ಯೋಗರಾಜ ಭಟ್ಟರು ಕನ್ನಡ ಚಿತ್ರರಂಗದ ನಿರ್ದೇಶಕ, ಗೀತರಚನೆಕಾರ ಹಾಗೂ ಹಾಸ್ಯಪ್ರವೃತ್ತಿಗೆ ಹೆಸರುವಾಸಿ. ಅವರ ಹಾಡುಗಳು ವಿಶಿಷ್ಟವಾಗಿವೆ. ಮುಂಗಾರು ಮಳೆ ಚಿತ್ರೀಕರಣದ ವೇಳೆ ಭಟ್ಟರ ಗೈರುಹಾಜರಿಯ ಬಗ್ಗೆ ಗಣೇಶ್ ನೆನಪಿಸಿಕೊಂಡಿದ್ದಾರೆ. ಪತ್ನಿ ರೇಣುಕಾ, ಭಟ್ಟರ ಮರೆವು ಹಾಗೂ ಸಿನಿಮಾದ ಗೀಳಿನ ಬಗ್ಗೆ ಮಾತನಾಡಿದ್ದಾರೆ. ಇತ್ತೀಚೆಗೆ ದಂಪತಿಗಳು ತಮ್ಮ 23 ವರ್ಷಗಳ ದಾಂಪತ್ಯ ಜೀವನದ ಸೀಕ್ರೆಟ್ಸ್ ಹಂಚಿಕೊಂಡಿದ್ದಾರೆ.

ಕನ್ನಡ ಚಿತ್ರರಂಗ ನಿರ್ದೇಶಕ ಹಾಗೂ ಗೀತ ರಚನೆಕಾರ ಯೋಗರಾಜ ಭಟ್ಟರು ವಿಕಟಕವಿ ಎಂದೇ ಫೇಮಸ್​ ಆದವರು. ಅಷ್ಟು ಹಾಸ್ಯ ಪ್ರವೃತ್ತಿ ಅವರಲ್ಲಿದೆ. ಯೋಗರಾಜ್ ಭಟ್ ಅವರ ಹಾಡುಗಳೆಂದರೆ ಅದಕ್ಕೆ ಅದರದ್ದೇ ಆದ ವಿಶೇಷತೆಗಳಿವೆ. ಭಟ್ಟರು ನಿರ್ದೇಶಿಸಿದ ಬಹುತೇಕ ಎಲ್ಲಾ ಚಿತ್ರಗಳು ಬಾಕ್ಸಾಫೀಸಿನಲ್ಲಿ ಉತ್ತಮ ಕಲೆಕ್ಷನ್ ಜೊತೆ ಒಳ್ಳೆಯ ವಿಮರ್ಶೆ ಕೂಡ ಪಡೆದಿವೆ. ಅವರು ಎಲ್ಲಿಯೇ ಹೋದರೂ ಹಾಸ್ಯದ ಮಾತುಗಳಿಂದ ರಂಜಿಸುವುದನ್ನು ಮಾತ್ರ ಬಿಡುವುದಿಲ್ಲ. ಇನ್ನು ಅವರ ಪತ್ನಿ ರೇಣುಕಾ ಕೂಡ ಪತಿಯಂತೆಯೇ ನಗಿಸುವಲ್ಲಿ ಪಂಟರು. ಇವರ ಜೊತೆ ಗೋಲ್ಡನ್​ ಸ್ಟಾರ್​ ಗಣೇಶ್​ ಅವರು, ಮುಂಗಾರು ಮಳೆ ಶೂಟಿಂಗ್​ ವೇಳೆ ನಡೆದ ಘಟನೆಯನ್ನು ಮೆಲುಕು ಹಾಕಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮುಂಗಾರು ಮಳೆ ಶೂಟಿಂಗ್​ ಸಮಯದಲ್ಲಿ, ಭಟ್ಟರು ಬಂದಾಗ ಅವರ ಒಂದು ಕಾಲಿನಲ್ಲಿ ಶೂಸ್​, ಇನ್ನೊಂದು ಕಾಲಿನಲ್ಲಿ ಚಪ್ಪಲಿ ಇತ್ತು. ಕಾರಿನಲ್ಲಿ ಬಂದವರೇ ಕೆಳಕ್ಕೆ ಇಳಿದರು. ಆಗ ಅವರ ಕಾಲು ನೋಡಿದಾಗ ಶಾಕ್​ ಆಗೋಯ್ತು ಎಂದು ಗಣೇಶ್​ ಹೇಳಿದ್ದಾರೆ. ಈ ರೀತಿ ಅಬ್​ಸೆಂಟ್​ ಮೈಂಡ್​ ಆದಾಗ ನಿಮಗೆ ಗೊತ್ತಾದಾಗ ಏನಾಗುತ್ತದೆ ಎಂದು ಗಣೇಶ್​ ಪ್ರಶ್ನಿಸಿದಾಗ, ಯೋಗರಾಜ್​ ಭಟ್​ ಅವರು, ಅಯ್ಯೋ ಎನಿಸತ್ತೆ. ಮುಂದೆ ಯಾರು ಇದ್ದಾರೆ ಎನ್ನುವುದು ಮ್ಯಾಟರ್​ ಆಗುತ್ತದೆ. ಪರಿಚಯದವರೇ ನೋಡಿದ್ರೆ ಹೇಗೋ ಮ್ಯಾನೇಜ್​ ಮಾಡುತ್ತೇನೆ, ಇನ್ನು ಬೇರೆ ಯಾರಾದ್ರೂ ನೋಡಿಬಿಟ್ಟರೆ ತುಂಬಾ ಮುಜುಗರ ಆಗುತ್ತದೆ ಎಂದಿದ್ದಾರೆ. 

ಇವ್ರಿಗೆ ಮೊಸರು ತರಲು ಹೇಳಿದ್ದೇ ಜೀವನದಲ್ಲಿ ಮಾಡಿದ ದೊಡ್ಡ ತಪ್ಪು: ಯೋಗರಾಜ್​ ಭಟ್ಟರ ಪತ್ನಿ ಮಾತು ಕೇಳಿ...

ಇನ್ನೊಂದು ಸಂದರ್ಶನದಲ್ಲಿ ಯೋಗರಾಜ ಅವರ ಬಗ್ಗೆ, ಅವರ ಆಬ್​ಸೆಂಟ್​ ಮೈಂಡ್​ ಬಗ್ಗೆ ಪತ್ನಿ ರೇಣುಕಾ ಕೂಡ ಮಾತನಾಡಿದ್ದರು. ಅವರಿಗೆ ಮೊಸರು ತರಲು ಹೇಳಿದ್ದು ನಾನು ಜೀವನದಲ್ಲಿ ಮಾಡಿದ ಅತಿ ದೊಡ್ಡ ತಪ್ಪು ಎಂದಿದ್ದರು ರೇಣುಕಾ. ಇವರಿಗೆ ಸದಾ ಸಿನಿಮಾದ್ದೇ ಗುಂಗು. ನಾನು ಹೇಳಿದ್ದು ಒಂದೂ ನೆನಪಿರಲ್ಲ. ಅದಕ್ಕಾಗಿ ಒಂದೂ ಕೆಲಸ ಹೇಳಲ್ಲ. ಅದರಲ್ಲಿಯೂ ಆ ದಿನ ಮೊಸರು ತರಲು ಹೇಳಿ ತಪ್ಪು ಮಾಡಿಬಿಟ್ಟೆ. ನಾನು ಬೆಳಿಗ್ಗೆ ಹೇಳಿದ್ರೆ, ಅವರು ರಾತ್ರಿ ತಂದಿದ್ದರು ಎಂದಿದ್ದಾರೆ. ಇವರಿಗೆ ತಾವು ಮಾಡುವ ಸಿನಿಮಾ, ಹಾಡುಗಳ ಸಂಪೂರ್ಣ ಡಿಟೇಲ್ಸ್​ ನೆನಪಿದ್ದರೂ, ಕನಸಿನಲ್ಲಿ ಕೂಡ ಪರ್ಫೆಕ್ಟ್​ ಆಗಿ ಹೇಳಿದರೂ ತಮ್ಮ ಮದುವೆಯ ದಿನಾಂಕ ಮಾತ್ರ ನೆನಪು ಇರುವುದಿಲ್ಲ ಎಂದಿದ್ದರು ರೇಣುಕಾ. ಇದೇ ಭಟ್ಟರ ನೆಗೆಟಿವ್​ ಪಾಯಿಂಟ್​ ಬಗ್ಗೆ ಹೇಳಿ ಅಂದಾಗ ಸ್ಮೋಕ್​ ಮಾಡುವುದು, ಕ್ಲೀನ್​ ಇಟ್ಟುಕೊಳ್ಳದೇ ಇರುವುದು, ಮನೆ ಕೆಲಸಗಳನ್ನು ಬೇರೆ ಮರೆಯುವುದು ಇವರ ನೆಗೆಟಿವ್​ ಪಾಯಿಂಟ್​ ಎಂದ ರೇಣುಕಾ, ಇವರನ್ನು ಮದ್ವೆಯಾದದ್ದು ನನ್ನ ತಂದೆಯ ಒತ್ತಾಯಕ್ಕೆ. ಕೆಲಸಕ್ಕೆ ಹೋಗುತ್ತಿದ್ದ ನನಗೆ ಕೆಲಸ ಬಿಡಿಸಿದ್ರು, ಎಲ್ಲರಿಗೂ ಕೆಲಸ ಬಿಡಿಸಿ ತಮ್ಮ ಬಳಿ ಇಟ್ಟುಕೊಳ್ಳುವುದು ಎಂದು ಪತಿಯ ಕಾಲೆಳೆದಿದ್ದರು. 

ಅಂದಹಾಗೆ ರೇಣುಕಾ ಮತ್ತು ಯೋಗರಾಜ್​ ಭಟ್​ ಅವರ ದಾಂಪತ್ಯ ಜೀವನದಲ್ಲಿ 23 ವರ್ಷಗಳಾಗಿದ್ದು, ಈವರೆಗಿನ ಪಯಣವನ್ನು ಶೇರ್​ ಮಾಡಿಕೊಂಡಿದ್ದಾರೆ. ಇದೇ ವೇಳೆ ಭಟ್ಟರ ಹಲವಾರು ಸೀಕ್ರೇಟ್​ಗಳನ್ನು ತಮ್ಮದೇ ಆದ ಹಾಸ್ಯದ ಶೈಲಿಯಲ್ಲಿ ರೇಣುಕಾ ಅವರು ಶೇರ್​ ಮಾಡಿಕೊಂಡಿದ್ದಾರೆ. ಯೋಗರಾಜ್​ ಭಟ್​ ಅವರ ಪ್ಲಸ್​, ಮೈನಸ್​ ಪಾಯಿಂಟ್ಸ್​ಗಳನ್ನು ರೇಣುಕಾ ಅವರು ಹೇಳಿದರೆ, ಪತ್ನಿಯ ಬಗ್ಗೆ ಎಲ್ಲಾ ವಿಷಯಗಳನ್ನು ಭಟ್ಟರು ಹೇಳಿದ್ದರು. 

ಯೋಗರಾಜ್ ಭಟ್ಟರ ಈ ಲವ್​ ಟಿಪ್ಸ್​ ಫಾಲೋ ಮಾಡಿದ್ರೆ ಗರ್ಲ್​ಫ್ರೆಂಡೂ ಸಿಕ್ತಾಳೆ, ಹೆಂಡ್ತಿನೂ ಮಾತು ಕೇಳ್ತಾಳೆ!

View post on Instagram