ಕೆಲಸ, ಸ್ಯಾಲರಿ ಕಾರಣದಿಂದ ಮದುವೆ ವಿಳಂವಾಯಿತು, ಬಳಿಕ ಕಮಿಟ್‌ಮೆಂಟ್ ಕಾರಣ ದಿನಗಳ ಉರುಳಿತ್ತು. ಈಗ ಮಗು ಪ್ಲಾನ್ ಮಾಡಿದಾಗ ಉದ್ಯೋಗ ಕಡಿತ ಭೀತಿ ಎದುರಾಗಿದೆ. ಮಗು ಸದ್ಯ ಬೇಡ ಎಂದು ನಿರ್ಧರಿಸಿದ್ದೇನೆ. ಮುಂದೆ ವಯಸ್ಸಿನ ಕಾರಣ ತಾಯಿಯಾಗುತ್ತೇನೋ ಗೊತ್ತಿಲ್ಲ ಎಂದು ಮಹಿಳಾ ಟೆಕ್ಕಿ ನೋವು ಹೇಳಿಕೊಂಡಿದ್ದಾರೆ.

ಐಟಿ ಕ್ಷೇತ್ರದಲ್ಲಿ ಉದ್ಯೋಗ ಕಡಿತ ನಿರಂತರವಾಗಿ ನಡೆಯುತ್ತಿದೆ. ಹಲವರು ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಈ ಉದ್ಯೋದ ಕಡಿತದಿಂದ ಮಹಿಳಾ ಟೆಕ್ಕಿ ತಾನು ತಾಯಿಯಾಗಬೇಂಬ ಕನಸನ್ನೇ ಮಂದೂಡಿದ್ದಾಳೆ. ಮದುವೆ ಬೆನ್ನಲ್ಲೇ ಹಲವು ಕಮಿಟ್‌ಮೆಂಟ್ ಕಾರು ಫ್ಯಾಮಿಲಿ ಪ್ಲಾನಿಂಗ್ ಮಾಡಿದ್ದ ಟೆಕ್ಕಿ ದಂಪತಿಗೆ ಸಾಲಗಳು ಮುಗಿಯುತ್ತಿದ್ದಂತೆ ಕಂಪನಿ ಶಾಕ್ ನೀಡಿದೆ. ಹಂತ ಹಂತವಾಗಿ ಉದ್ಯೋಗ ಕಡಿತ ಆರಂಭಗೊಂಡ ಕಾರಣ ಮಗು ಕನಸನ್ನು ಮುಂದೂಡಿದ ಘಟನೆ ಇದೀಗ ಭಾರಿ ಚರ್ಚೆಯಾಗುತ್ತಿದೆ. ಮಹಿಳಾ ಟೆಕ್ಕಿ ತಮ್ಮ ನೋವು ಹಂಚಿಕೊಂಡಿದ್ದಾರೆ.

ಮೆಟಾದಲ್ಲಿ ಇರೋವರೆಗೂ ಮಗು ಬೇಡ

ಮಹಿಳಾ ಟೆಕ್ಕಿ ಸೋಶಿಯಲ್ ಮೀಡಿಯಾ ದೈತ್ಯ ಮೆಟಾ ಕಂಪನಿಯಲ್ಲಿ ಉದ್ಯೋಗಿಯಾಗಿದ್ದಾರೆ. ಆದರೆ ಮೆಟಾದಲ್ಲಿ ಹಂತ ಹಂತವಾಗಿ ಉದ್ಯೋಗ ಕಡಿತ ನಡೆಯುತ್ತಿದೆ. ಮದುವೆಯಾದ ಆರಂಭದಲ್ಲಿ ಹಲವು ಕಮಿಟ್‌ಮೆಂಟ್ ಕಾರಣ ಮಗು ಕನಸನ್ನು ಮುಂದೂಡಿದ್ದರು. ಇದಕ್ಕೆ ಗಂಡ ಕೂಡ ಒಪ್ಪಿಗೆ ಸೂಚಿಸಿದ್ದರು. ಕಮಿಟ್‌‌ಮೆಂಚ್ ಒಂದು ಹಂತಕ್ಕೆ ಮುಗಿಯುತ್ತಿದ್ದಂತೆ ಫ್ಯಾಮಿಲ್ ಪ್ಲಾನ್ ಯೋಚನೆ ಮಾಡಿದ್ದಾರೆ. ಅಷ್ಟರಲ್ಲೇ ಮೆಟಾದಲ್ಲಿ ಲೇಫ್ ಆಫ್ ಸಂಕಷ್ಟಗಳು ಹೆಚ್ಚಾಗಿದೆ. ಹೀಗಾಗಿ ಮೆಟಾ ಕೆಲಸದಲ್ಲಿ ಇರೋವರಗೆ ತನಗೆ ಮಗು ಬೇಡ ಎಂದು ಮಹಿಳಾ ಟೆಕ್ಕಿ ನಿರ್ಧರಿಸಿದ್ದಾರೆ. ಮಹಿಳಾ ಟೆಕ್ಕಿ ಬ್ಲಂಡ್ ಮೂಲಕ ತಮ್ಮ ನೋವು ಹೇಳಿಕೊಂಡಿದ್ದಾರೆ. ಈ ಮೂಲಕ ದೈತ್ಯ ಕಾರ್ಪೋರೇಟ್ ಕಂಪನಿಗಳ ಕರಾಳ ಸತ್ಯಗಳು ಹೊರಬಂದಿದೆ.

ಮುಂದಿನ ವರ್ಷ ನಾನು ಮೆಟಾದಲ್ಲಿ ಕೆಲಸ ಉಳಿಸಿಕೊಳ್ಳುತ್ತೇನೋ ಇಲ್ಲವೂ ಅನ್ನೋದು ಗೊತ್ತಿಲ್ಲ. ಉದ್ಯೋಗ ಕಡಿತದಲ್ಲಿ ನನ್ನ ಕೆಲಸವೂ ಹೋಗಬಹುದು. ಹೀಗಾಗಿ ಗಂಡನ ಜೊತೆ ಸುದೀರ್ಘವಾಗಿ ಚರ್ಚಿಸಿ, ನಾನು ಮೆಟಾದಲ್ಲಿ ಇರೋವರೆಗೆ ಮಗು ಬೇಡ ಎಂದು ನಿರ್ಧರಿಸಿದ್ದೇನೆ. ಇದು ಕಠಿಣ ನಿರ್ಧಾರವಾಗಿತ್ತು. ಆದರೆ ಬೇರೆ ದಾರಿ ಇಲ್ಲ ಎಂದು ಮಹಿಳಾ ಟೆಕ್ಕಿ ಹೇಳಿದ್ದಾರೆ. ಒಂದು ವೇಳೆ ನಾನು ಮೆಟರ್ನಿಟಿ ರಜೆಯಲ್ಲಿ ಹೋದರೆ ಮರಳಿ ಬರುವಾಗ ಕೆಲಸ ಇರುತ್ತೆ ಅನ್ನೋ ಖಾತ್ರಿ ಇಲ್ಲ ಎಂದು ಮಹಿಳಾ ಟೆಕ್ಕಿ ಹೇಳಿದ್ದಾರೆ.

ವಯಸ್ಸು ಓಡುತ್ತಿದೆ

ಕೆಲಸದ ಅಭದ್ರತೆಯಿಂದ ಮಗುವಿನ ಪ್ಲಾನ್ ಮಾಡಲು ಸಾಧ್ಯವಾಗುತ್ತಿಲ್ಲ. ಆದರೆ ವಯಸ್ಸು ಓಡುತ್ತಿದೆ. ಕೆಲಸದ ಅಭದ್ರತೆ ಕಾರಣ ಮಗು ಪ್ಲಾನ್ ಮುಂದೂಡುತ್ತಿದ್ದೇನೆ. ಆದರೆ ವಯಸ್ಸು, ಆರೋಗ್ಯದ ಕಾರಣ ನನಗೆ ತಾಯಿಯಾಗಲು ಸಾಧ್ಯವಾಗುತ್ತಾ ಅನ್ನೋ ಆತಂಕ ಕಾಡುತ್ತಿದೆ. ನನ್ನ ವೈಯುಕ್ತಿಕ ಜೀವನ ಅರ್ಥಹೀನವಾಗುತ್ತಿದೆ. ನೋವು ಹೆಚ್ಚಾಗುತ್ತಿದೆ ಎಂದು ಮಹಿಳಾ ಟೆಕ್ಕಿ ನೋವು ತೋಡಿಕೊಂಡಿದ್ದಾರೆ.