ಅಂಬರೀಶ್‌ ಮೇಲೆ ಸೇಡು ತೀರಿಸಿಕೊಳ್ಳಲು ಜೈ ಜಗದೀಶ್ ಮಾಡಿದ ಹೊಸ ಟ್ರಿಕ್ ನೋಡಿ......

ಕನ್ನಡ ಚಿತ್ರರಂಗದ ರೆಬೆಲ್ ಸ್ಟಾರ್ ಅಂಬರೀಶ್ ಮತ್ತು ಸಿಂಪಲ್ ನಟ ಜೈ ಜಗದೀಶ್ ಆತ್ಮೀಯ ಸ್ನೇಹಿತರು. ಒಟ್ಟೊಟ್ಟಿಗೆ ಸಿನಿಮಾ ಮಾಡುತ್ತಾ, ಪಾರ್ಟಿ ಮಾಡುತ್ತಾ ಜಾಲಿ ಮಾಡಿದ ಫ್ಯಾಮಿಲಿ ಇವರದ್ದು. ಈ ಹಿಂದೆ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಅಂಬರೀಶ್ ವಿಶೇಷ ಅತಿಥಿಯಾಗಿ ಆಗಮಿಸಿದ್ದಾಗ ವಿಡಿಯೋದಲ್ಲಿ ಜೈ ಜಗದೀಶ್ ಬೈಕ್ ಕ್ರೇಜ್ ಬಗ್ಗೆ ಮಾತನಾಡಿದ್ದರು. ಮತ್ತೊಂದು ಸಲ ಜೈ ಜಗದೀಶ್‌ ವಿಶೇಷ ಅತಿಥಿಯಾಗಿ ಆಗಮಿಸಿದ್ದಾಗ ಅಂಬರೀಶ್ ಅಗಲಿದರು. ಹೀಗಾಗಿ ಅಂಬಿ ಹೇಳಬೇಕಿದ್ದ ಮಾತುಗಳನ್ನು ಜಗದೀಶ್ ಹಂಚಿಕೊಂಡಿದ್ದಾರೆ. 

'ನಾನು ಬಹಳ ಜೋಶ್‌ನಲ್ಲಿ ಸ್ಪೀಡ್‌ ಆಗಿ ಬೈಕ್ ಓಡಿಸುತ್ತಿದ್ದೆ. ಮಹಾರಾಣಿ ಕಾಜೇಲ್‌ ಬಳಿ ಒಂದ ಸರ್ಕಲ್‌ ಇದೆ ಅಲ್ಲಿ ನಾನು ಸೈಲೆನ್ಸರ್‌ನಿಂದ ಬೆಂಕಿ ಬರುವವರೆಗೂ ಬೆಂಡ್‌ ಮಾಡುತ್ತಿದ್ದೆ. ಹುಡುಗಿಯರು ಗೇಟ್‌ ಬಳಿ ಬಂದು ನಮ್ಮ ಪರ್ಫಾರ್ಮೆನ್ಸ್‌ ನೋಡುತ್ತಿದ್ದರು ಯಾಕೆ ಅಂದ್ರೆ ಯಾರಾದರೂ ಹುಡುಗಿಯರು ನಮಗೆ ಬೀಳ ಬಹುದು ಅನ್ನೋ ಆಸೆಯಿಂದ ಆದರೆ ಅದು ಯಾವುದು ಆಗಲಿಲ್ಲ' ಎಂದು ಜಗದೀಶ್ ವೇಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ. 

ರೀಲ್ಸ್‌ ದೀಪಕ್‌ ಗೌಡ Prank; ಇವನೇ ಬೇಕೆಂದು ವಿಷ ಸೇವಿಸಿದ ಯುವತಿ ಯಾರು?

ಚಿಕ್ಕಮಗಳೂರಿನಿಂದ ಶೂಟಿಂಗ್ ಮುಗಿಸಿಕೊಂಡು ಬರುವಾಗ ನಡೆದ ಘಟನೆ. ಅಂಬರೀಶ್ ಸಿಕ್ಕಾಪಟ್ಟೆ ಸ್ಪೀಡ್‌ ಆಗಿ ಓಡಿಸುತ್ತಿದ್ದರು ಯಾವ ಕಾರು ಲಾರಿ ನೋಡುತ್ತಿರಲಿಲ್ಲ. ನಾನು ಮೂತ್ರವಿಸರ್ಜನೆ ಮಾಡಬೇಕು ಎಂದು ಹೇಳಿ ಕಾರಿನಿಂದ ಇಳಿದುಕೊಂಡೆ ನಾನು ಓಡಿಸುತ್ತೀನಿ ಎಂದು ಹೇಳಿದೆ, ಅಂಬರೀಶ್ ಕೇಳಲಿಲ್ಲ ಅದಿಕ್ಕೆ ನನ್ನನ್ನು ಬಿಟ್ಟು ಹೋದರು ನಾನು ಬಸ್‌ನಲ್ಲಿ ಬಂದೆ. ಇದನ್ನು ತೀರಿಸಿಕೊಳ್ಳಬೇಕು ಎಂದು ತೀರ್ಮಾನ ಮಾಡಿದೆ' ಎಂದು ಜಗದೀಶ್ ಹೇಳಿದ್ದಾರೆ.

ದಿನ ಭೇಟಿ ಮಾಡುತ್ತಿದ್ದ ಸ್ನೇಹಿತನಿಂದ ತರುಣ್ ಸುಧೀರ್‌ಗೆ ಅವಮಾನ; 'ಕಾಟೇರ' ಚಿತ್ರದವರೆಗೂ ಬರಲು ಇದೇ ಕಾರಣ ಎಂದ

ಜಕ್ಕೂರ್ ಫ್ಲೈಯಿಂಗ್ ಸ್ಕೂಲ್‌ನಲ್ಲಿ ಟ್ರೈನಿಂಗ್ ಪಡೆಯುತ್ತಿದ್ದೆ. ಅಲ್ಲಿದ್ದ ಸರ್‌ ಬಳಿ ಹೇಳಿದೆ....ಇವನಿಗೆ ಗಾಂಜಲಿ ಜಾಸ್ತಿ ಹೇಗಾದರೂ ಮಾಡಿ ಬುದ್ಧಿ ಕಲಿಸಬೇಕು ಎಂದು. ಎರಡು ಸಾವಿರ ಅಡಿ ಮೇಲೆ ಕರೆದುಕೊಂಡು ಹೋಗಿ ಸಾವಿರ ಅಡಿ ಕೆಳಗೆ ಬೀಳಿಸಿದೆ. ಎಷ್ಟು ಗಾಬರಿಯಿಂದ ಕೂಗಿದ ಅಂದ್ರೆ ಕೆಳಗೆ ಇರುವ ನನ್ನ ಸರ್‌ಗೆ ಕೇಳಿಸಿತ್ತು. ನಾನು ಮೂರು ವರ್ಷ ಟ್ರೈನಿಂಗ್ ಪಡೆದಿರುವೆ ಆದರೆ ಐದು ವರ್ಷ ಮಾಡಿದ ಮೇಲೆ ಮಾತ್ರ ಲೈನ್ಸಸ್‌ ಕೊಡುವುದು. ಹೀಗಾಗಿ ನನಗೆ ಓಡಿಸಲು ಮಾತ್ರ ಬರುತ್ತದೆ ಎಂದಿದ್ದಾರೆ ಜಗದೀಶ್.