ಹೆಣ್ಣನ್ನು ಅರ್ಥ ಮಾಡಿಕೊಳ್ಳುವುದು, ಮೀನಿನ ಹೆಜ್ಜೆ ಕಂಡುಹಿಡಿಯುವುದು ಎರಡೂ ಒಂದೇ ಎಂಬ ಮಾತಿದೆ. ಆದರೆ, ಅರ್ಥ ಮಾಡಿಕೊಳ್ಳುವ ಮನಸ್ಸು, ಆಸಕ್ತಿ ಇದ್ದರೆ ಯಾರನ್ನು ಬೇಕಾದರೂ ಅರ್ಥ ಮಾಡಿಕೊಳ್ಳಬಹುದು. ಹಾಗೆ ಅವಳನ್ನು ಅರಿಯಲು ಕೇವಲ ಅವಳಾಡುವ ಮಾತಲ್ಲ, ಅವಳಾಡದ ಮಾತೂ ಸಹಾಯ ಮಾಡುತ್ತದೆ. ಆಕೆಯ ನೋಟ, ನಡೆ, ಆಂಗಿಕ ಭಾಷೆ, ಸನ್ನೆ ಪ್ರತಿಯೊಂದನ್ನೂ ಗಮನಿಸಿದಿರಾದರೆ ಆಕೆಯ ಮನಸ್ಸಿನೊಳಗೆ ಇಣುಕಲು ಸಾಧ್ಯವಾಗುತ್ತದೆ. 

ಅರ್ಧದಷ್ಟು ಮಹಿಳೆಯರಿಗೆ ಅವರ ಗುಪ್ತಾಂಗವೆಲ್ಲಿದೆ ಎಂಬುವುದೇ ಗೊತ್ತಿಲ್ಲ!

ಮಹಿಳೆಗೆ ಕೂಡಾ ತನ್ನ ಆಂಗಿಕ ಭಾಷೆಯ ಬಗ್ಗೆ ಗಮನವಿರಬೇಕು. ಹಲವು ಬಾರಿ ಸಾಂಸ್ಕೃತಿಕವಾಗಿ, ಸಾಮಾಜಿಕವಾಗಿ ಕೆಲವೊಂದು ಆಂಗಿಕ ಭಾಷೆಗಳು ನಮಗೆ ಹರಿದುಬಂದಿರುತ್ತವೆ. ಅದರ ಅರಿವೇ ಇಲ್ಲದೆ ನಾವು ವರ್ತಿಸುವುದರಿಂದ ನೋಡುವವರಿಗೆ ತಪ್ಪು ಸಂದೇಶ ತಲುಪುವ ಸಾಧ್ಯತೆಗಳಿರುತ್ತವೆ.

ಎತ್ತರ ಮತ್ತು ಸ್ಥಳಾವಕಾಶ

ಬಹಳಷ್ಟು ಮಹಿಳೆಯರು ಮುದುಡಿ ಕೂರುವುದು ಸಾಮಾನ್ಯ. ಅವರು ತಮಗಾಗಿ ಹೆಚ್ಚು ಸ್ಥಳ ಬಳಸಿಕೊಳ್ಳಲಾರರು. ಮಹಿಳೆಯ ಈ ದೇಹ ಭಾಷೆ ಬಹಳಷ್ಟು ತಲೆಮಾರುಗಳಿಂದ ಆಕೆಗೆ ಹರಿದುಬಂದಿದ್ದು, ಮಹಿಳೆ ಪುರುಷರೆದುರು ಸದಾ ತನ್ನ ಶರಣಾಗತಿ ಒಪ್ಪಿಕೊಂಡು ಬಂದುದರ ಪ್ರಭಾವವಿದು. ಈ ದೇಹ ಭಾಷೆಯು ಆಕೆಗೆ ಅಧಿಕಾರವಿಲ್ಲ, ಇನ್ನೊಬ್ಬರು ಹೇಳಿದ್ದನ್ನು ಕೇಳಿಕೊಂಡಿರುವವಳು ಎಂಬುದನ್ನು ತೋರಿಸುತ್ತದೆ. 

ಒಂದು ವೇಳೆ ಮಹಿಳೆಯು ನೇರ ಕುಳಿತುಕೊಳ್ಳುವುದು, ನಿಲ್ಲುವುದು, ಪಾದಗಳನ್ನು ಹರಡಿ, ಭುಜ ಹಿಂದೆ ತಳ್ಳಿದ್ದರೆ ಅದು ಆಕೆಯ ಅಧಿಕಾರ ಮನಸ್ಥಿತಿ ತೋರಿಸುತ್ತದೆ. ಆಕೆ ಹೀಗಿದ್ದಾಗ, ಆ ಸನ್ನಿವೇಶ ಆಕೆಯ ನಿಯಂತ್ರಣದಲ್ಲಿದೆ ಎಂದೂ, ಆಕೆ ಗೌರವವನ್ನು ಬಯಸುತ್ತಿದ್ದಾಳೆಂದೂ ತಿಳಿಸುತ್ತದೆ. 

ಪುರುಷರಿಗಂತ ಮಹಿಳೆಯರೇ ಹೆಚ್ಚೊತ್ತು ನಿದ್ರಿಸುತ್ತಾರೆ: ಏಕೆಂದು ಇಲ್ಲಿದೆ!

ಕೂದಲಲ್ಲಿ ಬೆರಳಾಡಿಸುವುದು

ಮಹಿಳೆಯು ಮಾತನಾಡುವಾಗ ಅಥವಾ ಕೇಳಿಸಿಕೊಳ್ಳುವಾಗ ಕೂದಲು ಅಥವಾ ಆಭರಣದ ಜೊತೆ ಕೈಯ್ಯಲ್ಲಿ ಆಡುವುದು, ಕತ್ತನ್ನು ಮುಟ್ಟಿಕೊಳ್ಳುವುದು ಅಥವಾ ಭುಜ ಮುಟ್ಟಿಕೊಳ್ಳುವುದು ಮಾಡುತ್ತಿದ್ದರೆ ಬಹುತೇಕ ಬಾರಿ ಆಕೆ ಒತ್ತಡಕ್ಕೊಳಗಾಗಿದ್ದಾಳೆ ಅಥವಾ ಭಯಗೊಂಡಿದ್ದಾಳೆ ಎಂದರ್ಥ. ಆದರೆ ಇದನ್ನು ಪುರುಷರು ಆಕೆ ತನ್ನತ್ತ ಆಕರ್ಷಿತಳಾಗಿದ್ದಾಳೆ ಎಂದು ತಿಳಿಯುವ ಸಂಭವ ಹೆಚ್ಚು. 

ಹಾಗಾಗಿ, ಮಹಿಳೆಯು ನಿಮ್ಮ ಬಳಿ ಮಾತನಾಡುವಾಗ ಇಂಥ ದೇಹ ಭಾಷೆ ಬಳಸುತ್ತಿದ್ದರೆ, ಆಕೆಯನ್ನು ಕಂಫರ್ಟ್ ಆಗಿಸುವ ಯತ್ನ ಮಾಡುವುದು ಒಳ್ಳೆಯದು. ನೀವು ಮಹಿಳೆಯಾದಲ್ಲಿ, ಎಲ್ಲ ಸಂದರ್ಭದಲ್ಲೂ ನಿಮ್ಮ ನಿಯಂತ್ರಣದಲ್ಲಿ ನೀವಿದ್ದೀರಿ ಎಂದು ತೋರಿಸಿಕೊಳ್ಳಬೇಕೆಂದರೆ ಇಂಥ ದೇಹಭಾಷೆಯಿಂದ ಸಾಧ್ಯವಾದಷ್ಟು ದೂರವಿರಿ.

ನಗುವುದು

ನಗು ಸ್ನೇಹ ಹಾಗೂ ಸಂತೋಷದ ಸೂಚನೆ ಎಂದು ಜನ ಭಾವಿಸುತ್ತಾರೆ. ಆದರೆ ಮಹಿಳೆಯು ನರ್ವಸ್ ಆದಾಗ ಕೂಡಾ ಸ್ಮೈಲ್ ಮಾಡಬಲ್ಲಳು. ಮಹಿಳೆಯು ಅತಿಯಾಗಿ ನಗುತ್ತಿದ್ದಾಳೆ ಅಥವಾ ಸಂದರ್ಭವಲ್ಲದ ಸಂದರ್ಭದಲ್ಲಿ ಸ್ಮೈಲ್ ಮಾಡುತ್ತಿದ್ದಾಳೆಂದರೆ ಆಕೆ ನರ್ವಸ್ ಆಗಿದ್ದಾಳೆಂದು ಭಾವಿಸಬಹುದು. ಆಕೆ ಫ್ರೆಂಡ್ಲಿಯಾಗಿ ನಗುತ್ತಿದ್ದಾಳೋ ಅಥವಾ ನರ್ವಸ್ ಆಗಿ ಸ್ಮೈಲ್ ಮಾಡುತ್ತಿದ್ದಾಳೋ ಎಂದು ತಿಳಿಯಲು ಇತರೆ ಆಂಗಿಕ ಭಾಷೆಯ ಕಡೆಗೆ ಗಮನ ಹರಿಸಿ. 

ಪೀರಿಯಡ್ಸ್‌ ಮಿಸ್‌ ಆಗೋದೇ ಈ 5 ಕಾರಣಗಳಿಗೆ!

ತಲೆಯಾಡಿಸುವುದು

ಮಹಿಳೆಯರು ಸಾಮಾನ್ಯವಾಗಿ ಪುರುಷರಿಗಿಂತ ಹೆಚ್ಚು ತಲೆಯಾಡಿಸುತ್ತಾರೆ. ಪುರುಷ ಹೀಗೆ ತಲೆಯಾಡಿಸಿದರೆ ನೀವು ಹೇಳುವುದನ್ನು ಆತ ಒಪ್ಪಿಕೊಳ್ಳುತ್ತಿದ್ದಾನೆ ಎಂದರ್ಥ. ಆದರೆ ಮಹಿಳೆಯರು ತಲೆಯಾಡಿಸುತ್ತಿದ್ದರೆ ಆಕೆ ನಿಮ್ಮ ಮಾತನ್ನು ಒಪ್ಪಿಕೊಳ್ಳುತ್ತಿದ್ದಾಳೆಂದಷ್ಟೇ ಅಲ್ಲ, ಅದನ್ನು ಕೇಳಿಸಿಕೊಳ್ಳುತ್ತಿದ್ದಾಳೆಂದೂ, ನೀವು ಮಾತು ಮುಂದುವರೆಸಲು ಪ್ರೋತ್ಸಾಹಿಸುತ್ತಿದ್ದಾಳೆಂದು ತಿಳಿಯಬಹುದು. ಕೆಲವೊಮ್ಮೆ ಆಕೆ ಕೇಳಿಸಿಕೊಳ್ಳುತ್ತಿರುವುದಾಗಿ ತೋರಿಸಲು ತಲೆಯಾಡಿಸಿದ್ದು, ಆತನಿಗೆ ಅವನ ಮಾತಿಗೆ ಅವಳು ಒಪ್ಪಿದಳೆನ್ನಿಸಬಹುದು. 

ಮುಂದೆ ಬಾಗುವುದು

ಯಾವುದಾದರೂ ಮಾತುಕತೆಯಲ್ಲಿ ಮುಳುಗಿ ಹೋಗಿದ್ದಾಗ ಬಹುತೇಕ ಮಹಿಳೆಯರು ಮುಂದೆ ಬಾಗುತ್ತಾರೆ. ಆದರೆ, ಹೀಗೆ ತಮ್ಮ ಬಳಿ ಬಾಗಿದ ಮಹಿಳೆ ಫ್ಲರ್ಟ್ ಮಾಡುತ್ತಿದ್ದಾಳೆಂದು ಹೆಚ್ಚಿನ ಯುವಕರು ಭಾವಿಸುತ್ತಾರೆ. ಹಾಗಾಗಿ, ಏನು ಮಾತುಕತೆ ನಡೆಯುತ್ತಿದೆ, ಎಂಥ ಸನ್ನಿವೇಶ ಇದೆ ಎಂಬುದನ್ನು ಅರಿತುಕೊಳ್ಳುವುದು ಮುಖ್ಯ. ಗಂಭೀರ ವಿಷಯ ಮಾತನಾಡುವಾಗ ಆಖೆ ಖಂಡಿತಾ ಅದರಲ್ಲಿ ಸಂಪೂರ್ಣ ತೊಡಗಿಕೊಂಡಿರುವುದರಿಂದಷ್ಟೇ ಮುಂದೆ ಬಾಗಿರುತ್ತಾಳೆ.

ಕೈ ಸನ್ನೆಗಳು

ಬಹಳಷ್ಟು ಮಹಿಳೆಯರು ಮಾತನಾಡುವಾಗ ಕೈಯ್ಯನ್ನು ಸಿಕ್ಕಾಪಟ್ಟೆ ಬಳಸುತ್ತಾರೆ. ಭಾವನೆಗಳನ್ನು ವಿವರಿಸುವಾಗ ಅವುಗಳ ಬಳಕೆ ಹೆಚ್ಚು. ಅತಿಯಾಗಿ ಕೈ ಸನ್ನೆಯಾಗುತ್ತಿದ್ದರೆ ಆಕೆ ಮಾತಿನ ವಿಷಯದ ಕುರಿತು ಅತಿ ಭಾವುಕಳಾಗಿದ್ದಾಳೆಂದರ್ಥ. ಅದರಲ್ಲೂ ಕೈಗಳು ಆಕೆಯ ಭುಜಕ್ಕಿಂತಾ ಮೇಲೇರುತ್ತಿದ್ದರೆ ಆಗ ಆಕೆ ತನ್ನ ಮೇಲೆ ನಿಯಂತ್ರಣ ಕಳೆದುಕೊಂಡು ಪೂರ್ಣ ಭಾವಾವೇಶಕ್ಕೊಳಗಾಗಿದ್ದಾಳೆಂದು ಭಾವಿಸಬಹುದು. ನಿಮ್ಮನ್ನು ಮತ್ತೊಬ್ಬರು ಗಂಭೀರವಾಗಿ ಪರಿಗಣಿಸಬೇಕೆಂದರೆ ಕೈ ಮಾತುಗಳು ಆದಷ್ಟು ಕಡಿಮೆ ಇರಬೇಕು ಹಾಗೂ ಅವು ಹೊಟ್ಟೆಗಿಂತ ಮೇಲೆ ಬರಬಾರದು. 

ಅಮ್ಮನ ಪಾಸಿಟಿವ್ ಯೋಚನೆಯಿಂದ ಮಗುವಿನ ಹೃದಯ ಸಮಸ್ಯೆ ದೂರವಾಯ್ತು!

ಕೈ ಕುಲುಕುವಿಕೆ

ಯುವತಿಯು ಕೈ ಕುಲುಕುವಾಗ ಅದರಲ್ಲಿ ಬಲವೇ ಇಲ್ಲವೆನಿಸುವಂತಿದ್ದರೆ ಆಕೆ ನಾಚಿಕೆ ಸ್ವಭಾವದವಳು, ನರ್ವಸ್ ಆಗಿದ್ದಾಳೆ ಅಥವಾ ಅಳುಕು ಗುಣದವಳು ಎಂದರ್ಥ. ಅದೇ ಬಲವಾದ ಹ್ಯಾಂಡ್‌ಶೇಕ್ ಇದ್ದರೆ ಆಕೆ ಹೆಚ್ಚು ಆತ್ಮವಿಶ್ವಾಸ ಹೊಂದಿದ್ದು, ತನ್ನ ಮೇಲೆ ನಿಯಂತ್ರಣ ಹೊಂದಿದ್ದು, ಅಧಿಕಾರ ನಡೆಸಬಲ್ಲವಳಾಗಿರುತ್ತಾಳೆ. 

ಕಣ್ಣು ತಿರುಗಿಸುವುದು

ಕಣ್ಣು ತಿರುಗಿಸುವುದು ತಾಳ್ಮೆಗೆಟ್ಟಿದುದರ ಅಥವಾ ಕಿರಿಕಿರಿಯಾಗುತ್ತಿರುವುದರ ಸೂಚನೆ. ಯುವತಿಯು ಮೌನವಾಗೇ ಕುಳಿತಿರಬಹುದು, ಆದರೆ ಆಕೆ ಕಣ್ಣು ತಿರುಗಿಸುತ್ತಿದ್ದರೆ ಒಳಗೊಳಗೇ ತಾಳ್ಮೆ ಕೆಡುತ್ತಿದ್ದಾಳೆಂದು ಅರ್ಥ.     

ತುಟಿ ಕಚ್ಚುವುದು

ಕೆಲಗಿನ ತುಟಿ ಕಚ್ಚುವುದನ್ನು ಪುರುಷರು ತಮ್ಮ ಮೇಲೆ ಆಸೆ ಹಾಗೂ ಆಕರ್ಷಣೆಯ ಸೂಚನೆ ಎಂದು ಭಾವಿಸುತ್ತಾರೆ. ಮಾದಕತೆ ಎಂದುಕೊಳ್ಳುತ್ತಾರೆ. ಆದರೆ, ಸಾಮಾನ್ಯವಾಗಿ ಮಹಿಳೆಯು ಚಿಂತಿಸುವಾಗ, ಒತ್ತಡದಲ್ಲಿದ್ದಾಗ, ಆತಂಕಕ್ಕೊಳಗಾದಾಗ ಹೀಗೆ ಕೆಳಗಿನ ತುಟಿ ಕಚ್ಚುತ್ತಾರೆ. ಒಂದು ವೇಳೆ ಆಕೆ ಆಸೆಯನ್ನು ವ್ಯಕ್ತಪಡಿಸುತ್ತಿದ್ದರೆ ಆಗ ತುಟಿ ಕಚ್ಚುವ ಜೊತೆಗೆ ಕಣ್ಣನ್ನು ಕೂಡಾ ಸಂಧಿಸುತ್ತಾರೆ ಎಂಬುದು ನೆನಪಿರಲಿ.