ಬಿಗ್ ಬಾಸ್ ಸೀಸನ್ 12ರ ವಿಜೇತ ಗಿಲ್ಲಿ ನಟ, ಮನೆಯಿಂದ ಹೊರಬಂದ ತಕ್ಷಣ ನಟ ಶಿವರಾಜ್ ಕುಮಾರ್ ಅವರನ್ನು ಭೇಟಿಯಾಗಿದ್ದಾರೆ. ಈ ಹಿಂದೆ ಗಿಲ್ಲಿಯ ಗೆಲುವನ್ನು ಭವಿಷ್ಯ ನುಡಿದಿದ್ದ ಶಿವಣ್ಣ, ಈಗ ಅವರಿಗೆ ಸಿನಿಮಾ ಹಾಗೂ ಮುಂದಿನ ಭವಿಷ್ಯದ ಬಗ್ಗೆ ಸಲಹೆ ನೀಡಿದ್ದಾರೆ.

ಬೆಂಗಳೂರು: ನಲ್ಲಿ ಮೂಳೆ ಸ್ಟಾರ್​ ಗಿಲ್ಲಿ ಈಗ ಕನ್ನಡ ಕಿರುತೆರೆಯ ಬಿಗ್‌ ಬಾಸ್. ಒಂಟಿಮನೆಯಲ್ಲಿ 24 ಜನ ಸ್ಪರ್ಧಿಗಳ ಜೊತೆ ಪರಾಕ್ರಮದಿಂದ ಹೋರಾಡಿ ಬಿಗ್​​ಬಾಸ್​ ಕಿರೀಟವನ್ನ ಮುಡಿಗೇರಿಸಿಕೊಂಡಿದ್ದಾನೆ. ಬಿಗ್​​ಬಾಸ್​ ಮನೆಯಿಂದ ಹೊರ ಬರುತ್ತಿದ್ದಂತೆ ಗಿಲ್ಲಿ ಮಾಡಿದ ಮೊದಲ ಕೆಲಸ ಏನು ಗೊತ್ತಾ? ಡೈರೆಕ್ಟ್​ ಆಗಿ ದೊಡ್ಮನೆಯ ಹಿರಿಯಣ್ಣ ಶಿವರಾಜ್​ ಕುಮಾರ್​ರನ್ನ ಭೇಟಿ ಮಾಡಿದ್ದು. ಹಾಗಾದ್ರೆ ಗಿಲ್ಲಿ ಶಿವಣ್ಣನ ಬೇಟಿ ಮಾಡಿದ್ದು ಯಾಕೆ? ಗಿಲ್ಲಿಗೆ ಹ್ಯಾಟ್ರಿಕ್ ಹೀರೋ ಕೊಟ್ಟ ಸವಾಲೇನು? ಈ ಎಕ್ಸ್​ಕ್ಲ್ಯೂಸೀವ್ ಸ್ಟೋರಿಯಲ್ಲಿ ನೋಡೋಣ ಬನ್ನಿ.

ಬಿಗ್​​​ಬಾಸ್​ ಸೀಸನ್​ 12 ಮುಗಿದಿದೆ. ಆದ್ರೆ ಗೆದ್ದ ಕಂಟೆಸ್ಟೆಂಟ್​ಗಳ ಸಂಭ್ರಮ ದುಪ್ಪಟ್ಟಾಗಿದೆ. ಗಿಲ್ಲಿ ಗೆದ್ದಿದ್ದಕ್ಕೆ ಅವನ ಫಾಲೋವರ್ಸ್​​ ಹಬ್ಬ ಮಾಡಿದ್ರೆ, ಕೆಲ ಸಹ ಸ್ಪರ್ಧಿಗಳು ಕೆಸರೆರಚಾಟ ಶುರು ಮಾಡಿದ್ದಾರೆ. ಬಡವ ಶ್ರೀಮಂತ ಅಂತ ಸ್ಟ್ರೈಟ್​​ ಹಿಟ್​​ ಮಾಡುತ್ತಿದ್ದಾರೆ.

ಗಿಲ್ಲಿ ನಟನ ಆಟ ಮೆಚ್ಚಿ ಬೆನ್ನು ತಟ್ಟಿದ ದೊಡ್ಡಣ್ಣ!

ಗಿಲ್ಲಿ ನಟ ಈಗ ಸ್ಟಾರ್​. ನಲ್ಲಿ ಮೂಳೆ ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಫೇಮಸ್ ಆಗುತ್ತಿದ್ದ ಹುಡುಗ ಕಾಮಿಡಿ ಶೋಗಳಿಂದ ಒಂದಷ್ಟು ಪ್ರೇಕ್ಷಕರ ಮನ ಮನಸ್ಸು ಗೆದ್ದು, ಈಗ ವ್ಯಕ್ತಿತ್ವದ ಆಟ ಬಿಗ್​ಬಾಸ್​​ನಲ್ಲಿ ತನ್ನ ವ್ಯಕ್ತಿತ್ವದಿಂದಲೇ ಲಕ್ಷಾಂತರ ಜನರ ಪ್ರೀತಿ ಸಂಪಾದಿಸಿದ್ದಾನೆ. ಈ ಖುಷಿಯಲ್ಲಿ ಒಂಟಿ ಮನೆಯಿಂದ ಹೊರ ಬಂದ ಗಿಲ್ಲಿ ನೇರವಾಗಿ ಓಡಿದ್ದು ದೊಡ್ಮನೆ ದೊರೆಯ ಬಳಿ. ಬಿಗ್​ಬಾಸ್​ ಟ್ರೋಫಿ ಹಿಡಿದು ಹೋದ ಗಿಲ್ಲಿಗೆ ಸೆಂಚೂರಿ ಸ್ಟಾರ್ ಶಿವರಾಜ್​ ಕುಮಾರ್ ದಂಪತಿ ಆಶೀರ್ವಾದ ಸಿಕ್ಕಿದೆ.

ಒಂಟಿಮನೆ ವಾರಸ್ದಾರ ದೊಡ್ಮನೆಗೆ ಓಡಿದ್ದೇಕೆ ಗೊತ್ತಾ?

ಈ ಬಾರಿ ಬಿಗ್ ಬಾಸ್ ಗೆಲ್ಲೋದು ಗಿಲ್ಲಿಯೇ ಎಂದು ಶಿವರಾಜ್​ ಕುಮಾರ್​ ಓಪನ್ ಆಗಿ ಹೇಳಿದ್ರು. ಶಿವಣ್ಣ ನುಡಿದಂತೆ ಗಿಲ್ಲಿ ಬಿಗ್ ಬಾಸ್ ಗೆದ್ದು ಬೀಗುತ್ತಿದ್ದಾನೆ. ಈ ವಿಷಯ ಗಿಲ್ಲಿಗೆ ಗೊತ್ತಾಗಿದ್ದೇ ತಡ, ಕಿಚ್ಚನ ಅಡ್ಡದಿಂದ ಡೈರೆಕ್ಟ್‌ ಆಗಿ ಶಿವರಾಜ್​ ಕುಮಾರ್ ಮನೆಗೆ ಗಿಲ್ಲಿ ಎಂಟ್ರಿಕೊಟ್ಟಿದ್ದಾನೆ. ಗಿಲ್ಲಿ ಶಿವಣ್ಣನ ಮನೆಗೆ ಹೋಗೋಕೆ ಮತ್ತೊಂದು ಕಾರಣವೂ ಇದೆ..

ಸೆಂಚೂರಿ ಸ್ಟಾರ್ ಸಿನಿಮಾದಲ್ಲಿ ಗಿಲ್ಲಿಗೆ ಸಿಕ್ತಾ ಚಾನ್ಸ್?

ಗಿಲ್ಲಿ ಈಗ ಸಿನಿಮಾ ಜಗತ್ತಿನ ಕಣ್ಣು ತನ್ನ ಮೇಲೆ ಬೀಳುವಂತೆ ಮಾಡಿಕೊಂಡಿದ್ದಾನೆ. ಈ ಮಳವಳ್ಳಿ ಮಾವನ ಮಗನ ಕ್ರೇಜ್ ನೋಡಿದ ಸಿನಿಮಾ ಮಂದಿ ಹಲವು ಸಿನಿಮಾಗಳಿಗೆ ಆಪರ್ ಮಾಡುತ್ತಿದ್ದಾರೆ. ಆದ್ರೆ ಶಿವರಾಜ್​ ಕುಮಾರ್,​ ರವಿಚಂದ್ರನ್​​ ಸೇರಿದಂತೆ ಕೆಲ ದಿಗ್ಗಜರು ಒಟ್ಟಿಗೆ ನಟಿಸುತ್ತಿರೋ ಹಳ್ಳಿ ಸೊಗಡಿನ ಸಿನಿಮಾ ಒಂದರಲ್ಲಿ ಗಿಲ್ಲಿ ನಟನಿಗೂ ಚಾನ್ಸ್ ಸಿಕ್ಕಿದೆಯಂತೆ. ಹೀಗಾಗಿ ಗೆದ್ದಿದ್ದಕ್ಕೆ ಹಿರಿಯಣ್ಣನ ಆಶೀರ್ವಾದ ಪಡೆದುಬಿಡೋಣ ಅಂತ ಗಿಲ್ಲಿ ಶಿವರಾಜ್ ಕುಮಾರ್ ದಂಪತಿ ಕಾಲಿಗೆ ಅಡ್ಡ ಉದ್ದುದ್ದ ಬಿದ್ದಿದ್ದಾನೆ.

ಬಿಗ್ ಬಾಸ್‌ಗೂ ಮುನ್ನವೇ ಗಿಲ್ಲಿಯ ಪ್ರತಿಭೆಯನ್ನು ಶಿವಣ್ಣ ನೋಡಿದ್ದಾರೆ. ಕಾಮಿಡಿ ಕಿಲಾಡಿಗಳು, ಭರ್ಜರಿ ಬ್ಯಾಚ್ಯೂಲರ್​​​ ಡಾನ್ಸ್​ ಕರ್ನಾಟಕ ಡಾನ್ಸ್​ ಶೋಗಳಲ್ಲಿ ಪ್ರಾಪರ್ಟಿ ಕಾಮಿಡಿ ಮಾಡಿ ಒಂದು ಹಂತಕ್ಕೆ ಐಡೆಂಟಿಟಿ ಸೃಷ್ಟಿಸಿಕೊಂಡಿದ್ದ ಗಿಲ್ಲಿ. ಅಷ್ಟೆ ಅಲ್ಲ ಶಿವರಾಜ್ ಕುಮಾರ್ ಎದುರು ಡಾನ್ಸ್ ಕರ್ನಾಟಕ ಡಾನ್ಸ್ ಕಾರ್ಯಕ್ರಮದಲ್ಲಿ ಕುಣಿದು ಕಾಮಿಡಿ ಮಾಡಿ ಶಿವಣ್ಣನಿಂದ ಭೇಷ್ ಎನಿಸಿಕೊಂಡಿದ್ದ ಗಿಲ್ಲಿ.

ಮದುವೆ-ಸಿನಿಮಾ ಗಿಲ್ಲಿಗೆ ಶಿವಣ್ಣ ತೋರಿದ ದಾರಿ ಯಾವ್ದು?

ಗಿಲ್ಲಿ ಶಿವಣ್ಣನ ಅಪ್ಪಟ ಶಿಷ್ಯ. ಹೀಗಾಗಿ ಶಿವರಾಜ್​ ಕುಮಾರ್​ ಒಳ್ಳೆ ಸಿನಿಮಾ ಮಾಡು ಅಂತ ಆಶೀರ್ವಾದ ಮಾಡಿದ್ದಾರೆ. ಆದ್ರೆ ಗಿಲ್ಲಿ ಮನೆಯವ್ರು ಮಗನ ಮದ್ವೆ ಮಾಡೋಕೆ ಸಜ್ಜಾಗುತ್ತಿದ್ದಾರೆ. ಹೀಗಾಗಿ ಗಿಲ್ಲಿ ನಟನಿಗೆ ಈಗ ಮದುವೆನಾ? ಸಿನಿಮಾನಾ? ಅನ್ನೋ ಚಿಂತೆಯಂತು ಕಾಡುತ್ತಿದೆ.

ಡಾನ್ಸ್​ ಕರ್ನಾಟಕ ಡಾನ್ಸ್​​ ಶೋನಲ್ಲಿ ಶಿವರಾಜ್​ ಕುಮಾರ್​ ಅತಿಥಿ ಆಗಿದ್ರು. ಆಗ ಶಿವರಾಜ್​ ಕುಮಾರ್ ಎದುರು ಗಿಲ್ಲಿ ನಟ ಫರ್ಮಾಮೆನ್ಸ್ ಮಾಡಿದ್ರು. ಗಿಲ್ಲಿಯ ಟ್ಯಾಲೆಂಟ್​​ನ ಅಂದೇ ಗುರುತಿಸಿದ್ದ ಶಿವರಾಜ್ ಕುಮಾರ್​​​ ಬಿಗ್​​ಬಾಸ್​ನಲ್ಲಿ ಗಿಲ್ಲಿಯೇ ಗೆಲ್ಲೋದು ಅಂದಿದ್ರು. ಅದು ನಿಜ ಆಗಿದೆ. ಕಾಮಿಡಿ ಕಿಲಾಡಿಗಳು ಸೀಸನ್-4, ಡಾನ್ಸ್​ ಕರ್ನಾಟಕ ಡಾನ್ಸ್, ಭರ್ಜರಿ ಬ್ಯಾಚೂಲರ್ಸ್ ​​ಶೊಗಳು ಗಿಲ್ಲಿಗೆ ಐಡೆಂಟಿಟಿ ಕೊಟ್ಟಿವೆ. ಆದ್ರೆ ಗಿಲ್ಲಿಗೆ ಹೊಸದೊಂದು ಲೈಫ್​ ಕೊಟ್ಟಿರೋದು ಮಾತ್ರ ಬಿಗ್​ಬಾಸ್​ ಇದನ್ನ ಗಿಲ್ಲಿ ಹೇಗೆ ಉಳಿಸಿ ಬೆಳೆಸಿಕೊಂಡು ಹೋಗುತ್ತಾನೋ ಕಾದು ನೋಡಬೇಕು.

ವಿಜಯ್ ಪಟೆದಾರ್, ಏಷ್ಯಾನೆಟ್​ ಸುವರ್ಣ ನ್ಯೂಸ್