ಎಲ್ಲ ಸೀರಿಯಲ್ ಕಥೆಗಳಲ್ಲೂ ಫಸ್ಟ್ ನೈಟ್ ಪೋಸ್ಟ್ ಪೋನ್! ವೀಕ್ಷಕರ ಮೂಗಿನ ತುದಿಗೆ ತುಪ್ಪ

ಕನ್ನಡದ ಆಲ್ ಮೋಸ್ಟ್ ಸೀರಿಯಲ್‌ಗಳಲ್ಲಿ ಈಗ ಫಸ್ಟ್ ನೈಟ್ ಮುಂದಕ್ಕೆ ಹಾಕೋದು ಸಾಮಾನ್ಯವಾಗಿದೆ. ಯಾವ ಸೀರಿಯಲಲ್ಲಿ ನೋಡಿದ್ರೂ ಗಂಡ ಹೆಂಡತಿ ಮಧ್ಯೆ ಒಂದು ತಲೆದಿಂಬು ಅಡ್ಡ ಇರುತ್ತೆ. ವೀಕ್ಷಕರ ಮೂಗಿನ ತುದಿಗೆ ತುಪ್ಪ ಸವರೋ ಟ್ರಿಕ್‌ಗಳಲ್ಲಿ ಇದೂ ಒಂದಾ?

 

Why every kannada serial shows postpone first night scenes

ನೀವು ಕನ್ನಡದಲ್ಲಿ ಈಗ ಪ್ರಸಾರವಾಗುತ್ತಿರುವ ಯಾವುದೇ ಸೀರಿಯಲ್ (kannada serial) ತಗೊಳ್ಳಿ, ಅದರಲ್ಲಿ ಯಾವುದು ಯಾವ ಟೈಮಿಗೆ ಆಗಬೇಕೋ ಅದು ಆಗೋದೇ ಇಲ್ಲ. ಹೆಚ್ಚಿನ ಸೀರಿಯಲ್‌ಗಳೆಲ್ಲ ಪ್ರೀತಿ, ಮುನಿಸು, ವಿರಹಗಳ ಬಗೆಗೇ ಇವೆ. ಆರಂಭದಲ್ಲಿ ಬಹಳ ಲವಲವಿಕೆಯಿಂದ ತಮಾಷೆ ಪ್ರೀತಿ ಹುಡುಗಾಟ ಇತ್ಯಾದಿಗಳನ್ನಿಟ್ಟು ಸಾಗುವ ಸೀರಿಯಲ್ ಪ್ರೇಕ್ಷಕರನ್ನು ಹಿಡಿದು ಕೂರಿಸುತ್ತದೆ. ಈ ಸೀರಿಯಲ್ ನೋಡಿದ್ರೆ ತನಗೆ ಒಳ್ಳೆಯ ಎಂಟರ್‌ಟೈನ್‌ಮೆಂಟ್ ಸಿಗಬಹುದು ಅಂದುಕೊಳ್ಳುತ್ತಾ ವೀಕ್ಷಕ ಈ ಸೀರಿಯಲ್‌ ಅನ್ನು ನೋಡುತ್ತಿರುತ್ತಾನೆ. ಆದರೆ ಇದನ್ನೇ ಎನ್ ಕ್ಯಾಶ್ ಮಾಡಿಕೊಳ್ಳುವ ಸೀರಿಯಲ್‌ನವ್ರು ಕತೆಯನ್ನು ಎಲ್ಯಾಸ್ಟಿಕ್‌ನಂತೆ ಎಳೀತಾ ಹೋಗ್ತಾರೆ.

ಪ್ರತೀ ಎಪಿಸೋಡ್‌ನಲ್ಲೂ ಒಂದು ಸಣ್ಣ ತಿರುವು, ಮುಂದಿನ ಭಾಗದ ಬಗ್ಗೆ ಕುತೂಹಲ ಮೂಡಿಸುವಂತೆ ಮಾಡುವ ಸೀನ್‌ಗಳಿದ್ದರೆ ಈಗಾಗಲೇ ಈ ಸೀರಿಯಲ್‌ಗೆ ಎಡಿಕ್ಟ್ ಆಗಿರುವವರು ನೋಡಿಯೇ ನೋಡುತ್ತಾರೆ ಅನ್ನೋದು ಸೀರಿಯಲ್ ಟೀಮ್, ಚಾನೆಲ್‌ನವರ ಲೆಕ್ಕಾಚಾರ. ಇದರಿಂದಾಗಿ ಸಹಜವಾಗಿ ನಡೆಯಬೇಕಾದ ಅನೇಕ ಅಂಶಗಳು ಬಹಳ ಲೇಟಾಗಿ ನಡೆಯುತ್ತವೆ. ಅಷ್ಟರಲ್ಲಿ ವೀಕ್ಷಕನಿಗೂ ಈ ಗೋಳಾಟ ಸಾಕಾಗಿ ರಿಮೋಟ್ ಕೈಗೆತ್ತಿಕೊಂಡು ಚಾನೆಲ್ ಚೇಂಜ್ ಮಾಡ್ತಿರುತ್ತಾನೆ. 

ಇದನ್ನೂ ಓದಿ: Kannadathi serial: ಹವಿ ಮದುವೆಯಲ್ಲಿ ರಾಮಾಚಾರಿಯ ಪೌರೋಹಿತ್ಯಕ್ಕೆ ಫುಲ್ ಮಾರ್ಕ್ಸ್ ನೀಡಿದ ಫ್ಯಾನ್ಸ್

ನೀವು ಯಾವುದೇ ಸೀರಿಯಲ್ ತಗೊಳ್ಳಿ. ಹುಡುಗ ಹುಡುಗಿ ನಡುವೆ ಸಣ್ಣ ಕ್ರಶ್ ಹುಟ್ಟೋದನ್ನೇ ಹಲವು ಎಪಿಸೋಡ್‌ಗಳವರೆಗೂ ವಿಸ್ತರಿಸುತ್ತಾರೆ. ಲವ್, ಪ್ರೊಪೋಸ್‌ಗಳ ಕತೆಯಂತೂ ಬೇಡವೇ ಬೇಡ. ಇವತ್ತು ಪ್ರೊಪೋಸ್ ಮಾಡ್ತೀನಿ ಅಂದುಕೊಂಡ ನಾಯಕಿಗೋ ನಾಯಕನಿಗೂ ಏನೇನೋ ಅಡೆತಡೆಗಳು ಉಂಟಾಗಿ ತಿಂಗಳು ಬಿಟ್ಟು ನೋಡಿದರೂ ಪ್ರೀತಿ ಹೇಳಿಕೊಳ್ಳೋದು ಸಾಧ್ಯವೇ ಆಗಿರಲ್ಲ. ಎಂಗೇಜ್‌ಮೆಂಟ್, ಮದುವೆಗಳದ್ದು ಮತ್ತೊಂದು ಮಹಾ ಅಧ್ಯಾಯ. ಇಷ್ಟೆಲ್ಲ ಅದ್ಮೇಲೆ ಇನ್ನಾದರೂ ನಾಟಕೀಯತೆ ಹೊರತಾದ ಸಹಜ ಕತೆ ಸಿಗುತ್ತೆ ಅಂದುಕೊಂಡರೆ ನಿಮಗಿಂತ ಮೂರ್ಖರು ಮತ್ಯಾರೂ ಇಲ್ಲ. ಮದುವೆಯನ್ನು ವಾರ, ತಿಂಗಳುಗಟ್ಟಲೆ ಎಳೆದವರು ಪ್ರಸ್ತದ ಸೀನ್‌ಗೆ ವರ್ಷಗಟ್ಟಲೆ ಕಾಯಿಸ್ತಾರೆ. 

ಇದನ್ನೂ ಓದಿ: ಉದ್ದ ಕೂದಲಿದ್ದರೂ ಎಷ್ಟು ಸಿಂಪಲ್ ನೋಡಿ ನಿವೇದಿತಾ ಗೌಡ ಹೇರ್‌ಸ್ಟೈಲ್!

ಕನ್ನಡದ ಹೆಚ್ಚಿನ ಸೀರಿಯಲ್‌ಗಳಲ್ಲಿ ಮದುವೆಯಾಗಿ ಒಂದಿಷ್ಟು ಘಟನೆಗಳಾಗಿ ಎಷ್ಟೋ ಕಾಲದ ನಂತರ ಅನುಮಾನ, ಸಂದೇಹಗಳೆಲ್ಲ ಪರಿಹಾರವಾಗಿ ಗಂಡು ಹೆಣ್ಣು ಒಂದಾಗ್ತಾರೆ. ಇದಕ್ಕೀಗ ತಾಜಾ ಉದಾಹರಣೆ ಎಂದರೆ 'ಕನ್ನಡತಿ'. (kannadathi) ಇದರಲ್ಲಿ ಮೇಲೆ ಹೇಳಿದ ಎಲ್ಲ ಅಂಶಗಳೂ ಇದ್ದವು. ಮದುವೆಯ ಎಪಿಸೋಡ್‌ಗಳು ವಾರಾನುಗಟ್ಟಲೆ ನಡೆದವು. ನಡುವೆ ಏನೇನೋ ಡ್ರಾಮಾ ಆಗಿ ಭುವಿ ಹರ್ಷ ಮದುವೆ ಆಗುತ್ತೆ ಅಂತ ಪ್ರೇಕ್ಷಕರ ಮೂಗಿನ ತುದಿಗೆ ತುಪ್ಪ ಸವರುವ ಕೆಲಸ ನಡೀತಾನೇ ಇತ್ತು. ಇದು ಒಂದು ಲೆವೆಲ್‌ ಮೀರಿದಾಗ ಸಹನೆ ಕಳೆದುಕೊಂಡ ವೀಕ್ಷಕರು ಈ ಸೀರಿಯಲ್‌ಅನ್ನೇ ಬೈಕಾಟ್ ಮಾಡಲು ಹೊರಟರು. ಆಗ ಅನಿವಾರ್ಯವಾಗಿ ಪ್ರೋಮೋ ಮೇಲೆ ಪ್ರೋಮೋ ಬಿಟ್ಟು ವೀಕ್ಷಕರನ್ನು ಹಿಡಿದೆಳೆದಿಟ್ಟುಕೊಳ್ಳಬೇಕಾಯ್ತು. 

ಇದನ್ನೂ ಓದಿ: ವೈರಲ್‌ ಆಗುತ್ತಿದೆ ಕನ್ನಡತಿಯ ರತ್ನಮಾಲಾ ಕಣ್ಣೀರು! ಮತ್ತೆ ಬರಲ್ವಾ ಅಮ್ಮಮ್ಮಾ?

ಈಗ ಅಮ್ಮಮ್ಮನ ಕಾರಣ ಹೇಳಿ ಮದುವೆಯ ನಂತರದ ಪ್ರಸ್ತದ ಶಾಸ್ತ್ರವನ್ನು ಮುಂದೆ ಹಾಕಿದ್ದಾರೆ. ಈ ನಡುವೆ ಭುವಿ- ಹರ್ಷನ ಸಂಬಂಧ ಹಾಳು ಮಾಡಲು ಸಾನಿಯಾ, ವರೂಧಿನಿ ಸಿದ್ಧತೆ ನಡೆಸಿದ್ದಾರೆ. ಬಹುಶಃ ಇವರ ಫಸ್ಟ್‌ನೈಟ್‌ನೊಂದಿಗೆ ಸೀರಿಯಲ್‌ ಮುಗಿದೇ ಹೋಗಬಹುದೋ ಏನೋ ಗೊತ್ತಿಲ್ಲ. 

'ಹಿಟ್ಲರ್ ಕಲ್ಯಾಣ', 'ನನ್ನರಸಿ ರಾಧೆ', 'ಕನ್ಯಾಕುಮಾರಿ', 'ನಕ್ಷತ್ರಾ', 'ಗಿಣಿರಾಮ' ಹೀಗೆ ಇರೋಬರೋ ಸೀರಿಯಲ್‌ಗಳದ್ದೆಲ್ಲ ಇದೇ ಹಣೆಬರಹ. ಇದಿದೇ ಕಥೆಯನ್ನು ಎಳೆದಾಡೋ ಬದಲು ಏನಾದರೂ ಹೊಸತನ ತರಬಹುದಲ್ವಾ? ಮತ್ತೆ ಮತ್ತೆ ಅದದೇ ಎಳೆದಾಡ ನೋಡಿ ನಮಗೂ ಸಾಕಾಗಿ ಹೋಗಿದೆ ಅನ್ನೋದು ವೀಕ್ಷಕರ ಮಾತು. ಇದಕ್ಕೆ ಸೀರಿಯಲ್‌ ಟೀಮ್‌ಗಳು ಬಗ್ಗೋ ಹಾಗೆ ಕಾಣ್ತಿಲ್ಲ. ಸದ್ಯಕ್ಕಂತೂ ವೀಕ್ಷಕರ ಮೂಗಿಗೆ ತುಪ್ಪ ಸವರೋ ಕಾರ್ಯ ನಿರಂತರವಾಗಿ ಪ್ರಗತಿಯಲ್ಲಿರುವಂತೆ ಕಾಣುತ್ತದೆ. ವೀಕ್ಷಕರೇ ನಮ್ಮ ಟೇಸ್ಟ್ ಬದಲಾಗಿದೆ ಸ್ವಾಮೀ, ಹೊಸದನ್ನೇನಾದ್ರೂ ಹೇಳಿ ಅನ್ನೋದನ್ನು ಮನದಟ್ಟು ಮಾಡೋವರೆಗೂ ಈ ತುಪ್ಪ ಸವರುವಿಕೆ ನಿರಂತರ ಅನಿಸುತ್ತೆ.

Latest Videos
Follow Us:
Download App:
  • android
  • ios