1.7 ಕೋಟಿ ರೂಪಾಯಿ ಸಂಬಳದ ಮೈಕ್ರೋಸಾಫ್ಟ್ ಕೆಲಸವನ್ನು ತೊರೆದು ಕಂಟೆಂಟ್ ಕ್ರಿಯೇಟರ್ ಆಗಲು ಹೊರಟ 27 ವರ್ಷದ ಕ್ರಿಸ್ ಹಾರ್ಮ್ಸ್ ಅವರ ಕಥೆಯಿದು. ಆರಂಭದಲ್ಲಿ ಸೋಲು, ಹತಾಶೆ ಅನುಭವಿಸಿದರೂ, ಅವರು ತಮ್ಮ ನಿರ್ಧಾರಕ್ಕೆ ಬದ್ಧರಾಗಿ, ಸವಾಲುಗಳನ್ನು ಎದುರಿಸಿ ಅಂತಿಮವಾಗಿ ಯಶಸ್ಸು ಕಂಡುಕೊಂಡರು.

Viral Video: ಇದು ಕಂಟೆಂಟ್ ಕ್ರಿಯೇಟರ್ ಆಗುವ ಆಸೆಯಿಂದ ಸುಮಾರು 1.7 ಕೋಟಿ ರೂಪಾಯಿ ಸಂಬಳದ ಕೆಲಸ ಬಿಟ್ಟ 27 ವರ್ಷದ ಯುವಕನ ಕಥೆ. ಕೆಲಸ ತೊರೆದ ಬಳಿಕ ಆತನ ಜೀವನದಲ್ಲಿ ಏನೆಲ್ಲಾ ಆಯ್ತು ಎಂಬುದನ್ನು ಸ್ವತಃ ಆ ಯುವಕ ಹೇಳಿಕೊಂಡಿದ್ದು, ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮೈಕ್ರೋಸಾಫ್ಟ್‌ನ ಮಾಜಿ ಉದ್ಯೋಗಿ ಕ್ರಿಸ್ ಹಾರ್ಮ್ಸ್ ಎಂಬ ಯುವಕನ ಜೀವನ ಎಲ್ಲಾ ರೀತಿಯಲ್ಲಿಯೂ ಸೆಟೆಲ್ ಆಗಿತ್ತು. ಕೈತುಂಬಾ ಸಂಬಳದ ಜೊತೆ ನೆಮ್ಮದಿಯಿಂದ ಕ್ರಿಸ್ ಹಾರ್ಮ್ಸ್ ಜೀವನ ನಡೆಸುತ್ತಿದ್ದರು. ಕೆಲಸ ಬಿಟ್ಟ ಸುಮಾರು ಒಂದು ವರ್ಷದ ನಂತರ ತಾನು ತೆಗೆದುಕೊಂಡ ನಿರ್ಧಾರ ಎಷ್ಟು ತಪ್ಪು ಎಂಬುವುದು ಕ್ರಿಸ್‌ಗೆ ಗೊತ್ತಾಗಿದೆ. ಈ ಸಂಬಂಧ ತಮ್ಮ ಅನುಭವವನ್ನು ಕ್ರಿಸ್ ಹಂಚಿಕೊಂಡಿದ್ದಾರೆ.

ಸುಂದರವಾದ ಜಗತ್ತು ತೊರೆಯೋದು ಸುಲಭದ ಮಾತಾಗಿರಲಿಲ್ಲ

ಮೈಕ್ರೋಸಾಫ್ಟ್ ತೊರೆಯುವುದು ಬಹುಶಃ ನನ್ನ ಜೀವನದ ಅತ್ಯಂತ ಕೆಟ್ಟ ನಿರ್ಧಾರ ಎಂದು ಕೆಲವೊಮ್ಮೆ ನನಗೆ ಅನಿಸುತ್ತದೆ. ದೊಡ್ಡ ಕಂಪನಿಯಲ್ಲಿನ ಕೆಲಸವು ನಮಗೆ ಸಮಾಜದಲ್ಲಿ ಗೌರವ, ಗುರುತು ಮತ್ತು ಭವಿಷ್ಯದ ಭದ್ರತೆಯ ಪ್ರಜ್ಞೆಯನ್ನು ಸಹ ನೀಡುತ್ತದೆ. ಇಂತಹ ಸುಂದರವಾದ ಜಗತ್ತನ್ನು ತೊರೆಯುವುದು ಸುಲಭದ ಮಾತು ಆಗಿರಲಿಲ್ಲ. ಕೆಲಸ ಬಿಟ್ಟ ಬಳಿಕ ಅನೇಕ ತೊಂದರೆಗಳನ್ನು ಅನುಭವಿಸಿದರೂ ನನ್ನ ನಿರ್ಧಾರಕ್ಕೆ ನಾನು ವಿಷಾಧಿಸುವುದಿಲ್ಲ ಎಂದಿದ್ದಾರೆ ಕ್ರಿಸ್.

ನಾನು ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದ್ದೇನೆ ಎಂದು ನಂಬಿದ್ದೇನೆ. ಆದ್ರೆ ಕಷ್ಟದ ಸಮಯದಲ್ಲಿ ಕೆಲವೊಮ್ಮೆ ಆತ್ಮವಿಶ್ವಾಸವನ್ನು ಕಾಪಾಡಿಕೊಳ್ಳುವುದು ಅತ್ಯಂತ ಸವಾಲಿನದ್ದಾಗಿರುತ್ತೆ ಎಂಬುವುದು ಕ್ರಿಸ್ ಹಾರ್ಮ್ಸ್ ಅವರ ಅಭಿಪ್ರಾಯವಾಗಿದೆ. ಕೆಲಸ ಬಿಟ್ಟ ಬಳಿಕ ಯಾವುದೇ ಪ್ಲಾನ್ ಇಲ್ಲದೇ ಕ್ರಿಸ್, ಆಸ್ಟ್ರೇಲಿಯಾಗೆ ಆಗಮಿಸಿದರು. ಹೊಸ ವೃತ್ತಿ ಬದುಕು ಕಂಡುಕೊಳ್ಳಲು ಕ್ರಿಸ್‌ ಅವರಿಗೆ ಸುಮಾರು 5 ತಿಂಗಳ ಸಮಯ ಬೇಕಾಯ್ತು. ನಂತತ ಬ್ರ್ಯಾಂಡ್‌ಗಳಿಗಾಗಿ ವಿಡಿಯೋ ಮಾಡಲು, ಹೊಸ ಗ್ರಾಹಕರನ್ನು ಹುಡುಕಲು ಮತ್ತು ವಿವಿಧ ಆನ್‌ಲೈನ್ ಬ್ಯುಸಿನೆಸ್ ಐಡಿಯಾಗಳ ಮೇಲೆ ಕೆಲಸ ಮಾಡಲು ಪ್ರಾರಂಭಿಸಿದರು. ಆದರೆ ತಿಂಗಳುಗಳ ಕಠಿಣ ಪರಿಶ್ರಮದ ಹೊರತಾಗಿಯೂ, ಅವರು ಯಾವುದೇ ಆರಂಭಿಕ ಯಶಸ್ಸನ್ನು ಕಾಣಲಿಲ್ಲ.

ಆರಂಭದಲ್ಲಿ ಸೋಲು, ಹತಾಶೆ

ಆರಂಭಿಕ ಯಶಸ್ಸು ಸಿಗದ ಹಿನ್ನೆಲೆ ಕ್ರಿಸ್ ಮತ್ತೆ ಹಳೆ ಜೀವನಕ್ಕೆ ಹಿಂದಿರುಗಲು ಪ್ಲಾನ್ ಮಾಡಿದ್ದರು. ಈ ಸಂದರ್ಭದಲ್ಲಿ ಕ್ರಿಸ್‌ಗೆ ಆನ್‌ಲೈನ್‌ನಲ್ಲಿ ಹಣ ಗಳಿಸುವ ಮೊದಲ ಅವಕಾಶ ಒಲಿದು ಬಂತು. ಒತ್ತಡದ ಸಂದರ್ಭದಲ್ಲಿ ದೀರ್ಘಾವಧಿಯ ಯೋಜನೆಯಿಂದ ಸಾಧ್ಯವಾಗದ್ದನ್ನು ಸಾಧಿಸಲು ಸಹಾಯ ಮಾಡಿದೆ ಎಂದು ಕ್ರಿಸ್ ಹೇಳುತ್ತಾರೆ. ಇಂದು ತಮ್ಮಿಷ್ಟದ ವಲಯದಲ್ಲಿಯೇ ಕ್ರಿಸ್ ಬದುಕು ಕಟ್ಟಿಕೊಂಡಿದ್ದಾರೆ. ಸುರಕ್ಷಿತ ಕಾರ್ಪೊರೇಟ್ ಉದ್ಯೋಗವನ್ನು ತೊರೆದು ನಿಮ್ಮ ಸ್ವಂತ ವ್ಯವಹಾರವನ್ನು ಪ್ರಾರಂಭಿಸುವುದು ಎಷ್ಟು ಸವಾಲು ಎಂಬುದರ ಬಗ್ಗೆ ಕ್ರಿಸ್ ಮಾತನಾಡಲು ಆರಂಭಿಸಿದ್ದಾರೆ. ಕ್ರಿಸ್ ಅವರ ಈ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ವೈರಲ್ ಆಗುತ್ತಿವೆ.

ಇದನ್ನೂ ಓದಿ: Google ಉದ್ಯೋಗ ಬಿಟ್ಟು ಬ್ರಷ್ ಹಿಡಿದ ಮಹಿಳೆ, ಹಣಕ್ಕಿಂತ ನೆಮ್ಮದಿಯೇ ಮುಖ್ಯ ಎಂದ ಸಾರಾ

ಹೊಸ ವಲಯ ಅಥವಾ ಉದ್ಯಮದಲ್ಲಿ ಒಂದೇ ದಿನದಲ್ಲಿಯೇ ಯಶಸ್ಸು ಸಿಗಲ್ಲ. ಇದಕ್ಕಾಗಿ ನಿರಂತರ ಕಲಿಕೆ ಮತ್ತು ಪ್ರಯತ್ನ ಬೇಕಾಗುತ್ತದೆ. ಹಿನ್ನಡೆ, ಸೋಲು ಎದುರಿಸುವಾಗ ಆತ್ಮವಿಶ್ವಾಸ ಕಾಪಾಡಿಕೊಳ್ಳೋದು ಬೇಕಾಗುತ್ತದೆ.

ಇದನ್ನೂ ಓದಿ: ಬೆಂಗಳೂರಲ್ಲಿ ದೇಶದ ಮೊದಲ AI University ಸ್ಥಾಪನೆ: ಸಿಎಂ ಡಿಕೆಶಿ ಘೋಷಣೆ, ಜಾಗತಿಕ ಇತಿಹಾಸಕ್ಕೆ ಸಜ್ಜಾದ ಕರ್ನಾಟಕ!

View post on Instagram