‘ಭರ್ಜರಿ ಬ್ಯಾಚುಲರ್ಸ್’ ಶೋನಲ್ಲಿ ʼಮಹಾನಟಿʼ ಖ್ಯಾತಿಯ ಗಗನಾ ಜೊತೆಗೆ ಬಾಳು ಬಾಳಗುಂದಿ-ಗಗನಾ, ಸುನೀಲ್-ಅಮೃತಾ ಡ್ಯಾನ್ಸ್ ಬಗ್ಗೆ ಸಿಕ್ಕಾಪಟ್ಟೆ ಚರ್ಚೆ ಆಗುತ್ತಿದೆ.
‘ಭರ್ಜರಿ ಬ್ಯಾಚುಲರ್ಸ್’ ಶೋನಲ್ಲಿ ಬಾಳು ಬಾಳಗುಂದಿ-ಗಗನಾ ಮಾಡಿರುವ ಡ್ಯಾನ್ಸ್ ಬಗ್ಗೆ ಸಿಕ್ಕಾಪಟ್ಟೆ ಚರ್ಚೆ ಆಗುತ್ತಿದೆ. ಅತ್ತ ತನ್ನ ಡ್ಯಾನ್ಸ್ ನೋಡಿ ಬಾಳು ಅವರು ನಾಚಿಕೊಂಡ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ʼಸರಿಗಮಪʼ ಹಾಗೂ ʼಭರ್ಜರಿ ಬ್ಯಾಚುಲರ್ಸ್ 2ʼ ಮಹಾಮಿಲನ ಇತ್ತು. ಆ ವೇಳೆ ಗಾಯಕರು, ಮೆಂಟರ್ಸ್, ಬ್ಯಾಚುಲರ್ಸ್ ಸ್ಪರ್ಧಿಗಳು ಸೇರಿಕೊಂಡು ಡ್ಯಾನ್ಸ್ ಮಾಡಿದ್ದರು, ಸ್ಕಿಟ್ ಮಾಡಿದ್ದರು. ಹಾಡು ಕೂಡ ಹಾಡಿದ್ದರು.
ಡ್ಯಾನ್ಸ್ ವಿಡಿಯೋಗಳು ವೈರಲ್ ಆಗ್ತಿವೆ!
ಇತ್ತೀಚೆಗೆ ಬರುತ್ತಿರುವ ಡ್ಯಾನ್ಸ್ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ. ಡ್ಯಾನ್ಸ್ ಹೆಸರಿನಲ್ಲಿ ಸಾಕಷ್ಟು ಮೈಮಾಟ ಪ್ರದರ್ಶಿಸುತ್ತಿದ್ದಾರೆ. ಅಶ್ಲೀಲವಾಗಿ ಡ್ಯಾನ್ಸ್ ಮಾಡುತ್ತಾರೆ ಎಂಬ ಆರೋಪ ಹೆಚ್ಚಿದೆ. ಈ ನಡುವೆ ʼಭರ್ಜರಿ ಬ್ಯಾಚುಲರ್ಸ್ʼ ಶೋನಲ್ಲಿ ಬಾಳು ಬಾಳಗುಂದಿ- ಗಗನಾ ಹಾಗೂ ಸುನೀಲ್-ಅಮೃತಾ ಡ್ಯಾನ್ಸ್ ವಿಡಿಯೋಗಳು ತುಂಬ ವೈರಲ್ ಆಗುತ್ತಿವೆ.
ಭರ್ಜರಿ ಬ್ಯಾಚುಲರ್ಸ್ ಏಂಜೆಲ್‌ಗಳ ಬಿಗಿದಪ್ಪಿದ ಕ್ರೇಜಿಸ್ಟಾರ್ ರವಿಚಂದ್ರನ್: ನಾಟಿ ರವಿಮಾಮ ಎಂದ ಫ್ಯಾನ್ಸ್
ಕಾಲೆಳೆದ ಅರ್ಜುನ್ ಜನ್ಯ
ಈ ಡ್ಯಾನ್ಸ್ ನೋಡಿ ಜಡ್ಜ್‌ಗಳೇ ನಾಚಿಕೊಂಡಿದ್ದಾರೆ. ಅರ್ಜುನ್ ಜನ್ಯ, ರಚಿತಾ ರಾಮ್, ಅನುಶ್ರೀ ಅವರೇ “ಸಾಕು ಬಿಡ್ರೋ” ಎಂದು ಹೇಳಿದ್ದಾರೆ. “ಅರ್ಜುನ್ ಜನ್ಯ ಅವರಂತೂ,”ಬಾಳು ಹೆಂಡ್ತಿ ಪ್ರಗ್ನೆಂಟ್ ಅಂತ ತವರು ಮನೆಗೆ ಬಿಟ್ಟು, ಈ ಥರ ಮಾಡ್ತಿದೀಯಲ್ಲೋ.. ಉತ್ತರ ಕರ್ನಾಟಕದವನು ಅಂತ ಅಂದೆ. ಈಗ ಸರಿಗಮಪ ಶೋಗೆ ಬಂದು ಹಾಡ್ತೀರೋ ಇಲ್ವೋ? ನಾವು ಡ್ಯಾನ್ಸ್ ಮಾಡಿಕೊಂಡು ಚೆನ್ನಾಗಿದ್ವಿ ಹೇಳ್ತೀರೇನೋ” ಎಂದು ಕಾಲೆಳೆದಿದ್ದಾರೆ. ಇವರೆಲ್ಲ ಡ್ಯಾನ್ಸ್ ಮಾಡುವಾಗ ಅರ್ಜುನ್ ಜನ್ಯ ಅವರು ತಮಾಷೆಗೆ ಬಾಯಿ ಬಡಿದುಕೊಂಡಿದ್ದಾರೆ.
ಒಳ್ಳೆಯ ಕಲಾವಿದರು!
ಇನ್ನೊಂದು ಕಡೆ ವಿ ರವಿಚಂದ್ರನ್ ಕೂಡ, “ಕಟ್ ಹೇಳಿಲ್ಲ ಅಂದ್ರೆ ಸುನೀಲ್ ಇನ್ನೂ ಮುಂದುವರೆಸಿಕೊಂಡು ಹೋಗ್ತಿದ್ದ” ಎಂದು ರೇಗಿಸಿದ್ದಾರೆ. “ಗಾಯಕರಿಗೆ ಮುಜುಗರ ಜಾಸ್ತಿ, ಅದರಲ್ಲಿ ಈ ಥರ ಡ್ಯಾನ್ಸ್ ಮಾಡಿರೋದು ಅಂದ್ರೆ ಮೆಚ್ಚಲೇಬೇಕು. ನೀವು ಒಳ್ಳೆಯ ಕಲಾವಿದರು” ಎಂದು ಹೊಗಳಿದ್ದಾರೆ.
ವಿದೇಶದ ನೆಲದಲ್ಲಿ ಕುಣಿದು ಕುಪ್ಪಳಿಸುತ್ತಿರುವ 'ಭರ್ಜರಿ ಬ್ಯಾಚುಲರ್ಸ್'
ರಿಯಾಲಿಟಿ ಶೋಗಳ ಬಗ್ಗೆ ರವಿಚಂದ್ರನ್ ಬೇಸರ!
‘ಭರ್ಜರಿ ಬ್ಯಾಚುಲರ್ಸ್ 2’ ಶೋನಲ್ಲಿ ವಿ ರವಿಚಂದ್ರನ್ ಅವರು ಜಡ್ಜ್ ಆಗಿದ್ದಾರೆ. ರಿಯಾಲಿಟಿ ಶೋಗಳ ಬಗ್ಗೆ ಮಾತನಾಡಿರುವ ಅವರು, ‘ನಾನು ಭರ್ಜರಿ ಬ್ಯಾಚುಲರ್ಸ್ ಶೋ ಮಾಡ್ತಿದ್ದೇನೆ. ಬೆಳಿಗ್ಗೆ 10 ಗಂಟೆಗೆ ಈ ರಿಯಾಲಿಟಿ ಶೋ ಶೂಟಿಂಗ್ ಶುರುವಾದರೆ, ರಾತ್ರಿ 11 ಗಂಟೆಗವರೆಗೂ ನಡೆಯುತ್ತಿರುತ್ತದೆ. ಅಲ್ಲಲ್ಲಿ ನಮಗೆ ಬೋರ್ ಬರುತ್ತದೆ, ತುಂಬಾ ಸಿಟ್ಟು ಕೂಡ ಬರುತ್ತದೆ. ಡಬಲ್ ಮೀನಿಂಗ್ ಜಾಸ್ತಿ ಮಾಡ್ತಾರೆ. ಆಗ ಇದೆಲ್ಲ ಬೇಕಿತ್ತಾ ಎನಿಸುತ್ತದೆ. ಶೋ ಮುಗಿದಕೂಡಲೇ ಮೇಲೆ ವಿಟಿ ( ಕೊನೆಯಲ್ಲಿ ಹಾಕುವ ಪ್ರೋಮೋ ) ಹಾಕ್ತಾರೆ. ನಾಲ್ಕು ತಿಂಗಳ ವಿಟಿ ಅಲ್ಲಿ ಎರಡೂವರೆ ನಿಮಿಷ ಇರುತ್ತದೆ. ಅದೇ ರೀತಿ ಜೀವನದಲ್ಲಿ ಒಳ್ಳೆ ಕ್ಷಣಗಳನ್ನು ನಾವು ಮೆಲುಕು ಹಾಕುತ್ತ ಹೋಗಬೇಕು. ನಮ್ಮ ಇಡೀ ದಿನವೂ ಚೆನ್ನಾಗಿರಲ್ಲ. ಆದರೆ, ಒಂದು ಕ್ಷಣ ಮಾತ್ರ ಚೆನ್ನಾಗಿರುತ್ತದೆ. ಆ ಒಳ್ಳೆಯ ಕ್ಷಣಗಳು ಹೆಚ್ಚಾದಂತೆ ನಮ್ಮ ಜೀವನ ಚೆನ್ನಾಗಿರುತ್ತದೆ’ ಎಂದಿದ್ದಾರೆ. ಇನ್ನು ಕೆಲ ವೀಕ್ಷಕರು ಕೂಡ ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಬೇಸರ ಹೊರಹಾಕಿದ್ದಾರೆ.
