ಕಾಮಿಡಿ ಕಿಲಾಡಿಗಳಿಗೆ ಸ್ಫೂರ್ತಿಯಾಗಿ ನಿಂತ ತರುಣ್ ಸುಧೀರ್. ಅವಮಾನ ನಂತರ ಬರುವುದು ಸನ್ಮಾನ ಎಂದು ನಿರ್ದೇಶಕ

ಕನ್ನಡ ಚಿತ್ರರಂಗದ ಅದ್ಭುತ ನಿರ್ದೇಶನ ತರುಣ್ ಸುಧೀರ್ ಕೆಲವು ದಿನಗಳ ಹಿಂದೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್ ಕಾರ್ಯಕ್ರಮದಲ್ಲಿ ತಾವು ಎದುರಿಸಿದ ಅವಮಾನಗಳನ್ನು ಹಂಚಿಕೊಂಡಿದ್ದಾರೆ.

'ಶರಣ್ ಜೊತೆ ಸೇರಿಕೊಂಡು ನಾನು ರ್ಯಾಂಬೊ ಅನ್ನೋ ಸಿನಿಮಾವನ್ನು ನಿರ್ದೇಶನ ಮಾಡುತ್ತೀನಿ. ಆ ಸಮಯದಲ್ಲಿ ನಾವು ಮಾತುಕತೆ ಮಾಡಿದ ಪ್ರೊಡ್ಯೂಸರ್‌ ಮುಂದೆ ಬರುವುದಿಲ್ಲ ಮತ್ತೊಬ್ಬರ ಜೊತೆ ಮಾತುಕತೆ ಆಗುತ್ತೆ ಯಾವುದು ವರ್ಕ್‌ ಆಗದ ಕಾರಣ ಶರಣ್ ಮನೆಯನ್ನು ಅಡವಿಟ್ಟು ಸಿನಿಮಾ ಮಾಡಲು ಹಣ ತರುತ್ತಾರೆ. ಸಿನಿಮಾ ಮಾಡುತ್ತಿದ್ದೀವಿ ಅನ್ನೋ ಖುಷಿಯಲ್ಲಿ ನಾವಿದ್ದೀವಿ ಆದರೆ ಹೊರಗಡೆ ಏನಾಗುತ್ತಿದೆ ಎಂದು ನಮಗೆ ಗೊತ್ತಾಗುತ್ತಿಲ್ಲ. ನಮ್ಮ ಚಿತ್ರದ ಪ್ರೊಡಕ್ಷನ್ ಮ್ಯಾನೇಜರ್‌ ಒಬ್ಬ ಚಿತ್ರರಂಗದಲ್ಲಿ ಹೆಸರು ಮಾಡಿರುವ ವ್ಯಕ್ತಿ ಜೊತೆ ಮಾತನಾಡುತ್ತಾರೆ ಆಗ ಫೋನ್‌ನನ್ನು ಸ್ಪೀಕರ್‌ಗೆ ಹಾಕಿರುತ್ತಾರೆ. ಆ ವ್ಯಕ್ತಿ ನನಗೂ ಫ್ರೆಂಡ್ ಆಗಿರುತ್ತಾರೆ. ನನ್ನ ಪಕ್ಕದಲ್ಲಿ ಇದ್ದವರು ಹೇಳ್ತಾರೆ ತರುಣ್‌ ಜೊತೆ ರ್ಯಾಂಬೋ ಸಿನಿಮಾ ಮಾಡ್ತಿದ್ದೀನಿ ಅಂತ. ಆಗ ಆ ಕಡೆಯಿಂದ ಆ ವ್ಯಕ್ತಿ...ಓ ತರುಣಾ? ನಟನಾಗಿ ಉದ್ದಾರ ಆಗಿಲ್ಲ, ಶರಣ್ ಕಾಮಿಡಿ ಮಾಡ್ಕೊಂಡು ಹೇಗೋ ಚೆನ್ನಾಗಿದ್ದ ಅವನ ಮನೆ ಅಡವಿಟ್ಟಿಸಿದ್ದಾರೆ...ಕೊನೆಯಲ್ಲಿ ತರುಣ್ ಬೀದಿಗೆ ಬರ್ತಾರೆ ಶರಣ್ ಬೀದಿಗೆ ಬರ್ತಾನೆ' ಎಂದು ತರುಣ್ ಸುಧೀರ್ ಮಾತನಾಡಿದ್ದಾರೆ. 

ಅಪ್ಪನ ಹೆಸರು ಕೇಳ್ಕೊಂಡು ಬೆಳೆಯಲ್ಲ ಎಂದ ಉಪೇಂದ್ರ ಪುತ್ರ; ನನ್ನ ಮಗನನ್ನು ಹೆತ್ತಿದ್ದಕ್ಕೂ ಸಾರ್ಥಕ ಅಂದಿದ್ಯಾಕೆ?

ದಿನಾ ನಾನು ಭೇಟಿ ಮಾಡುತ್ತಿದ್ದ ಸ್ನೇಹಿತ ಈ ರೀತಿ ಮಾತನಾಡಿದ್ದು ನನಗೆ ಬೇಸರ ಆಗಲಿಲ್ಲ. ಹೌದು ನಾನು ಇದುವರೆಗೂ ಸಾಭೀತು ಮಾಡಿಲ್ಲ ಅಂತ ಅಲ್ಲಿಂದ ಜರ್ನಿ ಶುರು ಮಾಡುತ್ತೀನಿ. ರಾಂಬೋ ಸಿನಿಮಾ ಸೂಪರ್ ಹಿಟ್ ಆಗುತ್ತೆ. ಇದಲ್ಲಿದಂತ ನಿರ್ಮಾಣ ಮಾಡಲು ಅಣ್ಣ ನಂದ ಕುಮಾರ್‌ನ ಕರೆದುಕೊಂಡು ಬರ್ತೀನಿ... ವಿಕ್ಟರ್, ರನ್ನ, ಅಧ್ಯಕ್ಷ...ಪ್ರತಿಯೊಂದು ಸೂಪರ್ ಹಿಟ್ ಆಗುತ್ತದೆ. ಚೌಕ ಸಿನಿಮಾ ಆರಂಭಿಸಬೇಕು ಆಗಲೂ ಒಂದು ಮಾತು ಶುರುವಾಯ್ತು 'ಏನಪ್ಪ ಅವನಿಗೆ ಅಣ್ಣ ಇದ್ದಾನೆ ಹಣ ಹಾಕ್ತಾನೆ ಅಂತ'. ಮೊದಲ ಸಿನಿಮಾ ನಾನು ಡೈರೆಕ್ಟರ್‌ ಆಗಿ ಸಾಭೀತು ಮಾಡಬೇಕು ಆಮೇಲೆ ಸ್ಟಾರ್ ನಟರನ್ನು ಕರೆದುಕೊಂಡು ಮಾಡಬೇಕು ಅಂತ ತೀರ್ಮಾನ ಮಾಡಿದೆ. ನಾಲ್ಕು ಜನರು ಕಷ್ಟ ಪಡುತ್ತಿದ್ದವರು ಸಿನಿಮಾ ಮಾಡಿದ್ದೀವಿ....ಈಗ ನಾನು ಕಾಟೇರ ಸಿನಿಮಾ ಮಾಡುವವರೆಗೂ ಬಂದಿದ್ದೀನಿ ಅಂದ್ರೆ ಅದಕ್ಕೆ ಅವಮಾನೇ ಕಾರಣ' ಎಂದು ತರುಣ್ ಸುಧೀರ್ ಹೇಳಿದ್ದಾರೆ.

ದರ್ಶನ್‌ಗೆ ಗಂಡಾಂತರ ಇರೋದು ಮೊದ್ಲೇ ಗೊತ್ತಿತ್ತು; ದೊಡ್ಡ ಜ್ಯೋತಿಷಿ ಹತ್ರ ವಿಜಯಲಕ್ಷ್ಮಿ ಕೇಳ್ತಾರೆ: ಲತಾ ಜಯಪ್ರಕಾಶ್

'ಸಾಮಾನ್ಯವಾಗಿ ಯಾರೇ ಅದ್ಭುತವಾಗಿ ನಟಿಸಿದ್ದರು ತರುಣ್ ಸುಧೀರ್ 500 ರೂಪಾಯಿಗಳನ್ನು ಕೊಡುತ್ತಾರೆ. ತರುಣ್ ಬೆಳೆದಿರುವ ರೀತಿಯನ್ನು ನಾನು ನೋಡಿದ್ದೀನಿ ಹೀಗಾಗಿ ಆ ಜರ್ನಿಗೆ ನಾನು 500 ರೂಪಾಯಿಗಳನ್ನು ನಾನು ಕೊಡುತ್ತೀನಿ. ತುಂಬಾ ಜನರು ಹೇಳುತ್ತಾರೆ ನನ್ನ ಕೈಯಿಂದ ಹಣ ತೆಗೆದುಕೊಂಡರೆ ಒಳ್ಳೆಯದಾಗುತ್ತದೆ ಎಂದು...ತರುಣ್‌ ನಿನ್ನ ಮುಂದಿನ ಸಿನಿಮಾ 500 ಕೋಟಿ ರೂಪಾಯಿ ಮಾಡಲಿ' ಎಂದಿದ್ದಾರೆ ನಿರೂಪಕ ಅಕುಲ್ ಬಾಲಾಜಿ.