Asianet Suvarna News Asianet Suvarna News

ಹೃದಯಾಘಾತ, ಮೇಜರ್‌ & ಮೈನರ್ ವ್ಯತ್ಯಾಸ ತಿಳ್ಕೊಳ್ಳೋದು ಹೇಗೆ?

ಹೃದಯಾಘಾತವಾದವರು ಬದುಕುಳಿಯುವುದು ಕಡಿಮೆ. ಕೆಲವೊಂದು ಸಾರಿ ಮಾತ್ರ ತಕ್ಷಣ ಚಿಕಿತ್ಸೆ ದೊರೆತರೆ ಜೀವ ಉಳಿಯುತ್ತದೆ. ಹಾರ್ಟ್ ಅಟ್ಯಾಕ್‌ನಲ್ಲಿ ಮೇಜರ್ ಮತ್ತು ಮೈನರ್ ಹೃದಯಾಘಾತ ಎಂದು ಹೇಳಲಾಗುತ್ತದೆ. ಇವೆರಡರ ನಡುವಿನ ವ್ಯತ್ಯಾಸ ತಿಳಿದುಕೊಳ್ಳುವುದು ಹೇಗೆ?

ಹೃದಯಾಘಾತ ಇತ್ತೀಚಿನ ದಿನಗಳಲ್ಲಿ ಸಾವಿನ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ದಿನನಿತ್ಯದ ಕೆಲಸದಲ್ಲಿ ತೊಡಗಿರುವಾಗಲೇ ಹೃದಯಾಘಾತವಾಗಿ ಸಾವನ್ನಪ್ಪುತ್ತಾರೆ. ಹಾರ್ಟ್ ಅಟ್ಯಾಕ್ ಆದಾಗ ಕೆಲವೊಬ್ಬರಿಗೆ ಮೈನರ್, ಇನ್ನು ಕೆಲವರಿಗೆ ಮೇಜರ್ ಎಂದು ಹೇಳಿರುವುದು ಕೇಳಿರಬಹುದು. ಕೆಲವು ಜನರು ಸಣ್ಣ ಹೃದಯಾಘಾತವನ್ನು ಅನುಭವಿಸುತ್ತಾರೆ. ಆದರೆ ಇನ್ನು ಕೆಲವೊಮ್ಮೆ ಜನರು ದೊಡ್ಡ ಹೃದಯಾಘಾತವನ್ನು ಅನುಭವಿಸುತ್ತಾರೆ. ಇದಕ್ಕೆ ತಕ್ಷಣ ಚಿಕಿತ್ಸೆಯ ಅಗತ್ಯವಿರುತ್ತದೆ. ಹಾಗಿದ್ರೆ ಹಾರ್ಟ್‌ ಅಟ್ಯಾಕ್‌ನಲ್ಲಿ ಮೇಜರ್ ಮತ್ತು ಮೈನರ್ ಇವೆರಡರ ನಡುವಿನ ವ್ಯತ್ಯಾಸ ತಿಳಿದುಕೊಳ್ಳುವುದು ಹೇಗೆ? ಈ ಬಗ್ಗೆ ಕಾರ್ಡಿಯಾಕ್ ಸರ್ಜನ್ ರಾಜೇಶ್ ಮಾಹಿತಿ ನೀಡಿದ್ದಾರೆ.

ದಿಢೀರ್ ಹೃದಯಾಘಾತವಾಗುತ್ತೆ ಅನ್ನೋ ಭಯಾನ? ಪ್ರತಿ ದಿನ ಈ ಹಣ್ಣು ತಿನ್ನಿ ಸಾಕು

 

Video Top Stories