ನನ್ ಹೆಂಡ್ತಿ ಉಗಿದಿರೋ ಎಲ್ಲಾ ಸಾಂಗೂ ಹಿಟ್ಟೇ: ಯೋಗರಾಜ ಭಟ್ಟರ ಯಶಸ್ವಿನ ಹಿಂದಿರೋ ಗುಟ್ಟು ಇದಂತೆ!
ನಿರ್ದೇಶಕ ಹಾಗೂ ಗೀತ ರಚನೆಕಾರ ಯೋಗರಾಜ ಭಟ್ಟರು ತಮ್ಮ ಹಾಡಿನ ಬಗ್ಗೆ ಪತ್ನಿ ಹೇಳುವುದೇನು ಎನ್ನುವ ಗುಟ್ಟನ್ನು ರಟ್ಟು ಮಾಡಿದ್ದಾರೆ. ಅವರು ಹೇಳಿದ್ದೇನು?
ಕನ್ನಡ ಚಿತ್ರರಂಗ ನಿರ್ದೇಶಕ ಹಾಗೂ ಗೀತ ರಚನೆಕಾರ ಯೋಗರಾಜ ಭಟ್ಟರು ವಿಕಟಕವಿ ಎಂದೇ ಫೇಮಸ್ ಆದವರು. ಅಷ್ಟು ಹಾಸ್ಯ ಪ್ರವೃತ್ತಿ ಅವರಲ್ಲಿದೆ. ಯೋಗರಾಜ್ ಭಟ್ ಅವರ ಹಾಡುಗಳೆಂದರೆ ಅದಕ್ಕೆ ಅದರದ್ದೇ ಆದ ವಿಶೇಷತೆಗಳಿವೆ. ರಂಗ SSLC, ಮುಂಗಾರು ಮಳೆ, ಗಾಳಿಪಟ, ಮನಸಾರೆ, ಪಂಚರಂಗಿ, ಪರಮಾತ್ಮ, ದನ ಕಾಯೋನು, ವಾಸ್ತು ಪ್ರಕಾರ, ಡ್ರಾಮಾ, ಮುಗುಳುನಗೆ ಸೇರಿದಂತೆ ಅನೇಕ ಹಿಟ್ ಸಿನಿಮಾಗಳನ್ನು ನಿರ್ದೇಶನ ಮಾಡಿದರು. ಭಟ್ಟರು ನಿರ್ದೇಶಿಸಿದ ಬಹುತೇಕ ಎಲ್ಲಾ ಚಿತ್ರಗಳು ಬಾಕ್ಸಾಫೀಸಿನಲ್ಲಿ ಉತ್ತಮ ಕಲೆಕ್ಷನ್ ಜೊತೆ ಒಳ್ಳೆಯ ವಿಮರ್ಶೆ ಕೂಡ ಪಡೆದಿವೆ. ಯೋಗರಾಜ್ ಭಟ್ ಅವರು ಉತ್ತರಾಕಾಂಡ ಚಿತ್ರದಲ್ಲಿ ನಟಿಸಿದ್ದಾರೆ. 'ಪಾಟೀಲ' ಎಂಬ ಪಾತ್ರಕ್ಕಾಗಿ ಬಣ್ಣ ಹಚ್ಚಲಿದ್ದಾರೆ. ನಿರ್ದೇಶಕರಾಗಿ ಆಕ್ಷನ್ ಕಟ್ ಹೇಳುತ್ತಿದ್ದ ಭಟ್ಟರು, ಈ ಮೂಲಕ ವಿಭಿನ್ನವಾಗಿ ಆಕ್ಷನ್ ಕಟ್ ಹೇಳಿಸಿಕೊಂಡಿದ್ದಾರೆ. 'ಉತ್ತರಕಾಂಡ (Uttarakaanda)' ಒಂದು ಆಕ್ಷನ್ ಡ್ರಾಮಾ ಚಿತ್ರವಾಗಿದ್ದು, ರೋಹಿತ್ ಪದಕಿ ನಿರ್ದೇಶಕರು.
ಇದೀಗ ಯೋಗರಾಜ ಭಟ್ಟರ ಕೆಲವೊಂದು ಕುತೂಹಲ ಎನ್ನುವ ಹಾಡುಗಳ ಬಗ್ಗೆ ಯೂಟ್ಯೂಬರ್ ಕೀರ್ತಿ ಅವರು ಕೇಳಿದಾಗ, ಭಟ್ಟರು ತಮ್ಮದೇ ಆದ ರೀತಿಯಲ್ಲಿ ಕುತೂಹಲದ ವಿಷಯವನ್ನು ಬಹಿರಂಗಗೊಳಿಸಿದ್ದಾರೆ. ಹೆಣ್ಣಿನ ಬಗ್ಗೆ ವಿಶೇಷ ಎನ್ನಿಸುವ ಹಾಡುಗಳು ಭಟ್ಟರಿಂದ ಮೂಡಿಬರುವುದು ಸಹಜ. ಅದರಲ್ಲಿ ಒಂದು 2015ರಲ್ಲಿ ಬಿಡುಗಡೆಯಾದ ರನ್ನ ಚಿತ್ರದ ಸೀರೇಲಿ ಹುಡಿಗಿರ ನೋಡಲೆಬಾರದು ಎನ್ನುವ ಹಾಡು. ಸೀರೇಲಿ ಹುಡಿಗಿರ ನೋಡಲೆಬಾರದು, ನಿಲ್ಲಲ್ಲ ಟೆಂಪ್ರೆಚರು, ಸ್ಕೂಲಲಿ ಹೇಳಿಕೊಡ್ಬಹುದಿತ್ತು, ಹೇಳ್ ಲಿಲ್ಲ ನಮ್ ಟೀಚರು... ಎನ್ನುವ ಹಾಡು ಇದಾಗಿದೆ. ಈ ಹಾಡನ್ನು ಕೇಳಿದಾಗ ನಿಮ್ಮ ಪತ್ನಿ ಏನೆಂದರೆ ಹೇಳಿದ್ರು ಎಂದು ಕೀರ್ತಿ ಅವರು ಪ್ರಶ್ನಿಸಿದಾಗ, ಅವಳು ಚೆನ್ನಾಗಿ ಉಗಿದಳು. ಏನು ಉಗಿದಿದ್ದಳು ಎನ್ನೋದು ನೆನಪಿಲ್ಲ. ಇದಷ್ಟೇ ಏಕೆ, ಮುಂಗಾರು ಮಳೆಗೂ ಉಗಿದಿದ್ದಳು. ಅವಳಿಗೆ ಉಗಿಯೋದು ಅಂದ್ರೆ ಬಹಳ ಖುಷಿ. ಅವಳು ಉಗಿದ್ರೆ ಏನೋ ಒಂದು ಇರತ್ತೆ ಅದ್ರಲ್ಲಿ, ಹಿಟ್ ಆಗತ್ತೆ ಅದು ಎಂದು ತಮಾಷೆ ಮಾಡಿದ್ದಾರೆ.
ಜನರು ಸುತ್ತುವರೆದ್ರೂ, ಪೊಲೀಸಪ್ಪ ಎಂಟ್ರಿ ಕೊಟ್ರೂ ನಡು ರಸ್ತೆಯಲಿ ಮೈಮರೆತ ಪ್ರೇಮಿಗಳು! ವಿಡಿಯೋ ವೈರಲ್
ಈ ಹಿಂದೆ ಸಂದರ್ಶನವೊಂದರಲ್ಲಿ ಅವರ ಪತ್ನಿ ರೇಣುಕಾ ಅವರು ತಮ್ಮ ಪತಿಯ ಕೆಲವೊಂದು ಗುಣಗಳನ್ನು ತೆರೆದಿಟ್ಟಿದ್ದರು. ಯೋಗರಾಜ್ ಭಟ್ ಅವರಿಗೆ ತಾವು ಮಾಡುವ ಸಿನಿಮಾ, ಹಾಡುಗಳ ಸಂಪೂರ್ಣ ಡಿಟೇಲ್ಸ್ ನೆನಪಿದ್ದರೂ, ಕನಸಿನಲ್ಲಿ ಕೂಡ ಪರ್ಫೆಕ್ಟ್ ಆಗಿ ಹೇಳಿದರೂ ತಮ್ಮ ಮದುವೆಯ ದಿನಾಂಕ ಮಾತ್ರ ನೆನಪು ಇರುವುದಿಲ್ಲ ಎಂದಿದ್ದರು. ಇವರನ್ನು ಮದ್ವೆಯಾದದ್ದು ನನ್ನ ತಂದೆಯ ಒತ್ತಾಯಕ್ಕೆ ಎಂದು ರೇಣುಕಾ ಅವರು ಓಪನ್ ಆಗಿಯೇ ಹೇಳಿಕೊಂಡಿದ್ದರು. ಕೆಲಸಕ್ಕೆ ಹೋಗುತ್ತಿದ್ದ ನನಗೆ ಕೆಲಸ ಬಿಡಿಸಿದ್ರು, ಎಲ್ಲರಿಗೂ ಕೆಲಸ ಬಿಡಿಸಿ ತಮ್ಮ ಬಳಿ ಇಟ್ಟುಕೊಳ್ಳುವುದು ಎಂದರೆ ಇವರಿಗೆ ತುಂಬಾ ಖುಷಿ ಎನ್ನುತ್ತಲೇ ಭಟ್ಟರಂಥ ಪತಿಯನ್ನು ಪಡೆದಿರುವುದು ತಮ್ಮ ಪುಣ್ಯ ಎಂದೂ ಹೇಳಿದ್ದರು. ಶಿವರಾಜ್ ಕುಮಾರ್ ಜೊತೆಗಿನ ಸಂದರ್ಶನದಲ್ಲಿ ಭಟ್ಟರು ನಮ್ಮ ಹೆಂಡ್ತಿಯನ್ನು ನಾವು ಪ್ರೀತಿಸ್ತೇವೆ ಎಂದ ಮಾತ್ರಕ್ಕೆ, ಬೇರೆಯವರ ಪತ್ನಿಯರನ್ನು ಕಡೆಗಣಿಸ್ತೇವೆ ಎನ್ನೋದು ಅರ್ಥವಲ್ಲ ಎಂದು ಹೇಳಿರುವ ಬಗ್ಗೆ ಕೇಳಿದ ಪ್ರಶ್ನೆಗೆ ದೊಡ್ಡದಾಗಿ ನಗುತ್ತ, ರೇಣುಕಾ ಅವರು ನಾನು ಏನೂ ಹೇಳಲ್ಲಪ್ಪ ಎನ್ನುತ್ತ ಬಾಯಿಗೆ ಬೀಗ ಹಾಕಿಕೊಂಡಿದ್ದರು.
ಇದೇ ವೇಳೆ ಭಟ್ಟರ ನೆಗೆಟಿವ್ ಪಾಯಿಂಟ್ ಬಗ್ಗೆ ಹೇಳಿ ಅಂದಾಗ ಸ್ಮೋಕ್ ಮಾಡುವುದು, ಕ್ಲೀನ್ ಇಟ್ಟುಕೊಳ್ಳದೇ ಇರುವುದು, ಮನೆ ಕೆಲಸಗಳನ್ನು ಬೇರೆ ಮರೆಯುವುದು... ಹೀಗೆ ಕೆಲವೊಂದು ಲಿಸ್ಟ್ಗಳನ್ನು ಹೇಳಿದ್ದರು. ಇದೇ ವೇಳೆ ಪತ್ನಿಯ ಬಗ್ಗೆ ಯೋಗರಾಜ್ ಭಟ್ಟರು ಹಲವಾರು ಒಳ್ಳೆಯ ಮಾತುಗಳನ್ನಾಡಿದ್ದರು. ನಂತರ ಒಳ್ಳೆಯ ಗಂಡ ಹೇಗಿರಬೇಕು ಎಂದು ಯೋಗರಾಜ ಭಟ್ಟರು ಹೇಳಿದ್ದಾರೆ. ಪತ್ನಿಗೆ ಪದೇ ಪದೇ ರೀಸನ್ಸ್ ಕೊಡಬಾರದು ಎಂದಿದ್ದರು. ನಂತರ ಒಳ್ಳೆಯ ಗಂಡ ಹೇಗಿರಬೇಕು ಎಂದು ರೇಣುಕಾ ಅವರಿಗೆ ಕೇಳಿದಾಗ, ಅವರು ಯೋಗರಾಜ ಭಟ್ಟರನ್ನು ತೋರಿಸಿ ಹೀಗೆ ಎಂದಿದ್ದರು.
ಡಿವೋರ್ಸ್ ಸುದ್ದಿ ನಡುವೆಯೇ 'ನನ್ನ ಮುದ್ದಿನ ಗಂಡ' ಎಂದ ಮಾಸ್ಟರ್ ಆನಂದ್ ಪತ್ನಿ- ವಿಡಿಯೋ ವೈರಲ್