ಯಾವ ಕಾರಣಕ್ಕೂ ರಾಮ್‌ನ ಬಿಡ್ಬೇಡ; ಸೀತಾಗೆ ವಾರ್ನಿಂಗ್ ಕೊಟ್ಟ ಸೀರಿಯಲ್ ಆಂಟಿಗಳು!
ದಿನದಿಂದ ದಿನಕ್ಕೆ ಗಮನ ಸೆಳೆಯುತ್ತಿದೆ ಸೀತಾ ರಾಮ ಸೀರಿಯಲ್. ರಾಮ ಯಾರ್ನಾ ಮದ್ವೆ ಆಗ್ತಾನೆ ಗೊತ್ತಿಲ್ಲ ಆದರೆ ಸೀತಾ ಹುಷಾರ್...
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸೀತಾ ರಾಮ ಧಾರಾವಾಹಿ ದಿನದಿಂದ ದಿನಕ್ಕೆ ಕಿರುತೆರೆ ವೀಕ್ಷಕರ ಗಮನ ಸೆಳೆಯುತ್ತಿದೆ.
ಸೀತಾ ಮತ್ತು ಸಿಹಿ ಪುಟ್ಟ ಕುಟುಂಬ ಅವರಿಬ್ಬರ ಸರಳತೆ ಜನರಿಗೆ ಇಷ್ಟವಾಗಿದೆ. ಅಲ್ಲದೆ ಸೀತಾ ಮತ್ತೊಮ್ಮೆ ಮದುವೆ ಆಗಬೇಕು ಎಂದು ಬಯಸುತ್ತಿದ್ದಾರೆ.
ಸಿರಿವಂತ ಕುಟುಂಬಕ್ಕೆ ಸೇರಿರುವ ರಾಮ್ ಒಬ್ಬ ಸಾಧಾರಣ ವ್ಯಕ್ತಿ ರೀತಿ ತನ್ನ ಕಂಪನಿಯಲ್ಲಿ ಕೆಲಸ ಮಾಡಿಕೊಂಡು ಸಿಹಿ ಮತ್ತು ಸೀತಾ ಸ್ನೇಹ ಗಳಿಸಿದ್ದಾನೆ.
ಇತ್ತೀಚಿನ ದಿನಗಳಲ್ಲಿ ಸೀತಾ, ಸಿಹಿ ಮತ್ತು ರಾಮ್ ಒಟ್ಟಿಗೆ ಓಡಾಡುತ್ತಿರುವ ಎಪಿಸೋಡ್‌ಗಳು ಜನರಿಗೆ ಇಷ್ಟವಾಗಿದೆ. ಮತ್ತಷ್ಟು ಎಪಿಸೋಡ್ ಹೀಗೆ ಬರಲಿ ಎನ್ನುತ್ತಾರೆ.
ರಾಮ್ ಪರ್ಸನಲ್ ಲೈಫ್ ಬಗ್ಗೆ ಸುಳ್ಳು ಹೇಳಿದ್ದಾನೆ ಓಕೆ ಆದರೆ ಸೀತಾ ಯಾಕೆ ಸತ್ಯ ಹೇಳುತ್ತಿಲ್ಲ? ಅಷ್ಟಕ್ಕೂ ಸೀತಾ ನಿಜವಾದ ಗಂಡ ಬದುಕಿದ್ದಾನಾ? ಸತ್ತಿದ್ದಾನಾ?
ನಮ್ಮ ರಾಮ್ ತುಂಬಾ ಒಳ್ಳೆಯ ವ್ಯಕ್ತಿ ದೊಡ್ಡ ಹುಡುಗ ಆಗಿದ್ರೂ ಸಿಹಿ ವಯಸ್ಸು ನಂತೆ ಇರುತ್ತಾನೆ ಅವನ ಮನಸ್ಸಿಗೆ ನೋವು ಮಾಡಬೇಡಿ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.
ಒಂದಲ್ಲ ಒಂದು ದಿನ ಸಿಹಿಗಾಗಿ ಸೀತಾ ಮತ್ತು ರಾಮ್ ಮದುವೆ ಮಾಡಿಕೊಳ್ಳಬೇಕು. ಒಳ್ಳೆಯ ಜೋಡಿನೇ ಆದರೆ ಅದೆಷ್ಟು ಹೆಣ್ಣು ಮಕ್ಕಳ ಹಾರ್ಟ್ ಬ್ರೇಕ್ ಆಗುತ್ತೆ ಗೊತ್ತಿಲ್ಲ ನೋಡಿ..