Zee Kannada gives a grand welcome Anchor Anushree : ಆಂಕರ್ ಅನುಶ್ರೀ ಮದುವೆಯಾದ ಕೆಲವೇ ದಿನಗಳಲ್ಲಿ ಕೆಲಸಕ್ಕೆ ವಾಪಸ್ ಆಗಿದ್ದಾರೆ. ಜೀ ಕನ್ನಡ ಮನೆಗೆ ಬಂದ ಮಗಳಿಗೆ ಅದ್ಧೂರಿ ವೆಲ್ ಕಂ ನೀಡಿದೆ.
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕನ್ನಡದ ಪ್ರಸಿದ್ಧ ಆಂಕರ್ ಅನುಶ್ರೀ (Anchor Anushree) ಮುಖದಲ್ಲಿ ಹೊಸ ಕಳೆ ಬಂದಿದೆ. ಮುಖ ಕೆಂಪೇರಿದೆ, ನಾಚಿಕೆ ಮನೆ ಮಾಡಿದೆ. ಮದುವೆಯಾದ ಕೆಲವೇ ದಿನಕ್ಕೆ ಅನುಶ್ರೀ ಕೆಲಸಕ್ಕೆ ಮರಳಿದ್ದಾರೆ. ತಮ್ಮ ತವರಿಗೆ ವಾಪಸ್ ಆಗಿದ್ದಾರೆ. ಮದುಮಗಳು ಅನುಶ್ರೀಗೆ ಜೀ ಕನ್ನಡದಲ್ಲಿ ಅದ್ಧೂರಿ ಸ್ವಾಗತ ಸಿಕ್ಕಿದೆ. ಅಮ್ಮ ತಾರಮ್ಮ, ತವರಿನ ಪರ ಅನುಶ್ರೀಗೆ ಮಡಿಲು ತುಂಬಿ ಹರಸಿದ್ದಾರೆ.
ತವರಿಗೆ ಬಂದ ಅನುಶ್ರೀ : ಕನ್ನಡದ ಫೇಮಸ್ ಆಂಕರ್ ಅನುಶ್ರೀ, ಮದುವೆ ಆದ್ಮೇಲೆ ಶೂಟಿಂಗ್ ಬರ್ತಾರಾ ಎನ್ನುವ ಪ್ರಶ್ನೆ ಬಹುತೇಕರನ್ನು ಕಾಡಿತ್ತು. ಬಂದೇ ಬರ್ತೇನೆ ಅಂತ ಅನುಶ್ರೀ ಮದುವೆ ದಿನವೇ ಭರವಸೆ ನೀಡಿದ್ದರು. ಅದ್ರಂತೆ ಅನುಶ್ರೀ ಕೆಲಸಕ್ಕೆ ವಾಪಸ್ ಆಗಿದ್ದಾರೆ. ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿರುವ ಅನುಶ್ರೀ, ಈ ಬಾರಿ ಮದುಮಗಳ ರೂಪದಲ್ಲಿ ವೇದಿಕೆ ಮೇಲೆ ಕಾಣಿಸಿಕೊಂಡಿದ್ದಾರೆ. ಚೆಂದದ ಸೀರೆಯುಟ್ಟು, ಕೈ ತುಂಬಾ ಬಳೆ ತೊಟ್ಟು, ದೊಡ್ಡ ನೆಕ್ಲೇಸ್ ಜೊತೆ ಉದ್ದದ ಕರಿಮಣಿ ಸರ ಧರಿಸಿ ಅನುಶ್ರೀ ನಿರೂಪಣೆ ಮಾಡಲು ಬಂದಿದ್ದಾರೆ. ಮದುವೆ ಆದ್ಮೇಲೆ ಮೊದಲ ಬಾರಿ ಜೀ ಕನ್ನಡದ ನಾವು ನಮ್ಮವರು ಹಾಗೂ ಮಹಾನಟಿ ಮಹಾ ಸಂಗಮದ ನಿರೂಪಣೆ ಮಾಡಿದ್ದಾರೆ ಅನುಶ್ರೀ. ಎಲ್ಲರಿಗೂ ಸರ್ಪ್ರೈಸ್ ನೀಡುವ ಅನುಶ್ರೀಗೆ ಈ ಕಾರ್ಯಕ್ರಮದಲ್ಲಿ ದೊಡ್ಡ ಸರ್ಪ್ರೈಸ್ ಸಿಕ್ಕಿದೆ. ಮದುಮಗಳಂತೆ ಸಿಂಗಾರ ಮಾಡ್ಕೊಂಡು ಬಂದ ಅನುಶ್ರೀಗೆ ಜಡ್ಜಸ್ಟ್ ಹಾಗೂ ಸ್ಪರ್ಧಿಗಳು ಗ್ರ್ಯಾಂಡ್ ವೆಲ್ ಕಮ್ ನೀಡಿದ್ದಾರೆ. ಹಾಡು, ಡಾನ್ಸ್ ಮೂಲಕ ಮದುವೆಯ ಶುಭ ಕೋರಿದ್ದಾರೆ.
ಮುಂಬೈ ಲೋಕಲ್ ಟ್ರೇನ್‌ನಿಂದ ಜಾರಿ ಬಿದ್ದ ನಟಿ, ಆಸ್ಪತ್ರೆ ಬೆಡ್‌ನಿಂದಲೇ ನೀಡಿದ್ರು ಅಪ್‌ಡೇಟ್!
ಮಡಿಲು ತುಂಬಿದ ನಟಿ ತಾರಾ (Tara) : ಅನುಶ್ರೀ ಜೀ ಕನ್ನಡವನ್ನು ತಮ್ಮ ತವರು ಅಂತ ನಂಬಿದ್ದಾರೆ. ನಮ್ಮ ಮನೆ ಮಗಳು ಅಂತ ಅನುಶ್ರೀ ಅವರನ್ನು ಜೀ ಕನ್ನಡ ಒಪ್ಪಿ – ಅಪ್ಪಿಕೊಂಡಿದೆ. ಜೀ ಕನ್ನಡದ ಪ್ರಸಿದ್ಧ ರಿಯಾಲಿಟಿ ಶೋಗಳ ನಿರೂಪಣೆ ಹೊಣೆ ಹೊತ್ತುಕೊಳ್ಳುವ ಅನುಶ್ರೀಗೆ ಜೀ ಕನ್ನಡ, ತವರಿನ ಶಾಸ್ತ್ರ ಮಾಡಿದೆ. ನಟಿ ತಾರಾ, ಅನುಶ್ರೀಗೆ ಅರಿಶಿನ – ಕುಂಕುಮ ಹಚ್ಚಿ ಮಡಿಲು ತುಂಬಿದ್ದಾರೆ. ಪ್ರೇಮಾ, ಅನು ಪ್ರಭಾಕರ್, ಶರಣ್ ಸೇರಿದಂತೆ ಕಾರ್ಯಕ್ರಮದ ಜಡ್ಜಸ್ ಹಾಗೂ ಸ್ಪರ್ಧಿಗಳು ಈ ಕ್ಷಣವನ್ನು ಸಂಭ್ರಮಿಸಿದ್ರೆ ಅನುಶ್ರೀ ಭಾವುಕರಾಗಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಹೆಜ್ಜೆಗೊಂದು ಕ್ಯಾಮೆರಾ ಇದ್ದರೂ ಬ್ಯಾಡ್ ಟಚ್; ಮುಟ್ಟಿದ್ದೆಲ್ಲಿಗೆ ಗೊತ್ತಾ?
ಇಷ್ಟು ದಿನ ಕಾದಿದ್ದು ಸಾರ್ಥಕವಾಯ್ತು : ಅನುಶ್ರೀಗೆ ಈಗ 38 ವರ್ಷ ವಯಸ್ಸು. ಅನುಶ್ರೀ ಮದುವೆ ಯಾವಾಗ ಎನ್ನುವ ಪ್ರಶ್ನೆ ಆಗಾಗ ಕೇಳಿ ಬರ್ತಾನೇ ಇತ್ತು. ಈ ವರ್ಷ ಮದುವೆ ಆಗೇ ಆಗ್ತೇನೆ ಎಂದಿದ್ದ ಅನುಶ್ರೀ, ಮಾತಿನಂತೆ ನಡೆದುಕೊಂಡಿದ್ದಾರೆ. ಕೊಡಗು ಮೂಲದ ರೋಷನ್ ಕೈ ಹಿಡಿದಿದ್ದಾರೆ. ಆಗಸ್ಟ್ 28 ರಂದು ಮದುವೆ ನಡೆದಿದೆ.
ಜೀ ಕನ್ನಡದಲ್ಲಿ ಮಾತನಾಡಿದ ಅನುಶ್ರೀ, ಇಷ್ಟು ದಿನ ಕಾದಿದ್ದು ಸಾರ್ಥಕವಾಯ್ತು. ತಾಳಿದವನು ಬಾಳಿಯಾನು ಎನ್ನುವ ಹಾಗೆ ತಾಳ್ಮೆಯಿಂದ ಕಾದಿದ್ದಕ್ಕೆ ಬಹಳ ಅರ್ಥಪೂರ್ಣವಾದ ತಾಳಿ ನನ್ನ ಕೊರಳಿಗೆ ಬಿದ್ದಿದೆ ಅಂತ ತಮ್ಮ ತಾಳಿ ತೋರಿಸಿ ಖುಷಿ ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲ ನನಗೆ ಜೀವನ ಕೊಟ್ಟಿದ್ದು ಜೀ ಕನ್ನಡ. ಜೀವಕ್ಕೆ ಅರ್ಥ ಕೊಟ್ಟಿದ್ದು ರೋಷನ್ ಎಂದಿರುವ ಅನುಶ್ರೀ, ಖುಷಿಯಲ್ಲಿ ಭಾವುಕರಾಗಿದ್ದಾರೆ.
ಅನುಶ್ರೀ ಫ್ಯಾನ್ಸ್ ರಿಯಾಕ್ಷನ್ : ಜೀ ಕನ್ನಡ ಪ್ರೋಮೋ ನೋಡಿದ ಫ್ಯಾನ್ಸ್ ಖುಷಿಯಾಗಿದ್ದಾರೆ. ಮದುವೆ ಆದ್ಮೇಲೆ ಅನುಶ್ರೀ ಮುಖದ ಲಕ್ಷಣ ಬದಲಾಗಿದೆ, ರೋಷನ್ – ಅನುಶ್ರೀ ಸಖತ್ ಜೋಡಿ, ಇಬ್ಬರಿಗೂ ಒಳ್ಳೆಯದಾಗ್ಲಿ ಅಂತ ಫ್ಯಾನ್ಸ್ ಹರಸಿದ್ದಾರೆ. ಯಾವ್ದೇ ಡ್ರೆಸ್ ಇರ್ಲಿ, ತಾಳಿ ಕತ್ತಲ್ಲಿ ಇರ್ಲಿ ಅಂತಾನೂ ಕೆಲವರು ಅನುಶ್ರೀಗೆ ಸಲಹೆ ನೀಡಿದ್ದಾರೆ.
