ಸಿದ್ಧಾರ್ಥ್ ಶುಕ್ಲಾ ನಂತರ, ಈ ಟಿವಿ ಹೋಸ್ಟ್ ಜೊತೆ ಶೆಹನಾಜ್ ಗಿಲ್ ಡೇಟಿಂಗ್?
ಬಿಗ್ ಬಾಸ್ 13 ಫೇಮ್‌ನ ಶೆಹನಾಜ್ ಗಿಲ್ ( Shehnaaz Gill) ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಬಿಗ್ ಬಾಸ್ 13 ಸಮಯದಲ್ಲಿ ಸಿದ್ಧಾರ್ಥ್ ಶುಕ್ಲಾ (Sidharth Shukla) ಜೊತೆ ಸಂಬಂಧದಲ್ಲಿದ್ದ ಶೆಹನಾಜ್ ಮತ್ತೆ ಪ್ರೀತಿಯನ್ನು ಕಂಡುಕೊಂಡಿದ್ದಾರೆ ಎಂದು ವರದಿಯಾಗಿದೆ. ಗಿಲ್ ಸಿದ್ಧಾರ್ಥ್ ಶುಕ್ಲಾ ನಂತರ ಈಗ ಟಿವಿ ಹೋಸ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಕಾರಣದಿಂದ ಅವರು ಮುಖ್ಯಾಂಶಗಳಲ್ಲಿದ್ದಾರೆ.
ಈ ಹಿಂದೆ, ದಿವಂಗತ ಟಿವಿ ನಟ ಸಿದ್ಧಾರ್ಥ್ ಶುಕ್ಲಾ ಅವರನ್ನು ಪ್ರೀತಿಸಿದ ನಂತರ ಶೆಹನಾಜ್ ಬಿಗ್ ಬಾಸ್ 13 ಮನೆಯಲ್ಲಿ ಗಮನ ಸೆಳೆದಿದ್ದರು ಮತ್ತ್ತು ಸಿದ್ದಾರ್ಥ್ ಸಾವು ಎಲ್ಲವನ್ನೂ ಬದಲಾಯಿಸಿತು. ಶೆಹನಾಜ್ ತನ್ನ ವೃತ್ತಿಯ ಮೇಲೆ ಮಾತ್ರ ಗಮನಹರಿಸುತ್ತಾ ಬ್ಯುಸಿಯಾದರು.
ಆದರೆ ಈಗ ಶೆಹನಾಜ್ ಗಿಲ್ ಅವರು ಮತ್ತೆ ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂದು ವರದಿಗಳು ಹೇಳುತ್ತಿವೆ. ಟಿವಿ ನಿರೂಪಕರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವಿಷಯ ಸಖತ್ ವೈರಲ್ ಆಗುತ್ತಿದೆ.
ಶೆಹನಾಜ್ ಗಿಲ್ ಈಗಟಿವಿ ನಿರೂಪಕರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಮತ್ತು ಅವರು ಶೀಘ್ರದಲ್ಲೇ ಸಲ್ಮಾನ್ ಖಾನ್ ಅವರ ಕಭಿ ಈದ್ ಕಭಿ ದಿವಾಲಿಯಲ್ಲಿ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ. ಈ ಜೋಡಿ ರಿಷಿಕೇಶಕ್ಕೆ ಒಟ್ಟಿಗೆ ಪ್ರವಾಸಕ್ಕೆ ಹೋಗಿದ್ದರು.
ಅವರು ಅತ್ಯಂತ ಪ್ರಸಿದ್ಧ ಟಿವಿ ಪರ್ಸನಲಾಟಿ ಮತ್ತು ಏಸ್ ವೃತ್ತಿಪರ ನೃತ್ಯಗಾರ ರಾಘವ್ ಜುಯಲ್ ಅವರನ್ನು ಪ್ರೀತಿಸುತ್ತಿದ್ದಾರೆ ಎಂದು ವರದಿಯಾಗಿದೆ. ಜೂಮ್ ಪ್ರಕಾರ, ಶೆಹನಾಜ್ ಕಭಿ ಈದ್ ಕಭಿ ದೀಪಾವಳಿಯ ಸೆಟ್‌ಗಳಲ್ಲಿ ಏಸ್ ನೃತ್ಯ ನಿರ್ದೇಶಕ ರಾಘವ್ ಜುಯಲ್ ಅವರನ್ನು ಭೇಟಿಯಾದರು ಮತ್ತು ಪ್ರೀತಿ ಶುರುವಾಯಿತು.
ಮಾಜಿ ಬಿಗ್ ಬಾಸ್ ಸ್ಪರ್ಧಿ ಶೆಹನಾಜ್ ಗಿಲ್ ಮನೆಮಾತಾಗಿದ್ದರು ಮತ್ತು ಈಗ ಪಂಜಾಬಿ ಕುಡಿ ಸಲ್ಮಾನ್ ಖಾನ್ ಅವರ ಫ್ಲಿಕ್ ಕಭಿ ಈದ್ ಕಭಿ ದಿವಾಲಿ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಲಿದ್ದಾರೆ.
ಚಿತ್ರದಲ್ಲಿ ಮಹತ್ವದ ಪಾತ್ರವನ್ನು ವಹಿಸಿರುವ ರಾಘವ್, ಶೆಹನಾಜ್‌ಗೆ ಉತ್ತಮ ಸ್ನೇಹಿತನಾಗಿದ್ದಾರೆ ಮತ್ತು ಇಬ್ಬರೂ ಪರಸ್ಪರ ತುಂಬಾ ಹತ್ತಿರವಾಗಿದ್ದಾರೆ ಮತ್ತು ಪ್ರೀತಿಸುತ್ತಾರೆ. ಇಬ್ಬರೂ ಒಟ್ಟಿಗೆ ರಿಷಿಕೇಶಕ್ಕೆ ಪ್ರಯಾಣ ಬೆಳೆಸಿದರು.
ಬಿಗ್ ಬಾಸ್ 13 ರಿಂದ ಇಂದಿನವರೆಗೆ ಶೆಹನಾಜ್ ಅವರ ಬೆಳವಣಿಗೆ ಆಕರ್ಷಕವಾಗಿದೆ ಮತ್ತು ಅವರು ಪ್ರತಿದಿನ ಸಾಧನೆಯ ಹೊಸ ಎತ್ತರವನ್ನು ತಲುಪುತ್ತಿದ್ದಾರೆ. ಈಗ ದೊಡ್ಡ ಡೆಬ್ಯೂ ಮೂಲಕ ಬಾಲಿವುಡ್‌ನಲ್ಲಿ ತನ್ನ ಮೋಡಿ ಹರಡಲು ರೆಡಿಯಾಗಿದ್ದಾರೆ ಶೆಹನಾಜ್.