Asianet Suvarna News Asianet Suvarna News

ಇವತ್ತಿದ್ದಂಗೆ ನಾಳೆ ಇರೋಲ್ಲ, ಮದ್ವೆ ಆದ್ಮೇಲೆ ಸೀರಿಯಲ್ ಮಾಡೋಕೆ ಯೋಚಿಸಬೇಕು: ಮಾಸ್ಟರ್ ಆನಂದ್

ಈ ಎರಡು ಸಿನಿಮಾಗಳನ್ನು ಪದೇ ಪದೇ ನೋಡುತ್ತಾರೆ ಮಾಸ್ಟರ್ ಆನಂದ್. ಮಕ್ಕಳ ಪ್ರತಿಭೆಯನ್ನು ಗೌರವಿಸಬೇಕು ಎಂದ ನಟ...
 

Zee Kannada Mastre Anand talks about shooting and family time vcs
Author
First Published Nov 23, 2023, 5:12 PM IST

ಬಾಲ ನಟನಾಗಿ ಕನ್ನಡ ಚಿತ್ರರಂಗದಲ್ಲಿ ಮಿಂಚಿರುವ ಮಾಸ್ಟರ್ ಅನಂದ್ ಕಿರುತೆರೆಯಲ್ಲೂ ದೊಡ್ಡ ಹೆಸರು ಮಾಡಿದ್ದಾರೆ. ಹಲವಾರು ಸೀರಿಯಲ್‌ಗಳನ್ನು ನಿರ್ದೇಶಿಸಿ, ನಿರ್ಮಾಣಿಸಿ ನಟಿಸಿದ್ದಾರೆ. ಕಳೆದ 5 ವರ್ಷಗಳಿಂದ ನಿರೂಪಣೆ ಲೋಕದಲ್ಲೂ ಸಖತ್ ಹೆಸರು ಮಾಡಿದ್ದಾರೆ. ಸಿಕ್ಕಾಪಟ್ಟೆ ಬ್ಯುಸಿಯಾಗಿರುವ ಆನಂದ್ ಫ್ಯಾಮಿಲಿ ಟೈಮ್‌ ಹೇಗಿರುತ್ತದೆ ಎಂದು ಪ್ರಶ್ನೆ ಮಾಡಿದಾಗ ಕೊಟ್ಟ ಉತ್ತರವಿದು. 

'ಮದುವೆ ಆದ್ಮೇಲೆ ಮಾಡಿದ್ದರು 3 ಸೀರಿಯಲ್‌ಗಳು. ಸೀರಿಯಲ್ ಅಂದ್ಮೇಲೆ ಸಮಯ ಬೇಕು ಮತ್ತೆ ಶುರು ಮಾಡಬೇಕು ಅಂದ್ರೆ ಸಮಯ ಬೇಕು. ನಿರೂಪಣೆ ಶುರು ಮಾಡಿದ ಮೇಲೆ ಸೀರಿಯಲ್ ಒಪ್ಪಿಕೊಳ್ಳುತ್ತಿಲ್ಲ. ಈಗ ಫ್ಯಾಮಿಲಿಗೆ ಸಮಯ ಕೊಡುವುದು ಕಡಿಮೆ ಆಗಿದೆ. ನನಗೆ ರಜೆ ಸಿಕ್ಕಿದೆ ಮಜಾ ಸಿಗುತ್ತಿದೆ ಅಂದ್ರೆ ಕಾಂಪ್ಲಿಮೆಂಟ್ರಿ ಇಲ್ಲ ಅಂದ್ರೆ ಅದಕ್ಕೂ ದುಡ್ಡು ಕೊಡಬೇಕು. ಯಾವುದಕ್ಕೂ ಟೈಮ್ ಕೊಡದೇ ಏನೋ ಮಾಡಲು ಆಗಲ್ಲ. ಒಂದು ಬೇಕು ಅಂದ್ರೆ ಮತ್ತೊಂದು ಸಿಗಲ್ಲ' ಎಂದು ಬಿ ಗಣಪತಿ ಅವರ ಸಂದರ್ಶನದಲ್ಲಿ ಆನಂದ್ ಮಾತನಾಡಿದ್ದಾರೆ.

ಇಷ್ಟು ದಿನ ಗೃಹಿಣಿ ಆಗಿದ್ರಿ ಇದ್ದಕ್ಕಿದ್ದಂತೆ ಏನಾಯ್ತು?; ಜನರ ಟೀಕೆಗೆ ಉತ್ತರ ಕೊಟ್ಟ ಯಶಸ್ವಿನಿ ಮಾಸ್ಟರ್ ಆನಂದ್

'ಈಗ ಲೈಫ್‌ ಇದ್ದಂತೆ ಮತ್ತೊಮ್ಮೆ ಇರಲ್ಲ. ದುಡ್ಡು ಕೊಟ್ಟಿಲ್ಲ ಅಂದ್ರೆ ಏನು ಸಿಗುತ್ತೆ. ಮುಂದಿನ ಜರ್ನಿ ಬಗ್ಗೆ ಏನೂ ಅಂದುಕೊಂಡಿಲ್ಲ...ಏನೂ ಅಂದುಕೊಳ್ಳ ಬಾರದು ಎಂದು ನಿರ್ಧಾರ ಮಾಡಿದ್ದೀನಿ. ಏಕೆಂದರೆ ಏನು ಸಿಗಬೇಕು ಅದೇ ಸಿಗುತ್ತದೆ ಆಗಬೇಕು ಅದೇ ಆಗುತ್ತದೆ. ಏನೇ ಇರಲಿ ನನಗೆ ಸಪೋರ್ಟ್ ಆಗಿರುವುದು ಅಣ್ಣಾವ್ರ ಸಿನಿಮಾ...ಸತ್ಯಹರಿಶ್ಚಂದ್ರ ಮತ್ತೊಂದು ಭಕ್ತ ಕುಂಬಾರ. ನಾನು ಸುಳ್ಳು ಹೇಳೇ ಹೇಳ್ತೀನಿ ನಾನು ಸುಳ್ಳು ಹೇಳಿ ಆಫ್‌ ಟ್ರ್ಯಾಕ್ ಹೋಗದಂತೆ ನೀನು ನೋಡಿಕೊಳ್ಳಬೇಕು ಎಂದು ದೇವರಿಗೆ ಕೇಳಿಕೊಳ್ಳುವೆ. ನನ್ನ ಮಗ ಗುರುಕೂಲದಲ್ಲಿ ಇದ್ದಾನೆ ತಿಂಗಳಿಗೆ ಒಮ್ಮೆ ಭೇಟಿ ಮಾಡಬಹುದು ಅದಕ್ಕಿಂತ ದೊಡ್ಡ ಪರೀಕ್ಷೆ ಏನು ಬೇಕು. ಹೀಗಾಗಿ ಜೀವನದಲ್ಲಿ ಏನೂ ಪ್ಲ್ಯಾನಿಂಗ್ ಮಾಡುವುದಿಲ್ಲ' ಎಂದು ಆನಂದ್ ಹೇಳಿದ್ದಾರೆ. 

ಸಾಫ್ಟ್‌ವೇರ್ ಹುಡುಗ ಬೇಕಿತ್ತು, ಇವರೊಟ್ಟಿಗೆ ಹೊಂದಿಕೊಳ್ಳಲು ತುಂಬಾ ಕಷ್ಟ ಆಯ್ತು: ಮಾಸ್ಟರ್ ಆನಂದ್ ಪತ್ನಿ

'ಈಗಿನ ಜನರೇಷನ್‌ ಪೋಷಕರಿಗೆ ಒಂದು ಕಿವಿ ಮಾತು ಹೇಳುತ್ತೀನಿ ಮಕ್ಕಳನ್ನು ಚೆನ್ನಾಗಿ ಓದಿಸಿ. ಗುರುಕುಲಕ್ಕೆ ಸೇರಿಸಿ ಸ್ಕೂಲ್ ಬಿಡಿಸಿ ಎಂದು ಹೇಳಲ್ಲ. ಸ್ಕೂಲ್ ಇರಬೇಕು ಆದರೆ ಅವರಲ್ಲಿರುವ ಟ್ಯಾಲೆಂಟ್‌ನ ಬೆಳಸಬೇಕು. ಓದೇ ಇರುವವರು ಅಣ್ಣಾವ್ರು ಆಗೋಕೆ ಆಗಲ್ಲ ಬ್ಯಾಟ್‌ ಹಿಡಿದರೆ ತೆಂಡುಲ್ಕರ್ ಆಗೋಕೆ ಆಗಲ್ಲ. ಮಕ್ಕಳ ಜೊತೆಗಿದ್ದು ಅವರನ್ನು ಸರಿಯಾದ ಟ್ರ್ಯಾಕ್‌ನಲ್ಲ ಬೆಳಸಬೇಕು' ಎಂದಿದ್ದಾರೆ ಆನಂದ್. 

Follow Us:
Download App:
  • android
  • ios