Sathya serial: ಸ್ಪಾನರ್ ಹಿಡಿಯೋ ಕೈಯಲ್ಲಿ ಸೌಟು ಹಿಡೀತಾಳಾ ಸತ್ಯಾ?

ಸತ್ಯಾ ಸೀರಿಯಲ್‌ನಲ್ಲಿ ಕೊನೆಗೂ ಕಾರ್ತಿಕ್ ಜೊತೆ ಸತ್ಯಾ ಮದುವೆ ಆಗಿದೆ. ಸದಾ ಮೆಕ್ಯಾನಿಕಲ್ ಶಾಪ್ ಹುಡುಗ್ರ ಜೊತೆಗೆ ಸ್ಪಾನರ್ ಹಿಡ್ಕೊಂಡಿರೋ ಸತ್ಯಾ ಇನ್ಮುಂದೆ ಅದೇ ಕೈಯಲ್ಲಿ ಸೌಟ್ ಹಿಡೀತಾಳಾ? ಹೇಗಿರಬಹುದು ಅವಳ ಮುಂದಿನ ಲೈಫು?

Zee Kannada serial Sathya getting twisted as heorine got married

ಸೀರಿಯಲ್‌(Serial) ಅಂದರೆ ಅಳು, ನೋವು, ಸದಾ ಹೀರೋ ಆಸರೆಗಾಗಿ ಕಾಯುವ ದುರ್ಬಲ, ಅತೀ ಒಳ್ಳೆಯತನದ ನಾಯಕಿ ಅಂತೆಲ್ಲ ಇದ್ದ ಗೃಹಿಕೆಯನ್ನು ಬದಲಿಸಿದ್ದು ಜೀ ಕನ್ನಡದ ಸತ್ಯಾ(Sathya) ಸೀರಿಯಲ್‌. ಈ ಸೀರಿಯಲ್ ಸತ್ಯಾ ಅನ್ನೋ ರಫ್ ಆಂಡ್ ಟಫ್(Rough and tough) ಹುಡುಗಿಯ ಲೈಫ್ ಜರ್ನಿ(Life journey) ಕತೆ. ಸದಾ ಎಮೋಶನ್‌ಗಳಲ್ಲಿ ಮುಳುಗೇಳದ ಆದರೆ ಒಳಗಿಂದೊಳಗೇ ಅಪ್ಪಟ ಹೆಣ್ಣಾಗಿರುವ ಸತ್ಯಾಗೆ ಇದೀಗ ಆಕಸ್ಮಿಕವಾಗಿ ಮದುವೆ ಆಗಿದೆ. ಅವಳು ಇಷ್ಟಪಟ್ಟಿದ್ದ ಕಾರ್ತಿಕ್ ಜೊತೆಗೇ ಮದುವೆ ಆಗಿದೆ. ಹಾಗೆ ನೋಡಿದರೆ ಕಾರ್ತಿಕ್ ಸತ್ಯಾಳ ಅಕ್ಕ ದಿವ್ಯಾ ಕೈ ಹಿಡಿಯುವ ಮನಸ್ಥಿತಿಯಲ್ಲಿದ್ದ. ಸತ್ಯಾಳ ಒಳ ಮನಸ್ಸು ಕಾರ್ತಿಕ್ ಗಾಗಿ ಹಂಬಲಿಸಿದರೂ ಅವಳು ದಿವ್ಯಾ ಜೊತೆಗೇ ಕಾರ್ತಿಕ್ ಮದುವೆ ನಡೆಯಲಿ ಅಂತಲೇ ಬಯಸಿದ್ದಳು. ತಂದೆ ಅಗಲಿದ ಮೇಲೆ ಇಡೀ ಮನೆಯ ಜವಾಬ್ದಾರಿ ತೆಗೆದುಕೊಳ್ಳುವ ಸತ್ಯಾ ಹಿಂದಿನಿಂದಲೇ ಗ್ಯಾರೇಜ್‌ನಲ್ಲಿ ಕೆಲಸ ಮಾಡಿ ಅಕ್ಕನ ಮದುವೆಗೆಂದು ಹಣ ಕೂಡಿಟ್ಟಿದ್ದಾಳೆ. ಈ ಸೀರಿಯಲ್‌ ನೋಡುವ ಎಲ್ಲರಿಗೂ ಗೊತ್ತು ಸತ್ಯಾಳ ಮನಸ್ಥಿತಿ ಯಾವ ರೀತಿಯದು ಅಂತ. ಹಾಗೇ ಅವಳ ಅಕ್ಕ ದಿವ್ಯಾ ಶ್ರೀಮಂತಿಕೆಗೆ ಬಾಯ್ಬಿಡೋದು, ಅದರ ಹಿಂದೆ ಹೋದ ಕಥೆಯೂ ಗೊತ್ತು. ಇದೀಗ ಅಕ್ಕ ದಿವ್ಯಾ ಬಾಲು ಮಹಾ ಶ್ರೀಮಂತ ಅಂತ ನಂಬಿ ತನಗೆ ಒಲಿದಿರುವ ಶ್ರೀಮಂತ ಹುಡುಗ ಕಾರ್ತಿಕ್ ಬಿಟ್ಟು ಬಾಲು ಹಿಂದೆ ಹೋಗಿದ್ದಾಳೆ. ಇನ್ನೇನು ಆತ ದುಡ್ಡಿರುವ ವ್ಯಕ್ತಿಯಲ್ಲ ಅಂತ ರಿವೀಲ್ ಆಗಲಿದೆ. ಆಮೇಲೆ ದಿವ್ಯಾ ಏನು ಮಾಡ್ತಾಳೆ ಅನ್ನೋದು ಕ್ವೆಶ್ಚನ್ ಮಾರ್ಕ್(Question mark).

ಕನ್ನಡತಿ ಸೀರಿಯಲ್‌ ಮುಗಿದೇ ಹೋಗ್ತಿದೆಯಾ? ಸೀರಿಯಲ್ ಫ್ಯಾನ್ಸ್‌ಗೆ ಬಿಗ್‌ ಶಾಕ್‌!

ಇನ್ನೊಂದು ಕಡೆ ಅಕ್ಕ ದಿವ್ಯಾ ಕೂರಬೇಕಿದ್ದ ಹಸೆಮಣೆಯಲ್ಲಿ ಅನಿವಾರ್ಯವಾಗಿ ಸತ್ಯಾ ಕೂತಿದ್ದಾಳೆ. ಇಷ್ಟವಿಲ್ಲದಿದ್ದರೂ ಕಾರ್ತಿಕ್ ಸತ್ಯಾಳ ಕತ್ತಿಗೆ ತಾಳಿ ಕಟ್ಟಿದ್ದಾನೆ.

ಇದೀಗ ಎಲ್ಲರ ಮುಂದೆ ಬಂದಿರುವ ಪ್ರಶ್ನೆ ಮದುವೆ ನಂತರ ಸತ್ಯಾ ಕ್ಯಾರೆಕ್ಟರ್(Charecter) ಬದಲಾವಣೆಯಾಗುತ್ತಾ ಅನ್ನೋದು. ಮದುವೆ ಮುಗಿಸಿ ಅಮ್ಮ, ಅಜ್ಜಿ ಬಳಿ ಬಂದಿರುವ ಸತ್ಯಾಗೆ ಅಮ್ಮ ಗಂಡನ ಮನೆಯಲ್ಲಿ ಹೇಗಿರಬೇಕು ಅನ್ನೋದನ್ನು ತಿಳಿಸಿ ಹೇಳಿದ್ದಾಳೆ. ಗಂಡನನ್ನು ಬಹುವಚನದಲ್ಲಿ ಕರೆಯಬೇಕು, ಗಂಡನ ಮನೆಯ ಸಂಸ್ಕಾರ, ಸಂಪ್ರದಾಯ ಎಲ್ಲ ಕಲಿತು ಆ ಮನೆಯ ಗೌರವ ಹೆಚ್ಚಿಸುವ ಹಾಗೆ ನಡೆದುಕೊಳ್ಳಬೇಕು ಅಂತ ಉಪದೇಶ ನೀಡಿದ್ದಾಳೆ. ಸತ್ಯಾ ಮುಂದೆ ಸದ್ಯಕ್ಕೆ ಬೇರೆ ಯಾವ ಆಯ್ಕೆಯೂ ಇಲ್ಲ. ಈ ಮದುವೆಯಿಂದ ಕೋಪಗೊಂಡಿರುವ ಅತ್ತೆ, ಒಲ್ಲದ ಗಂಡ ಕಾರ್ತಿಕ್(Karthik) ಜೊತೆಗೆ ಅವಳು ಏಗಬೇಕಿದೆ. ತನಗೆ ಈ ಮದುವೆ ಖಂಡಿತಾ ಇಷ್ಟ ಇರಲಿಲ್ಲ ಅನ್ನೋದನ್ನು ಅಮ್ಮನ ಮುಂದೆ ಹೇಳಿರುವ ಸತ್ಯಾ ಮುಂದೆ ಪರಿಸ್ಥಿತಿ ಬಂದ ಹಾಗೆ ಬದುಕುತ್ತೇನೆ ಎಂದು ಯಾವ ಭಾವನೆಯೂ ಇಲ್ಲದೇ ನುಡಿಯುತ್ತಾಳೆ. ಮುಂದೆ ಎಲ್ಲ ಸೀರಿಯಲ್‌ಗಳಲ್ಲಿ ತೋರಿಸುವಂತೆ ಸತ್ಯಾ ಲೈಫು ಕಣ್ಣೀರಲ್ಲೇ ಕೈತೊಳೆಯೋ ಲೆವೆಲ್‌ಗೆ ಹೋಗಲಿದೆಯಾ ಅನ್ನೋ ಪ್ರಶ್ನೆ ವೀಕ್ಷಕರದು.

ಕಿರುತೆರೆ ನಟಿ ಸಾವಿನ ಬೆನ್ನಲ್ಲೇ ಬಾಡಿ ಶೇಮಿಂಗ್ ಬಗ್ಗೆ ಸಿಡಿದ್ದೆದ್ದ ವಿನಯ ಪ್ರಸಾದ್ ಪುತ್ರಿ

ಒಂದು ವೇಳೆ ಹಾಗಾದರೆ ಈವರೆಗೆ ಸತ್ಯಾ ಸೀರಿಯಲ್ ತಂಡ ಮಾಡಿಕೊಂಡು ಬಂದ ಹೊಸತನದ ಫಾರ್ಮ್ಯಾಟ್(Format) ಕಳಚಿ, ಅದೇ ಹಳೇ ಅಳುಮುಂಜಿ ಕ್ಯಾರೆಕ್ಟರ್ ಕಣ್ಮುಂದೆ ಬರಲಿದೆ. ಸತ್ಯಾಳ ಇದೇ ವ್ಯಕ್ತಿತ್ವವನ್ನು ಮುಂದುವರಿಸಿದರೆ ಅದು ಮತ್ತೊಂದು ಸಂಘರ್ಷಕ್ಕೆ ಕಾರಣವಾಗಬಹುದು. ಇತ್ತೀವರೆಗೆ ಸತ್ಯಾ ಹೊರ ಉಡುಪು ಗಂಡಿನಂತಿದ್ದರೂ, ಅವಳ ಹೊರ ವ್ಯಕ್ತಿತ್ವ ಹುಡುಗನ ಹಾಕಿದ್ದರೂ ಒಳ ಮನಸ್ಸು ಎಲ್ಲ ಸೀರಿಯಲ್ ನಾಯಕಿಯರ ಮನಸ್ಥಿತಿಯನ್ನೇ ಹೋಲುವಂತೆ ಇದ್ದದ್ದು ಸುಳ್ಳಲ್ಲ. ಆದರೆ ಇದೀಗ ಆ ಹೊರ ಆವರಣವನ್ನೂ ತೆಗೆದರೆ ಈ ಪಾತ್ರ ಮಾಮೂಲಿನಂತಾಗಬಹುದು.

 

 
 
 
 
 
 
 
 
 
 
 
 
 
 
 

A post shared by Zee Kannada (@zeekannada)

ಬಹುಶಃ ಸತ್ಯಾ ಪಾತ್ರದ ಗಟ್ಟಿತನವನ್ನು ಹಾಗೆ ಉಳಿಸಿಕೊಂಡು ಮುಂದುವರಿದರೆ ಈ ಸೀರಿಯಲ್‌ ಕೊಂಚ ಭಿನ್ನವಾಗಿ ನಿಲ್ಲಬಹುದು ಅನ್ನೋ ಅಭಿಪ್ರಾಯ ಹಲವರದ್ದು. ಆದರೆ ಈಗಾಗಲೇ ಹೀರೋನೇ ವಿಲನ್ ಆಗಿರುವ ಎಕ್ಸಾಂಪಲ್‌ಗಳೂ(example) ಸೀರಿಯಲ್‌ ಜಗತ್ತಲ್ಲಿ ಇರುವ ಕಾರಣ ಸತ್ಯಾ ಪಾತ್ರಕ್ಕೆ ಒಂದು ಬದಲಾವಣೆ ತರುವುದು ಅಸಾಧ್ಯದ ಮಾತಲ್ಲ. ಈ ಪಾತ್ರ ಹೇಗೆ ಮುಂದುವರಿಯಬಹುದು ಅನ್ನೋದು ಸದ್ಯದ ಕುತೂಹಲ.

ಅದಾ ಖಾನ್‌, ಎರಿಕಾ ಫೆರ್ನಾಂಡಿಸ್ ಡ್ಯಾನ್ಸ್‌ ಶೋ Jhalak Dikhla jaa ಸ್ವರ್ಧಿಗಳು?

ಸತ್ಯಾ ಪಾತ್ರ ಮಾಡಿರೋದು ಗೌತಮಿ ಜಾಧವ್(Gouthami Jadhav). ಅವರು ಡ್ಯಾನ್ಸರ್ ಕೂಡ. ಸತ್ಯಾ ಕ್ಯಾರೆಕ್ಟರ್‌ ನನ್ನ ವ್ಯಕ್ತಿತ್ವಕ್ಕೆ ಸರೀ ವಿರುದ್ಧ ಅಂತಿದ್ದವರು. ಈಗ ಕ್ರಾಪ್(crop) ಇರೋ ಜಾಗದಲ್ಲಿ ನಾಳೆ ಉದ್ದ ಕೂದಲು ತೋರಿಸಿದರೆ ಅವರಂತೂ ಖುಷಿಯಾಗಿರ್ತಾರೆ. ಸಾಗರ್ ಬಿಳೇಗೌಡ(Sgar bilegouda) ಕಾರ್ತಿಕ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

Latest Videos
Follow Us:
Download App:
  • android
  • ios