ಬಿಗ್ ಬಾಸ್ ವಿಜೇತ ಗಿಲ್ಲಿಯ ಗೆಲುವು, ಸಹ ಸ್ಪರ್ಧಿಗಳಾದ ಕಾವ್ಯ ಮತ್ತು ಅಶ್ವಿನಿ ಗೌಡ ನಡುವೆ ಹೊಸ ಸಂಘರ್ಷಕ್ಕೆ ಕಾರಣವಾಗಿದೆ. ಗಿಲ್ಲಿ ಬಡವನಂತೆ ನಟಿಸಿ ಗೆದ್ದಿದ್ದಾನೆ ಎಂಬ ಅಶ್ವಿನಿಯ ಹೇಳಿಕೆಗೆ, 'ಬಡವರ ಮಕ್ಕಳು ಬೆಳೆಯಬೇಕು' ಎಂದು ಕಾವ್ಯ ಸಾಮಾಜಿಕ ಜಾಲತಾಣದಲ್ಲಿ ತಿರುಗೇಟು ನೀಡಿದ್ದಾರೆ.
ಬಿಗ್ ಬಾಸ್ ಗೆದ್ದ ಗಿಲ್ಲಿ ಫುಲ್ ಗಮ್ಮತ್ತು ಮಾಡುತ್ತಾ ಗಿಲ್ಲಕ್ಕೋ ಶಿವ ಎನ್ನುತ್ತಿದ್ದಾರೆ. ಆದ್ರೆ ಬಿಗ್ಬಾಸ್ ಕಿರೀಟ ಮುಡಿಗೇರಿಸಿಕೊಂಡ ಗಿಲ್ಲಿ ಗೆಲುವು ಈಗ ಸಹ ಸ್ಪರ್ಧಿಗಳ ಕಚ್ಚಾಟ ಕೆಸರೆರಚಾಟಕ್ಕೆ ಕಾರಣ ಆಗುತ್ತಿದೆ. ಗಿಲ್ಲಿಯ ಕಾವು ಹಾಗು ರಾಜಮಾತೆ ಅಶ್ವಿನಿ ಮಧ್ಯೆ ಬಡವರ ಮಕ್ಕಳು ಅನ್ನೋ ಮಾತಿನ ಬೆಂಕಿ ಹಚ್ಚಿದೆ. ಹಾಗಾದ್ರೆ ಗಿಲ್ಲಿಯ ಗೆಲುವು ಕಾವ್ಯ ಅಶ್ವಿನಿ ಮಧ್ಯೆ ಜಗಳ ತಂದಿಟ್ಟಿದೆಯಾ? ಈ ಇಂಟ್ರೆಸ್ಟಿಂಗ್ ಸ್ಟೋರಿಯಲ್ಲಿ ನೋಡೋಣ ಬನ್ನಿ.
ಬಿಗ್ಬಾಸ್ ಸೀಸನ್ 12 ಹಲವು ಅಚ್ಚರಿಗಳಿಗೆ ಸಾಕ್ಷಿಯಾದ ರಿಯಾಲಿಟಿ ಶೋ. ಅದಕ್ಕೆ ಕಾರಣ ಒಂದ್ ಕಡೆ ನಲ್ಲಿ ಮೂಳೆ ಸ್ಟಾರ್ ಗಿಲ್ಲಿ ನಟ ಆದ್ರೆ ಮತ್ತೊಂದು ಕಡೆ ಗಿಲ್ಲಿಯ ಕಾವು ಹಾಗು ರಾಜಮಾತೆ ಅಶ್ವಿನಿ ಗೌಡ. ಈ ಮೂವರ ಮಧ್ಯೆ ಬಿಗ್ ಬಾಸ್ ಶೋ ಶುರುವಾದಾಗಿನಿಂದ ವಾದ ವಿವಾದ. ವಾರ್. ಕಚ್ಚಾಟ, ಗಲಾಟೆ, ಕೌಂಟರ್ ಅಟ್ಯಾಕ್, ಎಲ್ಲವೂ ನಡೆದಿದೆ.
ಗಿಲ್ಲಿ ಗೆಲುವು. ಕಾವ್ಯ-ಅಶ್ವಿನಿ ಗೌಡ ಮಧ್ಯೆ ಇಲ್ಲ ಒಲವು.!
ಯೆಸ್, ಬಿಬ್ ಬಾಸ್ ಮುಗಿದು ಎರಡು ದಿನ ಆಯ್ತು. ಹಳ್ಳಿ ಹೈದ ಗಿಲ್ಲಿ ಪ್ಯಾಟೇಗ್ ಬಂದು ಬಿಗ್ಬಾಸ್ ಮನೆಯ ರಾಜನಾಗಿದ್ದೂ ಆಯ್ತು. ಗಿಲ್ಲಿ ಗೆದ್ದಿದ್ದಕ್ಕೆ ಇವನ ಫಾಲೋರ್ಸ್ ಹಬ್ಬ ಮಾಡುತ್ತಿದ್ದಾರೆ. ಆ ಕಡೆ ಯಾರ ಸಂಪರ್ಕಕ್ಕೂ ಸಿಗದೇ ಗಿಲ್ಲಿ ಗಮ್ಮತ್ ಮಾಡುತ್ತಿದ್ದಾನೆ. ಆದ್ರೆ ಈ ಹಾಸ್ಯ ನಟನ ಗೆಲುವನ್ನು ಜೊತೆಗಿದ್ದ ಕಂಟೆಸ್ಟೆಂಟ್ಗಳು ಒಪ್ಪುತ್ತಿಲ್ಲ. ಗಿಲ್ಲಿಯ ಗೆಲುವು ಈಗ ಕಾವ್ಯ ಹಾಗು ಅಶ್ವಿನಿ ಮಧ್ಯೆ ಇದ್ದ ಒಲವಿಗೆ ಬೆಂಕಿ ಇಟ್ಟಿದೆ. ಕಾವ್ಯ - ಅಶ್ವಿನಿ ಒಬ್ಬರಿಗೊಬ್ಬರು ತೆರೆ ಮರೆಯಲ್ಲಿ ವಾರ್ ಶುರು ಮಾಡಿದ್ದಾರೆ.
ಬಿಗ್ಬಾಸ್ ಬಳಿಕ ಶುರುವಾಯ್ತು ಬಡವ-ಶ್ರೀಮಂತ ಗಲಾಟೆ!
ಬಿಗ್ಬಾಸ್ ಮುಗಿದು ಗಿಲ್ಲಿ ನಟ 60 ಲಕ್ಷ ದುಡ್ಡು ಹಾಗು ಒಂದು ಲಕ್ಸುರಿ ಕಾರನ್ನ ಗೆದ್ದಾಗಿದೆ. ಈಗ ಬಿಗ್ಬಾಸ್ ಸ್ಪರ್ಧಿಗಳ ಮಧ್ಯೆ ಬಡವ ಶ್ರೀಮಂತ ಅನ್ನೋ ಗಲಾಟೆ ಏರ್ಪಟ್ಟಿದೆ. ಬಿಗ್ಬಾಸ್ ಮನೆ ರಾಜಮಾತೆ ಅಂತಲೇ ಕರೆಸಿಕೊಂಡಿದ್ದ ರಿಯಲ್ ಲೈಫ್ನಲ್ಲೂ ಶ್ರೀಮಂತಿಕೆಯನ್ನೇ ಹೊದ್ದಿರೋ ಅಶ್ವಿನಿ ಗೌಡ ಗಿಲ್ಲಿ ಗೆಲುವನ್ನ ಒಪ್ಪಿಕೊಳ್ಳೋದ್ರ ಜೊತೆಗೆ ಬಡವರ ಮಕ್ಕಳು ಬೆಳೆಯಬೇಕು ನಿಜ. ಆದರೆ ಗಿಲ್ಲಿ ಬಡವ ಅಲ್ಲ, ಬಡವರ ಥರ ಗೆಟಪ್ ಹಾಕಿಕೊಂಡು ಆಟ ಆಡಿ ಗೆದ್ದ ಎಂದಿದ್ರು. ಅಶ್ವಿನಿ ಗೌಡ ಹೇಳಿಕೆಗೆ ಗಿಲ್ಲಿಯ ಹಾರ್ಟ್ ಫೇವರಿಟ್ ಕಾವ್ಯ ಕೌಂಟರ್ ಅಟ್ಯಾಕ್ ಮಾಡಿದ್ದಾರೆ..
ಆ ಕಡೆ ಅಶ್ವಿನಿ ಗೌಡ ಗಿಲ್ಲಿ ಗೆಲುವಿನ ಬಗ್ಗೆ ಮಾತನಾಡುತ್ತಿದ್ದಂತೆ ಈ ಕಡೆ ಗಿಲ್ಲಿಯ ಗೆಳತಿ ಕಾವ್ಯ ಕೌಂಟರ್ ಅಟ್ಯಾಕ್ ಮಾಡಿದ್ದಾರೆ. ಗಿಲ್ಲಿ ಫೋಟೊಗಳನ್ನು ಪೋಸ್ಟ್ ಮಾಡಿರುವ ಕಾವ್ಯಾ, ಬಡವರ ಮಕ್ಕಳು ಬೆಳಿಬೇಕು ಕಣ್ರಯ್ಯ . ಹೇ ಗಿಲ್ಲಿ ಕಂಗ್ರಾಟ್ಸ್ ಕಣೋ. ನೀನು ಇದಕ್ಕೆ ಅರ್ಹ. ಜೀರೊದಿಂದ ಹೀರೋ ಈಗ. ಇನ್ನು ಸಾಕಷ್ಟು ಸಾಧಿಸಬೇಕು. ಆದಷ್ಟು ಬೇಗ ಆಕ್ಷನ್ ಕಟ್ ಹೇಳುವಂತಾಗಲಿ. ತುಂಬಾ ತುಂಬ ಒಳ್ಳೇದಾಗ್ಲಿ" ಎಂದು ಕಾವ್ಯಾ ಬರೆದುಕೊಂಡಿದ್ದಾರೆ.
'ಬಡವರ ಮಕ್ಕಳು ಬೆಳಿಬೇಕು ಕಣ್ರಯ್ಯ' ಎನ್ನುವ ಸಾಲು ಅಶ್ವಿನಿಗೆ ಗೌಡಗೆ ಕೌಂಟರ್ ಕೊಡಲು ಬಳಸಿದ್ದಾರೆ ಎಂದು ಗಿಲ್ಲಿ ಕಾವ್ಯ ಫ್ಯಾನ್ಸ್ ಕಾಮೆಂಟ್ ಮಾಡುತ್ತಿದ್ದಾರೆ. ಮೊದಲೇ ಕಾವ್ಯ ಗಿಲ್ಲಿಗೆ ರಾಜಮಾತೆ ಅಶ್ವಿನಿ ಗೌಡ ಅಂದ್ರೆ ಅಷ್ಟಕ್ಕಷ್ಟೆ. 110 ದಿನ ಮನೆ ಒಳಗೆ ಇದ್ದರೂ ಕಾವ್ಯಾ ಹೇಗೆ ಅಂತ ಅರ್ಥವಾಗಲಿಲ್ಲ ನನಗೆ ಎಂದು ಸುದೀಪ್ ಎದುರು ಅಶ್ವಿನಿ ಹೇಳಿದ್ರು.
ಅಷ್ಟೆ ಅಲ್ಲ ಗಿಲ್ಲಿ ಇಲ್ಲ ಅಂದ್ರೆ ಕಾವ್ಯಾ ಜೀರೊ ಎಂದು ಅಶ್ವಿನಿ ಹೇಳುತ್ತಲೇ ಬಂದಿದ್ರು. ಗಿಲ್ಲಿ ಕಾರಣಕ್ಕೆ ಕಾವ್ಯಾ ಶೈವ ಫಿನಾಲೆವರೆಗೂ ಬಂದ್ರು ಅನ್ನೋ ಹೇಳಿಕೆಗಳು ಇವೆ. ಆದ್ರೆ ಗಿಲ್ಲಿ ಮಾತ್ರ ಕಾವ್ಯನ ಕೊನೆ ಒರೆಗೂ ಬಿಟ್ಟುಕೊಟ್ಟಿಲ್ಲ. ಈಗ ಬಿಗ್ಬಾಸ್ ಮನೆ ಹೊರಗೆ ಬಂದ ಮೇಲೆ ಕಾವ್ಯ ಗಿಲ್ಲಿಯನ್ನು ಬಿಟ್ಟುಕೊಡುತ್ತಿಲ್ಲ. ಗಿಲ್ಲಿ ಗೆಲುವನ್ನ ಯಾರಾದ್ರು ಹೀಯಾಳಿಸಿದ್ರೆ, ಅವರಿಗೆ ತಕ್ಕ ಉತ್ತರ ಕೊಡೋ ಕೆಲಸ ಕಾವ್ಯ ಮಾಡುತ್ತಿದ್ದಾರೆ.


