ಪ್ರಕೃತಿಯ ಮಾತು ಕೇಳಿದ್ರೆ, ಪುರುಷರಿಗಿಂತ ಮಹಿಳೆಯರಿಗೆ ಹೆಚ್ಚು ನಿದ್ರೆ ಅಗತ್ಯ. ಏನೋ ಒಂದು ಕಾರಣ ಹೇಳಿಕೊಂಡು ಲಾಭ ಮಾಡಿಕೊಳ್ತೀರಿ ಎಂದು ಪುರುಷರು ದೂರಬಹುದು. ಆದರೆ, ಇದೇನು ಪಾರ್ಶ್ಯಾಲಿಟಿಯಲ್ಲ, ಮಹಿಳೆಯರು ಮಾಡುವ ಮಲ್ಟಿಟಾಸ್ಕಿಂಗ್‌ಗೆ- ಮನೆ ಮಕ್ಕಳನ್ನು ನೋಡಿಕೊಂಡು, ಹೊರಗಡೆಯೂ ಕೆಲಸ ಮಾಡಿಕೊಂಡು, ಪುರುಷರಿಗಿಂತ ಹೆಚ್ಚು ತಲೆ ಓಡಿಸಿ(?) ಒದ್ದಾಡುವಾಗ ನಿದ್ರೆ ಹೆಚ್ಚು ಬೇಕೇ ಬೇಕಲ್ಲವೇ? ಮಹಿಳೆಯರು ದಿನದಲ್ಲಿ ಮೆದುಳನ್ನು ಹೆಚ್ಚು ಖರ್ಚು ಮಾಡುವುದರಿಂದ ಆ ಮೆದುಳಿಗೆ ಹೆಚ್ಚು ರೆಸ್ಟ್ ಕೂಡಾ ಬೇಕು ಎನ್ನುತ್ತದೆಸಂಶೋಧನೆ. 

ಓಸ್ಟಿಯೋಪೋರೋಸಿಸ್ ಬಗ್ಗೆ ತಿಳ್ಕೊಳ್ಳೇಬೇಕು; ಹೆಣ್ಮಕ್ಕಳಲ್ಲಿ ಹೆಚ್ಚು ಈ ಕಾಯಿಲೆ!

ಹೌದು, ಸಂಶೋಧನೆಯ ಪ್ರಕಾರ, ಮಹಿಳೆಯರಿಗೆ ಪುರುಷರಿಗಿಂತ ಸರಾಸರಿ 20 ನಿಮಿಷಗಳಷ್ಟು ಹೆಚ್ಚು ನಿದ್ರೆ ಅಗತ್ಯ. ಇದಲ್ಲದೆ, ಮಹಿಳೆಯರು ಸುಲಭವಾಗಿ ನಿದ್ರಾಹೀನತೆ, ನಿದ್ರಾ ಸಮಸ್ಯೆಗಳಿಗೆ ಈಡಾಗುತ್ತಾರೆ. ಅದನ್ನು ಕೂಡಾ ಮೇಕಪ್ ಮಾಡಿಕೊಳ್ಳಬೇಕಲ್ಲವೇ ?

ನಿದ್ರಾಹೀನತೆ ಎಂಬುದು ಸಧ್ಯದ ಮಟ್ಟಿಗೆ ದೊಡ್ಡ ಸಮಸ್ಯೆಯೇ. ಮೂರರಲ್ಲಿ ಒಂದು ಭಾಗದ ಜನತೆ ಈ ಸಮಸ್ಯೆಯಿಂದ ಒದ್ದಾಡುತ್ತಾರೆ. ಅದರಲ್ಲೂ ನೀವು ಮಹಿಳೆಯರಾಗಿದ್ದರೆ ನಿಮಗೆ ಇನ್ನೂ ಹೆಚ್ಚಿನ ರೆಸ್ಟ್ ಆಗತ್ಯ. ಅದು ಸಿಗಲಿಲ್ಲವೆಂದಾಗ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ. ಆದರೆ ಮಹಿಳೆಯರಿಗೇಕೆ ಹೆಚ್ಚು ನಿದ್ರೆ ಬೇಕು ಎಂದು ವಿವರವಾಗಿ ನೋಡೋಣ ಬನ್ನಿ.
ಒಬ್ಬರಿಗೆ ಎಷ್ಟು ನಿದ್ರೆ ಬೇಕು?

ಸಿಕಲ್ ಸೆಲ್ ಅನಿಮಿಯಾ ಅಂದ್ರೇನು?ಅ‍ಷ್ಟು ಗಂಭೀರ ಸಮಸ್ಯೆಯೇ?

ನ್ಯಾಷನಲ್ ಸ್ಲೀಪ್ ಫೌಂಡೇಶನ್ ಪ್ರಕಾರ 26ರಿಂದ 64 ವರ್ಷದೊಳಗಿನವರಿಗೆ ದಿನಕ್ಕೆ 7ರಿಂದ 9 ಗಂಟೆ ನಿದ್ರೆ ಬೇಕಾಗುತ್ತದೆ. 64 ವರ್ಷ ದಾಟಿದ ಮೇಲೆ 7ರಿಂದ 8 ಗಂಟೆ ನಿದ್ರೆ ಬೇಕು. ಟೀನೇಜ್ ಮಕ್ಕಳಿಗೆ 9ರಿಂದ 10 ಗಂಟೆ ನಿದ್ರೆ ಅಗತ್ಯ. ಇನ್ನು ಶಾಲೆಗೆ ಹೋಗುವ ಮಕ್ಕಳು ಹಾಗೂ ಪುಟಾಣಿಗಳಿಗೆ ಇನ್ನೂ ಹೆಚ್ಚಿನ ನಿದ್ರೆ ಅಗತ್ಯ. ಆದರೆ ಹೊಸ ಸಂಶೋಧನೆಯ ಪ್ರಕಾರ, ಎಷ್ಟು ನಿದ್ರೆ ಬೇಕೆಂಬುದನ್ನು ಕೇವಲ ವಯಸ್ಸಿನಿಂದ ನಿರ್ಧರಿಸಲಾಗದು. ಲಿಂಗವನ್ನು ಕೂಡಾ ಪರಿಗಣಿಸಬೇಕು. 

ಮಹಿಳೆಯರಿಗೇಕೆ ಹೆಚ್ಚು ನಿದ್ರೆ ಬೇಕು?

1. ಹೆಚ್ಚು ಮಾನಸಿಕ ಶಕ್ತಿ ಬಳಕೆ

ಮಹಿಳೆಯರಿಗಿದು ಸಿಹಿ ಸುದ್ದಿಯೇ. ನ್ಯಾಷನಲ್ ಸ್ಲೀಪ್ ಫೌಂಡೇಶನ್ ಹೇಳುವಂತೆ ಮಹಿಳೆಯರು ತಮ್ಮ ಮೆದುಳಿಗೆ ಹೆಚ್ಚು ಕೆಲಸ ಕೊಡುತ್ತಾರೆ. ಅಷ್ಟೇ ಅಲ್ಲ, ಮಲ್ಟಿಟಾಸ್ಕಿಂಗ್ ಕೂಡಾ ಮಾಡುತ್ತಾರೆ. ಇದರಿಂದ ಅವರು ಹೆಚ್ಚು ಎನರ್ಜಿ ಖಾಲಿ ಮಾಡಿರುತ್ತಾರೆ. ಹಾಗಾಗಿ, ಮೆದುಳನ್ನು ಪುನಾಃ ಚೈತನ್ಯದಾಯಕವಾಗಿಡಲು, ಎನರ್ಜಿ ಕೊಡಲು ಹೆಚ್ಚು ನಿದ್ರೆ ಅವಶ್ಯಕ. 

ಅಡ್ಡ ಪರಿಣಾಮ ಬೀರೋ ನಿದ್ರೆ ಮಾತ್ರೆಗಳು; ಮರೆವಿನಿಂದ ಚಿರನಿದ್ರೆವರೆಗೆ .

2. ಸರಿಯಾಗಿ ನಿದ್ರೆಯಾಗಲ್ಲ

ಮಹಿಳೆಯರಿಗೆ ಪುರುಷರಷ್ಟು ಉತ್ತಮ ಗುಣಮಟ್ಟದ ನಿದ್ರೆ ಮಾಡಲು ಸಾಧ್ಯವಾಗುತ್ತಿಲ್ಲ. ಬದುಕಿನ ಕೆಲ ಹಂತಗಳು ಹಾಗೂ ದೈಹಿಕ ಬದಲಾವಣೆಗಳಿಂದಾಗಿ ಅವರಿಗೆ ನಿದ್ರೆ ಸರಿಯಾಗಿ ಬರುವುದಿಲ್ಲ. ಇದರಿಂದ ಮಹಿಳೆಯರು ಹೆಚ್ಚಾಗಿ ನಿದ್ರಾಹೀನತೆ ಹಾಗೂ ಇತರೆ ನಿದ್ರೆ ಸಂಬಂಧಿ ಸಮಸ್ಯೆಗಳಿಂದ ಬಳಲುತ್ತಾರೆ. ನ್ಯಾಷನಲ್ ಸ್ಲೀಪ್ ಫೌಂಡೇಶನ್ ನಡೆಸಿದ ಸರ್ವೆೊಯಂದರಲ್ಲಿ ಶೇ.63ರಷ್ಟು ಮಹಿಳೆಯರು ಪ್ರತಿ ವಾರ ಒಂದಿಲ್ಲೊಂದು ಕಾರಣಗಳಿಂದ ತಮಗೆ ನಿದ್ರೆ ಸಾಕಾಗುವುದಿಲ್ಲವೆಂದು ಹೇಳಿದ್ದಾರೆ. ಇದೂ ಕೂಡಾ ಮಹಿಳೆಯರಿಗೆ ಹೆಚ್ಚು ನಿದ್ರೆ ಬೇಕೆಂಬುದಕ್ಕೆ ಒಂದು ಕಾರಣ. 

3. ಋತುಬಂಧ

ಮಹಿಳೆಯರು ಋತುಬಂಧದ ಅವಧಿಯಲ್ಲಿ, ಅದಕ್ಕೂ ಮುನ್ನ, ಹಾಗೂ ನಂತರದ ಅವಧಿಗಳಲ್ಲಿ ಹೆಚ್ಚಾಗಿ ರೆಸ್ಟ್‌ಲೆಸ್ ಆಗುತ್ತಾರೆ. ಜೊತೆಗೆ, ಇದ್ದಕ್ಕಿದ್ದಂತೆ ಬೆವರುವುದು ಮತ್ತಿತರೆ ಕಾರಣಗಳಿಂದಾಗಿ ಗುಣಮಟ್ಟದ ನಿದ್ರೆ ಸಾಧ್ಯವಿಲ್ಲ. 

4. ಪ್ರಗ್ನೆನ್ಸಿ

ಪ್ರಗ್ನೆನ್ಸಿ ಸಂದರ್ಭದಲ್ಲಿ ಮಾನಸಿಕವಾಗಿ ಮತ್ತು ದೈಹಿಕವಾಗಿ ಮಹಿಳೆಯ ದೇಹದಲ್ಲಿ ಹಲವಾರು ಬದಲಾವಣೆಗಳಾಗುತ್ತವೆ. ಹಾರ್ಮೋನ್ ಏರುಪೇರಿನಿಂದಾಗಿ ಮತ್ತಷ್ಟು ಕಿರಿಕಿರಿಗಳು ಸಾಮಾನ್ಯ. ರಾತ್ರಿ ಮಲಗಿದ ಮೇಲೆ ಪದೇ ಪದೆ ಮೂತ್ರ ವಿಸರ್ಜಿಸಬೇಕಾಗಿ ಬರುವುದು, ಕಾಲು ಸೆಟೆಯುವುದು, ಎದೆ ಒತ್ತಿ ಬರುವುದು ಮುಂತಾದ ಸಮಸ್ಯೆಗಳಿಂದಾಗಿ ನಿದ್ದೆ ಎನ್ನುವುದು ದೂರದ ಕನಸಾಗಿರುತ್ತದೆ. 

ರಾತ್ರಿ ನಿದ್ದೆ ಕಡಿಮೆಯಾದರೆ ಶುರುವಾಗುತ್ತೆ ಹೈಪರ್ ಟೆನ್ಷನ್; ಜೋಕೆ!

5. ಋತುಚಕ್ರ

ಕೇವಲ ಮಹಿಳೆಯಾಗಿರುವುದೇ ಸಾಕು ನಿದ್ರೆ ಹಾಳಾಗಲು. ಪೀರಿಯಡ್ಸ್ ಸಂದರ್ಭದಲ್ಲಿ ಹಾಗೂ ಅದಕ್ಕೂ ಮುಂಚಿನ ವಾರ ಹೊಟ್ಟೆನೋವು, ಕಿರಿಕಿರಿ, ಮೂಡ್ ಸ್ವಿಂಗ್ಸ್, ಫುಡ್ ಕ್ರೇವಿಂಗ್ಸ್ ಮುಂತಾದ ಕಾರಣಗಳಿಂದಾಗಿ ಸರಿಯಾದ ನಿದ್ರೆ ಮಾಡಲಾಗುವುದಿಲ್ಲ. 

ನಿದ್ರೆಯ ಕೊರತೆ ಅಪಾಯಕಾರಿ

ಮಹಿಳೆಯರಿಗೆ ಹೆಚ್ಚು ನಿದ್ರೆ ಬೇಕಷ್ಟೇ ಅಲ್ಲ, ಸರಿಯಾಗಿ ನಿದ್ರೆಯಾಗದಿರುವುದು ಪುರುಷರಿಗಿಂತ ಮಹಿಳೆಯರ ಆರೋಗ್ಯಕ್ಕೆ ಹೆಚ್ಚು ಅಪಾಯಕಾರಿ ಕೂಡಾ. ನಿದ್ರೆಯ ಕೊರತೆಯು ನಮ್ಮಲ್ಲಿ ಮಾನಸಿಕ ಬಳಲಿಕೆ, ಟೈಪ್ 2 ಡಯಾಬಿಟೀಸ್, ಹೃದಯದ ಸಮಸ್ಯೆಗಳು ಮುಂತಾದ ಕಾಯಿಲೆಗಳ ಸಂಭಾವ್ಯತೆ ಹೆಚ್ಚಿಸುತ್ತದೆ. ಇವೆಲ್ಲವೂ ಪುರುಷರಿಗಿಂತ ಮಹಿಳೆಯರಿಗೇ ಹೆಚ್ಚು. 
ಈಗ ಹೇಳಿ ಮಹಿಳೆಗೆ ಹೆಚ್ಚು ನಿದ್ರೆ ಬೇಕೆನ್ನುವ ವಾದ ಸಮಂಜಸವಲ್ಲವೇ?