Asianet Suvarna News Asianet Suvarna News

ರಶ್ಮಿಕಾ, ಸಮಂತಾರನ್ನೂ ಮೀರಿಸಿದ ಸಾಯಿ ಪಲ್ಲವಿ, ಈ ವಿಷಯದಲ್ಲಿ ನಂ 1..!

- ಆ ವಿಷಯದಲ್ಲಿ ನಂಬರ್-01 ಈ ಬಳುಕೋ ಬಳ್ಳಿ.!

- ಡಾನ್ಸ್ ಕ್ವೀನ್ ಕ್ರೇಜ್ ಹೇಗಿದೆ ಗೊತ್ತಾ..?

- ರಶ್ಮಿಕಾ, ಸಮಂತಾರನ್ನೂ ಮೀರಿಸಿದ ಸಾಯಿ ಪಲ್ಲವಿ.!

ದಕ್ಷಿಣ ಭಾರತದ ಸಿನಿ ಜಗತ್ತಿನ ಟಾಪ್ ಹೀರೋಯಿನ್‌ಗಳ ವಿಷಯದಲ್ಲಿ ನಂಬರ್ ಒನ್ ಪಟ್ಟದ ವಿಚಾರ ಆಗಾಗ ಗುಲ್ಲೇಳುತ್ತಿರುತ್ತೆ. ರಶ್ಮಿಕಾ ಮಂದಣ್ಣ (Rashmika Mandanna) ಅತಿ ಹೆಚ್ಚು ಫಾಲೋವರ್ಸ್ ಹೊಂದಿರೋ ನಂಬರ್-1 ನಟಿ ಅಂತ ಅನಿಸಿಕೊಂಡ್ರೆ ಹಾಟ್ ಬ್ಯೂಟಿ ಸಮಂತಾ ಪುಷ್ಪ ಸಿನಿಮಾದ ಊ ಅಂಟಾವ ಹಾಡು ಜಗತ್ತಿನಲ್ಲೇ ನಂಬರ್ ಒನ್ ಸಾಂಗ್ ಅಂತ ಹೆಗ್ಗಳಿಕೆ ಪಡೆದು ಸಮಂತಾರನ್ನ ಟಾಪ್ ಹೀರೋಯಿನ್ ಆಗಿಸಿತ್ತು. ಪೂಜಾ ಹೆಗ್ಡೆ ಟಾಪ್ ಹೀರೋಗಳ ಸಿನಿಮಾದಲ್ಲಿ ನಟಿಸೋ ಮೂಲಕ ಅತಿ ಹೆಚ್ಚು ಸಂಭಾವನೆ ಪಡೆಯೋ ಸೌತ್ ನಂಬರ್ -1 ನಟಿ ಅನ್ನೋ ಹೆಗ್ಗಳಿಕೆ ಪಡೆದಿದ್ರು. 

ಕಿಚ್ಚನ ಹುಚ್ಚ ಸಿನಿಮಾಗೆ 21 ರ ಹರೆಯ, ಅಂದೂ, ಇಂದೂ ಫೇಮಸ್ ಈ ಸೀನ್!

ಆದ್ರೆ ಈಗ ಸೌತ್ ಸಿನಿ ರಂಗದ ನಯಾ ಕ್ರಶ್ ಸಾಯಿ ಪಲ್ಲವಿ  (Sai Pallavi)ಸಿಕ್ಕಪಟ್ಟೆ ಟ್ರೆಂಡಿಂಗ್ನಲ್ಲಿದ್ದಾರೆ. ಬರೀ ಟ್ರೆಂಡಿಂಗ್ ಮಾತ್ರ ಅಲ್ಲ ಬೇರೆಲ್ಲಾ ಹೀರೋಯಿನ್ಗಳಿಗಿಂತ ಸಾಯಿ ಪಲ್ಲವಿ ನಂಬರ್-1 ಪಟ್ಟಕ್ಕೇರಿದ್ದಾರೆ. ರಶ್ಮಿಕಾ ಮಂದಣ್ಣ, ಸಮಂತಾ, ಪೂಜಾ ಹೆಗ್ಡೆಯನ್ನೂ ಮೀರಿಸಿರೋ ಈ ರಿಯಲ್ ನ್ಯಾಷನಲ್ ಕ್ರಶ್ ನಂಬರ್ 1 ಸ್ಥಾನಕ್ಕೇರಿದ್ದು ಎಲ್ಲಿ ಗೊತ್ತಾ.? ಡಿಜಿಟಲ್ನ ಒಟಿಟಿಯಲ್ಲಿ.. ಸಾಯಿ ಪಲ್ಲವಿ ನಟಿಸಿರೋ ವೀರಟ ಪರ್ವಂ ಸಿನಿಮಾ ಒಟಿಟಿಯಲ್ಲಿ ನಂಬರ್-1 ಟ್ರೆಂಡಿಂಗ್ನಲ್ಲಿದೆ. ಹೀಗಾಗಿ ಸಾಯಿ ಪಲ್ಲವಿ ಒಟಿಟಿಯ ನಂಬರ್-1 ಸ್ಟಾರ್ ನಟಿ ಅನ್ನೋ ಹೆಗ್ಗಳಿಕೆ ಪಡೆದಿದ್ದಾರೆ.  

Video Top Stories