ಅಣ್ಣಯ್ಯ ಧಾರಾವಾಹಿಯಲ್ಲಿ ರಶ್ಮಿ ಮದುವೆಯ ಸಂಭ್ರಮ. ಶಿವು ತಂಗಿಯ ಮದುವೆಯನ್ನು ಅದ್ದೂರಿಯಾಗಿ ಮಾಡುತ್ತಿದ್ದರೆ, ವೀರಭದ್ರ ಕುತಂತ್ರ ಮಾಡಲು ಯತ್ನಿಸುತ್ತಿದ್ದಾನೆ. ಪಾರು ಶಿವುಗೆ ಮಾನ್ಯತೆ ತಂದುಕೊಡುವುದರ ಜೊತೆಗೆ ವೀರಭದ್ರನಿಗೆ ಅವಮಾನ ಮಾಡುತ್ತಾಳೆ. ಈ ದೃಶ್ಯ ಸೂರ್ಯವಂಶ ಸಿನಿಮಾವನ್ನು ನೆನಪಿಸುತ್ತದೆ. ಪಾರುವಿನ ಚಾಣಾಕ್ಷತನಕ್ಕೆ ವೀಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಅಣ್ಣಯ್ಯ ಧಾರಾವಾಹಿಯಲ್ಲಿ (Annayya Serial) ಸದ್ಯ ರಶ್ಮಿ ಮದುವೆಯ ಸಂಭ್ರಮ ಜೋರಾಗಿಯೇ ನಡೆಯುತ್ತಿದೆ. ಶಾಸ್ತ್ರಗಳು ಒಂದೊಂದಾಗಿ ನಡೆಯುತ್ತಿದೆ. ಶಿವಣ್ಣ ತನ್ನ ತಂಗಿಯ ಮದುವೆಯನ್ನು ಅದ್ಧೂರಿಯಾಗಿ ಮಾಡೋದಕ್ಕೆ ಏನೆಲ್ಲಾ ಸಾಧ್ಯ ಆಗುತ್ತೋ ಅದನ್ನೆಲ್ಲಾ ಮಾಡುತ್ತಿದ್ದಾನೆ. ಇನ್ನೊಂದೆಡೆ ವೀರಭದ್ರ ಶಿವುನನ್ನು ಯಾವ ರೀತಿ ಏನೂ ಇಲ್ಲದಂತೆ ಮಾಡಬೇಕು ಅನ್ನೋದಕ್ಕೆ ಸಕಲ ಸಿದ್ಧರೆ ಮಾಡಿದ್ದಾರೆ. ಆದರೆ ಇದಕ್ಕೆಲ್ಲಾ ಠಕ್ಕರ್ ಕೊಡೋದಕ್ಕೆ ಪಾರು ಸದಾ ಸಿದ್ಧವಾಗಿಯೇ ನಿಂತಿದ್ದಾರೆ.
ಅಣ್ಣಯ್ಯ ಮದುವೆ ಸಂಭ್ರಮ : ನಿಜವಾಗಿಯೂ ಗುಂಡಮ್ಮನ ಮದುವೆ ಯಾರ ಜೊತೆ ಆಗುತ್ತೆ??
ರಶ್ಮಿ ಮದುವೆಯಲ್ಲಿ (Rashmi marriage) ವೀರಭದ್ರ ಮತ್ತು ಅವರ ಮಗನ ಓಡಾಟ ಜೋರಾಗಿಯೇ ನಡೆಯುತ್ತಿದೆ. ಸೋಮೇಗೌಡರು ಕೂಡ ಮದುವೆಗೆ ಬಂದಿದ್ದಾರೆ. ಕರೆಯದೇ ಇದ್ದರೂ ಮದುವೆಗೆ ಬಂದ ಸೋಮೇಗೌಡರನ್ನು ನೋಡಿ ಶಿವುಗೆ ಆಶ್ಚರ್ಯವಾಗಿದೆ. ಸೋಮೇಗೌಡರ ಬಳಿ ಮಾತನಾಡುತ್ತಾ, ದೊಡ್ಡವರ ಮನಸ್ಸು ದೊಡ್ಡದು ಎಂದು ನಾನು ಕೇಳಿದ್ದೆ, ನೀವು ಅದೇ ರೀತಿ ನೋಡಿ. ನಾನು ಕರೆಯದೇ ಇದ್ದರೂ ನನ್ನ ತಂಗಿಯ ಮದುವೆಗೆ ಬಂದಿದ್ದೀರಿ ಎನ್ನುತ್ತಾನೆ ಶಿವು, ಅದಕ್ಕೆ ಸೋಮೇಗೌಡ ಶಿವುಗೆ ಅವಮಾನ ಮಾಡಲೆಂದೇ ಶಿವು ತಂಗಿ ಮದುವೆಯನ್ನು ಜೋರಾಗಿಯೇ ಮಾಡ್ತಿದ್ದೀಯಲ್ಲಾ ಎನ್ನುತ್ತಾನೆ, ಬಳಿಕ ಇಂಥ ಮೂವತ್ತು ಮದುವೆಯ ಖರ್ಚು, ನಮ್ಮಲ್ಲಿ ಒಂದೇ ಮದುವೆಗೆ ಆಗುತ್ತೆ ಎಂದು ಅಣಕಿಸುತ್ತಾನೆ.
Annayya Serial: ರಶ್ಮಿ ಮದುವೆ ಸಂಭ್ರಮ; ಶಿವು ಬದುಕು ಬದಲಾಯಿಸೋ ವ್ಯಕ್ತಿ ಆಗಮನವಾಯ್ತು; ಯಾರದು?
ಇದನ್ನೆಲ್ಲಾ ವೇದಿಕೆ ಮೇಲಿನಿಂದ ನಿಂತು ನೋಡುತ್ತಿರುವ ಪಾರು, ಮದುವೆ ಕೆಲಸವನ್ನು ಅರ್ಧದಲ್ಲಿ ಬಿಟ್ಟು ವೇದಿಕೆಯಿಂದ ಇಳಿದು ಶಿವು ಬಳಿ ಬಂದು, ನೀನ್ಯಾಕೆ ಮಾವ ನಿಂತಿದ್ದೀರಾ ಎನ್ನುತ್ತಾ, ತನ್ನ ತಂದೆಯನ್ನು ಅತ್ತ ಕಡೆ ಸರಿಯುವಂತೆ ಹೇಳಿ, ಶಿವುನನ್ನು ತನ್ನ ತಂದೆಗೆ ಸರಿ ಸಮಾನವಾದ ಚೇರ್ ನಲ್ಲಿ ಕೂರಿಸುತ್ತಾಳೆ. ಇದರಿಂದ ವೀರಭದ್ರನ ಮುಖ ಅರಳೆಣ್ಣೆ ಕುಡಿದ ಹಾಗಾಗುತ್ತೆ. ಅದೇ ಸಂದರ್ಭದಲ್ಲಿ ಅಣ್ಣೇನಳ್ಳಿ ಪ್ರೆಸಿಡೆಂಟ್ ರಶ್ಮಿ ಮದುವೆಗೆ ಆಗಮಿಸುತ್ತಾರೆ. ಪಾರು ಅವರ ಜೊತೆ ಮಾತನಾಡುತ್ತಾ, ನಿಮಗೆ ದೊಡ್ಡ ವ್ಯಕ್ತಿಯೊಬ್ಬರನ್ನು ಪರಿಚಯ ಮಾಡಿಸಿಕೊಡ್ತೀನಿ ಎಂದು ಹೇಳುತ್ತಾಳೆ. ದೊಡ್ಡ ವ್ಯಕ್ತಿ ಎಂದ ತಕ್ಷಣ ವೀರಭದ್ರ ಕೈ ಮುಗಿಯುತ್ತಾನೆ. ಆವಾಗ ಪಾರು ನಾನು ಅವರನ್ನಲ್ಲ ದೊಡ್ಡ ವ್ಯಕ್ತಿ ಎಂದಿದ್ದು, ದೊಡ್ಡ ವ್ಯಕ್ತಿ ತನ್ನ ಗಂಡ, ಅವರು ಶತ್ರುಗಳೇ ಬಂದರೂ ಕೂಡ ಅವರಿಗೆ ಒಳ್ಳೆಯದನ್ನೇ ಮಾಡುತ್ತಾರೆ ಎನ್ನುತ್ತಾರೆ. ಇದರಿಂದ ವೀರಭದ್ರನಿಗೆ ಅವಮಾನವಾಗುತ್ತೆ.
ಅಣ್ಣಯ್ಯ ಸೀರಿಯಲ್‌ನಲ್ಲಿ ಮಿಲನ ಸಿನಿಮಾ ಸ್ಟೋರಿ! ಮುಂದೈತೆ ಬೆಂಕಿ ಅಂತಿರೋದ್ಯಾಕೆ ಫ್ಯಾನ್ಸ್?
ಈ ದೃಶ್ಯವನ್ನು ನೋಡಿ ವೀಕ್ಷಕರು ಸೂರ್ಯವಂಶ ಸಿನಿಮಾ (Suryavamsha film) ನೋಡಿದ ಹಾಗಾಯಿತು ಎಂದಿದ್ದಾರೆ. ನಿಮಗೂ ನೆನಪಿರಬೇಕು ಅಲ್ವಾ? ಸೂರ್ಯವಂಶ ಸಿನಿಮಾದಲ್ಲಿ ವಿಜಯಲಕ್ಷ್ಮೀ ತನ್ನ ಸ್ನೇಹಿತರ ಮುಂದೆ ವಿಷ್ಣುವರ್ಧನ್ ಗೆ ಅವಮಾನ ಮಾಡುತ್ತಾ, ಅವರು ಹೇಳಿಕೊಳ್ಳುವ ವ್ಯಕ್ತಿ ಏನೂ ಅಲ್ಲ ಎನ್ನುತ್ತಾರೆ. ಆವಾಗ ಇಷಾ ಕೊಪ್ಪಿಕರ್, ತನ್ನ ಸ್ನೇಹಿತರನ್ನು ಕರೆದು ವಿಷ್ಣುವರ್ಧನ್ ಅವರು ಎಷ್ಟು ಗ್ರೇಟ್ ಅನ್ನೋದನ್ನು, ಎಂಥಹ ಮಹಾನ್ ವ್ಯಕ್ತಿ ಅನ್ನೋದನ್ನು ಹೇಳುತ್ತಾರೆ. ಅದೇ ದೃಶ್ಯವನ್ನೇ ಇಲ್ಲಿ ಮರುಸೃಷ್ಟಿ ಮಾಡಲಾಗಿದೆ. ಒಟ್ಟಲ್ಲಿ ಈ ಸೀನ್ ನೋಡಿ ಅಭಿಮಾನಿಗಳು ಖುಷಿ ಪಟ್ಟಿದ್ದು, ರೌಡಿ ಬೇಬಿ ಅಂದ್ರೆ ಹಂಗೆ, ಅಲ್ಲೇ ಡ್ರಾ ಅಲ್ಲೇ ಬಹುಮಾನ, ಸೂಪರ್ ಪಾರು ಎಂದಿದ್ದಾರೆ. ಉರ್ಸೋದು ಅಂದ್ರೆ ನಮ್ಮ ಪಾರು ತರ ಇರ್ಬೇಕು, ನಮ್ಮ ಪಾರು ಅತಿಥಿ ಪುರಸ್ಕಾರ ಚನ್ನಾಗಿ ಮಾಡ್ತಾಳೆ, ಪಾರು ಮಾತು ಕಬ್ಬಿಣ ಕಾಯಿಸಿ ಕಿವಿಯಲ್ಲಿ ಸುರಿದಂತೆ ಒಂದ್ ಒಂದ್ ಡೈಲಾಗ್ಸ್ ಸೂಪರ್ ಸೆ ಉಪೇರ್ ಎಂದಿದ್ದಾರೆ.
