಯಕ್ತಿ ಈ ಮಹಿಳೆಯಾಗಿದ್ದಾಳೆ. ಧರ್ಮದ ಸಂಪ್ರದಾಯದ ಕಾರಣಕ್ಕೆ ಈ ಪದ್ಧತಿ ಮಾಡಲಾಗಿದೆ.  ಮತ್ತು ಇದು ಬಾಲ್ಯದಲ್ಲಿ ಸ್ವತಃ ತಾನು ಅನುಭವಿಸಿದ ಪ್ರಕ್ರಿಯೆಯಾಗಿತ್ತುಎಂದು ಮಹಿಳೆ ನ್ಯಾಯಾಲಯಕ್ಕೆ ಹೇಳಿದ್ದಾಳೆ. ಈ ಪ್ರಕರಣದ ತೀರ್ಪು ನೀಡುವ ವೇಳೆ ನ್ಯಾಯಾಧೀಶರಾದ ಜಸ್ಟೀಸ್ ಬ್ರಿಯಾನ್ ಇದೊಂದು ಭಯಾನಕ ಮತ್ತು ಅಸಹ್ಯಕರ ಅಪರಾಧ, ಇದು ಸಂತ್ರಸ್ತೆಯ ಜೀವನವನ್ನು ಸರಿಪಡಿಸಲಾಗದಷ್ಟು ಹಾನಿ ಮಾಡಿದೆ ಎಂದು ಹೇಳಿದ್ದಾರೆ.

Female Genital Mutilation: ಇನ್ನೂ ಜೀವಂತ ಮಹಿಳೆಯರ ಸುನ್ನತಿ: ಹೆಣ್ಣಿನ ಜೀವನವೇ ನರಕ

ಆಫ್ರಿಕಾದ ರಾಷ್ಟ್ರಗಳಾದ ಸೋಮಲಿಯಾ ಹಾಗೂ ಕೀನ್ಯಾದಲ್ಲಿ ಇದು ವ್ಯಾಪಕವಾಗಿ ಆಚರಣೆಯಲ್ಲಿದೆ ಎಂಬುದನ್ನು ಖಚಿತಪಡಿಸಿದ ನ್ಯಾಯಾಧೀಶರು ಈ ವಿಚಾರದ ಬಗ್ಗೆ ತನ್ನ ಶಿಕ್ಷಕಿ ಬಳಿ ಹೇಳಿದ ಬಾಲಕಿಯ ಧೈರ್ಯವನ್ನು ಸ್ವಾಗತಿಸಿದರು. ಈಕೆಯ ಧೈರ್ಯ ಎಲ್ಲರಿಗೂ ಬರಲಿ ಎಂದು ನ್ಯಾಯಾಧೀಶರು ಆಶಿಸಿದ್ದಾರೆ.  ಸಂಪ್ರದಾಯದ ಹೆಸರಿನಲ್ಲಿ ಈ ಕ್ರೌರ್ಯಕ್ಕೆ ಒಳಗಾದ ಬಾಲಕಿಗೆ ಈಗ 1 ವರ್ಷ, ವೈದ್ಯಕೀಯ ಹಾಗೂ ಕಾನೂನಾತ್ಮಕ ಕಾರಣಕ್ಕೆ ಆಕೆಯ ಗುರುತನ್ನು ಬಹಿರಂಗಪಡಿಸಲಾಗಿಲ್ಲ,  

ಪುರುಷರ ಸುನ್ನತ್ ಬಗ್ಗೆ ನೀವು ಕೇಳಿರಬಹುದು. ಮುಸ್ಲಿಂ ಸಮುದಾಯಗಳಲ್ಲಿ ಇದು ಆಚರಣೆಯಲ್ಲಿದ್ದು, ಅವರ ಧಾರ್ಮಿಕ ಆಚರಣೆಯ ಭಾಗ ಇದು.  ಪುಟ್ಟ ಮಕ್ಕಳಿರುವಾಗಲೇ ಗಂಡು ಮಕ್ಕಳ ಜನನಾಂಗದ ತುದಿಯ ಚರ್ಮವನ್ನು ಕತ್ತರಿಸಿ ಮಾಡುವ ಈ ಆಚರಣೆಗೆ ಸುನ್ನತಿ ಎಂದು ಕರೆಯಲಾಗುತ್ತದೆ. ಇತ್ತೀಚೆಗೆ ಬಹುತೇಕ ವಿದ್ಯಾವಂತ ಮುಸಲ್ಮಾನರು ಇದನ್ನು ಆಸ್ಪತ್ರೆಯಲ್ಲಿ ವೈದ್ಯರ ಮೂಲಕವೇ ಮಾಡಿಸಿ ಮುಗಿಸಿ ಬಿಡುತ್ತಾರೆ. ಸ್ತ್ರೀ ಸುನ್ನತಿ ಅತ್ಯಂತ ಭಯಾನಕ ಹಾಗೂ ಅತೀವವಾದ ನೋವಿನಿಂದ ಕೂಡಿದ್ದು, ಆ ನೋವನ್ನು ಸ್ವತಃ ಅನುಭವಿಸಿದ ಮಹಿಳೆಯೇ ಮೂರು ವರ್ಷದ ಮಗುವನ್ನು ಹೀಗೆ ನರಕಕ್ಕೆ ದೂಡಿದ್ದು ಇನ್ನು ಜಾರಿಯಲ್ಲಿರುವ ಮೂಢ ಆಚರಣೆಯ ಬಗ್ಗೆ ಭಯ ಮೂಡಿಸಿದೆ. 

ಸ್ತ್ರೀ ಸುನ್ನತಿ (Female Genital Mutilation) ಬಹಳ ಗಂಭೀರವಾದ ವಿಷಯವಾಗಿದ್ದು, ಈ ವಿಷಯ ದಿನದಿಂದ ದಿನಕ್ಕೆ ಚರ್ಚಿಸಲಾಗುತ್ತದೆ. ಇದನ್ನು ಅನುಭವಿಸಿದ ಮಹಿಳೆಯರು ತಮ್ಮ ಜೀವನದುದ್ದಕ್ಕೂ ಅದರ ನೋವನ್ನು ಸಹಿಸಬೇಕಾಗುತ್ತದೆ. ಈ ಅಭ್ಯಾಸವು ಕ್ರೂರ ಮಾತ್ರವಲ್ಲ, ಸಮಾಜ ವಿರೋಧಿಯೂ ಆಗಿದೆ, ಆದರೆ ದುಃಖಕರ ವಿಷಯವೆಂದರೆ ಈ ಅಭ್ಯಾಸದ ವಿರುದ್ಧ ಹೆಚ್ಚಿನ ಕಡೆ ಜನರು ಬಾಯಿ ಬಿಡೋದೆ ಇಲ್ಲ. ಭಾರತದಲ್ಲೂಇಂದಿಗೂ ಈ ಪದ್ಧತಿ ಆಚರಣೆಯಲ್ಲಿದೆ ಎಂದರೆ ನೀವು ನಂಬಲೇಬೇಕು. ಭಾರತದಲ್ಲಿ ಮಹಿಳೆಯರಿಗೆ ಸುನ್ನತಿ ಮಾಡೋದಿಲ್ಲ ಎಂಬುದು ಒಂದು ಮಿಥ್ಯೆ. ದಾವೂದಿ ಬೋಹ್ರಾ ಮುಸ್ಲಿಂ ಸಮುದಾಯದ ಮಹಿಳೆಯರು ಇನ್ನೂ ಈ ಸಂಪ್ರದಾಯವನ್ನು ಎದುರಿಸುತ್ತಿದ್ದಾರೆ.  

ಸಹೋದರಿ ಮದುವೆಗಾಗಿ ಮಗಳಿಗೆ ಸುನ್ನತಿ ಮಾಡಿಸಿದ ತಾಯಿ!

ಗಂಡು ಮತ್ತು ಹೆಣ್ಣು ಸುನ್ನತಿ ಸಮಾನವಾಗಿದೆಯೇ?: ಇದು ಪುರುಷರ ಸುನ್ನತಿಯಂತೆ ಎಂದು ಭಾವಿಸಬೇಡಿ, ಇದು ಅದಕ್ಕಿಂತ 100 ಪಟ್ಟು ಹೆಚ್ಚು ಭಯಾನಕ ಮತ್ತು ಅಪಾಯಕಾರಿಯಾಗಿರುತ್ತೆ. ಇದು ಮಹಿಳೆಯರ ಆರೋಗ್ಯದ ಮೇಲೆ ಒಮ್ಮಿಂದೊಮ್ಮೆಲೆ ಪರಿಣಾಮ ಬೀರುವುದಿಲ್ಲ, ಆದರೆ ಈ ಕಾರಣದಿಂದಾಗಿ, ಅವರು ಅನೇಕ ಕಾಯಿಲೆಗಳನ್ನು ಪಡೆಯುತ್ತಾರೆ. 

ಪುರುಷರ ಸುನ್ನತಿ ಮಾಡುವಾಗ ಅವರ ಜನನಾಂಗದ ಪ್ರದೇಶದ ಚರ್ಮದ ಮೇಲಿನ ಭಾಗವನ್ನು ತೆಗೆದುಹಾಕಲಾಗುತ್ತದೆ, ಆದರೆ ಮಹಿಳೆಯರಲ್ಲಿ ಇದು ಹಾಗಲ್ಲ. ಧಾರ್ಮಿಕ ಭಾಷೆಯಲ್ಲಿ ಖಾಫ್ಜ್ ಎಂದು ಕರೆಯಲ್ಪಡುವ ಸ್ತ್ರೀ ಸುನ್ನತಿ, ಡೈಮ್-ಉಲ್-ಇಸ್ಲಾಂ (Daim ul Islam) ಎಂಬ ಧಾರ್ಮಿಕ ಪುಸ್ತಕವನ್ನು ಆಧರಿಸಿದೆ. ಇದರಲ್ಲಿ, ಕ್ಲಿಟೋರಿಸ್ ನ ಮೇಲ್ಭಾಗವನ್ನು ತೆಗೆದುಹಾಕಲಾಗುತ್ತದೆ. ಅನೇಕ ಸಂದರ್ಭಗಳಲ್ಲಿ, ಸಂಪೂರ್ಣ ಹೊರ ಯೋನಿಯನ್ನು ತೆಗೆದುಹಾಕಲಾಗುತ್ತದೆ.

ಕೊರೋನಾ ಟೆಸ್ಟ್ ನೆಪದಲ್ಲಿ 3 ಹೆಣ್ಮಕ್ಕಳ ಪ್ರಜ್ಞೆ ತಪ್ಪಿಸಿ ಯೋನಿಚ್ಛೇದನ ನಡೆಸಿದ ಅಪ್ಪ!

ಇದನ್ನು ವೈದ್ಯಕೀಯ ಮೇಲ್ವಿಚಾರಣೆಯಲ್ಲಿ ಮಾಡಲಾಗುವುದಿಲ್ಲ ಅಥವಾ ನಂತರ ಯಾವುದೇ ವೈದ್ಯಕೀಯ ಸೌಲಭ್ಯವನ್ನು ಒದಗಿಸಲಾಗುವುದಿಲ್ಲ. ಪುರುಷ ಸುನ್ನತಿಯಲ್ಲಿ ಕೆಲವು ಆರೋಗ್ಯ ಪ್ರಯೋಜನಗಳಿವೆ, ಆದರೆ ಸ್ತ್ರೀ ಸುನ್ನತಿ ಹಾನಿಯನ್ನು ಮಾತ್ರ ಉಂಟುಮಾಡುತ್ತವೆ. ಅನೇಕ ಮಹಿಳೆಯರು ಈ ಅಭ್ಯಾಸದ ವಿರುದ್ಧ ಧ್ವನಿ ಎತ್ತುತ್ತಿದ್ದಾರೆ. 

Follow Us:
Download App:
  • android
  • ios