ಮಗನನ್ನು ಗುರೂಕಲಕ್ಕೆ ಸೇರಿಸಿದ ಮಾಸ್ಟರ್. ಮಗನಲ್ಲಿ ಬದಲಾವಣೆಗಳನ್ನು ಕಂಡು ಕಣ್ಣೀರಿಟ್ಟ ಆನಂದ್.

ಕನ್ನಡ ಚಿತ್ರರಂಗದ ಮಾಸ್ಟರ್ ಆನಂದ್ ಈಗ ಕಿರುತೆರೆ ಬೇಡಿಕೆಯ ನಿರೂಪಕ. ಆನಂದ್ ಮಗ ಕೃಷ್ಣ ಚೈತನ್ಯಾ ಕಶ್ಯಪಾ ಒಂದು ಸಿನಿಮಾದಲ್ಲಿ ನಟಿಸಿದ್ದು ಈಗ ಗುರುಕುಲದಲ್ಲಿದ್ದಾರೆ. ಮಗಳು ವಂಶಿಕಾ ಸ್ಕೂಲ್ ಮತ್ತು ರಿಯಾಲಿಟಿ ಶೋನಲ್ಲಿ ಬ್ಯುಸಿಯಾಗಿದ್ದಾಳೆ. ಮಗನನ್ನು ಗುರುಕುಲದಲ್ಲಿ ಬಿಟ್ಟು ಇರುವುದು ಎಷ್ಟು ಕಷ್ಟ? ಮಾಸ್ಟರ್ ಹೇಳಿದ ಮಾತುಗಳಿದು.

'ನನ್ನ ಮಗನನ್ನು ಗುರುಕೂಲದಲ್ಲಿ ಓದಿಸುತ್ತಿರುವೆ ಅದಕ್ಕೆ ನನಗೆ ಸಿಗುತ್ತಿರುವುದು ನೋವು. ತಿಂಗಳಿಗೆ ಒಮ್ಮೆ ಭೇಟಿ ಮಾಡಬೇಕು, 15 ದಿನಕ್ಕೆ ಒಮ್ಮೆ ಫೋನ್ ಮಾಡಬೇಕು. ಯಾಕೆ ಹೀಗೆ? ಒಂದು ಸುರಕ್ಷಿತವಾದ ಪ್ರಪಂಚದ ಕಡೆ ಅವನನ್ನು ಬಿಟ್ಟು ಬಂದಿದ್ದೀನಿ. ಹಿಂದಿನ ಕಾಲದಲ್ಲಿ ಒಬ್ಬರ ಮನೆಯಲ್ಲಿ ಸೋಫಾ ಇದ್ರೆ ಏನೋ ಇದೆ ಅನ್ನೋ ರೀತಿ ಹೋಗಿ ನೋಡಿಕೊಂಡು ಬರುತ್ತಿದ್ವಿ. ಈಗ EMI ಬಂದ ಮೇಲೆ ಪ್ರತಿಯೊಬ್ಬರೂ ಕಷ್ಟ ಪಟ್ಟು ದುಡಿದು ತರುತ್ತಿದ್ದಾರೆ. ಮಗನಿಗೆ ವಸ್ತುಗಳ ಬೆಲೆ ತಿಳಿಸಲು ಮನೆಗೆ ಏನೂ ತರದೆ ಇರಲು ಆಗುವುದಿಲ್ಲ ಹೀಗಾಗಿ ಹಾಸ್ಟಲ್‌ಗೆ ಹಾಕಿರುವೆ. ಆತನನ್ನು ಭೇಟಿ ಮಾಡಲು ಹೋದಾಗ ಅವನಿಗೂ ಬೇಸರ ಆಗುತ್ತೆ ಕಣ್ಣೀರು ಹಾಕ್ತಾನೆ ನಾವು ಕಣ್ಣೀರು ಹಾಕುತ್ತೀವಿ. ಇದಕ್ಕೆ ಪ್ರತಿಯಾಗಿ ನನಗೆ ಒಳ್ಳೆ ಫಲ ಸಿಗುತ್ತದೆ ಅನ್ನೋ ಖುಷಿ ಇದೆ' ಎಂದು ಕನ್ನಡ ಯುಟ್ಯೂಬ್ ಚಾನೆಲ್‌ ಸಂದರ್ಶನದಲ್ಲಿ ಆನಂದ್ ಮಾತನಾಡಿದ್ದಾರೆ. 

ಇವತ್ತಿದ್ದಂಗೆ ನಾಳೆ ಇರೋಲ್ಲ, ಮದ್ವೆ ಆದ್ಮೇಲೆ ಸೀರಿಯಲ್ ಮಾಡೋಕೆ ಯೋಚಿಸಬೇಕು: ಮಾಸ್ಟರ್ ಆನಂದ್

'ಮಕ್ಕಳನ್ನು ಸುಖದಲ್ಲಿ ಬೆಳೆಸಿದರೆ ಕಷ್ಟ ಗೊತ್ತಾಗುವುದಿಲ್ಲ. ಭವಿಷ್ಯದಲ್ಲಿ ಕೆಲಸದ ಮೇಲೆ ಮತ್ತೊಂದು ಊರಿಗೆ ಹೋಗಿ ಅಲ್ಲಿನ ಹೋಟೆಲ್‌ಗೆ ಉಳಿದುಕೊಳ್ಳುವ ಸಂದರ್ಭ ಬಂದಾಗ ಅಲ್ಲಿ ಹಾಸಿಗೆ ಇಲ್ಲ ಹೋಟೆಲ್ ಊಟ ಬೇಕು ಅಂತ ಬಾಸ್‌ ಜೊತೆ ಕಿರಿಕಿರಿ ಮಾಡಿಕೊಂಡು ಬಂದ್ರೆ ಖಂಡಿತಾ ಎಲ್ಲೂ ಮೂರ್ನಾಲ್ಕು ತಿಂಗಳ ಮೇಲೆ ಕೆಲಸ ಮಾಡೋಲ್ಲ. ನಮ್ಮ ಆರೋಗ್ಯ ಕೆಟ್ಟಿದಾಗ ಮೊದಲು ಔಷಧಿನೇ ಮಾತ್ರೆ. ಈಗ ರುಚಿ ರುಚಿ ಫ್ಲೇವರ್ ಇದ್ರೂ ವಂಶಿಕಾ ಕುಡಿಯುವುದಕ್ಕೆ ಅಳುತ್ತಾಳೆ. ಆದರೆ ಈಗ ನನ್ನ ಮಗನಿಗೆ ಇಂಜೆಕ್ಷನ್‌ ಅನ್ನೋ ಟ್ರೀಟ್ಮೆಂಟ್‌ಗೆ ಬಿಟ್ಟಿದ್ದೀನಿ.  ಮಾತ್ರೆ ಮತ್ತು ಔಷಧಿಗಿಂತ ತುಂಬಾ ಸ್ಟ್ರಾಂಗ್ ಆಗಿರುವುದು ಇಂಜೆಕ್ಷನ್. ಈಗಿಂದ ಆತ ಸ್ಟ್ರಾಂಗ್ ಆಗಬೇಕು' ಎಂದು ಆನಂದ್ ಹೇಳಿದ್ದಾರೆ. 

'ಮಗನನ್ನು ಹಾಸ್ಟಲ್‌ಗೆ ಬಿಟ್ಟಿರುವ ನೋವು ನಮಗೂ ಇದೆ ಅವನಿಗೂ ಇದೆ. ಇದರ ಫಲ ನನಗೆ ಈಗಲೇ ಗೊತ್ತಾಗುತ್ತಿದೆ. ಈ ಹಿಂದೆ ಕೆಲಸ ಮುಗಿಸಿಕೊಂಡು ನಾನು ಮನೆಗೆ ಬಂದಾಗ ಮೊಬೈಲ್ ನೋಡಿಕೊಂಡು ಹಾಯ್ ಅಂದ್ರೆ ಹಾಯ್ ನನ್ನ ಬಗ್ಗೆ ಕೇರ್ ಇಲ್ಲದೆ ಇರುತ್ತಿದ್ದ. ಆದರೆ ಗುರುಕೂಲಕ್ಕೆ ಸೇರಿಕೊಂಡ ಮೇಲೆ ನನ್ನನ್ನು ನೋಡಿ ಖುಷಿಯಿಂದ ಓಡಿ ಬಂದು ತಬ್ಬಿಕೊಳ್ಳುತ್ತಾನೆ, ನನ್ನ ಕೈಯಲ್ಲಿದ್ದ ಬ್ಯಾಗ್‌ ಮತ್ತು ಲಗೇಜ್‌ ಹಿಡಿದುಕೊಂಡು ಬರ ಮಾಡಿಕೊಳ್ಳುತ್ತಾನೆ. ಸಹಾಯಕ್ಕೆ ಅವನ ಫ್ರೆಂಡ್ಸ್‌ ಬಂದ್ರೂ ಇಲ್ಲ ನಾನೇ ತೆಗೆದುಕೊಂಡು ಹೋಗುತ್ತೀನಿ ಅಂತಾನೆ' ಎಂದಿದ್ದಾರೆ ಆನಂದ್. 

ಇಷ್ಟು ದಿನ ಗೃಹಿಣಿ ಆಗಿದ್ರಿ ಇದ್ದಕ್ಕಿದ್ದಂತೆ ಏನಾಯ್ತು?; ಜನರ ಟೀಕೆಗೆ ಉತ್ತರ ಕೊಟ್ಟ ಯಶಸ್ವಿನಿ ಮಾಸ್ಟರ್ ಆನಂದ್

'ಯಾರ ಜೊತೆಗೂ ಮಗನ ಬಗ್ಗೆ ಚರ್ಚೆ ಮಾಡುವುದಿಲ್ಲ. ಪೇರೆಂಟಿಂಗ್ ಅಂತ ಬಂದಾಗ ಎಲ್ಲವೂ ನಮಗೆ ಅಗ್ನಿ ಪರೀಕ್ಷೆ. ಏಕೆಂದರೆ ಈಗ ನಾವು ಕೆಲವೊಂದು ನೋವು ತೆಗೆದುಕೊಂಡಿಲ್ಲ ಅವರಿಗೆ ಕೊಟ್ಟಿಲ್ಲ ಅಂದ್ರೆ ಸಮಾಜ ನಮಗೆ ಕೊಡುತ್ತದೆ. ಇಂದು ನಾನು ಹೊಡೆಯಬಹುದು ಅಲ್ಲಿ ಮೇಷ್ಟ್ರು ಹೊಡೆಯಬಹುದು....ಆದರೆ ಅಲ್ಲಿಗೆ ಕಳುಹಿಸದೇ ಇಲ್ಲಿ ಬಿಟ್ಟು ಯಾರೋಟ್ಟಿಗೋ ಪೋಲಿ ಬಿದ್ದ ಜಗಳ ಆದ ಮೇಲೆ ಕಿರಿಕ್ ಮಾಡಿಕೊಂಡು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗ್ತಾರೆ ಅಲ್ವಾ? ಆ ನೋವಿಗಿಂತ ಈಗ ಪಡುತ್ತಿರುವ ನೋವು ವಾಸಿ' ಎಂದು ಆನಂದ್ ಹೇಳಿದ್ದಾರೆ.