ಅಕ್ಕನ ವಿದ್ಯಾಭ್ಯಾಸಕ್ಕೆ ಪ್ರಾಮುಖ್ಯತೆ ನೀಡುತ್ತಿರುವ ಸಂಜನಾ. ಡ್ಯಾನ್ಸ್‌ ಪ್ಯಾಶನ್‌ ಎಂದು ಚಲ ಬಿಡದ ಕುಟುಂಬ.... 

ಜೀ ಕನ್ನಡ ವಾಹಿನಿಯಲ್ಲಿ ಮತ್ತೊಮ್ಮೆ ಡ್ಯಾನ್ಸ್‌ ರಿಯಾಲಿಟಿ ಶೋ 'ಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್‌' ಶೋ ಆರಂಭವಾಗಿದೆ. ಡ್ಯಾನ್ಸ್‌ ಬರದ ಜನಪ್ರಿಯ ವ್ಯಕ್ತಿಗಳ ಜೊತೆ ಅದ್ಭುತ ಡ್ಯಾನ್ಸರ್‌ಗಳು ಜೋಡಿಯಾಗಿ ಮನೋರಂಜಿಸಲು ಸಜ್ಜಾಗಿದ್ದಾರೆ. ಓಪನಿಂಗ್ ದಿನವೇ ಸೆಲೆಬ್ರಿಟಿಗಳನ್ನು ಪರಿಚಯ ಮಾಡಿಕೊಟ್ಟರು ಎರಡನೇ ವಾರ ಡ್ಯಾನ್ಸ್‌ರಗಳನ್ನು ಜೋಡಿ ಮಾಡಿದ್ದರು. ಈ ವೇಳೆ ವೀಕ್ಷಕರ ಗಮನ ಸೆಳೆದಿದ್ದು ಜೀವಾ ಮತ್ತು ಸಂಜು.

ಹೌದು! ಅಮೃತಾಧಾರೆ ಸೀರಿಯಲ್‌ನ ನಟ ಜೀವಾ ಕೂಡ ಡಿಕೆಡಿಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಜೀವಾಗೆ ಜೋಡಿಯಾಗಿರುವುದು ಸಂಜು ಎಂದು. ರಗಡ ರಗಡ ರಗಡ ದುನಿಯಾ ಎಂಬ ಹಾಡಿಗೆ ಕುಣಿದು ಕುಪ್ಪಳಿಸಿದ್ದಾರೆ. ಸಂಜು ಡ್ಯಾನ್ಸ್‌ನ ಪ್ರತಿಯೊಬ್ಬರು ಮೆಚ್ಚಿಕೊಂಡಿದ್ದಾರೆ. ಉತ್ತರ ಕರ್ನಾಕಟದ ಸಂಜು ಬಗ್ಗೆ ನಿರೂಪಕಿ ಅನುಶ್ರೀ ಹೆಚ್ಚಿಗೆ ಪ್ರಶ್ನೆ ಮಾಡಿದಾಗ ಸಿಕ್ಕ ಉತ್ತರವಿದು....

ನಡುರಸ್ತೆಯಲ್ಲಿ ಕಾರಿನಿಂದ ಇಳಿಸಿದ ಅಂಬರೀಶ್; ಸೇಡು ತೀರಿಸಿಕೊಳ್ಳಲು 1000 ಅಡಿ ಎತ್ತರದಿಂದ ಬೀಳಿಸಿದ ಜೈ ಜಗದೀಶ್!

ಮನೆಯಲ್ಲಿ ಬಡತನ ಇದ್ದ ಕಾರಣ ಸಂಜನಾ ಎಸ್‌ಎಸ್‌ಎಲ್ಸಿ ವರೆಗೂ ಓದಿದ್ದಾರೆ. ಇಡೀ ಮನೆ ನಿಭಾಯಿಸುತ್ತಿದ್ದ ತಂದೆ ಹೋದ ಮೇಲೆ ಕಷ್ಟು ಹೆಚ್ಚಾಗಿದೆ. ಪ್ರೀತಿಯ ಅಪ್ಪನನ್ನು ಕರೆದುಕೊಂಡ ನೋವು ಒಂದು ಕಡೆ ಆದರೆ ಕಷ್ಟ ನಿಭಾಯಿಸಲು ತಾಯಿಗೆ ಬೆನ್ನೆಲುಬಾಗಿ ನಿಂತಿದ್ದಾರೆ. ಸಂಜನಾ ಚಿಕ್ಕ ಮಗಳು ಆದರೆ ಅಕ್ಕ ಓದಬೇಕು ಅನ್ನೋ ಅಸೆ ಜಾಸ್ತಿ ಇದೆ. ತಾನು ಓದಿದರೆ ದುಡಿಯುವುದು ಯಾರು ಎಂದು ಸಂಜು ಚೆನ್ನಾಗಿ ಓದುವ ಅಕ್ಕನೇ ಓದಲಿ ಎಂದು ಕೆಲಸ ಮಾಡಲು ಶುರು ಮಾಡಿದ್ದಾರೆ. 

ದಿನ ಭೇಟಿ ಮಾಡುತ್ತಿದ್ದ ಸ್ನೇಹಿತನಿಂದ ತರುಣ್ ಸುಧೀರ್‌ಗೆ ಅವಮಾನ; 'ಕಾಟೇರ' ಚಿತ್ರದವರೆಗೂ ಬರಲು ಇದೇ ಕಾರಣ ಎಂದ

ಸಂಜನಾ ಗ್ಯಾರೇಜ್‌ನಲ್ಲಿ ಕೆಲಸ ಮಾಡಿಕೊಂಡು ಮನೆಯನ್ನು ನಿಭಾಯಿಸುತ್ತಿದ್ದಾಳೆ. ಗ್ಯಾರೇಜ್‌ನಲ್ಲಿ ದುಡಿದ ಹಣದಿಂದ ತಂಗಿಯನ್ನು ಓದಿಸಿ, ಮನೆಯ ಖರ್ಚು ನೋಡಿಕೊಳ್ಳುತ್ತಿದ್ದಾಳೆ. ಅಕ್ಕನ ಮಾತುಗಳನ್ನು ಕೇಳಿ ಸಂಜನಾ ಭಾವುಕಳಾಗಿ ಓಡಿ ಹೋಗಿ ಕುಟುಂಬವನ್ನು ತಬ್ಬಿಕೊಳ್ಳುತ್ತಾಳೆ.