ಕಿರುತೆರೆ ನಟಿ ಸಾವಿನ ಬೆನ್ನಲ್ಲೇ ಬಾಡಿ ಶೇಮಿಂಗ್ ಬಗ್ಗೆ ಸಿಡಿದ್ದೆದ್ದ ವಿನಯ ಪ್ರಸಾದ್ ಪುತ್ರಿ
ಕನ್ನಡದ ಹಿರಿಯ ನಟಿ ವಿನಯಾ ಪ್ರಸಾದ್ ಅವರ ಮಗಳು ಪ್ರಥಮ ಪ್ರಸಾದ್ ಬಾಡಿ ಶೇಮಿಂಗ್ ವಿಚಾರಕ್ಕೆ ಪ್ರತಿಕ್ರಿಯಿಸಿದ್ದು, ತಮ್ಮ ಸಿಟ್ಟನ್ನು ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ಕಿರುತೆರೆ ನಟಿ ಚೇತನಾ ರಾಜ್ ಸೊಂಟದ ಫ್ಯಾಟ್ ಕರಗಿಸಲು ಸರ್ಜರಿ ಮಾಡಿಸಿಕೊಂಡು ಸಾವನ್ನಪ್ಪಿದ್ದರು.
ಭಾರತೀಯ ಸಿನಿಮಾರಂಗದಲ್ಲಿ ಪಂಚಭಾಷೆ ತಾರೆಯಾಗಿ ಗುರುತಿಸಿಕೊಂಡಿರೋ ನಟಿ ವಿನಯ ಪ್ರಸಾದ್, ಅಭಿನಯ, ಗಾಯನ ಹಾಗೂ ನಿರೂಪಣೆ, ನಿರ್ಮಾಣದಲ್ಲಿಯೂ ಗುರುತಿಸಿಕೊಂಡಿದ್ದಾರೆ. ಇನ್ನು ಇವರ ಮಗಳು ಪ್ರಥಮ ಪ್ರಸಾದ್ ಕೂಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದು ಪ್ರಥಮ ಪ್ರಸಾದ್ ಇತ್ತಿಚಿಗಷ್ಟೇ ಬಾಡಿ ಶೇಮಿಂಗ್ ಬಗ್ಗೆ ಮಾತನಾಡಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ಫ್ಯಾಟ್ ಸರ್ಜರಿ ಮಾಡಿಸಿಕೊಳ್ಳಲು ಹೋಗಿ ಪ್ರಾಣ ಕಳೆದುಕೊಂಡ ಚೇತನಾ ರಾಜ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಇದೇ ಸಮಯದಲ್ಲಿ ತಮ್ಮ ಬಗ್ಗೆಯೂ ತಮಗಾದ ಬಾಡಿ ಶೇಮಿಂಗ್ ಬಗ್ಗೆ ಮನದಾಳದ ಮಾತನ್ನ ಬಿಚ್ಚಿಟ್ಟಿದ್ದಾರೆ. ಕಿರುತೆರೆ ನಟಿ ಚೇತನಾ ರಾಜ್ ಸಾವಿನ ನಂತರ ಬಾಡಿ ಶೇಮಿಂಗ್ ಬಗ್ಗೆ ಇಡೀ ದೇಶದ ಚಿತ್ರರಂಗ ಪ್ರತಿಕ್ರಿಯಿಸುತ್ತಿದೆ. ಈಗ ವಿನಯಾ ಪ್ರಸಾದ್ ಅವರ ಮಗಳೂ ಪ್ರತಿಕ್ರಿಯಿಸಿದ್ದು ಅವರ ಅಭಿಪ್ರಾಯ ಇಲ್ಲಿದೆ.
ಚೇತನಾ ರಾವ್ ಸಾವು ನೋವಿನ ಸಂಗತಿ:
ಪ್ರಥಮ ಪ್ರಸಾದ್ ಕಿರುತೆರೆ ಹಾಗೂ ಹಿರಿತೆರೆ ಎರಡರಲ್ಲಿಯೂ ಗುರುತಿಸಿಕೊಂಡಿದ್ದು ಚೇತನಾ ರಾಜ್ ಅವರ ಪರಿಚಯವೂ ಇತ್ತಂತೆ. ಚೇತನಾ ನಿಧನರಾದ ಹಿಂದಿನ ದಿನವಷ್ಟೇ ಅವರನ್ನು ಭೇಟಿಯಾಗಿದ್ದೆ, ಬೆಳಗ್ಗೆ ಎದ್ದೇಳುವಷ್ಟರಲ್ಲಿ ಆಕೆ ಇಲ್ಲ ಅನ್ನೋದಾದ್ರೆ ಹೇಗೆ? ಎಂದು ಪ್ರಥಮ ಪ್ರಸಾದ್ ಪ್ರಶ್ನಿಸುತ್ತಾರೆ. ಈ ರೀತಿ ಯಾರಿಗೂ ಆಗಬಾರದು. ಇದು ನನ್ನ ದೇಹ. ನಮಗಿಷ್ಟವಾದ ರೀತಿಯಲ್ಲಿ ನಾವು ಬದಕುಬೇಕು ಬೇರೆಯವರ ಮಾತಿಗೆ ತಲೆ ಕೆಡಿಸಿಕೊಳ್ಳಬಾರದು ಎಂದಿದ್ದಾರೆ ಪ್ರಥಮಾ ಪ್ರಸಾದ್.
ಇದನ್ನೂ ಓದಿ: ಸೊಂಟ ದಪ್ಪ ಅಂತ ಫ್ಯಾಟ್ ಸರ್ಜರಿ ಒಳಗಾದ ಕಿರುತೆರೆ ನಟಿ ಚೇತನಾ ರಾಜ್ ನಿಧನ!
ಬಾಡಿ ಶೇಮಿಂಗ್ ಬಗ್ಗೆ ಪ್ರತಿ ನಿತ್ಯ ಬರುತ್ತೆ ನೂರಾರು ಮೆಸೇಜ್:
ಇನ್ನು ಸೋಷಿಯಲ್ ಮಿಡಿಯಾದಲ್ಲಿ ಪ್ರಥಮ ಪ್ರಸಾದ್ ಸಖತ್ ಆಕ್ಟಿವ್ ಆಗಿದ್ದು ಅವ್ರಿಗೂ ಬಾಡಿ ಶೇಮಿಂಗ್ ಆಗಿದ್ಯಂತೆ. ಪ್ರತಿ ನಿತ್ಯ ನೂರು ಮೆಸೆಜ್ ಇನ್ಸ್ಟಾಗ್ರಾಂ ನಲ್ಲಿ ಬರತ್ತೆ, ಆದರೆ ಅವೆಲ್ಲವೂ ಸಣ್ಣ ಆಗುವ ಬಗೆಗಿನ ಟಿಪ್ಸ್, ರೆಸಿಪಿ ಬಗ್ಗೆಯೇ ಇರುತ್ತದೆ. ಅದಷ್ಟೇ ಅಲ್ಲದೆ ಪ್ರತಿಯೊಬ್ಬರು ನನ್ನ ತಾಯಿಗೆ ನನ್ನನ್ನ ಹೋಲಿಕೆ ಮಾಡಿ ನಿಮ್ಮ ತಾಯಿ ಅಷ್ಟು ಸಣ್ಣ ಇದ್ದಾರೆ ನಿಮಗೇನು ಬಂದಿರೋದು ಇಷ್ಟು ದಪ್ಪ ಇದ್ದೀರಾ. ದಪ್ಪ ಇದ್ದರೆ ಸಾಕು. ಯಾವ ಸೊಸೈಟಿ ಅನ್ನ ತಿನ್ನುತ್ತೀಯ. ಸಣ್ಣ ಇದ್ರೆ ನಿಮ್ ಅಮ್ಮ ಊಟ ಹಾಕಲ್ವಾ? ಅಂತೆಲ್ಲಾ ಹೇಳ್ತಾರೆ. ಇವೆಲ್ಲವೂ ಬಿಟ್ಟುಬಿಡಿ. ದಪ್ಪ ಸಣ್ಣ ಇರುವವರು ಇಂಥಹ ಮಾತುಗಳಿಗೆ ತಲೆ ಕೆಡಿಸಿಕೊಳ್ಳಬೇಡಿ. ನಾನು ಈ ಯಾವುದೇ ವಿಚಾರಕ್ಕೂ ತಲೆ ಕೆಡಿಸಿಕೊಳ್ಳಬಾರದು ಎಂದು ನಿರ್ಧಾರ ಮಾಡಿದ್ದೇನೆ. ಇದು ನನ್ನ ದೇಹ ನಾನು ಇದೇ ದೇಹದ ಜೊತೆ ನಾನು ನನ್ನ ಕೊನೆ ಉಸಿರು ಇರುವವರೆಗೂ ಇರಬೇಕು. ಎಂದು ಬಾಡಿ ಶೇಮಿಂಗ್ ಬಗ್ಗೆ ತಮ್ಮ ಮನದಾಳದ ಮಾತನ್ನ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: 1 ಲಕ್ಷ 60 ಸಾವಿರ ರೂ. ಫ್ಯಾಟ್ ಬರ್ನಿಂಗ್ ಆಪರೇಷ್; ಚೇತನಾಗೆ ಹಾರ್ಟ್ ಅಟ್ಯಾಕ್ ಆಗಿದ್ಯಾ?
ಕಿರುತೆರೆ-ಹಿರಿತೆರೆಯ ಕಲಾವಿದೆ ಪ್ರಥಮಾ ಪ್ರಸಾದ್:
ಪ್ರಥಮ ಪ್ರಸಾದ್ ಕೂಡ ಕಲಾವಿದೆಯಾಗಿದ್ದು ಕಳೆದ ಹತ್ತು ವರ್ಷಗಳಿಂದ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. 2010ರಲ್ಲಿ ಬೊಂಬೆಯಾಟವಯ್ಯ ಸಿನಿಮಾ ಮೂಲಕ ಪ್ರಥಮ ಪ್ರಸಾದ್ ಸಿನಿರಂಗಕ್ಕೆ ಪಾದಾರ್ಪಣೆ ಮಾಡಿದ್ರು. ಚೌಕಾಬಾರ ಚಿತ್ರದಲ್ಲಿಯೂ ಅಭಿನಯಿಸಿದ್ದು ಇನ್ನು ಕಿರುತೆರೆಯಲ್ಲಿ ಅಮ್ನೋರು, ದೇವಿ, ಮಹಾ ದೇವಿ, ಸೇರಿದಂತೆ ಹಲವು ಕಿರುತೆರೆ ಧಾರಾವಾಹಿಗಳಲ್ಲಿ ನಟಿಸಿದ್ದಾರೆ.