ವಿಷ ಹಾಕಿದ ಮೌರ್ಯ, ನಕ್ಷತ್ರಾ ಆಕಾಶದ ಮೇಲಿನ ನಕ್ಷತ್ರವಾಗ್ತಾಳಾ?
ಲಕ್ಷಣ ಸೀರಿಯಲ್‌ನಲ್ಲಿ ಇದರ ನಾಯಕಿಯ ನಕ್ಷತ್ರಾಗೆ ವಿಷದ ಗಾಳಿ ಹಾಕುವ ಕೆಲಸವನ್ನು ಮೌರ್ಯ ಮಾಡುತ್ತಿದ್ದಾನೆ. ಇದರಿಂದ ಪ್ರಜ್ಞೆ ತಪ್ಪಿ ಬೀಳುವ ನಕ್ಷತ್ರಾಳನ್ನು ಭೂಪತಿಯಿಂದ ಉಳಿಸಿಕೊಳ್ಳಲಾಗುತ್ತಾ ಅಥವಾ ಅವಳು ಆಕಾಶದ ಮೇಲಿನ ನಕ್ಷತ್ರವಾಗ್ತಾಳಾ?
ಕಲರ್ಸ್ ಕನ್ನಡ ಚಾನೆಲ್‌ನಲ್ಲಿ ಪ್ರತಿ ದಿನ ರಾತ್ರಿ 9.30ಕ್ಕೆ ಪ್ರಸಾರ ಆಗುತ್ತಿರುವ ಸೀರಿಯಲ್ 'ಲಕ್ಷಣ'. ಚರ್ಮದ ಬಣ್ಣ ಮುಖ್ಯವಲ್ಲ, ಮನಸ್ಸಿನ ಬಣ್ಣ ಮುಖ್ಯ. ಕಪ್ಪು ಬಿಳಿ ಅನ್ನೋದೆಲ್ಲ ನಾವು ಹುಟ್ಟು ಹಾಕಿರುವ ಭ್ರಮೆಗಳು. ಕಪ್ಪಾದರೆ ಚೆಂದ ಅಲ್ಲ, ಬಿಳಿ ಆದರೆ ಚೆಂದ ಅನ್ನೋ ಪೂರ್ವಾಗ್ರಹದ ವಿರುದ್ಧ ಈ ಸೀರಿಯಲ್ ಇದೆ. ಲಕ್ಷಣ ಧಾರಾವಾಹಿಯಲ್ಲಿ ನಾಯಕಿ ಪಾತ್ರದ ಹೆಸರು ನಕ್ಷತ್ರ. ನೋಡಲು ಕಪ್ಪು. ಒಳ್ಳೆ ಮನಸ್ಸಿನ ಮಾನವೀಯತೆ ಇರುವ ಹುಡುಗಿ. ಡಾಕ್ಟರ್ ಮಾಡಿರೋ ತಪ್ಪಿನಿಂದ ಯಾರದೋ ಮನೆ ಸೇರಿ ಅವರು ಅಸಡ್ಡೆ ಮಾಡುತ್ತಿದ್ದರೂ ತಾನು ಪ್ರೀತಿಯಿಂದ ಅವರನ್ನು ಅಪ್ಪ ಅಮ್ಮ ಅಂದುಕೊಂಡಿದ್ದಳು. ಆದರೆ ಡಿಎನ್‌ಎ ಟೆಸ್ಟ್, ಡಾಕ್ಟರ್ ಮಾತಿನ ಬಳಿಕ ನಕ್ಷತ್ರಾ ಆಗರ್ಭ ಶ್ರೀಮಂತರಾದ ತನ್ನ ಹೆತ್ತವರ ಮನೆ ಸೇರುತ್ತಾಳೆ. ಜೊತೆಗೆ ಆಕಸ್ಮಿಕವಾಗಿ ಶ್ವೇತಾ ಮದುವೆಯಾಗಬೇಕಿದ್ದ ಭೂಪತಿಯನ್ನು ನಕ್ಷತ್ರ ಮದುವೆಯಾಗಿದ್ದಾಳೆ. ಭೂಪತಿಯನ್ನು ನಕ್ಷತ್ರ ಮದುವೆಯಾಗಿದ್ದು, ಭೂಪತಿಯ ತಮ್ಮ ಮೌರ್ಯನಿಗೆ ಇಷ್ಟ ಇಲ್ಲ. ಅದಕ್ಕೆ ನಕ್ಷತ್ರಾ ಮತ್ತು ಅವರ ತಂದೆ ಚಂದ್ರಶೇಖರ್‌ಗೆ ತೊಂದರೆ ಕೊಡುತ್ತಿದ್ದಾನೆ. ತನ್ನ ಅಮ್ಮ, ಅಣ್ಣನಿಗೆ ಬೆದರಿಸಿ ಸಿಎಸ್, ನಕ್ಷತ್ರಾಳನ್ನು ಮದುವೆ ಮಾಡಿಸಿದ್ದಾರೆ ಎಂದು ಸೇಡು ತೀರಿಸಿಕೊಳ್ಳುತ್ತಿದ್ದಾನೆ.
ನಕ್ಷತ್ರಾ ತನಗೆ ತೊಂದರೆ ಕೊಡುತ್ತಿರುವ ಕ್ರಿಮಿನಲ್ ಕಂಡು ಹಿಡಿಯಲು, ಶ್ವೇತಾಳನ್ನು ಮಿಲ್ಲಿ ಸಹಾಯದಿಂದ ಕಿಡ್ನ್ಯಾಪ್ ಮಾಡಿಸಿರುತ್ತಾಳೆ. ಆದ್ರೆ ಆ ಕಿಡ್ನ್ಯಾಪ್ ಪ್ಲ್ಯಾನ್ ಆಕೆಗೆ ಉಲ್ಟಾ ಹೊಡೆಯುತ್ತೆ. ಶ್ವೇತಾ, ನಕ್ಷತ್ರಾ ಇರುವ ಜಾಗಕ್ಕೆ ಮೌರ್ಯ ಬರುತ್ತಾನೆ. ನಕ್ಷತ್ರಾಳನ್ನು ಕಿಡ್ನ್ಯಾಪ್ ಮಾಡಿಕೊಂಡು ಹೋಗುತ್ತಾನೆ. ನಕ್ಷತ್ರಾ ತಂದೆಗೆ ಕರೆ ಮಾಡಿ, ನಿನಗೆ ನಿನ್ನ ಮಗಳು ಜೀವಂತವಾಗಿ ಬೇಕು ಅಂದರೆ, ನಾನು ಹೇಳಿದ ಜಾಗಕ್ಕೆ ಬಾ. ನೀನು ತಡ ಮಾಡಿದಷ್ಟು ನಿನ್ನ ಮಗಳ ಪ್ರಾಣಕ್ಕೆ ಅಪಾಯ ಎಂದು ಹೇಳುತ್ತಾನೆ. ಇನ್ನು ಮನೆಯಲ್ಲಿ, ತನ್ನ ಹೆಂಡತಿ ನಕ್ಷತ್ರಾ ಇಲ್ಲದಿರುವುದು ಗೊತ್ತಾಗಿ ಭೂಪತಿ ಕಂಗಾಲಾಗಿದ್ದಾನೆ. ನಕ್ಷತ್ರಾಗಾಗಿ ಎಲ್ಲೆಡೆ ಹುಡುಕಾಟ ನಡೆಸುತ್ತಿದ್ದಾನೆ. ಏನು ತೊಂದರೆ ಆಯ್ತೋ ಅಂತ ಆತಂಕದಲ್ಲಿದ್ದಾನೆ. ಕಂಡ ಕಂಡಲ್ಲಿ ನಕ್ಷತ್ರಾಳನ್ನು ಹುಡುಕುತ್ತಿದ್ದಾನೆ.
'ಜೋಡಿ ನಂ 1' ವೇದಿಕೆಯಲ್ಲಿ ಮಗಳಿಗೆ ನಾಮಕರಣ ಮಾಡಿದ ಕಾಮಿಡಿ ಕಿಲಾಡಿಗಳು!
ಇನ್ನು ನಕ್ಷತ್ರಾ ಮೌರ್ಯನಿಗೆ ನನ್ನನ್ನು ಯಾಕೆ ಕಿಡ್ನ್ಯಾಪ್ ಮಾಡಿದೆ, ಏನು ಬೇಕು ನಿಂಗೆ ಎಂದು ಕೇಳಿದ್ರೆ, ಆತ ನಿರ್ದಾಕ್ಷಿಣ್ಯವಾಗಿ 'ನಿನ್ನ ಸಾವು' ಅಂತಾನೆ. ಅವಳನ್ನು ಸಾಯಿಸಲು ಪ್ರಯತ್ನಿಸುತ್ತಾನೆ. ಅವಳನ್ನು ಮುಚ್ಚಿರುವ ಕೋಣೆಯಲ್ಲಿ ಕಟ್ಟಿ ಹಾಕಿ, ವಿಷ ಗಾಳಿ ಬಿಟ್ಟಿರುತ್ತಾನೆ. ಅಲ್ಲಿಗೆ ಚಂದ್ರಶೇಖರ್ ಬರುವಂತೆ ಮಾಡುತ್ತಾನೆ. ಚಂದ್ರಶೇಖರ್ ತನ್ನ ಮಗಳನ್ನು ಆ ಸ್ಥಿತಿಯಲ್ಲಿ ನೋಡಿ ಅಳುತ್ತಾನೆ. ಅಷ್ಟರಲ್ಲೇ ಅಲ್ಲಿಗೆ ಭೂಪತಿ ಬರುತ್ತಾನೆ. ಇಬ್ಬರು ಸೇರಿ ನಕ್ಷತ್ರಾಳನ್ನು ಆ ಕೋಣೆಯಿಂದ ಕರೆದುಕೊಂಡು ಬರುತ್ತಾರೆ.
ನಕ್ಷತ್ರಾಗೆ ಮೌರ್ಯ ವಿಷ ಗಾಳಿ ಹಾಕಿದ್ದರಿಂದ, ಅವಳು ಎಚ್ಚರ ತಪ್ಪಿದ್ದಾಳೆ. ಎಷ್ಟೇ ಮಾತನಾಡಿಸಿದ್ರೂ ಕಣ್ಣು ಬಿಡುತ್ತಿಲ್ಲ. ಚಂದ್ರಶೇಖರ್, ಭೂಪತಿ ಇಬ್ಬರೂ ಗಾಬರಿಯಾಗಿದ್ದಾರೆ. ಇಬ್ಬರು ಸೇರಿ ನಕ್ಷತ್ರಾಳನ್ನು ಆ ಕೋಣೆಯಿಂದ ಕರೆದುಕೊಂಡು ಬರುತ್ತಾರೆ. ಸಾವು-ಬದುಕಿನ ನಡುವೆ ಹೋರಾಡುತ್ತಿರುವ ನಕ್ಷತ್ರಾಳನ್ನುಈ ಇಬ್ಬರೂ ಕಾಪಾಡಿಕೊಳ್ತಾರಾ ಅನ್ನೋ ಪ್ರಶ್ನೆಗೆ ಉತ್ತರ ಮುಂದಿನ ಸಂಚಿಕೆಯಲ್ಲಿ ಸಿಗಲಿದೆ.
Bigg Boss OTT; ತಾರಕಕ್ಕೇರಿದ ಅರ್ಜುನ್ - ರೂಪೇಶ್ ಜಗಳ, ಕಂಗಾಲಾದ ಉಳಿದ ಸ್ಪರ್ಧಿಗಳು
ಈ ಸೀರಿಯಲ್‌ನ ಹೀರೋ ಭೂಪತಿ ಪಾತ್ರವನ್ನು ಜಗನ್ನಾಥ್ ಚಂದ್ರಶೇಖರ್ ನಿರ್ವಹಿಸುತ್ತಿದ್ದಾರೆ. ಈ ಸೀರಿಯಲ್‌ನ ನಿರ್ಮಾಪಕರೂ ಅವರೇ. ವಿಜಯಲಕ್ಷ್ಮೀ ನಾಯಕಿ ನಕ್ಷತ್ರಾ ಪಾತ್ರದಲ್ಲಿ ಮಿಂಚುತ್ತಿದ್ದಾರೆ. ಸುಧಾ ಬೆಳವಾಡಿ, ಸುಕೃತಾ ನಾಗ್, ಅರ್ಚನಾ ಉಡುಪ ಮೊದಲಾದವರು ಈ ಸೀರಿಯಲ್‌ನಲ್ಲಿ ನಟಿಸಿದ್ದಾರೆ. ಸದ್ಯಕ್ಕೀಗ ಈ ಸೀರಿಯಲ್‌ನ ಹೊಸ ತಿರುವುಗಳು ಕುತೂಹಲ ಮೂಡಿಸಿವೆ.