ಹಿಟ್ಲರ್ ಕಲ್ಯಾಣ: ಪವಿತ್ರಾಗೆ ಮಾತು ಬಂತು, ಆಮೇಲೆ ನಡೆದದ್ದು ಶಾಕಿಂಗ್ ಘಟನೆ!
ಹಿಟ್ಲರ್ ಕಲ್ಯಾಣ ಸೀರಿಯಲ್ ಎಪಿಸೋಡ್ ಸಖತ್ ಇಂಟರೆಸ್ಟಿಂಗ್ ಆಗಿದೆ. ಇದರಲ್ಲಿ ಪವಿತ್ರಾಗೆ ಮಾತು ಬಂದಿದೆ. ಏಜೆ ಹೇಳಿದಂತೆ ಪವಿತ್ರಾ ಬರ್ತ್ ಡೇ ದಿನವೇ ಪವಿತ್ರಾ ಮಾತಾಡಿದ್ದಾಳೆ. ಆಮೇಲೆ ನಡೆದದ್ದೆಲ್ಲ ಶಾಕಿಂಗ್ ಘಟನೆಗಳು.
ಹಿಟ್ಲರ್ ಕಲ್ಯಾಣ ಸೀರಿಯಲ್ ಇಂಟರೆಸ್ಟಿಂಗ್ ಕಥೆಯಿಂದ ಗಮನ ಸೆಳೆಯುತ್ತಾ ಬಂದಿದೆ. ಏಜೆ ಎಂಬ ಮಿ. ಪರ್ಪೆಕ್ಷನಿಸ್ಟ್, ಹಿಟ್ಲರ್ ನಂಥಾ ಮಧ್ಯ ವಯಸ್ಸಿನ ವ್ಯಕ್ತಿ ಜೊತೆಗೆ ಲೀಲಾಳ ಮದುವೆ ಆಗುತ್ತೆ. ತನ್ನ ಗತಿಸಿದ ಹೆಂಡತಿ ಅಂತರಾ ನೆನಪಿನಲ್ಲೇ ಕೊರಗುತ್ತಿದ್ದ ಏಜೆಗೆ ಲೀಲಾಳನ್ನು ಕಂಡರೆ ಅಷ್ಟಕ್ಕಷ್ಟೇ, ಆದರೆ ಕ್ರಮೇಣ ಅವರಿಬ್ಬರ ನಡುವೆ ಏನೇನೆಲ್ಲಾ ಘಟನೆಗಳು ನಡೆದು ಅವರಿಬ್ಬರ ನಡುವೆ ಮುನಿಸು ಕಡಿಮೆ ಆಗಿದೆ. ಆದರೆ ಈ ನಡುವೆಯೇ ಏಜೆ ಲೀಲಾಳನ್ನು ಕೊಲ್ಲುವ ಪ್ರಯತ್ನ ಮಾಡಿದ್ದಾನೆ. ಇನ್ನೊಂದೆಡೆ ಏಜೆ ತಂಗಿ ಪವಿತ್ರಾ ಮಾತೂ ಬರದೇ ಮಲಗಿದಲ್ಲೇ ಇದ್ದಾಳೆ. ಅವಳ ಈ ಸ್ಥಿತಿಗೆ ಕಾರಣನಾದ ಅವಳ ಗಂಡ ದೇವ್ ಅವಳನ್ನು ಮತ್ತೆ ಮತ್ತೆ ಕೊಲ್ಲಲು ಪ್ರಯತ್ನ ಮಾಡಿದ್ದಾನೆ. ಆದರೆ ದೈವವಶಾತ್ ಆ ಪ್ರಯತ್ನಗಳು ವಿಫಲವಾಗಿವೆ. ಇನ್ನೊಂದೆಡೆ ಲೀಲಾ ತಂಗಿಯನ್ನೇ ಪಟಾಯಿಸಿ ತನ್ನ ಬಲೆಗೆ ಹಾಕಿಕೊಳ್ಳುವ ಪ್ರಯತ್ನ ಮಾಡಿದ್ದಾನೆ. ಏಜೆ ತನ್ನ ತಂಗಿ ಪವಿತ್ರಾ ಬರ್ತ್ ಡೇಯನ್ನು ವಿಭಿನ್ನವಾಗಿ ಸೆಲೆಬ್ರೇಟ್ ಮಾಡಲು ಮುಂದಾಗಿದ್ದಾನೆ. ಅವಳ ಜೀವನ ಪರ್ಯಂತ ನೆನಪಿಟ್ಟುಕೊಳ್ಳುವ ಬರ್ತ್ ಡೇ ಇದಾಗಿರಬೇಕು ಅನ್ನೋದು ಏಜೆ ಮಾತು. ಈ ಹೊತ್ತಿಗೆ ಒಂದು ಘಟನೆ ಆಗಿದೆ. ಆ ಘಟನೆಯಿಂದ ಪವಿತ್ರಾಗೆ ಮತ್ತೆ ಮಾತು ಬಂದಿದೆ.
ಲೀಲಾಗೆ ಏಜೆ ತನ್ನನ್ನು ಕೊಲ್ಲಲು ಪ್ರಯತ್ನಿಸಿದಾಗಿನಿಂದ ಅವನ ಬಗ್ಗೆ ಭಯ ಹೆಚ್ಚಾಗಿದೆ. ಆದರೆ ಅಲ್ಲಿ ಕ್ರೂರವಾಗಿದ್ದ ಏಜೆ ಆಮೇಲೆ ಹಿಂದಿನಂತಾಗಿದ್ದಾನೆ. ಅಜ್ಜಿ ಲೀಲಾಳನ್ನು ಏಜೆ ಪಕ್ಕ ಮಲಗಲು ಹೇಳಿದಾಗ ವಿಪರೀತ ಭಯದಲ್ಲಿ ಒದ್ದಾಡಿದ್ದ ಲೀಲಾ ಮಂಚದಿಂದ ಬಿದ್ದ ಬಿಡುತ್ತಾಳೆ. ಆಗ ಅವಳ ಕೈ ಉಳುಕುತ್ತೆ. ಅದನ್ನು ಏಜೆ ಬಾಮ್ ಹಚ್ಚಿ ಕಣ್ಣಲ್ಲಿ ಕಣ್ಣಟ್ಟು ನೋಡುತ್ತಲೆ ನೋವು ಕಡಿಮೆ ಆಗೋ ಹಾಗೆ ಮಾಡಿದ್ದಾನೆ. ಈ ನಡುವೆ ಲೀಲಾಗೆ ಒಂದು ಕೊರಿಯರ್ ಬರುತ್ತೆ. ಅದರೊಳಗೊಂದು ಪೆನ್ ಡ್ರೈವ್. ಜೊತೆಗೆ ಒಂದು ಪತ್ರ. ಅದರಲ್ಲಿ ಕೊರಿಯರ್ ಮಾಡಿದ ವ್ಯಕ್ತಿಗೆ ಲೀಲಾ ಬಗ್ಗೆ ಕರುಣೆ ಇರುವುದಾಗಿ, ಅವಳ ಬೆಂಬಲಕ್ಕೆ ಆ ವ್ಯಕ್ತಿ ನಿಲ್ಲುವ ವಿಚಾರವಿದೆ. ಜೊತೆಗೆ ಇರುವ ಪೆನ್ ಡ್ರೈವ್ ನಲ್ಲಿ ಏಜೆ ಲೀಲಾಳನ್ನು ಸಾಯಿಸಲು ಪ್ರಯತ್ನಿಸಿದ ವೀಡಿಯೋ ಇದೆ. ಈ ವೀಡಿಯೋವನ್ನು ಮನೆಮಂದಿಗೆಲ್ಲ ತೋರಿಸಬೇಕು ಅನ್ನೋ ಯೋಚನೆಯಲ್ಲಿ ಲೀಲಾ ಇದ್ದಾಳೆ. ಅದಕ್ಕಾಗಿ ಸರಿಯಾದ ಟೈಮ್ ಎದುರು ನೋಡುತ್ತಿದ್ದಾಳೆ.
ವಿಷ ಹಾಕಿದ ಮೌರ್ಯ, ನಕ್ಷತ್ರಾ ಆಕಾಶದ ಮೇಲಿನ ನಕ್ಷತ್ರವಾಗ್ತಾಳಾ?
ಪವಿತ್ರಾ ಬರ್ತ್ ಡೇ ಗೆ ಮನೆಯವರೆಲ್ಲ ಸೇರಿರುತ್ತಾರೆ, ಆಗ ಈ ವೀಡಿಯೋ ರಿವೀಲ್ ಮಾಡುವ ಯೋಚನೆಯಲ್ಲಿರುತ್ತಾಳೆ. ಮನೆ ಮಂದಿ ಮಾತ್ರ ಸೇರಿ ಸುಂದರವಾಗಿ ಪವಿತ್ರಾ ಬರ್ತ್ ಡೇ ಅರೇಂಜ್ ಆಗಿದೆ. ಶುಭ ಹಾರೈಕೆ ಕೇಕ್ ಕಟ್ಟಿಂಗ್ ವೇಳೆ ಲೀಲಾ ಪವಿತ್ರಾಳಿಗಾಗಿ ಮಾಡಿದ ಸೇವೆಯನ್ನು ಏಜೆ ಮನಸಾರೆ ಹೊಗಳಿದ್ದಾನೆ. ಮೊದಲ ಕೇಕ್ ಪೀಸನ್ನು ಲೀಲಾಗೆ ತಿನ್ನಿಸಿದ್ದಾನೆ. ಆ ವೇಳೆ ಅವಳ ಕೈಯಲ್ಲಿದ್ದ ಪೈನ್ ಡ್ರೈವ್ ಜಾರಿ ಕೆಳ ಬಿದ್ದಿದೆ. ಆ ಬಗ್ಗೆ ಲಕ್ಷ್ಯವಿಲ್ಲದ ಲೀಲಾ ಒಂದು ಹೊತ್ತಲ್ಲಿ ಒಂದು ಸೀಕ್ರೇಟ್ ರಿವೀಲ್ ಮಾಡೋದಾಗಿ ಹೇಳಿದ್ದಾಳೆ. ಪೆನ್ ಡ್ರೈವ್ ಹುಡುಕಿ ಅದರಲ್ಲಿದ್ದದ್ದು ಪ್ಲೇ ಮಾಡಿದಾಗ ಅದರಲ್ಲಿ ಏಜೆ ಲೀಲಾಳನ್ನು ಸಾಯಿಸಲು ಪ್ರಯತ್ನಿಸಿದ್ದನ್ನು ಎಲ್ಲರೂ ಭಯದಲ್ಲಿ ನೋಡ್ತಾರೆ. ಈ ವೇಳೆ ಪವಿತ್ರಾಗೆ ಇದೇ ರೀತಿ ತನಗೆ ದೇವ್ ಮಾಡಿದ ಹಿಂದಿನ ಘಟನೆ ನೆನಪಾಗಿ ಮಾತು ಬರುತ್ತೆ.
ಸಿದ್ಧಾರ್ಥ್ ಶುಕ್ಲಾ ನಂತರ, ಈ ಟಿವಿ ಹೋಸ್ಟ್ ಜೊತೆ ಶೆಹನಾಜ್ ಗಿಲ್ ಡೇಟಿಂಗ್?
ದೇವ್ ತಡೆಯ ನಡುವೆಯೂ ಪವಿತ್ರಾ ದೇವ್ ಮಾಡಿದ ಅನಾಚಾರಗಳನ್ನೆಲ್ಲ ಎಲ್ಲರೆದುರು ಹೇಳುತ್ತಾಳೆ. ಆತ ಹೆಣ್ಣುಮಕ್ಕಳ ದುರ್ಬಳಕೆ ಮಾಡೋದು, ತನ್ನನ್ನು ಈ ಸ್ಥಿತಿಗೆ ತಂದಿರೋದು, ಇಲ್ಲಿಗೆ ಬಂದ ಮೇಲೂ ಕೊಲೆ ಪ್ರಯತ್ನ ಮಾಡಿರೋದನ್ನೆಲ್ಲ ಎಳೆ ಎಳೆಯಾಗಿ ಹೇಳಿ ಆತನನ್ನು ಸುಮ್ಮನೆ ಬಿಡಬೇಡಿ ಎಂದು ಏಜೆಗೆ ಹೇಳ್ತಾಳೆ. ಮನೆಯವರೆಲ್ಲ ಈ ಘಟನೆಯಿಂದ ಶಾಕ್ ಗೆ ಒಳಗಾಗಿದ್ದಾರೆ. ಮುಂದೇನಾಗ್ತದೆ ಅನ್ನೋದನ್ನು ಕಾದು ನೋಡಬೇಕಿದೆ.