ರೋಹಿತ್ ಶರ್ಮಾ ವಿದಾಯಕ್ಕೆ ಬಿಸಿಸಿಐ ಸೂಚಿಸಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಮುಂದಿನ ವಿಶ್ವಕಪ್‌ಗೆ ರೋಹಿತ್ ಆಯ್ಕೆ ಅನುಮಾನ ಹೇಳಲಾಗುತ್ತಿದೆ. ಈ ಎಲ್ಲಾ ಬೆಳವಣಿಗೆ ರೋಹಿತ್ ಶರ್ಮಾ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಲಂಡನ್ (ಜು.20) ರೋಹಿತ್ ಶರ್ಮಾಗೆ ಒತ್ತಾಯಪೂರ್ವಕವಾಗಿ ನಿವೃತ್ತಿ ಹೇಳುತ್ತಿದ್ದಾರೆ, ಬಿಸಿಸಿಐ ವಿದಾಯಕ್ಕೆ ಸೂಚಿಸಿದೆ ಅನ್ನೋ ಮಾತುಗಳು ಇತ್ತೀಚೆಗೆ ತೀವ್ರಗೊಳ್ಳುತ್ತಿದೆ. ಲಾರ್ಡ್ಸ್ ಪಂದ್ಯವೇ ಕೊನೆ ಅನ್ನೋ ಊಹಾಪೋಹ ತೀವ್ರಗೊಂಡಿತ್ತು. ಇತ್ತ ಬಿಸಿಸಿಐ, ನಾಯಕ ಶುಬಮನ್ ಗಿಲ್ ಈ ಕುರಿತು ಪ್ರತಿಕ್ರಿಯಿಸಿದ್ದರು. ಆದರೂ ರೋಹಿತ್ ಶರ್ಮಾ ಏಕದಿನದಿಂದಲೂ ನಿವೃತ್ತಿ ಕುರಿತು ಮಾತುಗಳು ತಣ್ಣಗಾಗಿಲ್ಲ. ಇದರ ನಡುವೆ ಖುದ್ದು ರೋಹಿತ್ ಶರ್ಮಾ ನಿವೃತ್ತಿ ಕುರಿತು ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಹಲವು ಸುದ್ದಿಗಳು, ಊಹಾಪೋಹಗಳು ಕೇಳಿಬರುತ್ತಿದೆ ಎಂದು ರೋಹಿತ್ ಶರ್ಮಾ ಮಾತು ಆರಂಭಿಸಿದ್ದಾರೆ.
ರೋಹಿತ್ ಶರ್ಮಾ ಹೇಳಿದ್ದೇನು?
ಲಾರ್ಡ್ಸ್ ಮೈದಾನದಲ್ಲಿ ಪಂದ್ಯದ ಬಳಿಕ ರೋಹಿತ್ ಶರ್ಮಾ ಪಂದ್ಯದ ಸೋಲು, ವಿರಾಟ್ ಕೊಹ್ಲಿ ಹಾಗೂ ನಿವೃತ್ತಿ ಕುರಿತು ಮಾತನಾಡಿದ್ದಾರೆ. ನನ್ನ ಕೆಲಸ ಭಾರತ ತಂಡವನ್ನು ಪ್ರತಿನಿಧಿಸುವುದು. ತಂಡಕ್ಕಾಗಿ ಉತ್ತಮ ಬ್ಯಾಟಿಂಗ್ ಮಾಡುವುದು. ತಂಡದ ಅವಶ್ಯಕತೆ ತಕ್ಕಂತೆ ಬ್ಯಾಟಿಂಗ್ ಮಾಡಿ ಪಂದ್ಯ ಗೆಲ್ಲಿಸುವುದು ನನ್ನ ಕೆಲಸ. ನಾನು ಟೀಂ ಇಂಡಿಯಾ ಪದಾರ್ಪಣೆ ಮಾಡಿದ ದಿನದಿಂದ ಇಲ್ಲಿವರೆಗೆ ನನಗೆ ಇದನ್ನೇ ಹೇಳಿದ್ದಾರೆ. ನಾನು ಪದಾರ್ಪಣೆ ಮಾಡಿದ ದಿನದಿಂದ ಈ ರೀತಿಯ ಸುದ್ದಿಗಳು ಬರುತ್ತಲೇ ಇದೆ. ಊಹಾಪೋಗಳನ್ನು ಕೇಳುತ್ತಲೇ ಇದ್ದೇನೆ. ಎಲ್ಲೀವರೆಗೆ ನಾನು ಟೀಂ ಇಂಡಿಯಾದಲ್ಲಿ ಇರುತ್ತೇನೋ, ಅಲ್ಲಿವರೀಗೆ ಈ ರೀತಿಯ ಮಾತುಗಳು ಕೇಳಿಬರುತ್ತಲೇ ಇರುತ್ತದೆ. ಈ ಸುದ್ದಿ, ಮಾತುಗಳನ್ನು ನಾನು ಗಂಭೀರವಾಗಿ ಪರಿಗಣಿಸುವುದಿಲ್ಲ. ನಾನು ಫೀಲ್ಡ್‌ನಲ್ಲಿ ಏನು ಮಾಡುತ್ತಿದ್ದೇವೆ ಅನ್ನೋದು ಮುಖ್ಯ. ತಂಡದ ಯಶಸ್ಸಿನಲ್ಲಿ ನಾನು ಗರಿಷ್ಠ ಕೊಡುಗೆ ನೀಡುವುದು ನನ್ನ ಗುರಿ. ಈ ರೀತಿಯ ಸುದ್ದಿ, ಮಾತುಗಳು, ಶಬ್ದಗಳು ಇರುತ್ತೆ. ಶಬ್ದಗಳು ಇಲ್ಲಾ ಎಂದರೆ ಫನ್ ಇರಲ್ಲ. ನನ್ನ ಕೆಲಸ ಇನ್‌ಸೈಡ್ ಫೀಲ್ಡ್. ಅವರ ಕೆಲಸ ಔಟ್‌ಸೈಡ್ ಫೀಲ್ಡ್ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.
ಅಭಿಮಾನಿಗಳ ಆತಂಕ ದೂರ ಮಾಡಿದ ರೋಹಿತ್
ರೋಹಿತ್ ಶರ್ಮಾ ನಿವೃತ್ತಿ ಕುರಿತು ಸ್ಪಷ್ಟವಾಗಿ ಊಹಾಪೋಹಗಳು ಎಂದಿದ್ದಾರೆ. ಈ ರೀತಿಯ ಯಾವುದೇ ಸೂಚನೆ ತನಗೆ ನೀಡಿಲ್ಲ ಅನ್ನೋದನ್ನು ಪರೋಕ್ಷವಾಗಿ ಹೇಳಿದ್ದಾರೆ. ಶಬ್ದಗಳು ಇವೆ. ಆದರೆ ನನ್ನ ಕೆಲಸ ತಂಡಕ್ಕಾಗಿ ಆಡುವುದು. ನನಗೆ ಹೇಳಿರುವುದು ತಂಡಕ್ಕಾಗಿ ಆಡಲು ಎಂದಿದ್ದಾರೆ. ಈ ಮೂಲಕ ಅಭಿಮಾನಿಗಳ ಆತಂಕಕ್ಕೆ ತೆರೆ ಎಳೆದಿದ್ದಾರೆ. ಉತ್ತಮ ಪ್ರದರ್ಶನ ನೀಡುವವರೆಗೂ ತಂಡದಲ್ಲಿ ಇರುತ್ತೇನೆ ಎಂದಿದ್ದಾರೆ. ಇಷ್ಟೇ ಅಲ್ಲ ನಾವು ತಂಡವಾಗಿ ಉತ್ತಮ ಹೋರಾಟ ನೀಡಿ ಪಂದ್ಯ ಗೆಲ್ಲಬೇಕು ಎಂದಿದ್ದಾರೆ. ರೋಹಿತ್ ಪ್ರತಿಕ್ರಿಯೆ ಮೂಲಕ ಸದ್ಯಕ್ಕೆ ರೋಹಿತ್ ನಿವೃತ್ತಿಯಾಗುತ್ತಿಲ್ಲ ಅನ್ನೋದು ಸ್ಪಷ್ಟಪಡಿಸಿದ್ದಾರೆ.
ವಿರಾಟ್ ಕೊಹ್ಲಿ ಕುರಿತು ರೋಹಿತ್ ಶರ್ಮಾ ಮಾತನಾಡಿದ್ದಾರೆ. ನಾವಿಬ್ಬರು ಹೆಚ್ಚು ಕಡಿಮೆ ಜೊತೆಯಾಗಿ ಇಡೀ ಕರಿಯರ್ ಆಡಿದ್ದೇವೆ. ನಮ್ಮ ಪಾರ್ಟ್ನರ್‌ಶಿಪ್ ಉತ್ತಮವಾಗಿತ್ತು. ಬ್ಯಾಟಿಂಗ್ ವೇಳೆ ಚರ್ಚೆ ಮಾಡುತ್ತೇವೆ. ವಿರಾಟ್ ಕೊಹ್ಲಿ ಜೊತೆ ಬ್ಯಾಟಿಂಗ್ ಮಾಡುವುದು ಫನ್. ತಂಡಕ್ಕಾಗಿ ನಾವಿಬ್ಬರು ಕೊಡುಗೆ ನೀಡಲು ಸಾಧ್ಯವಾಗಿದೆ ಅನ್ನೋ ಖುಷಿ. ತಂಡಕ್ಕಾಗಿ ಏನು ಮಾಡಬಹುದು. ಸದ್ಯದ ಪರಿಸ್ಥಿತಿ, ಎಲ್ಲವನ್ನು ಬ್ಯಾಟಿಂಗ್ ಪಾರ್ಟ್ನರ್‌ಶಿಪ್ ವೇಳೆ ಚರ್ಚಿಸುತ್ತೇವೆ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.


