video viral : ವ್ಯಕ್ತಿಯೊಬ್ಬರ ಕುರ್ತಾ ಈಗ ಚರ್ಚೆಗೆ ಬಂದಿದೆ. ಅವರು ಧರಿಸಿದ್ದ ಕುರ್ತಾ ಮೇಲಿರುವ ಹೆಸರೇ ಅವರ ವಿಡಿಯೋ ವೈರಲ್‌ ಆಗಲು ಕಾರಣ. ಸೋಶಿಯಲ್‌ ಮೀಡಿಯಾದಲ್ಲಿ ಚರ್ಚೆ ಹುಟ್ಟುಹಾಕಿರುವ ಈ ಕುರ್ತಾ ವಿಶೇಷತೆ ಏನು?

ಸೋಶಿಯಲ್‌ ಮೀಡಿಯಾದಲ್ಲಿ ಕುರ್ತಾ ಧರಿಸಿದ್ದ ವ್ಯಕ್ತಿಯೊಬ್ಬರ ವಿಡಿಯೋ ವೈರಲ್‌ ಆಗಿದೆ. ಬಿಳಿ ಕುರ್ತಾ ಧರಿಸಿರುವ ವ್ಯಕ್ತಿ ಮುಖ ಕಾಣೋದಿಲ್ಲ. ಆದ್ರೆ ಅವರ ಕುರ್ತಾ ಹಿಂದೆ ನೀಲಿ ಬಣ್ಣದಲ್ಲಿ ಪಟ್ಟಿಯೊಂದು ಕಾಣ್ತಿದೆ. ಅದೇ ವಿಡಿಯೋ ವೈರಲ್‌ ಆಗಲು ಕಾರಣವಾಗಿದೆ.

ಕುರ್ತಾ ವಿಶೇಷ ಏನು?

ಅಷ್ಟಕ್ಕೂ ಈ ಕುರ್ತಾ ವಿಶೇಷ ಏನು ಅಂತ ನೀವು ಕೇಳ್ಬಹುದು. ಈ ಕುರ್ತಾ ಮೇಲಿರುವ ನೀಲಿ ಪಟ್ಟಿ ಮೇಲೆ Western Railway ಅಂತ ಸ್ಪಷ್ಟವಾಗಿ ಬರೆಯಲಾಗಿದೆ. ವ್ಯಕ್ತಿ ರೈಲ್ವೆಯಲ್ಲಿ ಸಿಗುವ ಚಾದರವನ್ನು ಬಳಸಿಕೊಂಡು ಕುರ್ತಾ ಸ್ಟಿಚ್‌ ಮಾಡಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಎಲ್ಲರ ಆರೋಗ್ಯ ಹೇಗಿದೆ ? ಅನಾರೋಗ್ಯದ ವದಂತಿ ಮಧ್ಯೆ ಅಭಿಮಾನಿಗಳಿಗೆ ಸಲ್ಮಾನ್‌

ಈ ವಿಡಿಯೋ ಇನ್ಸ್ಟಾಗ್ರಾಂನಲ್ಲಿ ವೈರಲ್ ಆಗಿದೆ. ಸಾವಿರಾರು ಮಂದಿ ಲೈಕ್ ಮಾಡಿದ್ದು ನೂರಾರು ಮಂದಿ ಕಾಮೆಂಟ್ ಮಾಡಿದ್ದಾರೆ. ಒಬ್ಬರು, ಐದು ವರ್ಷ ಆರಾಮವಾಗಿ ಬಾಳಿಕೆ ಬರುವ ಕುರ್ತಾ ಎಂದು ಬರೆದರೆ, ಮತ್ತೊಬ್ಬರು ರೈಲ್ವೆ ನಿಮ್ಮ ಆಸ್ತಿ ಎಂಬ ಮಾತನ್ನು ಈ ವ್ಯಕ್ತಿ ತುಂಬಾ ಗಂಭೀರವಾಗಿ ತೆಗೆದುಕೊಂಡಿದ್ದಾರೆ ಎಂದು ಹಾಸ್ಯ ಮಾಡಿದ್ದಾರೆ.

ವೈರಲ್‌ ಆದ ಪೋಸ್ಟ್‌ ಪ್ರಕಾರ, ವ್ಯಕ್ತಿ, ರೈಲಿನಲ್ಲಿ ಸಿಗುವ ಚಾದರ ಕದ್ದು, ಅದ್ರಲ್ಲಿ ಕುರ್ತಾ ಹೊಲಿಸಿಕೊಂಡಿದ್ದಾರೆ ಅಂತ ಆರೋಪ ಮಾಡಲಾಗಿದೆ. ಆದ್ರೆ ವ್ಯಕ್ತಿ ನಿಜವಾಗ್ಲೂ ರೈಲ್ವೆಯಲ್ಲಿ ಸಿಗುವ ಚಾದರದಿಂದಲೇ ಕುರ್ತಾ ಹೊಲಿಸಿಕೊಂಡಿದ್ದಾರಾ ಎನ್ನುವ ಪ್ರಶ್ನೆಗೆ ಸ್ಪಷ್ಟವಾದ ಉತ್ತರ ಇಲ್ಲ. ಅದಕ್ಕೆ ವ್ಯಕ್ತಿಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ರೈಲ್ವೆ ಇಲಾಖೆ, ಎಸಿ ಕೋಚ್‌ ನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಚಾದರ, ದಿಂಬು ಸೇರಿದಂತೆ ಕೆಲ ಸೌಲಭ್ಯವನ್ನು ನೀಡುತ್ತದೆ. ಪ್ರಯಾಣಿಕರು ಅದನ್ನು ಪ್ರಯಾಣದ ವೇಳೆ ಬಳಸಬೇಕು. ಅದನ್ನು ಮನೆಗೆ ತೆಗೆದುಕೊಂಡು ಹೋಗುವ ಅಧಿಕಾರ ಅವರಿಗಿಲ್ಲ. ಪ್ರಯಾಣ ಮುಗಿದ್ಮೇಲೆ ಇದನ್ನು ಸುರಕ್ಷಿತವಾಗಿ ಹಿಂತಿರುಗಿಸಬೇಕು. ಆದ್ರೆ ಅನೇಕ ಪ್ರಯಾಣಿಕರು ಚಾದರ, ದಿಂಬನ್ನು ಬ್ಯಾಗ್‌ ಗೆ ಹಾಕಿಕೊಳ್ತಾರೆ. ಇದ್ರ ನಷ್ಟವನ್ನು ಕೋಚ್‌ ಮೇಲ್ವಿಚಾರಕರು ತೆರಬೇಕಾಗುತ್ತದೆ.

ದೋಸೆ ಮಾರಿ ತಿಂಗಳಿಗೆ 12 ಲಕ್ಷ ಗಳಿಸುತ್ತಿದ್ದ ಮಾಲೀಕನ ಕಣ್ಣೀರ ಕತೆ.. ಯಾಕೆ ಹೀಗೆ ಆಯ್ತು..?

ಜನವರಿ 2022 ರಿಂದ ಮೇ 2026 ರವರೆಗೆ ಭಾರತೀಯ ರೈಲ್ವೆಯ ಎಸಿ ಬೋಗಿಗಳಿಂದ 41.13 ಲಕ್ಷ ಬೆಡ್ಶೀಟ್ಗಳು ಕಾಣೆಯಾಗಿವೆ ಎಂದು ಆರ್ಟಿಐ ತನಿಖೆಯಿಂದ ತಿಳಿದುಬಂದಿದೆ. ಇದು ಒಟ್ಟು 1.27 ಕೋಟಿ ಲಿನಿನ್ ವಸ್ತುಗಳ ದೊಡ್ಡ ಕಳ್ಳತನದ ಭಾಗವಾಗಿದ್ದು, ಇದರ ಮೌಲ್ಯ ಸುಮಾರು 104.5 ಕೋಟಿ ರೂಪಾಯಿ.

View post on Instagram