Lakshana Serial: ಅಮ್ಮನನ್ನೇ ಕೆಳ ನೂಕಿದ ಮಗಳು! ರೀರಲ್ಲೂ ಇವೆ ರಿಯಲ್ ಸಂಗತಿ!
ಅಮ್ಮನನ್ನೇ ಮಹಡಿಯಿಂದ ಕೆಳ ನೂಕಿ ಸಾಯಿಸಿದ ಮಕ್ಕಳ ಬಗ್ಗೆ ಸುದ್ದಿ ಓದಿರ್ತೀವಿ. ಈಗ ಸೀರಿಯಲ್‌ನಲ್ಲೂ ಅಂಥಾ ಸನ್ನಿವೇಶ ಬಂದಿದೆ. 'ಲಕ್ಷಣಾ' ಸೀರಿಯಲ್‌ನಲ್ಲಿ ಶ್ವೇತಾ ತನ್ನ ತಾಯಿ ಜಯಾಳನ್ನೇ ಮಹಡಿ ಮೇಲಿಂದ ಕೆಳ ನೂಕಿದ್ದಾಳೆ!
ನಿತ್ಯ ನಡೆಯುವ ಕೊಲೆ, ಕಳ್ಳತನ, ಆತ್ಮಹತ್ಯೆಯಂಥಾ ಘಟನೆಗಳನ್ನು ಸಿನಿಮಾಗಳಲ್ಲಿ, ಸೀರಿಯಲ್‌ಗಳಲ್ಲಿ ಅಳವಡಿಸೋದು ನಡೆಯುತ್ತಲೇ ಇದೆ. ಅದಕ್ಕೊಂದು ಹೊಸ ಸೇರ್ಪಡೆ 'ಲಕ್ಷಣಾ' ಸೀರಿಯಲ್. ಇದರಲ್ಲೀಗ ತನ್ನನ್ನು ಹೆತ್ತು ಈ ಜಗತ್ತಿಗೆ ತಂದ ತಾಯನ್ನೇ ಮಹಡಿಯಿಂದ ಕೆಳನೂಕಿ ಸಾಯಿಸಲು ಹೊರಟಿದ್ದಾಳೆ ಶ್ವೇತಾ. ಇದರ ಹಿನ್ನೆಲೆಯೂ ಇಂಟರೆಸ್ಟಿಂಗ್.
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಗಳ ಪೈಕಿ ‘ಲಕ್ಷಣ’ ಕೂಡ ಒಂದು. ಮಕ್ಕಳು ಹುಟ್ಟಿದ ಕೂಡಲೇ ಅದಲು ಬದಲಾಗುವ ಕಥೆ ಈ ಸೀರಿಯಲ್‌ನದು. ಈ ಕಾರಣಕ್ಕೆ ಶ್ರೀಮಂತ ದಂಪತಿಗಳ ಮಗಳಾಗಿದ್ದರೂ ಕೆಳ ಮಧ್ಯಮ ವರ್ಗದಲ್ಲಿ ಬೆಳೆಯ ಬೇಕಾದ ನಕ್ಷತ್ರಾ, ಅವಳ ಬದಲಾಗಿ ಶ್ರೀಮಂತರ ಮನೆಯಲ್ಲಿ ಬೆಳೆಯುವ ಶ್ವೇತಾ ಇವರಿಬ್ಬರ ಕಥೆ ಈ ಸೀರಿಯಲ್‌ನಲ್ಲಿ ಮುಖ್ಯವಾದದ್ದು. ಒಂದು ಹಂತದಲ್ಲಿ ಇವರಿಬ್ಬರೂ ಭೂಪತಿಯನ್ನೇ ಬಯಸಿದರೂ ಶ್ವೇತಾ ಜೊತೆಗೆ ಭೂಪತಿ ಮದುವೆ ನಿಗದಿಯಾಗುತ್ತೆ. ಮುಂದೆ ವಿಧಿಯಾಟದಲ್ಲಿ ಈ ಮದುವೆ ನಕ್ಷತ್ರಾ ಜೊತೆಗೇ ನಡೆಯುತ್ತೆ. ಇದಕ್ಕೂ ಮುನ್ನ ಘಟಿಸುವ ಬೆಳವಣಿಗೆಯಲ್ಲಿ ಇವರಿಬ್ಬರ ಜನ್ಮವೃತ್ತಾಂತವೂ ಬಯಲಾಗುತ್ತೆ. ಶ್ವೇತಾ ತನ್ನ ಮಗಳಲ್ಲ ಎಂದು ಗೊತ್ತಿದ್ದರೂ ಅವಳನ್ನು ಮನೆಯಲ್ಲಿಟ್ಟುಕೊಳ್ಳಲು ಚಂದ್ರಶೇಖರ್ ದಂಪತಿ ಸಮ್ಮತಿಸಿದರೂ ಅವಳು ತನ್ನನ್ನು ಸಾಕಿದ ತಂದೆ - ತಾಯಿಯನ್ನೇ ಕೊಲ್ಲಲು ಮುಂದಾಗುತ್ತಾಳೆ. ಇದು ಗೊತ್ತಾದ್ಮೇಲೆ ಆಕೆಯನ್ನ ಆರತಿ ಹಾಗೂ ಚಂದ್ರಶೇಖರ್ ಅವಳನ್ನು ಮನೆಯಿಂದ ಹೊರ ಹಾಕುತ್ತಾರೆ. ಆಗ ಅವಳು ಬೇರೆ ದಾರಿಯಿಲ್ಲದೆ ತನ್ನ ಸ್ವಂತ ತಂದೆ ತುಕಾರಾಂ ಮನೆ ಸೇರುತ್ತಾಳೆ.
ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಗಳ ಪೈಕಿ ‘ಲಕ್ಷಣ’ ಕೂಡ ಒಂದು. ಮಕ್ಕಳು ಹುಟ್ಟಿದ ಕೂಡಲೇ ಅದಲು ಬದಲಾಗುವ ಕಥೆ ಈ ಸೀರಿಯಲ್‌ನದು. ಈ ಕಾರಣಕ್ಕೆ ಶ್ರೀಮಂತ ದಂಪತಿಗಳ ಮಗಳಾಗಿದ್ದರೂ ಕೆಳ ಮಧ್ಯಮ ವರ್ಗದಲ್ಲಿ ಬೆಳೆಯ ಬೇಕಾದ ನಕ್ಷತ್ರಾ, ಅವಳ ಬದಲಾಗಿ ಶ್ರೀಮಂತರ ಮನೆಯಲ್ಲಿ ಬೆಳೆಯುವ ಶ್ವೇತಾ ಇವರಿಬ್ಬರ ಕಥೆ ಈ ಸೀರಿಯಲ್‌ನಲ್ಲಿ ಮುಖ್ಯವಾದದ್ದು. ಒಂದು ಹಂತದಲ್ಲಿ ಇವರಿಬ್ಬರೂ ಭೂಪತಿಯನ್ನೇ ಬಯಸಿದರೂ ಶ್ವೇತಾ ಜೊತೆಗೆ ಭೂಪತಿ ಮದುವೆ ನಿಗದಿಯಾಗುತ್ತೆ. ಮುಂದೆ ವಿಧಿಯಾಟದಲ್ಲಿ ಈ ಮದುವೆ ನಕ್ಷತ್ರಾ ಜೊತೆಗೇ ನಡೆಯುತ್ತೆ. ಇದಕ್ಕೂ ಮುನ್ನ ಘಟಿಸುವ ಬೆಳವಣಿಗೆಯಲ್ಲಿ ಇವರಿಬ್ಬರ ಜನ್ಮವೃತ್ತಾಂತವೂ ಬಯಲಾಗುತ್ತೆ. ಶ್ವೇತಾ ತನ್ನ ಮಗಳಲ್ಲ ಎಂದು ಗೊತ್ತಿದ್ದರೂ ಅವಳನ್ನು ಮನೆಯಲ್ಲಿಟ್ಟುಕೊಳ್ಳಲು ಚಂದ್ರಶೇಖರ್ ದಂಪತಿ ಸಮ್ಮತಿಸಿದರೂ ಅವಳು ತನ್ನನ್ನು ಸಾಕಿದ ತಂದೆ - ತಾಯಿಯನ್ನೇ ಕೊಲ್ಲಲು ಮುಂದಾಗುತ್ತಾಳೆ. ಇದು ಗೊತ್ತಾದ್ಮೇಲೆ ಆಕೆಯನ್ನ ಆರತಿ ಹಾಗೂ ಚಂದ್ರಶೇಖರ್ ಅವಳನ್ನು ಮನೆಯಿಂದ ಹೊರ ಹಾಕುತ್ತಾರೆ. ಆಗ ಅವಳು ಬೇರೆ ದಾರಿಯಿಲ್ಲದೆ ತನ್ನ ಸ್ವಂತ ತಂದೆ ತುಕಾರಾಂ ಮನೆ ಸೇರುತ್ತಾಳೆ.
ಕನ್ನಡತಿ ರಂಜನಿ ರಾಘವನ್ ಲಂಗ ದಾವಣಿ ಡ್ಯಾನ್ಸ್ ಈಗ ವೈರಲ್!
ಆದರೆ ಶ್ರೀಮಂತಿಯನ್ನೇ ಹಾಸು ಹೊದ್ದು ಶ್ರೀಮಂತಿಕೆಯ ದರ್ಪದಿಂದಲೇ ಬೆಳೆದ ಅವಳಿಗೆ ಈ ಮನೆಗೆ ಹೊಂದಿಕೊಳ್ಳೋದಕ್ಕೆ ಸಾಧ್ಯವಾಗುತ್ತಿಲ್ಲ. ಅವಳ ಐಷಾರಾಮಿ ಲೈಫ್‌ಸ್ಟೈಲ್‌ಗೆ ಈ ಮನೆಯ ವಾತಾವರಣ ಸೆಟ್ ಆಗುತ್ತಿಲ್ಲ. ಇಂಥಾ ಹೊತ್ತಲ್ಲೇ ಶ್ವೇತಾ ಒಂದು ಅನಾಹುತಕಾರಿ ಕೆಲಸಕ್ಕೆ ಕೈ ಹಾಕಿದ್ದಾಳೆ. ಅದು ತನ್ನನ್ನು ಹೆತ್ತ ಅಮ್ಮನನ್ನೇ ಮಹಡಿಯಿಂದ ಕೆಳದೂಡುವ ಸಾಹಸಕ್ಕೆ ಕೈ ಹಾಕಿದ್ದಾಳೆ. ಹಾಗೆ ನೋಡಿದರೆ ಶ್ವೇತಾಳನ್ನು ಹೆತ್ತ ತಾಯಿ ಜಯಾ ಬಹಳ ಮೃದು ಸ್ವಭಾವದವಳು. ಅವಳು ಈ ಹಿಂದೆ ನಕ್ಷತ್ರಾ ಜೊತೆ ಬಹಳ ಪ್ರೀತಿಯಿಂದ ಇದ್ದಳು. ಇದೀಗ ಶ್ವೇತಾ ವರ್ತನೆ, ನಡವಳಿಕೆ ಹಿಡಿಸದಿದ್ದರೂ ಯಾವತ್ತೂ ದನಿ ಏರಿಸಿ ಮಾತನಾಡಿದವರಲ್ಲ. ಆದರೆ ಈಗ ಮಗಳಿಗೆ ಮನೆಯ ಪಾಠಗಳನ್ನು ಕಲಿಸುತ್ತಿದ್ದಾಳೆ. ಅವಳು ತಪ್ಪು ಮಾಡಿದ್ದಕ್ಕೆ ಕಪಾಳಕ್ಕೆ ಒಂದೇಟು ಹೊಡೆದಿದ್ದಾಳೆ. ಸದಾ ದ್ವೇಷವನ್ನೇ ಉಸಿರಾಡುತ್ತಿರುವ, ಪ್ರತಿಯೊಂದನ್ನೂ ಅಸಹನೆಯಿಂದಲೇ ನೋಡುತ್ತಿರುವ ಶ್ವೇತಾಗೆ ಇದೀಗ ತನ್ನ ಹೆತ್ತ ತಾಯಿ ಮೇಲೆ ದ್ವೇಷ ಬೆಳೆದಂತಿದೆ. ಏಕಾಏಕಿ ಮನೆ ಮಹಡಿಯಿಂದ ತಾಯಿ ಜಯಾ ಅವರನ್ನೇ ಶ್ವೇತಾ ಕೆಳದೂಡಿದ್ದಾಳೆ.
ಇದನ್ನು ಮಿಲಿ ನೋಡಿದ್ದಾಳೆ. ಜಯಮ್ಮ ಅವರ ಮೊದಲ ಮಗಳಿಗೂ ಶ್ವೇತಾಳನ್ನು ಕಂಡಿದೆ. ಪುಣ್ಯಕ್ಕೆ ಅವಳು ಇವರನ್ನು ತಕ್ಷಣ ಆರೈಕೆ ಮಾಡಿ ಆಸ್ಪತ್ರೆಗೆ ಸೇರಿಸಿದ್ದಾಳೆ. ಹೀಗಾಗಿ ಅವರು ಬದುಕುಳಿಯುವ ಸಾಧ್ಯತೆ ಇದೆ. ಇತ್ತ ಶ್ವೇತಾ ಮಾತ್ರ ಅಮ್ಮ ಸತ್ತೇ ಹೋದಳು ಅನ್ನೋ ಖುಷಿಯಲ್ಲಿದ್ದಾಳೆ. ಮಿಲಿ ಈ ಮೋಸವನ್ನು ಬಯಲಿಗೆಳೆಯಲು ಮತ್ತೇನೋ ಪ್ಲಾನ್ ಮಾಡ್ತಿದ್ದಾಳೆ. ಆದರೆ ಇದರಲ್ಲೀಗ ಭೂಪತಿ ತಲೆ ಕೆಟ್ಟವನ ಹಾಗೆ ಆಡ್ತಿರೋದು ಎಲ್ಲರಿಗೂ ನುಂಗಲಾರದ ತುತ್ತಾಗಿದೆ.
ನಕ್ಷತ್ರಾ ಜೊತೆಗೆ ಭೂಪತಿ ಕುಲದೇವತೆಯ ಪೂಜೆಗೆ ತೆರಳಿದ್ದರು. ಆಗ ಭೂಪತಿ ಸೇತುವೆಯ ಮೇಲೆ ಮಲಗಿದ್ದ ಸ್ಥಿತಿಯಲ್ಲಿದ್ದರೆ, ನಕ್ಷತ್ರಳನ್ನ ಯಾರೋ ಮರಕ್ಕೆ ಕಟ್ಟುಹಾಕಿದ್ದರು. ಆದ್ರೆ, ಇದು ಸಂಭವಿಸಿದ್ದು ಹೇಗೆ ಅನ್ನೋದು ನಕ್ಷತ್ರಗೆ, ಭೂಪತಿಗೆ ಗೊತ್ತಿಲ್ಲ.
ಮತ್ತೊಮ್ಮೆ ಕಾರಿನ ಡಿಕ್ಕಿಯಲ್ಲಿ ನಕ್ಷತ್ರಳನ್ನ ಕಟ್ಟಿಹಾಕಲಾಗಿತ್ತು. ಈ ಬಗ್ಗೆ ಕಾರಿನಲ್ಲಿಯೇ ಇದ್ದರೂ, ಭೂಪತಿಗೆ ಏನೂ ತಿಳಿದಿರಲಿಲ್ಲ. ಮಗದೊಮ್ಮೆ, ರಸ್ತೆಯಲ್ಲಿ ನಕ್ಷತ್ರ ಮಲಗಿದ್ದರೆ, ಮನೆಯಲ್ಲಿ ಭೂಪತಿ ಕಾಣುತ್ತಿರಲಿಲ್ಲ. ಆದರೆ ನಂತರದಲ್ಲಿ ಮನೆಯ ರೂಮ್‌ನಲ್ಲೇ ಭೂಪತಿ ಪ್ರತ್ಯಕ್ಷವಾದರು. ಈ ಘಟನೆಗಳು ಆತಂಕ ಮೂಡಿಸಿವೆ. ಈ ಘಟನೆಗಳ ಹಿಂದೆ ಯಾರ ಕೈವಾಡವಿದೆ ಎಂಬ ಪ್ರಶ್ನೆ ಕಾಡುತ್ತಿದೆ.
ಎಲ್ಲ ಸೀರಿಯಲ್ ಕಥೆಗಳಲ್ಲೂ ಫಸ್ಟ್ ನೈಟ್ ಪೋಸ್ಟ್ ಪೋನ್! ವೀಕ್ಷಕರ ಮೂಗಿನ ತುದಿಗೆ ತುಪ್ಪ
ಇಂಥಾ ಸಮಯದಲ್ಲಿ ಏಕಾಏಕಿ ಈ ಕೆಲಸವನ್ನೆಲ್ಲ ತಾನೇ ಮಾಡ್ತಿರೋದು ಅಂತ ಭೂಪತಿ ಹೇಳ್ತಿದ್ದಾನೆ. ಆದರೆ ನಕ್ಷತ್ರಾ ಇದನ್ನು ನಂಬಲು ಸಿದ್ಧಳಿಲ್ಲ. ಆದರೆ ಅಷ್ಟರಲ್ಲೇ ಅವಳಿಗೆ ಅಮ್ಮ ಆಸ್ಪತ್ರೆ ಸೇರಿರೋ ವಿಷ್ಯ ಗೊತ್ತಾಗಿದೆ. ಅವಳು ತರಾತುರಿಯಲ್ಲಿ ಆಸ್ಪತ್ರೆಗೆ ಹೊರಟಿದ್ದಾಳೆ. ಇತ್ತ ಮಿಲಿ ಶಕುಂತಲಾದೇವಿಗೆ ಕಾಲ್ ಮಾಡಿ ನಿಮ್ಮ ಸೊಸೆ ಶ್ವೇತಾಗೆ ಆಪತ್ತಿದೆ ಅನ್ನುತ್ತಿದ್ದಾಳೆ. ಅವಳ ಹೊಸ ಪ್ಲಾನ್ ಏನು, ಜಯಮ್ಮ ಅಪಾಯದಿಂದ ಪಾರಾಗ್ತಾಳಾ, ಶ್ವೇತಾಗೆ ಶಿಕ್ಷೆ ಆಗುತ್ತಾ ಅನ್ನೋದು ಮುಂದಿನ ಎಪಿಸೋಡ್‌ಗಳಲ್ಲಿ ತಿಳಿಯಲಿದೆ.
ಭಾಗ್ಯಶ್ರೀ ಈ ಸೀರಿಯಲ್‌ನಲ್ಲಿ ಜಯಮ್ಮನ ಪಾತ್ರ ಮಾಡಿದರೆ, ಶ್ವೇತಾ ಪಾತ್ರದಲ್ಲಿ ಸುಕೃತಾ ನಾಗ್ (Sukruta Nag) ನಟಿಸುತ್ತಿದ್ದಾರೆ. ಭೂಪತಿಯಾಗಿ ಜಗನ್ನಾಥ್ ಚಂದ್ರಶೇಖರ್, ನಕ್ಷತ್ರ ಆಗಿ ವಿಜಯಲಕ್ಷ್ಮಿ (Vijayalakshmi) ಅಭಿನಯವಿದೆ.
ವೈರಲ್ ಆಗುತ್ತಿದೆ ಕನ್ನಡತಿಯ ರತ್ನಮಾಲಾ ಕಣ್ಣೀರು! ಮತ್ತೆ ಬರಲ್ವಾ ಅಮ್ಮಮ್ಮಾ?