ಕ್ಯಾನ್ಸರ್ ಪೀಡಿತರಿಗೆ ‘ಜಡೆ’ ನೀಡಿ ಜನ್ಮದಿನ ಆಚರಿಸಿಕೊಂಡ ಬಾಲಕಿ!
ಕೇಕ್ ಕತ್ತರಿಸಿ, ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಿ, ಸ್ನೇಹಿತರ ಜೊತೆ ಪಾರ್ಟಿ ಮಾಡಿ ಹುಟ್ಟು ಹಬ್ಬ ಆಚರಿಸುವುದು ಸಹಜ. ಆದರೆ ಇಲ್ಲೊಬ್ಬಳು 12 ವರ್ಷದ ಬಾಲಕಿ ಹುಟ್ಟುಹಬ್ಬದ ನಿಮಿತ್ತ ತನ್ನ ನೀಳ ಜಡೆಯನ್ನು ಕತ್ತರಿಸಿ ಕ್ಯಾನ್ಸರ್ ಬಾಧಿತರಿಗೆ ನೀಡುವ ಮೂಲಕ ಅವರ ಮುಖದಲ್ಲಿ ಕಿರುನಗೆ ಮೂಡಿಸಿದ್ದಾಳೆ.
ಭೀಮಣ್ಣ ಗಜಾಪುರ
ಕೂಡ್ಲಿಗಿ (ಜೂ.11) : ಕೇಕ್ ಕತ್ತರಿಸಿ, ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಿ, ಸ್ನೇಹಿತರ ಜೊತೆ ಪಾರ್ಟಿ ಮಾಡಿ ಹುಟ್ಟು ಹಬ್ಬ ಆಚರಿಸುವುದು ಸಹಜ. ಆದರೆ ಇಲ್ಲೊಬ್ಬಳು 12 ವರ್ಷದ ಬಾಲಕಿ ಹುಟ್ಟುಹಬ್ಬದ ನಿಮಿತ್ತ ತನ್ನ ನೀಳ ಜಡೆಯನ್ನು ಕತ್ತರಿಸಿ ಕ್ಯಾನ್ಸರ್ ಬಾಧಿತರಿಗೆ ನೀಡುವ ಮೂಲಕ ಅವರ ಮುಖದಲ್ಲಿ ಕಿರುನಗೆ ಮೂಡಿಸಿದ್ದಾಳೆ.
ಜೋಳದಕೂಡ್ಲಿಗಿ ಗ್ರಾಮದ ಪ್ರಗತಿಪರ ಲೇಖಕ, ಉಪನ್ಯಾಸಕ ಡಾ. ಅರುಣ್ ಜೋಳದಕೂಡ್ಲಿಗಿ(arun joladakudligi) ಅವರ ಪುತ್ರಿ ಜಿ.ಎ. ನಿಹಾರಿಕಾ(Niharika) ಎನ್ನುವ 12 ವರ್ಷದ ಬಾಲಕಿ ತನ್ನ ಜನ್ಮದಿನವನ್ನು ಈ ರೀತಿ ಅರ್ಥಪೂರ್ಣವಾಗಿ ಆಚರಿಸಿಕೊಂಡಿದ್ದಾಳೆ.
ರಾಜ್ಯದಲ್ಲಿ ಮತ್ತೊಬ್ಬ ಇನ್ಸ್‌ಪೆಕ್ಟರ್ ಸಾವು: ಹೃದಯಾಘಾತವಾಗಿ ಆಸ್ಪತ್ರೆಗೆ ಹೋಗುವಷ್ಟರಲ್ಲೇ ಮೃತ್ಯು
ಈ ಬಾಲಕಿಯ ನೀಳಜಡೆಯನ್ನು ಬೆಂಗಳೂರಿನ ಬಸವೇಶ್ವರ ನಗರದಲ್ಲಿರುವ ಡಬ್ಲ್ಯೂಡಿಐ ಹೇರ್ ಸ್ಟುಡಿಯೋ, ಯುನಿಟ್ ಆಫ್ ಎಸ್‌ಕೆ ಹೇರ್ ಆ್ಯಂಡ್ ವಿಗ್ ಡಿಸೈನ್ ಪ್ರೈವೇಚ್ ಲಿಮಿಟೆಡ್ ಎಂಬ ಏಜೆಂಟ್ ಸಂಸ್ಥೆಯ ಮೂಲಕ ಕ್ಯಾನ್ಸರ್ ಪೀಡಿತರಿಗೆ ಕಳುಹಿಸಲಾಗಿದೆ.
ರಕ್ತದಾನ, ನೇತ್ರದಾನ, ಅಂಗಾಂಗ ದಾನದಂತೆ ಕೂದಲು ದಾನ ಸಹ ಶ್ರೇಷ್ಠ! ಕಿಮೊಥೆರಪಿ ಚಿಕಿತ್ಸೆ ಪಡೆಯುತ್ತಿರುವ ಕ್ಯಾನ್ಸರ್ ಪೀಡಿತರಿಗೆ ಕೂದಲು ಉದುರುವಿಕೆ ಮುಖ್ಯ ಸಮಸ್ಯೆಯಾಗಿದ್ದು, ಅಂಥವರಿಗೆ ಕೂದಲು ದಾನ ಮಾಡಿ ಈ ಮೂಲಕ ಕ್ಯಾನ್ಸರ್ ಬಾಧಿತರಿಗೆ ನೈಸರ್ಗಿಕ ತಲೆಕೂದಲು ಮಾನಸಿಕ ಸ್ಥೈರ್ಯ ತುಂಬುವ ಕಾರ್ಯ ಮಾಡುವುದು ಸಹ ಅವರಿಗೆ ಬದುಕು ಕೊಟ್ಟಂತೆಯೇ ಸರಿ ಎಂಬ ಮಾತು ಇತ್ತೀಚಿಗೆ ಸಮಾಜದಲ್ಲಿ ಚಾಲ್ತಿಯಲ್ಲಿದೆ.
ಯಾಕೆ ಕೂದಲು ಬೇಕು?
ಕಿಮೋಥೆರಪಿ ಚಿಕಿತ್ಸೆಗೊಳಗಾದ ಕ್ಯಾನ್ಸರ್ ರೋಗಿಗಳಿಗೆ ಕೂದಲು ಉದುರುವ ಸಮಸ್ಯೆ ಸಾಮಾನ್ಯ. ಇಂತಹ ಸಂದರ್ಭದಲ್ಲಿ ಕ್ಯಾನ್ಸರ್ ಪೀಡಿತ ಮಹಿಳೆ ತನ್ನ ಕೂದಲು ಉದುರುವಿಕೆ ಬಗ್ಗೆಯೇ ಹೆಚ್ಚು ಘಾಸಿಗೊಳಗಾಗುತ್ತಾಳೆ. ಸಂಬಂಧಿಕರು, ಊರಲ್ಲಿ ಓಡಾಡುವಾಗ ತೀವ್ರ ಮಾನಸಿಕ ಹಿಂಸೆ ಅನುಭವಿಸುತ್ತಾಳೆ. ಅಂಥವರಿಗೆ ಕೂದಲು ವಿಗ್ ಮಾಡಿ ಕೆಲವು ಸಂಸ್ಥೆಗಳು ನೀಡುತ್ತವೆ. ಇದು ಕ್ಯಾನ್ಸರ್ ರೋಗಿಗಳಿಗೆ ಜೀವನದಲ್ಲಿ ಆತ್ಮಸ್ಥೈರ್ಯ ತುಂಬುವ ಮಹತ್ತರ ಕಾರ್ಯವಾಗಿದೆ. ದಾನಿಗಳು ನೀಡಿದ ಕೂದಲನ್ನು ವಿಗ್ ಮಾಡುವ ಮೂಲಕ ನೈಸರ್ಗಿಕವಾಗಿಯೇ ತಲೆಗೂದಲು ಇರುವಂತೆ ಮಾಡುತ್ತಾರೆæ. ಕೂದಲು ದಾನ ಮಾಡುವವರು ಉತ್ತಮ ಏಜೆಂಟ್, ಸಂಸ್ಥೆಗಳನ್ನು ಗುರುತಿಸಬೇಕು ಎನ್ನುತ್ತಾರೆ ಬೆಂಗಳೂರಿನ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯ ನಿವೃತ್ತ ಸಮಾಜ ಕಲ್ಯಾಣಾಧಿಕಾರಿ ಡಾ. ಬಿ. ಲೋಕೇಶ ಅವರು.
Blood cancer: ಈ ಸಣ್ಣಪುಟ್ಟ ಲಕ್ಷಣಗಳನ್ನು ನಿರ್ಲಕ್ಷಿಸದಿರಿ, ಇದು ಬ್ಲಡ್ ಕ್ಯಾನ್ಸರ್ ಆಗಿರಬಹುದು!
ಲೇಖಕಿಯೊಬ್ಬರು ಕ್ಯಾನ್ಸರ್ ಪೀಡಿತರಿಗೆ ತಲೆಗೂದಲು ಕೊಡುಗೆಯಾಗಿ ನೀಡಿದ ವಿಷಯವನ್ನು ಸಾಮಾಜಿಕ ಜಾಲತಾಣದಲ್ಲಿ ನೋಡಿದೆ. ನನ್ನ ಮಗಳ ತಲೆಗೂದಲು ಉದ್ದವಾಗಿ ಬೆಳೆದಿತ್ತು. ದಾನ ನೀಡುವ ಕುರಿತು ಮಗಳಿಗೆ ಹೇಳಿದೆ. ಆಕೆ ಖುಷಿಯಿಂದ ಒಪ್ಪಿಕೊಂಡಳು. ಇತ್ತೀಚೆಗೆ ಆಕೆಯ ಜನ್ಮದಿನದಂದು ಕೂದಲು ಕತ್ತರಿಸಿ ಕ್ಯಾನ್ಸರ್ ಬಾಧಿತರಿಗೆ ನೀಡಿದ್ದು ಸಾರ್ಥಕಭಾವ ಮೂಡಿಸಿದೆ. ಮಕ್ಕಳಿಗೆ ಚಿಕ್ಕವಯಸ್ಸಿನಲ್ಲಿಯೇ ಪೋಷಕರು ತ್ಯಾಗ, ಮತ್ತೊಬ್ಬರ ಕಷ್ಟಗಳಿಗೆ ಸ್ಪಂದಿಸುವ ಗುಣ ಕಲಿಸಬೇಕು.
ಡಾ. ಅರುಣ ಜೋಳದಕೂಡ್ಲಿಗಿ ಪ್ರಗತಿಪರ ಲೇಖಕ, ಉಪನ್ಯಾಸಕ
ನನಗೆ ತಲೆಕೂದಲು ಬೇಡ ಅಂದರೂ ಉದ್ದವಾಗಿ ಬೆಳೆಯುತ್ತವೆ. ಈ ಕೂದಲು ಕ್ಯಾನ್ಸರ್‌ಬಾಧಿತರಿಗೆ ಉಪಯೋಗವಾಗುತ್ತದೆ ಎಂದು ಅಪ್ಪನಿಂದ ತಿಳಿದು, ಕ್ಯಾನ್ಸರ್ ಬಾಧಿತರಿಗೆ ನೀಡಿದೆ. ಇದು ನನ್ನ ಜೀವನದಲ್ಲಿ ಮರೆಯಲಾಗದ ಕ್ಷಣ. ನಾವು ಬೇರೆಯವರಿಗೆ ಹೊರೆಯಾಗುವ ಬದಲು ನೆರವಾಗಿ ಬದುಕುವುದು ಒಳ್ಳೆಯದು ಎಂಬುದು ನಾನು ಅಪ್ಪನಿಂದ ಕಲಿತ ಪಾಠವಾಗಿದೆ.
ಜಿ.ಎ. ನಿಹಾರಿಕಾ ಕೂದಲು ದಾನಮಾಡಿದ ಬಾಲಕಿ