Asianet Suvarna News Asianet Suvarna News

Blood cancer: ಈ ಸಣ್ಣಪುಟ್ಟ ಲಕ್ಷಣಗಳನ್ನು ನಿರ್ಲಕ್ಷಿಸದಿರಿ, ಇದು ಬ್ಲಡ್‌ ಕ್ಯಾನ್ಸರ್‌ ಆಗಿರಬಹುದು!

ಬ್ಲಡ್ ಕ್ಯಾನ್ಸರ್‌ ಜೀವ ಕಸಿಯುವ ಮಾರಣಾಂತಿಕ ರೋಗ ಆಗಿದ್ದರೂ ಅದರ ಗುಣಲಕ್ಷಣಗಳು ನಾವು ನಿರ್ಲಕ್ಷಿಸುವಷ್ಟು ಸಣ್ಣಪುಟ್ಟ ಅನಾರೋಗ್ಯಗಳಾಗಿರುತ್ತವೆ. ಆ ಸಾಮಾನ್ಯ ಲಕ್ಷಣಗಳೇನು?

Blood cancer symptoms
Author
First Published May 30, 2023, 1:34 PM IST

ಬ್ಲಡ್ ಕ್ಯಾನ್ಸರ್!

ಹೆಸರು ಕೇಳಿದರೇ ಜೀವ ಬಾಯಿಗೆ ಬಂದಷ್ಟು ಭಯವಾಗುವುದು. ಆ ಸಮಸ್ಯೆಯ ತೀವ್ರತೆಯೇ ಅಂಥಾದ್ದು. ಗೊತ್ತೇ ಆಗದಂತೆ ದೇಹ ಪ್ರವೇಶಿಸಿ ಗುಣ ಪಡಿಸಲಾಗದ ಹಂತ ಪ್ರವೇಶಿಸಿದಾಗ ಒಂದೊಂದೇ ಲಕ್ಷಣಗಳು ಕಂಡುಬರುತ್ತವೆ. ಆಗ ರೋಗಿಯ ಸ್ಥಿತಿ ದೇವರಿಗೇ ಪ್ರೀತಿ.

ಕ್ಯಾನ್ಸರ್ ಒಂದು ಮಾರಣಾಂತಿಕ ಕಾಯಿಲೆಯಾಗಿದ್ದು, ಈ ರೋಗವು ದೇಹದಲ್ಲಿ ಸಂಪೂರ್ಣವಾಗಿ ಹರಡಿದಾಗ ಮಾತ್ರ ಅದರ ಲಕ್ಷಣಗಳು ಗೋಚರಿಸುತ್ತವೆ. ಎಲ್ಲಾ ವಿಧದ ಕ್ಯಾನ್ಸರ್‌ಗಳು ತಮ್ಮ ದೇಹವನ್ನು ಸಂಪೂರ್ಣವಾಗಿ ಆವರಿಸಿಕೊಂಡ ನಂತರ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಇದೇ ಕಾರಣಕ್ಕೆ ಕ್ಯಾನ್ಸರ್ ಲಕ್ಷಣಗಳನ್ನು ಸಮಯಕ್ಕೆ ಸರಿಯಾಗಿ ಗುರುತಿಸುವುದು ಸ್ವಲ್ಪ ಕಷ್ಟ. ಕ್ಯಾನ್ಸರ್‌ನ ಅತ್ಯಂತ ಅಪಾಯಕಾರಿ ವಿಧಗಳಲ್ಲಿ 'ರಕ್ತದ ಕ್ಯಾನ್ಸರ್' ಕೂಡಾ ಒಂದು, ಇದನ್ನು ಲ್ಯುಕೇಮಿಯಾ ಎಂದೂ ಕರೆಯುತ್ತಾರೆ. ಆದ್ದರಿಂದ ಅವುಗಳನ್ನು ಆರಂಭದಲ್ಲೇ ಗುರುತಿಸಿ ಚಿಕಿತ್ಸೆ ಪಡೆಯುವುದು ಬಹಳ ಮುಖ್ಯ.

ರಕ್ತ ಕ್ಯಾನ್ಸರ್ ಎನ್ನುವುದು ರಕ್ತ ಕಣಗಳ ಉತ್ಪಾದನೆ ಮತ್ತು ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರುತ್ತದೆ. ಈ ರೋಗವನ್ನು ಅಪಾಯಕಾರಿ ಎಂದು ಪರಿಗಣಿಸಲಾಗುತ್ತದೆ ಏಕೆಂದರೆ ಅದರ ರೋಗಲಕ್ಷಣಗಳು ದೇಹದಲ್ಲಿ ಬಹಳ ತಡವಾಗಿ ಕಾಣಿಸಿಕೊಳ್ಳುತ್ತವೆ.

4 ತಿಂಗಳು 1 ಲೋಟ ಹಾಲು ಒಂದು ಖರ್ಜೂರ ತಿಂದು 26 ಕಜಿ ತೂಕ ಇಳಿಸಿದ ರಣದೀಪ್ ಹೂಡಾ!

ಈ ಸಮಸ್ಯೆಯ ಬಗ್ಗೆ ಆರಂಭದಲ್ಲೇ ತಿಳಿದುಕೊಂಡರೆ ಮಾರಣಾಂತಿಕ ಪರಿಣಾಮಗಳಿಂದ ಪಾರಾಗಬಹುದು. ನೀವು ರಕ್ತದ ಕ್ಯಾನ್ಸರ್‌ನ ಲಕ್ಷಣಗಳ ಬಗ್ಗೆ ಸರಿಯಾದ ಮಾಹಿತಿಯನ್ನು ಹೊಂದಿರುವುದು ಬಹಳ ಮುಖ್ಯ. ಜೊತೆಗೆ ಆಗಾಗ ರಕ್ತಪರೀಕ್ಷೆ ಮಾಡಿಸಿಕೊಳ್ಳುವುದು ಮುಖ್ಯ.ಈ ಸಮಸ್ಯೆ ಯಾವಾಗಲೂ ರಕ್ತದ ಕ್ಯಾನ್ಸರ್ ನಲ್ಲಿ ಕಾಣಿಸಿಕೊಳ್ಳುತ್ತದೆ. ದೇಹದಲ್ಲಿ ರಕ್ತದ ಕೊರತೆಯಿಂದಾಗಿ ಸೋಂಕಿನ ಅಪಾಯವು ಹೆಚ್ಚಾಗುತ್ತದೆ. ರಕ್ತದ ಕ್ಯಾನ್ಸರ್‌ನಲ್ಲಿ, ರಕ್ತ ಕಣಗಳ ಸಂಖ್ಯೆಯು ಕಡಿಮೆಯಾಗಲು ಪ್ರಾರಂಭಿಸುತ್ತದೆ, ಇದು ಸೋಂಕಿನ ಅಪಾಯವನ್ನು ಹೆಚ್ಚಿಸುತ್ತದೆ.

ಇದರ ಲಕ್ಷಣಗಳು ಕೆಲವೊಮ್ಮೆ ಸಾಮಾನ್ಯವಾಗಿರುತ್ತವೆ. ಅವುಗಳಲ್ಲಿ ಹಸಿವಿನ(Hunger) ಕೊರತೆಯೂ ಒಂದು. ಹಸಿವಿನ ಕೊರತೆಯಿದ್ದರೆ ಅಂದರೆ ಸಮಯಕ್ಕೆ ಸರಿಯಾಗಿ ಹಸಿವೆಯಾಗದಿದ್ದರೆ ಮತ್ತು ದೇಹದಲ್ಲಿ ದೌರ್ಬಲ್ಯವನ್ನು ಅನುಭವಿಸುತ್ತಿದ್ದರೆ ಎಚ್ಚರದಿಂದಿರಬೇಕು. ಈ ರೋಗಲಕ್ಷಣಗಳಿಗೆ ಗಮನ ಕೊಡಲು ಪ್ರಾರಂಭಿಸಿ. ಈ ರೋಗಲಕ್ಷಣಗಳನ್ನು ನೀವು ಹೆಚ್ಚು ಅನುಭವಿಸಿದರೆ, ತಕ್ಷಣ ವೈದ್ಯರ (Doctor) ಬಳಿಗೆ ಹೋಗಿ ಮತ್ತು ಪರೀಕ್ಷೆ ಮಾಡಿಕೊಳ್ಳಿ. ನಿರಂತರವಾಗಿ ಅನಾರೋಗ್ಯಕ್ಕೆ ಒಳಗಾಗುವುದು ದೇಹದಲ್ಲಿನ ದೌರ್ಬಲ್ಯದ ಸಂಕೇತವಾಗಿದೆ. ನೀವು ಸುಲಭವಾಗಿ ಅನಾರೋಗ್ಯಕ್ಕೆ ಒಳಗಾಗಿದ್ದರೆ ಮತ್ತು ನಿಮಗೆ ಮತ್ತೆ ಮತ್ತೆ ಸಂಭವಿಸಿದರೆ, ನಂತರ ಎಚ್ಚರದಿಂದಿರಿ. ಏಕೆಂದರೆ ಇವು ರಕ್ತದ ಕ್ಯಾನ್ಸರ್‌ನ(Cancer) ಲಕ್ಷಣಗಳಾಗಿರಬಹುದು. ವಿಶ್ರಾಂತಿ(Rest) ತೆಗೆದುಕೊಂಡರೂ, ಯಾವಾಗಲೂ ದಣಿದ ಭಾವನೆ (Feeling)  ಅಥವಾ ದೇಹದಲ್ಲಿ ದೌರ್ಬಲ್ಯವನ್ನು ಹೊಂದಿರುವುದು ಸಹ ರಕ್ತದ ಕ್ಯಾನ್ಸರ್ನ್‌ನ ಲಕ್ಷಣವಾಗಿರಬಹುದು. ಆಗಾಗ ಕೀಲು ನೋವು, ತಲೆನೋವು, ಹೊಟ್ಟೆ ನೋವಿನಂತಹ ಸಮಸ್ಯೆಗಳೂ ಕೂಡಾ ಇದರ ಲಕ್ಷಣಗಳಾಗಿರುತ್ತವೆ.

40 ಚೂಯಿಂಗ್ ಗಮ್ ನುಂಗಿದ ಐದು ವರ್ಷದ ಬಾಲಕ, ಸರ್ಜರಿ ಮಾಡಿದ ವೈದ್ಯರೇ ಬೆಚ್ಚಿಬಿದ್ರು!

ಕೆಲವು ದಿನಗಳವರೆಗೆ ವಿಭಿನ್ನ ರೋಗಲಕ್ಷಣಗಳನ್ನು ಅನುಭವಿಸುತ್ತಿದ್ದರೆ ಅಥವಾ ಯಾವುದೇ ರೋಗಲಕ್ಷಣಗಳು(Symptoms) ಮತ್ತೆ ಮತ್ತೆ ಕಾಣಿಸಿಕೊಂಡರೆ, ಈ ಸಮಸ್ಯೆಯನ್ನು ನಿರ್ಲಕ್ಷಿಸಬೇಡಿ ಮತ್ತು ತಕ್ಷಣವೇ ವೈದ್ಯರ ಬಳಿ ತೆರಳಿ.

ಹಾಗಂತ ಇಂಥಾ ಲಕ್ಷಣಗಳು ಕಾಣಿಸಿಕೊಂಡ ಕೂಡಲೇ ಇದು ಬ್ಲಡ್‌ ಕ್ಯಾನ್ಸರ್‌ ಲಕ್ಷಣವೇ ಇರಬಹುದು ಅಂತ ಗಾಬರಿ ಬೀಳಬೇಡಿ. ಇವು ಸಾಮಾನ್ಯ ಅನಾರೋಗ್ಯಗಳಾಗಿರಬಹುದು. ಯಾವುದಕ್ಕೂ ಸಣ್ಣ ಪುಟ್ಟ ಅನಾರೋಗ್ಯದ ಲಕ್ಷಣಗಳನ್ನು ಕಡೆಗಣಿಸದೇ ಪರೀಕ್ಷಿಸುವುದು ಬೆಸ್ಟ್‌.

Follow Us:
Download App:
  • android
  • ios