ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪತಿಯ ಮುಂದೆ ಪತ್ನಿಯೊಬ್ಬರು ರೀಲ್ಸ್ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಲೈಕ್ಸ್ ಮತ್ತು ವ್ಯೂವ್ಸ್‌ಗಾಗಿ ಜನರು ಸಂವೇದನೆ ಕಳೆದುಕೊಳ್ಳುತ್ತಿದ್ದಾರೆಯೇ ಎಂಬ ಚರ್ಚೆಯನ್ನು ಇದು ಹುಟ್ಟುಹಾಕಿದೆ. ಕೆಲವರು ಮಹಿಳೆಯ ಕೃತ್ಯವನ್ನು ಖಂಡಿಸಿದರೆ, ಇನ್ನು ಕೆಲವರು ಆಕೆಯ ಪರವಾಗಿ ವಾದಿಸಿದ್ದಾರೆ.

ರೀಲ್ಸ್​ ಹುಚ್ಚಿಗೆ ಇಂದು ಎಷ್ಟೋ ಮಂದಿ ಪ್ರಾಣ ಕಳೆದುಕೊಂಡವರು ಇದ್ದಾರೆ. ಮತ್ತೆ ಕೆಲವರು ಹುಚ್ಚಾಟ ಮೆರೆದು ಸಾವು-ಬದುಕಿನ ನಡುವೆ ಹೋರಾಟ ಮಾಡ್ತಿದ್ದೋರೂ ಇದ್ದಾರೆ. ಮತ್ತೆ ಕೆಲವರು ಲೈಕ್ಸ್​, ವ್ಯೂವ್ಸ್​ ಹುಚ್ಚಿಗೆ ಸಂವೇದನೆಯನ್ನೇ ಕಳೆದುಕೊಳ್ಳುತ್ತಿದ್ದಾರೆ. ಯಾವ ಸಂದರ್ಭದಲ್ಲಿ ಹೇಗೆ ವರ್ತಿಸಬೇಕು ಎಂದು ತಿಳಿಯದೇ, ರೀಲ್ಸ್​ ಹುಚ್ಚಿಗೆ ಬೀಳುತ್ತಿದ್ದಾರೆ. ಈಗ ಅಂಥದ್ದೇ ಒಂದು ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಸಾಕಷ್ಟು ವೈರಲ್​ ಆಗಿದ್ದು, ರೀಲ್ಸ್​ ಹುಚ್ಚಿನ ಬಗ್ಗೆ ಸಿಕ್ಕಾಪಟ್ಟೆ ಚರ್ಚೆ ಆಗುತ್ತಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪತಿಯ ಪ್ರಾಣಕ್ಕಿಂತ ರೀಲ್ಸ್​ ಹೆಚ್ಚಾಯ್ತಾ?

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪತಿಯ ಎದುರು ನಿಂತು ಮಹಿಳೆಯೊಬ್ಬರು ರೀಲ್ ಅನ್ನು ರೆಕಾರ್ಡ್ ಮಾಡುತ್ತಿರುವ ವಿಡಿಯೋ ಇದಾಗಿದೆ. ಆಕೆ ಅಂದುಕೊಂಡಂತೆ ಇದು ಸಿಕ್ಕಾಪಟ್ಟೆ ವೈರಲ್​ ಕೂಡ ಆಗಿದೆ. ಆದರೆ ನೆಗೆಟಿವ್​ ಕಮೆಂಟ್ಸ್​ ಸುರಿಮಳೆಯಾಗುತ್ತಿದೆ. ಈ ವಿಡಿಯೋ ನೋಡಿದ್ರೆ ಪತಿ ತುಂಬಾ ಸೀರಿಯಸ್​ ಇರುವಂತೆ ಕಾಣುತ್ತಿದೆ. ಆದರೆ ಪತ್ನಿ ಮಾತ್ರ ರೀಲ್ಸ್​ ಮಾಡುತ್ತಿದ್ದಾಳೆ. ರೀಲ್ಸ್​ ಮಾಡುವವರಿಗೆ ನೆಗೆಟಿವ್​ ಪ್ರಭಾವ ಹೆಚ್ಚಾದರೇನೇ ಸಿಕ್ಕಾಪಟ್ಟೆ ವೈರಲ್​ ಆಗುವುದು. ಒಳ್ಳೆಯ ರೀತಿಯಲ್ಲಿ, ರೀಲ್ಸ್​ ಮಾಡಿದ್ರೆ ಅದನ್ನು ನೋಡುವವರು ಕಡಿಮೆಯೇ. ಇದೇ ಕಾರಣಕ್ಕೆ ಮಹಿಳೆ ಹೀಗೆ ಮಾಡಿದ್ದು, ಎಲ್ಲರೂ ಉಗಿಯುತ್ತಲೇ ರೀಲ್ಸ್​ ಶೇರ್​ ಮಾಡುತ್ತಿದ್ದಾರೆ. ಇದು ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ.

ಅಲ್ಲಿಗೆ ಮಹಿಳೆಯ ಪತಿಯ ಸ್ಥಿತಿ ಏನೇ ಇರಲಿ. ಮಹಿಳೆಯ ಆಸೆಯಂತೂ ಈಡೇರಿದಂತಾಗಿದೆ. ರೀಲ್ಸ್​ ಸಿಕ್ಕಾಪಟ್ಟೆ ವ್ಯೂವ್ಸ್​ ಕಂಡು ಆಕೆಗೆ ಸಂತಸ ತಂದಿರಲಿಕ್ಕೆ ಸಾಕು. "ಜೀವನದಲ್ಲಿ ಪ್ರತಿಯೊಂದು ಕ್ಷಣವೂ ರೀಲ್‌ಗಾಗಿ ಅಲ್ಲ" ಎಂದು ಹಲವಾರು ಮಂದಿ ಕಮೆಂಟ್ಸ್​ ಮಾಡಿದ್ದಾರೆ. ಕಷ್ಟದ ಸಮಯದಲ್ಲಿ ಪ್ರೀತಿಪಾತ್ರರ ಕಡೆಗೆ ಜನರು ಹೆಚ್ಚು ಸಂವೇದನಾಶೀಲರಾಗಿರಬೇಕು ಎಂದು ಹೇಳುತ್ತಿದ್ದಾರೆ.

ಮಹಿಳೆಯ ಪರ ಕಮೆಂಟ್ಸ್​

ಈ ಘಟನೆಯು ಮಾನವ ನಡವಳಿಕೆಯ ಮೇಲೆ ಸಾಮಾಜಿಕ ಮಾಧ್ಯಮದ ಪ್ರಭಾವದ ಬಗ್ಗೆ ಚರ್ಚೆಗಳನ್ನು ಮತ್ತೆ ಹುಟ್ಟುಹಾಕಿದೆ. ಲೈಕ್ಸ್​, ಶೇರ್​ ಹುಚ್ಚಿನಲ್ಲಿ ಹೇಗೆ ಸಂವೇದನಾಶೀಲತೆ ಹೋಗುತ್ತಿದೆ ಎನ್ನುತ್ತಿದ್ದಾರೆ. ಆದರೆ ಕೆಲವರು ಮಹಿಳೆಯನ್ನು ಸಮರ್ಥಿಸಿಕೊಂಡಿದ್ದಾರೆ. ಬಹುಶಃ ಮಾರಣಾಂತಿಕ ಕಾಯಿಲೆಯಿಂದ ಪತಿ ಚೇತರಿಸಿಕೊಂಡಿರಬೇಕು. ಆದ್ದರಿಂದ ಆಕೆ ಖುಷಿಯಿಂದ ಈ ವಿಡಿಯೋ ಮಾಡಿರಬಹುದು ಎಂದೂ ಹೇಳುತ್ತಿದ್ದಾರೆ. ಅರ್ಧಂಬರ್ಧ ಸತ್ಯ ಅರಿತು ಮಾತನಾಡುವುದು ಸರಿಯಲ್ಲ ಎನ್ನುತ್ತಿದ್ದಾರೆ.