ಮ್ಯಾಕ್ಸಿ, ಕಾಳಿ ಜೊತೆ ಪುಟ್ಟಕ್ಕನ ಮಗಳ ಹೊಸ ಮೆಸ್! ಕಾಳು ಹಾಕೋ ಈ ಇಬ್ಬರಲ್ಲಿ ಸಹನಾ ಆಯ್ಕೆ ಯಾರು?

 ಸಹನಾ ಹೊಸ ಮೆಸ್ ಓಪನ್ ಮಾಡಲು ಸಿದ್ದತೆ ನಡೀತಿದೆ. ಕಾಳಿ, ಮ್ಯಾಕ್ಸಿ ಸಹನಾ ಸಪೋರ್ಟಿಗೆ ನಿಂತಿದ್ದಾರೆ. ಆದರೆ ಸಹನಾ ಒಲವು ಯಾರ ಕಡೆಗೆ?

zee kannada puttakkana makkalu serial sahana starts mess in mandya

ಪುಟ್ಟಕ್ಕನ ಮಕ್ಕಳು ಸೀರಿಯಲ್‌ನಲ್ಲಿ ಜನರಿಗೆ ಕಂಠಿ ಮತ್ತು ಹೊಸ ಸ್ನೇಹ ಕಥೆಯನ್ನು ನೋಡಿ ನೋಡಿ ಸಾಕಾಗಿದೆ. ಯಾಕೋ ಯಾರಿಗೂ ಈ ಹೊಸ ಸ್ನೇಹ ಸೆಟ್ ಆಗ್ತಿಲ್ಲ. ಇದಕ್ಕೆ ನೆಟ್ಟಿಗರು ಕಂಡುಕೊಂಡಿರೋ ಕಾರಣ ಈ ಪಾತ್ರ ಮಾಡುತ್ತಿರುವ ಹುಡುಗಿ ಪ್ರತಿಭಾವಂತೆ ಏನೋ ಹೌದು, ಆದರೆ ಸ್ಕ್ರೀನ್‌ ಮೇಲೆ ಕಾಣಿಸಿಕೊಳ್ಳಲು ಒಂದು ಮಾನದಂಡ ಇದೆ. ಅದಕ್ಕೆ ಈ ಹುಡುಗಿ ಸೆಟ್ ಆಗ್ತಿಲ್ಲ ಅನ್ನೋದು ಅವರ ಮಾತು. ಹೀಗಾಗಿ ಈ ಪಾತ್ರವನ್ನು ಜನರಿಗೆ ಒಪ್ಪಿಕೊಳ್ಳಲು ಸಾಧ್ಯವಾಗ್ತಿಲ್ಲ. ಕೊಂಚವೂ ಗ್ಲಾಮರ್‌ನ ಲವಲೇಶ ಇಲ್ಲದ ಈ ಪಾತ್ರಧಾರಿಯನ್ನು ಜನ ಇನ್ನೂ ಮುಕ್ತವಾಗಿ ಸ್ವೀಕರಿಸಿಲ್ಲ ಅಂತ ಈ ಸೀರಿಯಲ್‌ ಪ್ರೋಮೋದ ಕಾಮೆಂಟ್ ಬಾಕ್ಸ್‌ಗಳು ಹೇಳುತ್ತವೆ. ಒಂದು ಪಾತ್ರ ಹೋದ ಮೇಲೆ ಆ ಪಾತ್ರಕ್ಕೆ ಸಂವಾದಿಯಾಗಿ ಬರುವ ಇನ್ನೊಂದು ಪಾತ್ರವನ್ನು ಜನ ಅಷ್ಟು ಸುಲಭಕ್ಕೆ ಒಪ್ಪಿಕೊಳ್ಳೋದಿಲ್ಲ ಅಂತ ಹಿರಿಯ ಕಿರುತೆರೆ ನಿರ್ದೇಶಕ ಆರೂರು ಜಗದೀಶ್ ಹೇಳ್ತಾರೆ.

ಜೊತೆಗೆ ಈ ಸೀರಿಯಲ್ ಟೈಮಿಂಗ್ ಚೇಂಜ್ ಮಾಡಿದ್ದಕ್ಕೂ ಅವರಿಗೆ ಬೇಜಾರಿದೆ. ಆದರೆ ಎಷ್ಟೋ ವರ್ಷದಿಂದ ಈ ಫೀಲ್ಡ್‌ನಲ್ಲಿರುವ ಅವರಿಗೆ ಕೆಲವೊಂದು ಸೂಕ್ಷ್ಮಗಳು ಯಾಕೆ ಗೊತ್ತಾಗ್ತಿಲ್ಲ ಅಂತ ಒಂದಿಷ್ಟು ವೀಕ್ಷಕರು ಕೇಳ್ತಿದ್ದಾರೆ.

ನಾಗಚೈತನ್ಯ ಕಾಲಿಗೆ ನಮಸ್ಕರಿಸಿದ ಶೋಭಿತಾ, ಅವ್ರೇನು ದೇವ್ರಾ ಅಂತ ನೆಟ್ಟಿಗರ ತರಾಟೆ

ಇರಲಿ, ಈಗ ಪ್ರಶ್ನೆ ಅದಲ್ಲ. ಜನ ಮನಃಪೂರ್ವಕವಾಗಿ ಒಪ್ಪಿಕೊಂಡಿರೋ ಪಾತ್ರ ಸ್ನೇಹಾಳ ಅಕ್ಕ ಸಹನಾದು. ಈಕೆಗೆ ಶಿಕ್ಷಣ ಕಡಿಮೆ. ಆದರೆ ಕೆಲಸದಲ್ಲಿ ಅಮ್ಮ ಪುಟ್ಟಕ್ಕನ ಪ್ರತಿರೂಪ. ಛಲದಲ್ಲಿ, ಸ್ವಾಭಿಮಾನದಲ್ಲಿ ಇವಳು ಅಮ್ಮನಿಗಿಂತಲೂ ಒಂದು ಕೈ ಮೇಲೆ. ಇಂಥಾ ಸಹನಾ ಅಮ್ಮನ ಮಾತು ಕೇಳದೇ ಸಿಟಿಗೆ ಹೋಗಿ ಏನೇನೆಲ್ಲ ಕಷ್ಟ, ಸಮಸ್ಯೆಗಳನ್ನು ಫೇಸ್ ಮಾಡಿ ಕೊನೆಗೆ ಸ್ವಂತ ತಿಂಡಿ ಗಾಡಿ ಇಟ್ಕೊಂಡು ಗೆದ್ದವಳು. ಇನ್ನೇನು ಈ ಕೆಲಸ ಅವಳ ಕೈ ಹಿಡೀಬೇಕು ಅನ್ನುವಾಗ ಆಕೆ ತನ್ನ ತಂಗಿ, ಡಿಸಿ ಆಗಿದ್ದ ಸ್ನೇಹಾಳ ಬಲವಂತದಲ್ಲಿ ಊರಿಗೆ ಬರುವಂತಾಗುತ್ತದೆ. ಆದರೆ ಆಕೆ ಊರಿಗೆ ಬರುವಾಗ ತಂಗಿ ಸ್ನೇಹಾ ಇಹಲೋಕ ತ್ಯಜಿಸಿರುತ್ತಾಳೆ. ಈ ವೇಳೆ ತನ್ನ ತಾಯಿಗೆ ಆಸರೆಯಾಗಿ ನಿಲ್ಲುವ ಸಹನಾ ತಾನಾಯ್ತು, ಮನೆ ಆಯ್ತು ಅಂತಿರ್ತಾಳೆ.

ಇಂಥಾ ಟೈಮಲ್ಲಿ ಅವಳಿಗೆ ಮತ್ತೊಂದು ಅವಕಾಶ ಬರ್ತಿದೆ. ಅವಳ ಜೊತೆಗೆ ಈ ಹಿಂದೆ ತಿಂಡಿ ಗಾಡಿ ನಡೆಸ್ತಿದ್ದಾಗ ಸಹಾಯ ಮಾಡ್ತಿದ್ದ ಕಾಳಿ ಮತ್ತು ಮ್ಯಾಕ್ಸಿ ಇಬ್ಬರೂ ಈ ಸಹನಾಗೆ ಒಂದು ಬಂಪರ್ ಆಫರ್ ಕೊಡ್ತಿದ್ದಾರೆ. ಅದೇನೆಂದರೆ ಮಂಡ್ಯದಲ್ಲೊಂದು ಮೆಸ್ ನಡೆಸೋದು. ಈಗಾಗಲೇ ತಿಂಡಿ ಗಾಡಿ ಮಾಡಿ ಸೈ ಅನಿಸಿಕೊಂಡಿರೋ ಸಹನಾ ಈ ಆಹ್ವಾನವನ್ನು ಆರಂಭದಲ್ಲಿ ನಿರಾಕರಿಸ್ತಾಳೆ. ಆದರೆ ಅವಳ ಅಮ್ಮ ಪುಟ್ಟಕ್ಕ ಅವಳಿಗೆ ಅವಳ ಸಾಧನೆಯ ಬಗ್ಗೆ ನೆನಪು ಮಾಡಿಕೊಡ್ತಾಳೆ. 'ನೀನು ಹಿಂದೆ ಮನೆ ಬಿಟ್ಟು ಹೋದದ್ದೇ ಏನೋ ಸಾಧನೆ ಮಾಡಬೇಕು ಅಂತ. ಆಮೇಲೆ ಅರ್ಧಕ್ಕೆ ಅದನ್ನು ಬಿಟ್ಟು ಬಂದೆ.

ದೇವರು ಪವಿತ್ರಾ ಗೌಡಗೆ ಸೌಂದರ್ಯ ಕೊಟ್ಟಿದ್ದಾನೆ...ನನ್ನ ಚಿನ್ನು ತಪ್ಪು ಮಾಡಿಲ್ಲ: ಮಾಜಿ ಪತಿ ಸಂಜತ್ ಸಿಂಗ್

ಈಗ ಅದೆಲ್ಲ ಮರೆತು ಮನೇಲಿದ್ದೀಯ. ಅಂದಾಗ ನಿನ್ನ ಸಾಧನೆ ಕಥೆ ಏನಾಯ್ತು, ನೀನು ರಾತ್ರೋ ರಾತ್ರಿ ಮನೆ ಬಿಟ್ಟು ಹೋಗಿ ಪಡಬಾರದ ಕಷ್ಟಪಟ್ಟು ಏನೋ ಮಾಡಬೇಕು ಅಂತ ಛಲದಿಂದ ನಡೆದದ್ದಕ್ಕೆಲ್ಲ ಅರ್ಥವೇ ಇಲ್ಲದೇ ಹೋಯ್ತಾ?' ಅಂತ ಪ್ರಶ್ನೆ ಕೇಳ್ತಾಳೆ.

ಅಮ್ಮನ ಈ ಮಾತಿಂದ ಸಹನಾಗೆ ತನ್ನ ಹಿಂದಿನ ಸಾಧನೆಯ ಕನಸು ಕಣ್ಮುಂದೆ ಬರುತ್ತೆ. ಅವಳೀಗೆ ಸ್ವತಂತ್ರವಾಗಿ ಮೆಸ್ ನಡೆಸೋದಕ್ಕೆ ಹೊರಡೋ ಎಲ್ಲ ಸಾಧ್ಯತೆ ಕಾಣ್ತಿದೆ. ಇದರ ಜೊತೆಗೆ ಅವಳಿಗೆ ಬೆಂಬಲವಾಗಿ ನಿಲ್ಲೋದಕ್ಕೆ ಮ್ಯಾಕ್ಸಿ ಮತ್ತು ಕಾಳಿ ಬಂದಿದ್ದಾರೆ. ಇನ್ನೊಂದು ವಿಚಾರ ಅಂದರೆ ಈ ಮ್ಯಾಕ್ಸ್ ಮತ್ತು ಕಾಳಿ ಇಬ್ಬರಿಗೂ ಸಹನಾ ಕಂಡರೆ ಒಳಗೊಳಗೇ ಇಷ್ಟ. ಆದರೆ ಎದುರು ಹೇಳೋ ಧೈರ್ಯ ಇಲ್ಲ. ಸದ್ಯಕ್ಕೀಗ ನಮ್ಮ ಮುಂದಿರೋ ಪ್ರಶ್ನೆ ಅಂದರೆ ಈ ಕಾಳಿ ಮತ್ತು ಮ್ಯಾಕ್ಸಿ ಒಂದಲ್ಲ ಒಂದಿನ ಸಹನಾ ಮುಂದೆ ಪ್ರೀತಿಯ ಅಹವಾಲಿಟ್ಟರೆ ಸಹನಾ ಯಾರನ್ನು ಒಪ್ಪಿಕೊಳ್ತಾಳೆ ಅನ್ನೋದು.

 
 
 
 
 
 
 
 
 
 
 
 
 
 
 

A post shared by Zee Kannada (@zeekannada)

Latest Videos
Follow Us:
Download App:
  • android
  • ios