Asianet Suvarna News Asianet Suvarna News

ಇಬ್ಬರೇ ಕಾರು ಓಡಿಸಿಕೊಂಡು ಕಟೀಲು ದುರ್ಗಾ ಪರಮೇಶ್ವರಿ ದರ್ಶನ ಪಡೆದ 'ಗಟ್ಟಿಮೇಳ' ನಿಶಾ, ಅನ್ವಿತಾ!

ಮಂಗಳೂರಿನಲ್ಲಿ ಗಟ್ಟಿಮೇಳ ನಟಿಯರು. ದುರ್ಗಾ ಪರಮೇಶ್ವರಿ ಆಶೀರ್ವಾದ ಪಡೆದ ಸುಂದರಿಯರ ವಿಡಿಯೋ ಸಖತ್ ವೈರಲ್... 

Zee Kannada Gattimela fame Nisha Anvitha in Kateel Durga Parameshwari temple vcs
Author
First Published Sep 4, 2023, 5:41 PM IST

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಗಟ್ಟಿಮೇಳ ಧಾರಾವಾಹಿಯಲ್ಲಿ ಮಿಂಚುತ್ತಿರುವ ನಿಶಾ ರವಿಕುಮಾರ್ ಮತ್ತು ಅನ್ವಿತಾ ಸಾಗರ್ ಕಾರು ಓಡಿಸಿಕೊಂಡು ಮಂಗಳೂರಿನ ಕಟೀಲು ದುರ್ಗಾ ಪರಮೇಶ್ವರಿ ದೇಗುಲಕ್ಕೆ ಭೇಟಿ ನೀಡಿ ದರ್ಶನ ಪಡೆದಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಆಕ್ಟಿವ್ ಆಗಿರುವ ಸುಂದರಿಯರು ವಿಡಿಯೋ ಮೂಲಕ ತಮ್ಮ ಜರ್ನಿ ಹೇಗಿತ್ತು ಎಂದು ಅಪ್ಲೋಡ್ ಮಾಡಿದ್ದಾರೆ. 

ಗಟ್ಟಿಮೇಳ ಧಾರಾವಾಹಿಯಲ್ಲಿ ವೇದಾಂತ್ ವಶಿಷ್ಠನ ತಂಗಿ ಪಾತ್ರದಲ್ಲಿ ಅನ್ವಿತಾ ಸಾಗರ್ ಕಾಣಿಸಿಕೊಳ್ಳುತ್ತಿದ್ದರು ಮೂಲತಃ ಮಂಗಳೂರಿನರು. ಆಗಾಗ ಹುಟ್ಟೂರಿಗೆ ಭೇಟಿ ನೀಡಿ ದೇವರ ದರ್ಶನ ಪಡೆಯುತ್ತಾರೆ. ಮಂಗಳೂರಿನಲ್ಲಿರುವ ಪ್ರಸಿದ್ಧ ದೇಗುಲಗಳಲ್ಲಿ ಕಟೀಲು ದುರ್ಗಾ ಪರಮೇಶ್ವರಿ ದೇವಸ್ಥಾನವೂ ಒಂದು. ಇನ್ನು ನಿಶಾ ರವಿಕುಮಾರ್ ಮೂಲತಃ ಹಾಸನ್‌ನ ಸಕಲೇಶಪುರ ತಾಲೂಕಿನ ಕಬ್ಬಿನ ಗದ್ದೆ ಗ್ರಾಮದ ಚೆಲುವೆ ಆಗಿದ್ದು ಮಂಗಳೂರಿನ ಸೊಬಗು ಎಂಜಾಯ್ ಮಾಡುತ್ತಿದ್ದಾರೆ.

ಒಂದು ಮಿಲಿಯನ್ ಜನ ನೋಡಲಿ ಅಂತ ಬಿಕಿನಿ ವಿಡಿಯೋ ಹಾಕಿದ ಸೋನು ಗೌಡ!

ನಿಶಾ ರವಿಕುಮಾರ್ ಮತ್ತು ಅನ್ವಿತಾ ಸಾಗರ್ ಇಬ್ಬರೇ ಕಾರು ಓಡಿಸಿಕೊಂಡು ಮಂಗಳೂರಿಗೆ ಹೋಗಿ ದೇವರ ದರ್ಶನ ಪಡೆದಿದ್ದಾರೆ. ದೇಗುಲಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದಿದ್ದಾರೆ. ಅಲ್ಲಿನ ಆನೆಯ ಜೊತೆ ಸೆಲ್ಫಿ ತೆಗೆದು ಆನೆಯ ಸೊಂಡಿಲಿಗೆ ಕಿಸ್ ಮಾಡಿದ್ದನ್ನು ವಿಡಿಯೋ ಮಾಡಿದ್ದಾರೆ. ಈ ವಿಡಿಯೋ ಕಾಮೆಂಟ್ ಮತ್ತು ಲೈಕ್ ಹೆಚ್ಚಿಗೆ ಪಡೆಯುತ್ತಿದೆ. 'ವಾವ್ ನೀವಿಬ್ಬರು ಎಷ್ಟು ಸುಂದರವಾಗಿದ್ದೀರಾ ಹೀಗೆ ಆಗಾಗ ದೇಗುಲಕ್ಕೆ ಭೇಟಿ ನೀಡಿ' ಎಂದು ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ.  

ನೆಗೆಟಿವ್ ಕಾಮೆಂಟ್‌ಗೆ ಅಮ್ಮು ಕ್ಲಾಸ್...

ಸೀರಿಯಲ್‌ನ ಹೀರೋ ಹೀರೋಯಿನ್‌ಗಳಿಗೂ ಒಳ್ಳೆಯ ಫ್ಯಾನ್‌ ಫಾಲೋವಿಂಗ್‌ ಇರಲೇಬೇಕಲ್ವಾ? ಇದ್ದೇ ಇದೆ. ಫ್ಯಾನ್ಸ್ ಫಾಲೋವಿಂಗ್ ಇರೋದು ಮಾತ್ರ ಅಲ್ಲ ಅವರ ಅತೀ ಪ್ರೀತಿ, ಅತೀ ಪೊಸೆಸ್ಸಿವ್‌ನೆಸ್‌ ಈ ಸೀರಿಯಲ್‌ ಹೀರೋಯಿನ್‌ಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಆಕೆ ಬೇರೆ ದಾರಿ ಕಾಣದೇ ಇನ್‌ಸ್ಟಾ ಲೈವ್‌ಗೆ ಬಂದು ಹೀಗೆಲ್ಲ ನೀವು ಮಾಡಿದ್ರೆ ನಂಗೆ ಕಷ್ಟ ಆಗುತ್ತೆ ಅನ್ನೋದನ್ನೂ ಸ್ಟ್ರಿಕ್ಟ್ ಆಗಿಯೇ ಹೇಳಿದ್ದಾರೆ. 

ಯಾವ ಕಾರಣಕ್ಕೂ ರಾಮ್‌ನ ಬಿಡ್ಬೇಡ; ಸೀತಾಗೆ ವಾರ್ನಿಂಗ್ ಕೊಟ್ಟ ಸೀರಿಯಲ್ ಆಂಟಿಗಳು!

ಅಷ್ಟಕ್ಕೂ ನಿಶಾ ಮೇಲೆ ಅವರ ಅಭಿಮಾನಿಗಳು ಮಾಡಿರುವ ಆಪಾದನೆಯಾದರೂ ಏನು ಅಂದರೆ ಅದಕ್ಕೊಂದು ಹಿನ್ನಲೆಯಿದೆ. ನಿಶಾ ಕನ್ನಡದಲ್ಲಿ 'ಗಟ್ಟಿಮೇಳ'ದಲ್ಲಿ ನಟಿಸುತ್ತಿರುವಂತೆ, ತೆಲುಗಿನಲ್ಲೂ 'ಮುತ್ಯಮುಂತ ಮುದ್ದು' ಅನ್ನೋ ಸೀರಿಯಲ್‌ನಲ್ಲಿ ನಟಿಸುತ್ತಿದ್ದಾರೆ. ಈ ಸೀರಿಯಲ್‌ಗೆ ಉತ್ತಮ ಪ್ರತಿಕ್ರಿಯೆ ಇದ್ದು, ಆಂಧ್ರದಲ್ಲೂ ಅವರಿಗೆ ಅಭಿಮಾನಿಗಳಿದ್ದಾರೆ. ನಿಶಾ ಅವರು ಕನ್ನಡದ ಅಭಿಮಾನಿಗಳಿಗಿಂತ ತೆಲುಗಿನ ಅಭಿಮಾನಿಗಳಿಗೆ ಹೆಚ್ಚು ಪ್ರಾಶಸ್ತ್ಯ ನೀಡುತ್ತಿದ್ದಾರೆ, ಅವರಿಗಾಗಿ ತೆಲುಗಿನಲ್ಲಿ ರೀಲ್ಸ್ ಮಾಡ್ತಿದ್ದಾರೆ, ಅವರ ಜೊತೆಗೆ ಹೆಚ್ಚು ಆತ್ಮೀಯವಾಗಿ ಸೋಷಿಯಲ್‌ ಮೀಡಿಯಾದಲ್ಲಿ ನಡೆದುಕೊಳ್ಳುತ್ತಾರೆ ಅನ್ನೋದು ಕನ್ನಡದ ಅವರ ಅಭಿಮಾನಿಗಳ ಕಂಪ್ಲೇಂಟ್. ಈ ಹಿನ್ನೆಲೆಯಲ್ಲಿ ಕನ್ನಡದ ನಿಶಾ ಅಭಿಮಾನಿಗಳಲ್ಲಿ ಕೆಲವರು ಸೋಷಿಯಲ್ ಮೀಡಿಯಾದಲ್ಲಿ ಅವರ ಬಗ್ಗೆ ಕೆಟ್ಟದಾಗಿ ಕಮೆಂಟ್ ಮಾಡಿದ್ದಾರೆ. ಅದು ನಿಶಾಗೆ ಸಿಟ್ಟು, ಅಸಮಾಧಾನ ತರಿಸಿದರೂ ಆಕೆ ತಾಳ್ಮೆಯಲ್ಲೇ ಇನ್‌ಸ್ಟಾ ಲೈವ್‌ಗೆ ಬಂದು ಕೆಟ್ಟ ಕಮೆಂಟ್ ಮಾಡುವ ಅಭಿಮಾನಿಗಳಿಗೆ ಚುರುಕು ಮುಟ್ಟಿಸಿದ್ದಾರೆ. 

 

Follow Us:
Download App:
  • android
  • ios