ಮಲೇಷಿಯಾದಲ್ಲಿ 'ಭರ್ಜರಿ ಬ್ಯಾಚುಲರ್ಸ್' ಟೀಮ್ ಬೀಡುಬಿಟ್ಟಿದ್ದು, ಶೂಟಿಂಗ್‌ ನಡೆಸುತ್ತಾ, ಸುಂದರ ಲೋಕೇಶನ್ಸ್ ಕೂಡ ಎಂಜಾಯ್ ಮಾಡುತ್ತಿದ್ದಾರೆ. 'ಭರ್ಜರಿ ಬ್ಯಾಚುಲರ್ಸ್' ಕಲಾವಿದರಲ್ಲಿ ಹಲವರು ಇದೇ ಮೊದಲ ಬಾರಿಗೆ ವಿದೇಶದ ನೆಲದಲ್ಲಿ ಕಾಲಿಟ್ಟಿದ್ದು, ಅಲ್ಲಿನ ವಿಭಿನ್ನ ಸುಂದರ ಲೊಕೇಶನ್ಸ್ ನೋಡಿ ರೋಮಾಂಚನಗೊಂಡಿದ್ದಾರೆ. 

ಜೀ ಕನ್ನಡದಲ್ಲಿ ಇದೇ ಮೊದಲ ಬಾರಿಗೆ ಹೊಸದೊಂದು ಸಾಹಸ ಕಂಡುಬರುತ್ತಿದೆ. ಜೀ ಕನ್ನಡದ ರಿಯಾಲಿಟಿ ಶೋ, ವಿದೇಶದಲ್ಲಿ ಚಿತ್ರೀಕರಣವಾಗುತ್ತಿದೆ. ಜೀ ಕನ್ನಡದ 'ಭರ್ಜರಿ ಬ್ಯಾಚುಲರ್ಸ್' ರಿಯಾಲಿಟಿ ಶೋ ಮಲೆಷ್ಯಾದ ಸುಂದರ ತಾಣಗಳ ಪರಿಸರದಲ್ಲಿ ಶೂಟಿಂಗ್ ನಡೆಸಲಾಗುತ್ತಿದೆ. ಕಿರುತೆರೆ ಇತಿಹಾಸದಲ್ಲೇ ವಿದೇಶದಲ್ಲಿ ಚಿತ್ರೀಕರಣವಾದ ಮೊದಲ ರಿಯಾಲಿಟಿ ಶೋ ಇದಾಗಿದ್ದು, ಭಾರೀ ಕ್ರೇಜ್ ಸೃಷ್ಟಿಸತೊಡಗಿದೆ. 

ಮಲೇಷಿಯಾದಲ್ಲಿ 'ಭರ್ಜರಿ ಬ್ಯಾಚುಲರ್ಸ್' ಟೀಮ್ ಬೀಡುಬಿಟ್ಟಿದ್ದು, ಶೂಟಿಂಗ್‌ ನಡೆಸುತ್ತಾ, ಸುಂದರ ಲೋಕೇಶನ್ಸ್ ಕೂಡ ಎಂಜಾಯ್ ಮಾಡುತ್ತಿದ್ದಾರೆ. 'ಭರ್ಜರಿ ಬ್ಯಾಚುಲರ್ಸ್' ಕಲಾವಿದರಲ್ಲಿ ಹಲವರು ಇದೇ ಮೊದಲ ಬಾರಿಗೆ ವಿದೇಶದ ನೆಲದಲ್ಲಿ ಕಾಲಿಟ್ಟಿದ್ದು, ಅಲ್ಲಿನ ವಿಭಿನ್ನ ಸುಂದರ ಲೊಕೇಶನ್ಸ್ ನೋಡಿ ರೋಮಾಂಚನಗೊಂಡಿದ್ದಾರೆ. ಜತೆಗೆ, ಹೊರದೇಶದಲ್ಲಿ ಶೂಟಿಂಗ್ ನಡೆಸಿದ ಮೊಟ್ಟಮೊದಲ ರಿಯಾಲಿಟಿ ಶೋ ತಮ್ಮದಾಗಿದೆಯೆಂದು ಕೊಂಬು ಮೂಡಿಸಿಕೊಂಡು ಬೀಗುತ್ತಿದ್ದಾರೆ.

ಡ್ರೋನ್ Issue ಕೆದಕಿ ಪ್ರತಾಪ್ ಕಾಲೆಳೆದು ರೇಗಿಸಿ ಮಜಾ ತೆಗೆದುಕೊಳ್ಳುತ್ತಿರುವ ಸ್ಪರ್ಧಿಗಳು!

ಅಂದಹಾಗೆ, ಜೀ ಕನ್ನಡದಲ್ಲಿ ಶನಿವಾರ ಮತ್ತು ಭಾನುವಾರ 'ಭರ್ಜರಿ ಬ್ಯಾಚುಲರ್ಸ್' ಎಂಬ ವಿನೂತನ ರಿಯಾಲಿಟಿ ಶೋ ಟೆಲೆಕಾಸ್ಟ್ ಆಗುತ್ತಿದೆ. ವೀಕೆಂಡ್‌ನ ಶನಿವಾರ ಮತ್ತು ಭಾನುವಾರ ರಾತ್ರಿ 9.00ಕ್ಕೆ ಪ್ರಸಾರ ಕಾಣುತ್ತಿರುವ ಈ ರಿಯಾಲಿಟಿ ಶೋ ಕಿರುತೆರೆ ವೀಕ್ಷಕರಿಂದ 'ಭರ್ಜರಿ' ಎಂಬಷ್ಟು ರೆಸ್ಪಾನ್ಸ್ ಪಡೆಯುತ್ತಿದೆ. ಇದೀಗ, ವೀಕ್ಷಕರು ಭಾರತದಲ್ಲಿ, ಕರ್ನಾಟಕದಲ್ಲಿ ಕುಳಿತು ಮಲೇಶಿಯಾ'ದ ಹಲವು ಸುಂದರ ತಾಣಗಳನ್ನು ತಮ್ಮ ಮನೆಯ ಟಿವಿಯಲ್ಲಿಯೇ ನೋಡಬಹುದು. ಇದೊಂಥರಾ ಡಿಫ್ರಂಟ್ ಫೀಲಿಂಗ್ ಕೊಟ್ಟು ವೀಕ್ಷಕರನ್ನು ಎಕ್ಸ್‌ ಟ್ರಾ ಖುಷಿ ಪಡಿಸುವುದಂತೂ ಗ್ಯಾರಂಟಿ!

ವಿಲನ್‌ಗಳನ್ನು ರೋಡ್‌ನಲ್ಲಿ ಅಟ್ಟಿಸಿಕೊಂಡು ಹೋದ ಚಾರು; ರಾಮಾಚಾರಿ ಆತಂಕ ಡಬಲ್!

ಅಂದಹಾಗೆ, ಈ 'ಭರ್ಜರಿ ಬ್ಯಾಚುಲರ್ಸ್‌' ರಿಯಾಲಿಟಿ ಶೋ, ಜೀ ಕನ್ನಡದಲ್ಲಿಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 9.00 ಗಂಟೆಗೆ ಪ್ರಸಾರವಾಗುತ್ತಿದೆ. ಸಖತ್ ಕ್ರೇಜ್ ಹುಟ್ಟಿಸಿರುವ ಈ ಶೋ, ಇದೀಗ ಹೊಸ ಸಾಹಸ ಮಾಡುವ ಮೂಲಕ ಇನ್ನು ಹೆಚ್ಚಿನ ಕ್ರೇಜ್ ಸೃಷ್ಟಿಸಲಿದೆ. 

View post on Instagram