ಇತ್ತೀಚಿನ ದಿನಗಳಲ್ಲಿ, ದಂಪತಿ ತಮ್ಮ ನವಜಾತ ಶಿಶುವಿಗೆ ಇಲ್ಲಿಯವರೆಗೆ ಯಾರೂ ತಮ್ಮ ಮಗುವಿಗೆ ಹೆಸರಿಡದ ರೀತಿಯಲ್ಲಿ ಹೆಸರಿಟ್ಟಿರುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ಸಂಚಲನ ಸೃಷ್ಟಿಸಿದೆ.
ಇತ್ತೀಚಿನ ದಿನಗಳಲ್ಲಿ ಮಕ್ಕಳಿಗೆ ವಿಶಿಷ್ಟ ಹೆಸರುಗಳನ್ನಿಡುವ ಟ್ರೆಂಡಿಂಗ್ ಆರಂಭವಾಗಿದೆ. ಮಾಡರ್ನ್ ದಂಪತಿಗಳು ಈಗ ತಮ್ಮ ಮಕ್ಕಳಿಗೆ ವಿಭಿನ್ನ ಹೆಸರುಗಳನ್ನು ಆಯ್ಕೆ ಮಾಡುತ್ತಿದ್ದಾರೆ. ಅದು ಕೇಳಲು ವಿಚಿತ್ರವಾಗಿರುತ್ತದೆ. ಅಲ್ಲದೇ ಅದರ ಅರ್ಥವು ತುಂಬಾ ಸುಂದರ ಮತ್ತು ಆಳವಾಗಿ ಸಂಬಂಧ ಹೊಂದಿರುತ್ತದೆ. ಏತನ್ಮಧ್ಯೆ, ದಂಪತಿ ತಮ್ಮ ಮಗುವಿಗೆ ವಿಶಿಷ್ಟವಾದ ಹೆಸರನ್ನು ನೀಡಿದ್ದಾರೆ. ಆ ಹೆಸರನ್ನು ಕೇಳಿ ಎಲ್ಲರೂ ಮೊದಲು ಸರ್‌ಪ್ರೈಸ್ ಆಗುತ್ತಾರೆ. ಆ ನಂತರ ಅದರ ಹಿಂದಿನ ಕಾರಣವನ್ನು ಕೇಳಿದಾಗ ಬಿದ್ದು ಬಿದ್ದು ನಗುತ್ತಾರೆ.
ಜನರು ತಮ್ಮ ಮಕ್ಕಳಿಗೆ ರಾಮ, ಕೃಷ್ಣ, ಗಣೇಶ, ಮಂಜುನಾಥ ಎಂದು ದೇವರ ನಾಮಗಳನ್ನಿಡುವುದನ್ನು ಕೇಳಿದ್ದೇವೆ. ಆದರೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ದಂಪತಿ ತಮ್ಮ ಮಗುವಿಗೆ ತುಂಬಾ ವೈಶಿಷ್ಟವಾದ ಹೆಸರನ್ನಿಟ್ಟಿದ್ದಾರೆ. ಬಹುಶಃ ಇಲ್ಲಿಯವರೆಗೆ ಯಾವುದೇ ಮಗುವಿಗೆ ದಂಪತಿಗಳು ಅಂತಹ ಹೆಸರನ್ನು ಇಟ್ಟಿರಲಿಕ್ಕಿಲ್ಲ. ಹೌದು, ಆ ದಂಪತಿ ತಮ್ಮ ಮಗುವಿಗೆ ಯುಪಿಎಸ್‌ಸಿ ಎಂದು ಹೆಸರಿಟ್ಟಿದ್ದಾರೆ. ಈ ರೀತಿ ಹೆಸರಿಡಲು ಕಾರಣವೇನೆಂದು ಕೇಳಿದಾಗ, ಅವರು ತುಂಬಾ Random answer ನೀಡಿದ್ದಾರೆ. ಇದೀಗ ದಂಪತಿಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
ಮಗುವಿಗೆ ಈ ರೀತಿ ಹೆಸರಿಡಲು ಕಾರಣವೇನು?
ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (UPSC) ದೇಶದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದಾಗಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಇದಕ್ಕಾಗಿ ಜನರು ಹಲವು ವರ್ಷಗಳ ಕಾಲ ಶ್ರಮಿಸುತ್ತಾರೆ. ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಎಲ್ಲರಿಗೂ ಸುಲಭವಲ್ಲ. ಇದೇ ಕಠಿಣ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಈ ದಂಪತಿಗಳು ಸಹ ತಯಾರಿ ನಡೆಸುತ್ತಿದ್ದರು, ಆದರೆ ಅವರಿಗೆ ಅದು ಸಾಧ್ಯವಾಗಲಿಲ್ಲ. ಹಾಗಾಗಿ ಮಗುವಿಗೆ ಈ ಹೆಸರನ್ನಿಟ್ಟರಾ ಎಂದರೆ ಅದಕ್ಕೂ ಅಲ್ಲವಂತೆ, ಮತ್ತೆ?, ವಿಡಿಯೋದಲ್ಲಿ ಹೇಳಿರುವ ಪ್ರಕಾರ, ದಂಪತಿ ತಮ್ಮ ನವಜಾತ ಶಿಶುವಿನೊಂದಿಗೆ ನಿಂತಿರುವುದನ್ನು ಕಾಣಬಹುದು. ಆಗ ಒಬ್ಬ ಹುಡುಗಿ ತಮ್ಮ ಮಗುವಿಗೆ UPSC ಎಂದು ಏಕೆ ಹೆಸರಿಟ್ಟಿದ್ದೀರಿ ಎಂದು ಕೇಳುತ್ತಾಳೆ. ಇದಕ್ಕೆ, ಮಗುವಿನ ತಂದೆ ತುಂಬಾ ವಿಚಿತ್ರವಾದ ಉತ್ತರವನ್ನು ನೀಡುತ್ತಾರೆ. ಮಗುವಿನ ತಂದೆ ತಾನು ಮತ್ತು ತನ್ನ ಹೆಂಡತಿ ಒಂದು ಸಮಯದಲ್ಲಿ UPSC ಗೆ ತಯಾರಿ ನಡೆಸುತ್ತಿದ್ದೆವು ಎಂದು ಹೇಳುತ್ತಾರೆ. ಆದರೆ ಆ ಸಮಯದಲ್ಲಿ ಇಬ್ಬರೂ UPSC ಪಾಸ್ ಮಾಡಲು ಸಾಧ್ಯವಾಗಲಿಲ್ಲ. ನಂತರ ಇಬ್ಬರೂ ಮದುವೆಯಾದೆವು. ಈಗ ನಮಗೆ ಮಗುವಾಗಿದೆ. ನಾವು ಮಗುವಿಗೆ UPSC ಎಂದು ಹೆಸರಿಟ್ಟಿದ್ದೇವೆ. ಏಕೆಂದರೆ ಇಬ್ಬರೂ UPSC ಪಾಸ್ ಮಾಡಿದ್ದೇವೆ ಎಂದು ಜನರಿಗೆ ಹೇಳಲು. ಇದನ್ನು ಕೇಳಿದ ನಂತರ, ಪ್ರಶ್ನೆ ಕೇಳಿದ ಹುಡುಗಿ ತಲೆ ಕೆರೆದುಕೊಳ್ಳುವಂತಾಗಿದೆ.
ದಂಪತಿಯನ್ನು ಗೇಲಿ ಮಾಡಿದ ನೆಟ್ಟಿಗರು
ಈ ದಂಪತಿಗಳ ಹೇಳಿಕೆಯನ್ನು ಜನರು ತುಂಬಾ ತಮಾಷೆಯಾಗಿ ತೆಗೆದುಕೊಂಡರು. ವಿಡಿಯೋದ ಶೀರ್ಷಿಕೆ हमने UPSC निकाला है ಎಂದು ಬರೆಯಲಾಗಿದೆ. ಇದನ್ನು ಸಾಮಾಜಿಕ ಮಾಧ್ಯಮ ವೇದಿಕೆಯಾದ Instagram ನಲ್ಲಿ @arvind.sridevi ಎಂಬ ಖಾತೆಯಿಂದ ಹಂಚಿಕೊಳ್ಳಲಾಗಿದೆ. ಇದನ್ನು ಇಲ್ಲಿಯವರೆಗೆ ಲಕ್ಷಾಂತರ ಜನರು ವೀಕ್ಷಿಸಿದ್ದಾರೆ ಮತ್ತು ಸಾವಿರಾರು ಜನರು ಇದನ್ನು ಇಷ್ಟಪಟ್ಟಿದ್ದಾರೆ. ಜನರು ವಿಡಿಯೋದ ಕಾಮೆಂಟ್ ವಿಭಾಗದಲ್ಲಿ ಕಾಮೆಂಟ್ ಮಾಡುವ ಮೂಲಕ ದಂಪತಿಗಳ ಕಾಲೆಳೆಯುತ್ತಿದ್ದಾರೆ. ಬಳಕೆದಾರರು ವಿಡಿಯೋಗೆ "ಈಗ ಮುಂದಿನ ಗುರಿ MPPSC?", "ಸಹೋದರ, ಈಗ JEE ಮತ್ತು NEET ಗೆ ತಯಾರಿ ಪ್ರಾರಂಭಿಸಿ.", "ಅದು ಸರಿ, ಈ UPSC ಗೆ ನಿವೃತ್ತಿ ಇಲ್ಲ" ಎಂದೆಲ್ಲಾ ಬರೆದಿದ್ದಾರೆ. ಕೆಲವರು ಈ ಬಗ್ಗೆ ದಂಪತಿಗಳನ್ನು ಅಭಿನಂದಿಸಿದರೆ, ಮತ್ತೆ ಕೆಲವರು ಅವರ ಹಾಸ್ಯ ಮನೋಭಾವವನ್ನು ಹೊಗಳಿದ್ದಾರೆ.