ದೇವರು ಪವಿತ್ರಾ ಗೌಡಗೆ ಸೌಂದರ್ಯ ಕೊಟ್ಟಿದ್ದಾನೆ...ನನ್ನ ಚಿನ್ನು ತಪ್ಪು ಮಾಡಿಲ್ಲ: ಮಾಜಿ ಪತಿ ಸಂಜತ್ ಸಿಂಗ್

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪವಿತ್ರಾ ಗೌಡ ಜಾಮೀನಿನ ಮೇಲೆ ಹೊರಬಂದಿದ್ದು, ಮಾಜಿ ಪತಿ ಸಂಜಯ್ ಸಿಂಗ್ ಸಂತಸ ವ್ಯಕ್ತಪಡಿಸಿದ್ದಾರೆ. ಪವಿತ್ರಾ ತಪ್ಪು ಮಾಡಿಲ್ಲ ಎಂದು ಅಭಿಪ್ರಾಯಪಟ್ಟ ಸಂಜಯ್, ರೇಣುಕಾಸ್ವಾಮಿ ಪವಿತ್ರಾಗೆ ಸಂದೇಶ ಕಳುಹಿಸಿದ್ದೇ ತಪ್ಪು ಎಂದಿದ್ದಾರೆ. ದರ್ಶನ್ ತೆಗೆದುಕೊಂಡ ನಿರ್ಧಾರ ತಪ್ಪು ಎಂದೂ ಹೇಳಿದ್ದಾರೆ.

Pavithra gowda is blessed beauty by god she never does mistakes says ex husband sanjay singh vcs

ರೇಣುಕಾಸ್ವಾಮಿ ಕೊಲೆ ಪ್ರಕರಣದ ಮೇಲೆ ನಟಿ ಪವಿತ್ರಾ ಗೌಡ ಪರಪ್ಪನ ಅಗ್ರಹಾರ ಸೇರಿದ್ದರು. ಜಾಮೀನು ಪಡೆದು ಹೊರ ಬರುತ್ತಿರುವ ಕಾರಣ ಮಾಜಿ ಪತಿ ಸಂಜಯ್ ಸಿಂಗ್ ಸಂತಸ ವ್ಯಕ್ತ ಪಡಿಸುತ್ತಿದ್ದಾರೆ ಅಲ್ಲದೆ ತಮ್ಮ ಮಗಳಾದ ಖುಷಿಯನ್ನು ಸಂಪರ್ಕ ಮಾಡುವುದಾಗಿಯೂ ಹೇಳುತ್ತಿದ್ದಾರೆ. ಆದರೆ ಈಗಲೂ ಪವಿತ್ರಾ ಗೌಡ ತಪ್ಪು ಮಾಡಿಲ್ಲ ಎಂದು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. 

'ಈ ಪ್ರಕರಣಕ್ಕೆ ಪವಿತ್ರ ಗೌಡ ಕಾರಣ ಆಗಿರಬಹುದು ಆದರೆ ಆಕೆ ಯಾವುದೇ ತಪ್ಪು ಮಾಡಿಲ್ಲ. ಈಗ ಸಹಿಯನ್ನು ಬಂದು ಇರುವೆ ತಿಂದರೆ ಇರುವೆ ತಪ್ಪು ಸಿಹಿಯದಲ್ಲ. ದೇವರು ಸೌಂದರ್ಯ ಕೊಟ್ಟಿದ್ದಾನೆ ಆದರೆ ಈ ರೇಣುಕಾಸ್ವಾಮಿ ಯಾಕೆ ಮೆಸೇಜ್ ಮಾಡಬೇಕು? ಅವನಿಗೆ ಮಡದಿ ಇದ್ದಾರೆ ಅಲ್ವಾ? ಪವಿತ್ರಾಳಿಗೆ ತೀರ ಕಷ್ಟ ಆದ ಕಾರಣ ಆಪ್ತನಾಗಿದ್ದ ದರ್ಶನ್‌ಗೆ ಹೇಳಿಕೊಂಡಿದ್ದಾಳೆ. ಆದರೆ ಇಲ್ಲಿ ದರ್ಶನ್‌ ತೆಗೆದುಕೊಂಡ ನಿರ್ಧಾರ ಕೊಂಚ ಹೆಚ್ಚು ಕಮ್ಮಿ ಆಗಿದೆ. ಈ ಪ್ರಕರಣದಲ್ಲಿ ಮುಂದೆ ಏನಾಗುತ್ತದೆ ಅನ್ನೋ ಐಡಿಯಾ ಕೂಡ ಪವಿತ್ರಾಳಿಗೆ ಇರಲಿಲ್ಲ ಇದು ಅಕಸ್ಮಿಕವಾಗಿ ಆಗಿದೆ' ಎಂದು ಯೂಟ್ಯೂಬ್ ಸಂದರ್ಶನದಲ್ಲಿ ಮಾಜಿ ಪತಿ ಸಂಜಯ್ ಸಿಂಗ್ ಹೀಗೆ ಮಾತನಾಡಿದ್ದಾರೆ ಎಂದು ಕನ್ನಡದ ಪೋರ್ಟಲ್‌ ಒಂದರಲ್ಲಿ ವರದಿ ಆಗಿದೆ. 

ಮಡದಿಯ ಹಾರೈಕೆ ಸೆಲೆಬ್ರಿಟಿಗಳ ಆಶೀರ್ವಾದ...ಗಜ ಮತ್ತೆ ಅಬ್ಬರಿಸಲಿ; ದರ್ಶನ್‌ ಬಗ್ಗೆ

'ಪವಿತ್ರಾ ಗೌಡ ಶ್ರೀಮಂತ ಮನೆಯ ಹುಡುಗಿ ಆಕೆ ರಘವನ ಹಳ್ಳಿಯಲ್ಲಿ ಡಿಪಾರ್ಟ್ಮೆಂಟ್‌ ಸ್ಟೋರ್‌ ಹೊಒಂದಿದ್ದರು. ಮೊದಲ ನೋಟದಲ್ಲೇ ಪವಿತ್ರಾ ಮೇಲೆ ಲವ್ ಆಯ್ತು. ಪವಿತ್ರಾಳ ಅಂಗಡಿ ಹತ್ತಿರವೇ ನಾನು ಮನೆ ಮಾಡಿದ್ದೆ ಮೊಬೈಲ್ ಚಾರ್ಜ್ ಮಾಡಿ ಕೊಡುವಂತೆ ಹೇಳಲು ಹೋಗುತ್ತಿದ್ದೆ ಅಲ್ಲಿಂದ ನಮ್ಮ ಪರಿಚಯ ಶುರುವಾಗಿದ್ದು. ಪೋನ್ ನಂಬರ್ ತೆಗೆದುಕೊಂಡು ಪರಿಚಯ ಮಾಡಿಕೊಂಡೆ ಆಗ ಆಕೆಗೆ ಇನ್ನೂ 19 ವರ್ಷ ಆಗಿತ್ತು. ಪವಿತ್ರಾಳ ಪ್ರೀತಿ ಪಡೆಯಲು ಒಮ್ಮೆ ಜಗಳ ಕೂಡ ಆಗಿತ್ತು. ಆಕೆಯ ಸೋದರ ಸಂಬಂಧಿ ಸ್ನೇಹಿತರ ಜೊತೆ ನನ್ನ ಮೇಲೆ ಜಗಳ ಮಾಡಿದ್ದು ಬಳಿಕ ವಿಷಯ ದೊಡ್ಡದಾಗಿತ್ತು. ನಾನು ಮದುವೆ ಆದರೆ ಈತನನ್ನೇ ಆಗೋದು ಎಂದು ಪವಿತ್ರಾ ಪಟ್ಟು ಹಿಡಿದಳು ಅಲ್ಲಿಂದ ನಮ್ಮ ಪ್ರೀತಿ ಮುಂದುವರೆಯಿತ್ತು' ಎಂದು ಸಂಜಯ್ ಸಿಂಗ್ ಹೇಳಿದ್ದಾರೆ.

ಸಣ್ಣ ಪುಟ್ಟ ವಿಷಯಕ್ಕೂ ಮನಸ್ಥಾಪ ಆಗ್ತಿತ್ತು; ಬ್ರೇಕಪ್ ಕಾರಣ ಬಿಚ್ಚಿಟ್ಟ ಬಿಗ್ ಬಾಸ್ ಪವಿ

'ಪವಿತ್ರಾ ಚಿತ್ರರಂಗಕ್ಕೆ ಕಾಲಿಡುವವರೆಗೂ ಎಲ್ಲವೂ ಚೆನ್ನಾಗಿತ್ತು. ಆಕೆ ಸಿನಿಮಾಗಳಲ್ಲಿ ನಟಿಸಲು ಶುರು ಮಾಡಿದ ಬಳಿ ನಮ್ಮಿಬ್ಬರ ನಡುವೆ ಭಿನ್ನಾಭಿಪ್ರಾಯ ಶುರುವಾಗಿತ್ತು. ನಾನು ಆಕೆಯನ್ನು ಚಿನ್ನು ಎಂದು ಕರೆಯುತ್ತಿದ್ದೆ ಆಕೆಗೆ ನನ್ನ ಕರಿಯರ್‌ ಬಗ್ಗೆ ತುಂಬಾ ಯೋಚನೆಗಳು ಇತ್ತು. ಆಗಿನಿಂದಲೂ ಒಂದು ಬೋಟಿಕ್ ಶುರು ಮಾಡಬೇಕು ಎಂದು ಕನಸು ಹೊತ್ತಿದ್ದಳು ಅದು ಈಗ ನನಸು ಆಗಿದೆ. ಬಣ್ಣದ ಪ್ರಪಂಚಕ್ಕೆ ಬಂದ ಮೇಲೆ ನಮ್ಮಿಬ್ಬರ ನಡುವೆ ಹೊಂದಾಣಿಕೆ ಆಗದೆ ಡಿವೋರ್ಸ್‌ವರೆಗೂ ಹೋಯಿತ್ತು' ಎಂದಿದ್ದಾರೆ ಸಂಜಯ್ ಸಿಂಗ್. 

ಈ ಚಿತ್ರದಿಂದ ಬಂದ ಸಂಭಾವನೆಯಲ್ಲಿ ಮದುವೆ ಸಾಲ ತೀರಿಸಿದ್ದ ಡಾ.ರಾಜ್‌ಕುಮಾರ್

Latest Videos
Follow Us:
Download App:
  • android
  • ios