ಅದಾ ಖಾನ್, ಎರಿಕಾ ಫೆರ್ನಾಂಡಿಸ್ ಡ್ಯಾನ್ಸ್ ಶೋ Jhalak Dikhla jaa ಸ್ವರ್ಧಿಗಳು?
ಟಿವಿಯ ಅತ್ಯಂತ ಜನಪ್ರಿಯ ಡ್ಯಾನ್ಸ್ ರಿಯಾಲಿಟಿ ಶೋ (Dance Reality Show) ಜಲಕ್ ದಿಖ್ಲಾ ಜಾ (Jhalak Dikhla jaa) ಬಗ್ಗೆ ಸಂತಸದ ಸುದ್ದಿ ಹೊರಬೀಳುತ್ತಿದೆ. ಈ ರಿಯಾಲಿಟಿ ಶೋ ಬಗ್ಗೆ ಪ್ರೇಕ್ಷಕರಲ್ಲಿ ಮೊದಲಿನಿಂದಲೂ ಕ್ರೇಜ್ ಇದೆ. ಆದರೆ ಕಳೆದ ಹಲವು ವರ್ಷಗಳಿಂದ ಈ ಕಾರ್ಯಕ್ರಮವನ್ನು ಪ್ರೇಕ್ಷಕರು ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಈ ನಡುವೆ, ಹೊರಬರುತ್ತಿರುವ ವರದಿಗಳ ಪ್ರಕಾರ, ಕಾರ್ಯಕ್ರಮವು 6 ವರ್ಷಗಳ ನಂತರ ಮರಳಿ ಪ್ರಸಾರವಾಗುತ್ತಿದೆ. ಇದನ್ನು 2016 ರಲ್ಲಿ ನಿಲ್ಲಿಸಲಾಗಿತ್ತು.
ಈ ಬಾರಿ ಝಲಕ್ ದಿಖ್ಲಾ ಜಾ ಕಾರ್ಯಕ್ರಮವು ಹೊಸ ಪರಿಕಲ್ಪನೆಗಳು ಮತ್ತು ಸ್ಪರ್ಧಿಗಳೊಂದಿಗೆ ಮರಳುತ್ತಿದೆ. ಮತ್ತೆ ಕಾರ್ಯಕ್ರಮಕ್ಕೆ ಮರಳುವ ಸುದ್ದಿಯ ನಡುವೆಯೇ ಕೆಲವು ಸ್ಪರ್ಧಿಗಳ ಹೆಸರುಗಳ ಪಟ್ಟಿಯೂ ಮುನ್ನೆಲೆಗೆ ಬಂದಿದೆ, ಎಂದು ಮಾಧ್ಯವವೊಂದು ವರದಿ ಮಾಡಿದೆ.
ಹೊರಬರುತ್ತಿರುವ ವರದಿಗಳ ಪ್ರಕಾರ, ಕಾರ್ಯಕ್ರಮವು ಮೊದಲು ಜಲಕ್ ದಿಖ್ಲಾ ಜಾ 10 ಗಾಗಿ ಕುಚ್ ರಂಗ್ ಪ್ಯಾರ್ ಕೆ ಐಸೆ ಭಿ ಧಾರಾವಾಹಿಯಲ್ಲಿ ಕೆಲಸ ಮಾಡಿದ ಎರಿಕಾ ಫರ್ನಾಂಡಿಸ್ ಅವರನ್ನು ಸಂಪರ್ಕಿಸಿದೆ. ಆದರೆ, ಕಾರ್ಯಕ್ರಮದ ಬಗ್ಗೆ ಎರಿಕಾ ಇನ್ನೂ ಯಾವುದೇ ಹೇಳಿಕೆ ನೀಡಿಲ್ಲ.
ಎರಿಕಾ ಜೊತೆಗೆ, ಟಿವಿಯ ನಾಗಿನ್ ಎಂದು ಜನಪ್ರಿಯವಾಗಿರುವ ಅದಾ ಖಾನ್ (Adha Khan) ಅವರನ್ನು ಕಾರ್ಯಕ್ರಮದ ತಯಾರಕರು ಸಂಪರ್ಕಿಸಿದ್ದಾರಂತೆ. ಪ್ರಸ್ತುತ, ಅದಾ ಯಾವುದೇ ಆಫರ್‌ಗಳನ್ನು ಹೊಂದಿಲ್ಲ, ಆದ್ದರಿಂದ ಈ ಕಾರ್ಯಕ್ರಮದ ಭಾಗವಾಗಬಹುದು ಎಂದು ನಂಬಲಾಗಿದೆ.
ಇದಲ್ಲದೇ ಬಿಗ್ ಬಾಸ್ ಒಟಿಟಿ (Bigg Boss OTT) ವಿನ್ನರ್ ಆಗಿದ್ದ ದಿವ್ಯಾ ಅಗರ್ವಾಲ್ (DIvya Agarwal) ಹೆಸರು ಕೂಡ ಕೇಳಿ ಬಂದಿದೆ. ಸುದ್ದಿ ಪ್ರಕಾರ, ಅವರಿಗೆ ಕಾರ್ಯಕ್ರಮದ ಆಫರ್ ಕೂಡ ಬಂದಿದೆ.
ಬಿಗ್ ಬಾಸ್ ಮಾಜಿ ಸ್ಪರ್ಧಿ ನಿಕ್ಕಿ ತಾಂಬೋಲಿ ಕೂಡ ಝಲಕ್ ದಿಖ್ಲಾ ಜಾ ಕಾರ್ಯಕ್ರಮದ ಭಾಗವಾಗಿರಬಹುದು. ಕಾರ್ಯಕ್ರಮಕ್ಕಾಗಿ ನೃತ್ಯ (Dance) ಅಭ್ಯಾಸವನ್ನೂ ಆರಂಭಿಸಿದ್ದಾರೆ ಎನ್ನಲಾಗುತ್ತಿದೆ.
ಝಲಕ್ ದಿಖ್ಲಾ ಜಾ 10 ನೇ ಸೀಸನ್‌ಗಾಗಿ ಶಾರುಖ್ ಖಾನ್ (Sharukh KHan) ಮತ್ತು ಕಾಜೋಲ್ (Kajol) ಅವರನ್ನು ಸಂಪರ್ಕಿಸಲಾಗಿದೆ. ಆದಾಗ್ಯೂ, ಇಬ್ಬರೂ ತೀರ್ಪುಗಾರರಾಗಿ ಸೇರುವ ಬಗ್ಗೆ ಕಾರ್ಯಕ್ರಮದ ತಯಾರಕರು ಇನ್ನೂ ಯಾವುದೇ ಹೇಳಿಕೆಯನ್ನು ನೀಡಿಲ್ಲ.
ಈ ಕಾರ್ಯಕ್ರಮದ ಅಂತಿಮ ಸೀಸನ್‌ನಲ್ಲಿ ಗಣೇಶ್ ಹೆಗ್ಡೆ (Ganesh Hegde) ಮತ್ತು ಜಾಕ್ವೆಲಿನ್ ಫರ್ನಾಂಡಿಸ್ ತೀರ್ಪುಗಾರರಾಗಿದ್ದರು ಅದೇ ಸಮಯದಲ್ಲಿ, ಕಾರ್ಯಕ್ರಮದ 9 ನೇ ಸೀಸನ್ ವಿಜೇತರು ತೇರಿಯಾ ಮಗರ್.