ವಿವಾಹ ಜೋಕ್ಸ್‌ಗಳ ಬಗ್ಗೆ ಚರ್ಚೆಯಲ್ಲಿ, ಯೋಗರಾಜ್ ಭಟ್ ಲವ್ ಮತ್ತು ಅರೇಂಜ್ಡ್ ಮ್ಯಾರೇಜ್‌ಗಳ ವ್ಯತ್ಯಾಸವನ್ನು ತಮಾಷೆಯಾಗಿ ವಿವರಿಸಿದ್ದಾರೆ. ಲವ್ ಮ್ಯಾರೇಜ್‌ನಲ್ಲಿ ಮುಖ ಊದಿಕೊಳ್ಳುತ್ತದೆ, ಅರೇಂಜ್ಡ್ ಮ್ಯಾರೇಜ್‌ನಲ್ಲಿ ಚಪಾತಿ ಚೆನ್ನಾಗಿ ಊದಿಕೊಳ್ಳುತ್ತದೆ ಎಂದಿದ್ದಾರೆ. ಹಿಂದೆ ಹಿರೇಮಗಳೂರು ಕಣ್ಣನ್ ಕೂಡ ಇದೇ ವಿಷಯದ ಬಗ್ಗೆ ತಮಾಷೆ ಮಾಡಿದ್ದರು.
ಗಂಡ- ಹೆಂಡತಿಯ ಸಂಬಂಧದ ಕುರಿತು ಮಾಡುವ ಜೋಕ್ಸ್, ಮೀಮ್ಸ್ಗಳಿಗೆ ಲೆಕ್ಕವೇ ಇಲ್ಲ. ಅದರಲ್ಲಿಯೂ ಹೆಚ್ಚಾಗಿ ಹೆಂಡತಿಯರ ಮೇಲಿನ ಜೋಕ್ಸ್ಗಳೇ ಹೆಚ್ಚು ಎಂದರೂ ತಪ್ಪಾಗಲಿಕ್ಕಿಲ್ಲ. ದಂಪತಿ ನಡುವಿನ ಜೋಕ್ಸ್ಗಳನ್ನು ಯಾರೂ ಹೆಚ್ಚಾಗಿ ಸೀರಿಯಸ್ ತೆಗೆದುಕೊಳ್ಳದೇ ತಮ್ಮ ಮನೆಯಲ್ಲಿಯೂ ಹೀಗೆಯೇ ಎಂದು ಅಂದುಕೊಳ್ಳುವವರೇ ಹೆಚ್ಚು. ಅದಕ್ಕಾಗಿಯೇ ಇವುಗಳ ಜೋಕ್ಸ್, ಮೀಮ್ಸ್ಗಳು ಸಕತ್ ವೈರಲ್ ಆಗುತ್ತವೆ. ಇದೀಗ ವಿಕಟಕವಿ ಯೋಗರಾಜ ಭಟ್ ಲವ್ ಮ್ಯಾರೇಜ್ ಮತ್ತು ಅರೇಂಜ್ಡ್ ಮ್ಯಾರೇಜ್ನ ವ್ಯತ್ಯಾಸದ ಕುರಿತು ತರ್ಲೆ ಉತ್ತರ ಕೊಟ್ಟಿದ್ದಾರೆ.
ಕಲರ್ಸ್ ಕನ್ನಡದ ಮಜಾ ಟಾಕೀಸ್ನಲ್ಲಿ ಅವರಿಗೆ ಲವ್ ಮ್ಯಾರೇಜ್ ಮತ್ತು ಅರೇಂಜ್ಡ್ ಮ್ಯಾರೇಜ್ನ ವ್ಯತ್ಯಾಸ ಕೇಳಲಾಗಿತ್ತು. ಅದಕ್ಕೆ ತಮ್ಮ ಎಂದಿನ ಹಾಸ್ಯದಲ್ಲಿ ಯೋಗರಾಜ ಭಟ್ಟರು, ಅರೇಂಜ್ಡ್ ಮ್ಯಾರೇಜ್ ಆದರೆ ಚಪಾತಿ- ಪೂರಿ ಎಲ್ಲಾ ಚೆನ್ನಾಗಿ ಊದಿಕೊಂಡ್ರೆ, ಲವ್ ಮ್ಯಾರೇಜ್‌ನಲ್ಲಿ ಮುಖ-ಮೂತಿ ಚೆನ್ನಾಗಿ ಊದಿಕೊಳ್ಳುತ್ತೆ ಎಂದು ತಮಾಷೆ ಮಾಡಿದ್ದಾರೆ. ಅದಕ್ಕೆ ಸೃಜನ್ ಲೋಕೇಶ್ ಅವರು, ಒಹೋ ಅದಕ್ಕಾ ನಿಮ್ಮ ಕಣ್ಣುಗಳು ಯಾವಾಗ್ಲೂ ಊದಿಕೊಂಡು ಇರ್ತಾವಾ ಎಂದು ತಮಾಷೆ ಮಾಡಿದ್ದಾರೆ.
ಗಂಡಸ್ರಿಗೆ ಮದ್ವೆಯಾಗಿದೆ ಅಂತ ಗೊತ್ತಾಗೋ 3 ಲಕ್ಷಣ ಹೇಳಿದ್ರು ಯೋಗರಾಜ ಭಟ್ರು! ಒಪ್ತೀರಾ ಇದನ್ನು?
ಈ ಹಿಂದೆ ಇದೇ ವಿಷಯವನ್ನು ಹಿರೇಮಗಳೂರು ಕಣ್ಣನ್ ಅವರಿಗೆ ಕೇಳಿದ್ದಾಗ, ಗಂಡ-ಹೆಂಡತಿ ಇಬ್ಬರೂ ಪಾತ್ರೆ ತೊಳೆಯುತ್ತಾ, ಅಡುಗೆ ಮಾಡುತ್ತಾ, ತರಕಾರಿ ಹೆಚ್ಚುತ್ತಿದ್ದರೆ ಅದು ಲವ್ ಮ್ಯಾರೇಜು, ಹೆಂಡತಿ ಎಲ್ಲಾಕೆಲಸ ಮಾಡುತ್ತಾ, ಗಂಡ ಸುಮ್ಮನೇ ಕುಳಿತಿದ್ದರೆ ಅದು ಅರೇಂಜ್ ಮ್ಯಾರೇಜು, ಅದೇ ಹೆಂಡತಿ ಪಕ್ಕದಲ್ಲಿ ಇದ್ದರು ಕೂಡ, ಅಥ್ವಾ ಅವಳು ತನ್ನ ಕಾರ್ಯದಲ್ಲಿ ಮಗ್ನ ಆಗಿದ್ರೂ ಕೂಡ ಗಂಡ ಪಾತ್ರೆ ತೊಳೆಯುತ್ತಿದ್ದರೆ ಅದು ಯಾವ ಮ್ಯಾರೇಜು ಗೊತ್ತಾ? ಅದು ರಿವೇಂಜ್ ಮ್ಯಾರೇಜು ಎಂದು ತಮಾಷೆ ಮಾಡಿದ್ದರು.
ಇನ್ನು ಯೋಗರಾಜ ಭಟ್ಟರ ಬಗ್ಗೆ ಹೇಳುವುದಾದರೆ, ಕನ್ನಡ ಚಿತ್ರರಂಗ ನಿರ್ದೇಶಕ ಹಾಗೂ ಗೀತ ರಚನೆಕಾರ ಯೋಗರಾಜ ಭಟ್ಟರು ವಿಕಟಕವಿ ಎಂದೇ ಫೇಮಸ್ ಆದವರು. ಅಷ್ಟು ಹಾಸ್ಯ ಪ್ರವೃತ್ತಿ ಅವರಲ್ಲಿದೆ. ಯೋಗರಾಜ್ ಭಟ್ ಅವರ ಹಾಡುಗಳೆಂದರೆ ಅದಕ್ಕೆ ಅದರದ್ದೇ ಆದ ವಿಶೇಷತೆಗಳಿವೆ. ರಂಗ SSLC, ಮುಂಗಾರು ಮಳೆ, ಗಾಳಿಪಟ, ಮನಸಾರೆ, ಪಂಚರಂಗಿ, ಪರಮಾತ್ಮ, ದನ ಕಾಯೋನು, ವಾಸ್ತು ಪ್ರಕಾರ, ಡ್ರಾಮಾ, ಮುಗುಳುನಗೆ ಸೇರಿದಂತೆ ಅನೇಕ ಹಿಟ್ ಸಿನಿಮಾಗಳನ್ನು ನಿರ್ದೇಶನ ಮಾಡಿದರು. ಭಟ್ಟರು ನಿರ್ದೇಶಿಸಿದ ಬಹುತೇಕ ಎಲ್ಲಾ ಚಿತ್ರಗಳು ಬಾಕ್ಸಾಫೀಸಿನಲ್ಲಿ ಉತ್ತಮ ಕಲೆಕ್ಷನ್ ಜೊತೆ ಒಳ್ಳೆಯ ವಿಮರ್ಶೆ ಕೂಡ ಪಡೆದಿವೆ. ಯೋಗರಾಜ್ ಭಟ್ ಅವರು ಉತ್ತರಾಕಾಂಡ ಚಿತ್ರದಲ್ಲಿ ನಟಿಸಿದ್ದಾರೆ. 'ಪಾಟೀಲ' ಎಂಬ ಪಾತ್ರಕ್ಕಾಗಿ ಬಣ್ಣ ಹಚ್ಚಲಿದ್ದಾರೆ. ನಿರ್ದೇಶಕರಾಗಿ ಆಕ್ಷನ್ ಕಟ್ ಹೇಳುತ್ತಿದ್ದ ಭಟ್ಟರು, ಈ ಮೂಲಕ ವಿಭಿನ್ನವಾಗಿ ಆಕ್ಷನ್ ಕಟ್ ಹೇಳಿಸಿಕೊಂಡಿದ್ದಾರೆ. 'ಉತ್ತರಕಾಂಡ (Uttarakaanda)' ಒಂದು ಆಕ್ಷನ್ ಡ್ರಾಮಾ ಚಿತ್ರವಾಗಿದ್ದು, ರೋಹಿತ್ ಪದಕಿ ನಿರ್ದೇಶಕರು.
ನನ್ ಹೆಂಡ್ತಿ ಉಗಿದಿರೋ ಎಲ್ಲಾ ಸಾಂಗೂ ಹಿಟ್ಟೇ: ಯೋಗರಾಜ ಭಟ್ಟರ ಯಶಸ್ವಿನ ಹಿಂದಿರೋ ಗುಟ್ಟು ಇದಂತೆ!


