ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಲಿರುವ ʼಅಣ್ಣಯ್ಯʼ ಧಾರಾವಾಹಿಯಲ್ಲಿ ಗುಂಡಮ್ಮ ಹಾಗೂ ಜಿಮ್‌ ಸೀನ ಮದುವೆ ಫೋಟೋ ವೈರಲ್‌ ಆಗ್ತಿದೆ.  

‘ಅಣ್ಣಯ್ಯ’ ಧಾರಾವಾಹಿಯಲ್ಲಿ ಗುಂಡಮ್ಮ ಮದುವೆ ಆಗತ್ತೋ ಇಲ್ಲವೋ ಎನ್ನೋದು ದೊಡ್ಡ ಪ್ರಶ್ನೆಯಾಗಿತ್ತು. ಆ ಪ್ರಶಾಂತ್‌ ಜೊತೆ ಗುಂಡಮ್ಮ ಮದುವೆ ಆದರೆ ಅವಳ ಜೀವನ ಹಾಳಾದಂತೆ. ಹೀಗಾಗಿ ಈ ಮದುವೆ ತಡೆಯಬೇಕು ಅಂತ ಶಿವು ತಾಯಿ ಶಾರದಾ ಕೂಡ ಪ್ರಯತ್ನಪಡುತ್ತಿದ್ದಾಳೆ. ಈಗ ಗುಂಡಮ್ಮ, ಸೀನ ಮದುವೆ ಫೋಟೋ ವೈರಲ್‌ ಆಗ್ತಿದೆ.

ವರದಕ್ಷಿಣೆ ಕೇಳಿದ್ದ ಪ್ರಶಾಂತ್!
ದಪ್ಪ ಇದ್ರೂ ಕೂಡ ಗುಂಡಮ್ಮನನ್ನು ಮದುವೆ ಆಗ್ತೀನಿ ಅಂತ ಪ್ರಶಾಂತ್‌ ಮುಂದೆ ಬಂದಿದ್ದನು. ವೀರಭದ್ರನ ಮಾತಿಗೋಸ್ಕರ ಅವರ ಈ ರೀತಿ ಮಾಡಿದ್ದನು. ಪ್ರಶಾಂತ್‌ ಐದು ಲಕ್ಷ ರೂಪಾಯಿ ವರದಕ್ಷಿಣೆ ಕೇಳಿದ್ದು ಶಿವುಗೆ ಮಾತ್ರ ಗೊತ್ತಿತ್ತು. ಈ ಹಣ ಹೊಂದಿಸಲು ಶಿವು ತುಂಬ ಪರದಾಡಿದ್ದಾನೆ.

Annayya Serial : ಕೊಂಕು ಮಾತನಾಡೋರಿಗೆ ಬಿಸಿ ಮುಟ್ಟಿಸಿದ ಪಾರು... ಸೂರ್ಯವಂಶ ಸಿನಿಮಾ ನೋಡಿದಂತಾಯ್ತು ಎಂದ ಜನ

ಜೈಲಿನಲ್ಲಿದ್ದ ಶಾರದಾ 
ಶಿವು ಕುಟುಂಬ ಹಾಳು ಮಾಡೋದು ವೀರಭದ್ರನ ಗುರಿ. ಇವನಿಂದಲೇ ಶಾರದಾ ಇಷ್ಟು ವರ್ಷ ಜೈಲಿನಲ್ಲಿದ್ದಳು. ಈಗ ಅವಳು ಮನೆಗೆ ಬಂದಿದ್ದು, ಯಾರಿಗೂ ಇವಳ ಬಗ್ಗೆ ಗೊತ್ತಾಗಿಲ್ಲ. ರಶ್ಮಿ ಮದುವೆ ತಡೆಯಬೇಕು ಅಂತ ಶಾರದಾ ಕೂಡ ಪ್ರಯತ್ನಪಡುತ್ತಿದ್ದಾಳೆ. 

ಜಿಮ್‌ ಸೀನ-ರಶ್ಮಿ ಮದುವೆ ಆಯ್ತು 
ಜಿಮ್‌ ಸೀನಗೂ, ರಶ್ಮಿಗೂ ಆಗಿ ಬರೋದಿಲ್ಲ, ಡಯೆಟ್‌ ಮಾಡಿ ಸಣ್ಣ ಆಗು ಅಂತ ಅವನು ರಶ್ಮಿಗೆ ಹೇಳುತ್ತಿರುತ್ತಾನೆ. ಇವರಿಬ್ಬರು ಹಾವು-ಮುಂಗುಸಿ ಥರ ಕಚ್ಚಾಡುತ್ತಿರುತ್ತಾರೆ. ಈಗ ಈ ಜೋಡಿಗೆ ಮದುವೆ ಆಗಿದೆ. ಜಗಳ ಇದೆ ಅಂದ್ರೆ ಅಲ್ಲಿ ಪ್ರೀತಿ ಇರುತ್ತದೆ ಅಥವಾ ಪ್ರೀತಿ ಹುಟ್ಟಬಹುದು ಎನ್ನುತ್ತಾರಲ್ಲ, ಅದೇ ಥರ ಆಯ್ತು ಇದು. ಈ ಸೀರಿಯಲ್‌ ವೀಕ್ಷಕರಿಗೂ ಕೂಡ ಈ ಜೋಡಿ ಮದುವೆ ಆಗಬಹುದು ಎನ್ನುವ ಸಂದೇಹ ಇತ್ತು, ಅದೀಗ ನಿಜ ಆಗಿದೆ. ಈ ಜೋಡಿ ಮದುವೆ ಫೋಟೋ ಈಗ ವೈರಲ್‌ ಆಗ್ತಿದೆ. 

ಅಣ್ಣಯ್ಯ‌ ಮದುವೆ ಸಂಭ್ರಮ : ನಿಜವಾಗಿಯೂ ಗುಂಡಮ್ಮನ ಮದುವೆ ಯಾರ ಜೊತೆ ಆಗುತ್ತೆ??

ರೋಚಕ ಎಪಿಸೋಡ್?‌
ಗುಂಡಮ್ಮ-ಪ್ರಶಾಂತ್‌ ಮದುವೆಯನ್ನು ಯಾರು ನಿಲ್ಲಿಸುತ್ತಾರೆ? ಆಮೇಲೆ ಎಲ್ಲರೂ ಯಾಕೆ ಗುಂಡಮ್ಮ ಮದುವೆ ಸೀನ ಜೊತೆ ಆಗಬೇಕು ಅಂತ ಹೇಳುತ್ತಾರೆ ಎನ್ನುವ ಕುತೂಹಲ ಶುರುವಾಗಿದೆ. ಇನ್ನೊಂದು ಕಡೆ ಗುಂಡಮ್ಮ ಕಂಡ್ರೆ ಸೀನಗೆ ಆಗೋದಿಲ್ಲ, ಸೀನ ಕಂಡ್ರೆ ಗುಂಡಮ್ಮಗೆ ಆಗೋದಿಲ್ಲ. ಸೀನ ಈಗಾಗಲೇ ಇನ್ನೊಂದು ಹುಡುಗಿಯನ್ನು ಪ್ರೀತಿಸುತ್ತಿದ್ದಾನೆ. ಇವರಿಬ್ಬರು ಹೇಗೆ ಮದುವೆಗೆ ಒಪ್ಪುತ್ತಾರೆ ಎನ್ನೋದು ರೋಚಕ ವಿಷಯ. ಪ್ರಶಾಂತ್‌ಗೆ ಕೊಡಬೇಕಾದ ಹಣವನ್ನು ಸೀನ ಇಟ್ಟುಕೊಂಡಿರುತ್ತಾರೆ. ಆದರೆ ಆ ಹಣವನ್ನು ಶಾರದಾ ಕದಿಯುತ್ತಾಳೆ. ವರದಕ್ಷಿಣೆ ಕೊಡದೇ ಇರೋದಿಕ್ಕೆ ಮದುವೆ ನಿಲ್ಲುತ್ತದೆ. ಈ ತಪ್ಪು ಸರಿ ಮಾಡಬೇಕು ಅಂತ ಸೀನ ತಂದೆಯೇ ಈ ಮದುವೆ ಮಾಡಿಸುತ್ತಾನೆ. 

ಪಾರ್ವತಿ ಏನು ಮಾಡುತ್ತಾಳೆ?
ರಶ್ಮಿ ಮದುವೆ ತಡೆಯಲು ಪಾರ್ವತಿ ಏನಾದರೂ ಮಾಡುತ್ತಾಳಾ ಎನ್ನೋದು ಕಾದು ನೋಡಬೇಕಾಗಿದೆ. ವೀರಭದ್ರನ ಮುಖವಾಡ ಈಗಲಾದರೂ ಕಳಚಿಬೀಳತ್ತಾ? ನನ್ನ ಮಾವ ನಾನು ಅಂದುಕೊಂಡಷ್ಟು ಒಳ್ಳೆಯವನಲ್ಲ, ಕೆಟ್ಟವನು, ನಾನು ಇಂದು ಈ ರೀತಿ ಆಗಲು, ನಮ್ಮ ಕುಟುಂಬ ಇಷ್ಟು ಒದ್ದಾಡಲು ವೀರಭದ್ರ ಮಾವನೇ ಕಾರಣ ಅಂತ ಶಿವುಗೆ ಗೊತ್ತಾದರೆ ಏನಾಗುವುದೋ ಏನೋ! ಕೆಲ ದಿನಗಳಿಂದ ಮದುವೆ ಎಪಿಸೋಡ್‌ ಪ್ರಸಾರ ಆಗುತ್ತಿದೆ. 

Annayya Serial: ರಶ್ಮಿ ಮದುವೆ ಸಂಭ್ರಮ; ಶಿವು ಬದುಕು ಬದಲಾಯಿಸೋ ವ್ಯಕ್ತಿ ಆಗಮನವಾಯ್ತು; ಯಾರದು?

ಪಾತ್ರಧಾರಿಗಳು
ಪಾರ್ವತಿ-ನಿಶಾ ರವಿಕೃಷ್ಣನ್‌
ಶಿವು-ವಿಕಾಶ್‌ ಉತ್ತಯ್ಯ
ವೀರಭದ್ರ-ನಾಗೇಂದ್ರ ಶಾ