ನಾಗಚೈತನ್ಯ ಕಾಲಿಗೆ ನಮಸ್ಕರಿಸಿದ ಶೋಭಿತಾ, ಅವ್ರೇನು ದೇವ್ರಾ ಅಂತ ನೆಟ್ಟಿಗರ ತರಾಟೆ
ನಾಗಚೈತನ್ಯ ಮತ್ತು ಶೋಭಿತಾ ಧೂಳಿಪಾಲ ಅವರ ಮದುವೆಯ ವೀಡಿಯೊದಲ್ಲಿ ಶೋಭಿತಾ ನಾಗಚೈತನ್ಯನ ಪಾದಗಳನ್ನು ಸ್ಪರ್ಶಿಸಿ ಆಶೀರ್ವಾದ ಪಡೆಯುವುದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ನಾಗಚೈತನ್ಯ ಈ ಸಂದರ್ಭದಲ್ಲಿ ಆಕೆಯನ್ನು ತಡೆಯದೆ ಇದ್ದುದಕ್ಕೆ ನೆಟ್ಟಿಗರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಶೋಭಿತಾ ಅವರ ಈ ನಡೆ ಸ್ತ್ರೀವಾದದ ನಿಲುವಿಗೆ ವಿರುದ್ಧವಾಗಿ ಇದೆ ಎಂದು ಕೆಲವರು ಟೀಕಿಸಿದ್ದಾರೆ.
ನಾಗಚೈತನ್ಯ ಹಾಗೂ ಶೋಭಿತಾ ಧೂಲಿಪಾಲ ಮದುವೆ ವಿಜೃಂಭಣೆಯಿಂದ ಇತ್ತೀಚೆಗೆ ನಡೆಯಿತು. ಈ ವೇಳೆಗಿನ ಒಂದು ವೀಡಿಯೋ ಇದೀಗ ಸೋಷಲ್ ಮೀಡಿಯಾದಲ್ಲಿ ಚರ್ಚೆಗೊಳಗಾಗಿದೆ ಮಾತ್ರವಲ್ಲ, ಜನ ನಾಗಚೈತನ್ಯಗೆ ವಾಚಾಮಗೋಚರವಾಗಿ ತರಾಟೆಗೆ ತಗೊಳ್ತಿದ್ದಾರೆ. ಹಿಂದಿನ ಕಾಲದಲ್ಲಿ 'ಪತಿಯೇ ಪರದೈವ' ಅನ್ನೋ ಕಾನ್ಸೆಪ್ಟ್ ಚಾಲ್ತಿಯಲ್ಲಿತ್ತು. ಗಂಡನನ್ನು ದೇವರು ಅಂತ ತಿಳಿದು ಆತನ ಸೇವೆ ಮಾಡುವುದೇ ಹೆಂಡತಿ ಆದವಳ ಕರ್ತವ್ಯ ಅಂತ ಭಾವಿಸುವ ಪರಂಪರೆ ಅದು. ಪುರುಷ ಪ್ರಧಾನ ಸಮಾಜವಾದ ಕಾರಣ ಅದಕ್ಕೊಂದಿಷ್ಟು ಅರ್ಥವನ್ನೂ, ಏನೇನೋ ವ್ಯಾಖ್ಯಾನವನ್ನೂ ನೀಡುತ್ತ ಬಂದರು. ಆ ಕಾಲವೂ ಹಾಗಿತ್ತು. ಹೆಣ್ಣುಮಕ್ಕಳಿಗೆ ಆರ್ಥಿಕ ಸ್ವಾತಂತ್ರ್ಯ ಇರಲಿಲ್ಲ. ಸಾಮಾಜಿಕವಾಗಿಯೂ ಆಕೆಗೆ ಸ್ಥಾನಮಾನ ಸಿಗುತ್ತಿರಲಿಲ್ಲ. ಇಂಥಾ ಟೈಮಲ್ಲಿ ಪತಿಯನ್ನು ದೇವರೆಂದು ತಿಳಿದು ಪೂಜಿಸುವುದು, ಆತನಿಗೆ ಪ್ರಾಧಾನ್ಯತೆ ನೀಡುವ ಸಂಪ್ರದಾಯಗಳೆಲ್ಲ ರೂಢಿಯಲ್ಲಿತ್ತು. ಆದರೆ ಆ ಕಾಲದ ಜ್ಞಾನಿಗಳು ಇಂಥಾ ಅಪದ್ಧಗಳನ್ನು ತಿರಸ್ಕರಿಸಿದ್ದರು. ಗಂಡು, ಹೆಣ್ಣಿನ ಸಮಾನತೆಯನ್ನು ಪ್ರತಿಪಾದಿಸಿದ್ದರು.
ಸಾಮಾನ್ಯವಾಗಿ ಆ ಕಾಲದ ಮದುವೆಯ ವೇಳೆಗೆ ಗಂಡು ವಯಸ್ಸಿನಲ್ಲಿ ಹಿರಿಯವನಾಗಿ ಹೆಣ್ಣು ಕಿರಿಯಳಾಗಿ ಇರೋದು ಸಾಮಾನ್ಯವಾಗಿತ್ತು. ಹೀಗಾಗಿ ಹಿರಿಯನಾದ ಗಂಡನಿಗೆ ಕಾಲಿಗೆ ನಮಸ್ಕರಿಸುವ ರೂಢಿ ಶುರುವಾಗಿರಬೇಕು. ಆದರೆ ವಯಸ್ಸಲ್ಲಿ ಬೇಧವಿದ್ದರೂ ಅವರಿಬ್ಬರೂ ಸಮಾನರು ಎಂದೇ ವಾತ್ಸಾಯನ ಸೇರಿದಂತೆ ಹಲವರು ಹೇಳುತ್ತ ಬಂದರು.
ಹಿಂದೂ ಪದ್ಧತಿಯಂತೆ ನಾಜೂಕಾಗಿ ಮದುವೆಯಾದ ಕೀರ್ತಿ ಸುರೇಶ್; ಕ್ರಿಶ್ಚಿಯನ್ ವೆಡ್ಡಿಂಗ್‌ನಲ್ಲಿ ಎಲ್ಲರೆದರೂ ಲಿಪ್ ಲಾಕ್!
ಇತ್ತೀಚೆಗಂತೂ ಇಂಥಾ ಮೂಢನಂಬಿಕೆಗಳೆಲ್ಲ ಆಲ್‌ಮೋಸ್ಟ್ ಮರೆಯಾಗಿವೆ. ಎಲ್ಲೋ ಸಂಪ್ರದಾಯಸ್ಥರು ಗಂಡನ ಕಾಲಿಗೆ ನಮಸ್ಕರಿಸಿದರೂ ಗಂಡನೇ ಆಕೆಯನ್ನು ತಡೆಯುತ್ತಾನೆ. ಆದರೆ ಇತ್ತೀಚೆಗೆ ವಿವಾಹದವಾದ ನಾಗಚೈತನ್ಯ ಹಾಗೂ ಶೋಭಿತಾ ವಿಚಾರದಲ್ಲಿ ಹೀಗಾಗಿಲ್ಲ. ಶೋಭಿತಾ ಹಿರಿಯರ ಸಲಹೆಯಂತೆ ನಾಗಚೈತನ್ಯನ ಕಾಲಿಗೆ ನಮಸ್ಕರಿಸಿದ್ದಾಳೆ. ಈ ಸಂದರ್ಭ ನಾಗಚೈತನ್ಯ ಗಂಡು ಕಲ್ಲಿನಂತೆ ನಿಂತೇ ಇದ್ದಾರೆ. ಅಟ್‌ಲೀಸ್ಟ್ ಆಕೆಯನ್ನು ತಡೆಯುವ ಪ್ರಯತ್ನವನ್ನೂ ಮಾಡಿಲ್ಲ. ನಾಗಚೈತನ್ಯನ ಈ ಆಟಿಟ್ಯೂಡ್ ನೆಟ್ಟಿಗರ ಅಸಹನೆಗೆ ಕಾರಣವಾಗಿದೆ. 'ಆತ ತನ್ನನ್ನೇನು ದೇವರು ಅಂದುಕೊಂಡಿದ್ದಾರ? ಅಟ್‌ಲೀಸ್ಟ್ ಆಕೆಯನ್ನು ತಡೆಯುವ ಪ್ರಯತ್ನವನ್ನೂ ಮಾಡುತ್ತಿಲ್ಲ' ಎಂದೊಬ್ಬರು ಕಾಮೆಂಟ್ ಮಾಡಿದ್ದಾರೆ. ಜೊತೆಗೆ ಈ ಕುರಿತ ಚರ್ಚೆ ಸೋಷಲ್ ಮೀಡಿಯಾದಲ್ಲಿ ಜೋರಾಗುತ್ತಿದೆ.
ಈಗಾಗಲೇ ನಾಗಚೈತನ್ಯ ಸಮಂತಾ ಜೊತೆ ಮೊದಲನೇ ಮದುವೆ ಆಗಿದ್ದರು. ಈ ಪುಣ್ಯಾತ್ಮ ಇಂಥ ಕೆಟ್ಟ ಆಟಿಟ್ಯೂಟ್ ಹೊಂದಿದ್ದ ಕಾರಣವೇ ಈತನ ಮೊದಲ ಸಂಸಾರ ಎಕ್ಕುಟ್ಟೋಯ್ತು ಅಂತ ಕೆಲವರು ಕಾಮೆಂಟ್ ಮಾಡಿದ್ದಾರೆ.
ಹಾಗಂತ ಈ ನೆಟ್ಟಿಗರು ಕೇವಲ ನಾಗಚೈತನ್ಯನಿಗಷ್ಟೇ ಕ್ಲಾಸ್ ತಗೊಂಡಿಲ್ಲ. ಜೊತೆಗೆ ಇಂಥಾ ಪುಣ್ಯಾತ್ಮನ ಕಾಲಿಗೆ ನಮಸ್ಕರಿಸಿದ ಶೋಭಿತಾಗೂ ಚೆನ್ನಾಗಿ ತರಾಟೆಗೆ ತಗೊಂಡಿದ್ದಾರೆ. 'ಇದು ಮೋಜಿನ ನಾಟಕ. ಶೋಭಿತಾ ಎಂಬ ಈ ಹೆಣ್ಣು ಮಗಳು ಸ್ತ್ರೀವಾದ, ಹೆಣ್ಣಿನ ಸಮಾನತೆ ಬಗೆಗೆಲ್ಲ ಮೀಟರ್‌ಗಟ್ಟಲೆ ಭಾಷಣ ಹೊಡೀತಾರೆ. ಆಮೇಲೆ ಗಂಡನ ಪಾದಗಳನ್ನು ಮುಟ್ಟಿ ಪುರುಷ ಪ್ರಾಧಾನ್ಯತೆಗೆ ಸಾಷ್ಟಾಂಗ ಪ್ರಣಾಮ ಸಲ್ಲಿಸುತ್ತಾರೆ' ಎಂದು ಮತ್ತೊಬ್ಬರು ಹೇಳಿದ್ದಾರೆ.
ದೇವರು ಪವಿತ್ರಾ ಗೌಡಗೆ ಸೌಂದರ್ಯ ಕೊಟ್ಟಿದ್ದಾನೆ...ನನ್ನ ಚಿನ್ನು ತಪ್ಪು ಮಾಡಿಲ್ಲ: ಮಾಜಿ ಪತಿ ಸಂಜತ್ ಸಿಂಗ್
ಸೋಭಿತಾ ಧೂಳಿಪಾಲ ಮತ್ತು ನಾಗ ಚೈತನ್ಯ ಡಿಸೆಂಬರ್ 4 ರಂದು ಐಕಾನಿಕ್ ಅನ್ನಪೂರ್ಣ ಸ್ಟುಡಿಯೋದಲ್ಲಿ ಸ್ನೇಹಿತರು ಮತ್ತು ಕುಟುಂಬ ಸದಸ್ಯರ ಸಮ್ಮುಖದಲ್ಲಿ ವಿವಾಹವಾದರು. ಅವರ ಮದುವೆಯ ಕೆಲವು ದಿನಗಳ ನಂತರ, ಅವರ ಮದುವೆಯ ವೀಡಿಯೊ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದೆ. ಇಂಥಾ ಒಂದು ವೀಡಿಯೊದಲ್ಲಿ, ಶೋಭಿತಾ ನಾಗ ಚೈತನ್ಯ ಪಾದವನ್ನು ಒಂದಕ್ಕಿಂತ ಹೆಚ್ಚು ಬಾರಿ ಸ್ಪರ್ಶಿಸಿ ಆಶೀರ್ವಾದ ಪಡೆಯುವುದನ್ನು ಕಾಣಬಹುದು. ಈ ವೀಡಿಯೊ ಇಂಟರ್ನೆಟ್‌ನಲ್ಲಿ ನಾನಾ ಬಗೆಯ ಕಾಮೆಂಟ್‌ಗಳನ್ನು ಬರುವಂತೆ ಮಾಡಿದೆ. ಒಂದಿಷ್ಟು ಮಂದಿ ಶೋಭಿತಾ ಅವರನ್ನು ದೂಷಿಸಿದರೆ, ಇನ್ನೊಂದಿಷ್ಟು ಜನ ನಾಗಚೈತನ್ಯಗೆ ಕ್ಲಾಸ್ ತಗೊಳ್ತಿದ್ದಾರೆ. ಕೆಲವರು ಶೋಭಿತಾ ಸಾಂಪ್ರದಾಯಿಕ ಆಚರಣೆಗಳನ್ನು ಅನುಸರಿಸಿದ್ದಕ್ಕಾಗಿ ಹೊಗಳುದ್ದಾರೆ.