Asianet Suvarna News Asianet Suvarna News

ಪೇರೆಂಟ್ಸ್ ಮಕ್ಕಳನ್ನು ಪರಸ್ಪರ ಕಂಪೇರ್ ಮಾಡುವುದು ಸರಿಯೇ..?

ಪ್ರತಿಯೊಬ್ಬ ಪೋಷಕರೂ ತಮ್ಮ ಮಕ್ಕಳನ್ನು ಬೆಳೆಸುವಾಗ ಹೆಚ್ಚು ಜಾಗರೂಕರಾಗಿರುತ್ತಾರೆ. ಆದ್ರೆ ನಮ್ಮ ಮಗುವೇ ದಿ ಬೆಸ್ಟ್ ಆಗಬೇಕೆಂಬ ಹುಮ್ಮಸ್ಸಿನಲ್ಲಿ ಇನ್ನೊಂದು ಮಗುವಿನೊಂದಿಗೆ ಕಂಪೇರ್ ಮಾಡಿಬಿಡುತ್ತಾರೆ. ಆದ್ರೆ ಪೇರೆಂಟ್ಸ್ ಹೀಗೆ ಮಾಡುವುದು ಎಷ್ಟು ಸರಿ.

ಮಕ್ಕಳು ಚುರುಕಾಗಿರಬೇಕು, ಎಲ್ಲಾ ವಿಚಾರದಲ್ಲೂ ದಿ ಬೆಸ್ಟ್ ಆಗಿರಬೇಕೆಂದು ಎಲ್ಲಾ ಪೋಷಕರು ಬಯಸುತ್ತಾರೆ. ಹೀಗಾಗಿಯೇ ಬೆಸ್ಟ್‌ ಸ್ಕೂಲ್‌ಗೆ ಸೇರಿಸುವುದು, ಕರಾಟೆ ಕ್ಲಾಸ್‌, ಡ್ರಾಯಿಂಗ್ ಕ್ಲಾಸ್ ಸೇರಿದಂತೆ ಹಲವು ಕ್ಲಾಸ್‌ಗೆ ಸೇರಿಸುವುದು ಮಾಡ್ತಾರೆ. ಆದರೆ ಇದಲ್ಲದೆಯೂ ಕೆಲ ಪೋಷಕರು ತಮ್ಮ ಮಕ್ಕಳನ್ನು ಇತರ ಮಕ್ಕಳೊಂದಿಗೆ ಕಂಪೇರ್ ಮಾಡಿ ಮಾತನಾಡುತ್ತಾರೆ. ಅವರ ಮಾರ್ಕ್ಸ್ ನೋಡು, ಎಷ್ಟು ಆಕ್ಟಿವ್ ಆಗಿದ್ದಾನೆ ನೋಡು ಎಂದು ಹೀಯಾಳಿಸುತ್ತಾರೆ. ತಮ್ಮ ಮಕ್ಕಳಿಗೆ ಹುಮ್ಮಸ್ಸು ಕೊಡಬೇಕು ಅನ್ನೋ ಭರದಲ್ಲಿ ಪೋಷಕರು ಈ ರೀತಿ ಮಾಡೋದು ಸರೀನಾ? ಮಕ್ಕಳ ತಜ್ಞ ಸಯ್ಯದ್ ಮುಜಾಹಿದ್ ಹುಸೇನ್ ಮಾಹಿತಿ ನೀಡಿದ್ದಾರೆ.

Childrens Health: ಮಕ್ಕಳಲ್ಲಿ ಹೃದಯಾಘಾತಕ್ಕೆ ಕಾರಣವೇನು?

Video Top Stories