- Home
- Entertainment
- TV Talk
- ಬರುತ್ತಿದ್ದಂತೆ ಕರ್ಣ, ನಿತ್ಯಾ, ನಿಧಿಗೆ ಪಿಂಡ ಇಟ್ಟ ಅಭಿಜಿತ್; ಸೀರಿಯಲ್‌ನಿಂದ ಹೊರ ಬಂದಿದ್ಯಾಕೆ ಟಿಎಸ್ ನಾಗಾಭರಣ?
ಬರುತ್ತಿದ್ದಂತೆ ಕರ್ಣ, ನಿತ್ಯಾ, ನಿಧಿಗೆ ಪಿಂಡ ಇಟ್ಟ ಅಭಿಜಿತ್; ಸೀರಿಯಲ್‌ನಿಂದ ಹೊರ ಬಂದಿದ್ಯಾಕೆ ಟಿಎಸ್ ನಾಗಾಭರಣ?
ಜೀ ಕನ್ನಡದ 'ಕರ್ಣ' ಧಾರಾವಾಹಿಯಲ್ಲಿ ರಮೇಶ್ ಪಾತ್ರದಿಂದ ಹಿರಿಯ ನಟ ಟಿ.ಎಸ್. ನಾಗಾಭರಣ ಹೊರನಡೆದಿದ್ದು, ಆ ಪಾತ್ರಕ್ಕೆ ಇದೀಗ ನಟ ಅಭಿಜಿತ್ ಪ್ರವೇಶಿಸಿದ್ದಾರೆ. ರಮೇಶ್ ಪಾತ್ರದಲ್ಲಿ ಅಭಿಜಿತ್, ಕರ್ಣನ ಮುಂದಿನ ಹೆಜ್ಜೆಗಳನ್ನು ತಾನೇ ನಿರ್ಧರಿಸುವುದಾಗಿ ಪಣ ತೊಟ್ಟಿದ್ದಾರೆ.

ನಟ ಅಭಿಜಿತ್ ಆಗಮನ
ಜೀ ಕನ್ನಡದ ಕರ್ಣ ಸೀರಿಯಲ್‌ನ ರಮೇಶ್ ಪಾತ್ರದಲ್ಲಿ ನಟಿಸುತ್ತಿದ್ದ ಹಿರಿಯ ನಟ, ನಿರ್ದೇಶಕ ಟಿಎಸ್ ನಾಗಾಭರಣ ಧಾರಾವಾಹಿಯಿಂದ ಹೊರ ಬಂದಿದ್ದಾರೆ. ಇದೀಗ ಈ ಪಾತ್ರಕ್ಕೆ ನಟ ಅಭಿಜಿತ್ ಆಗಮಿಸಿದ್ದಾರೆ. ಇಂದಿನ ಪ್ರೋಮೋದಲ್ಲಿ ಅಭಿಜಿತ್ ಅವರನ್ನು ತೋರಿಸಲಾಗಿದೆ.
ಕರ್ಣ ಶಪಥ
ರಮೇಶ್ ಮತ್ತು ತಾರಾ ಕುತಂತ್ರದಿಂದ ಜೈಲು ಸೇರಿದ್ದ ಕರ್ಣ ಕೊನೆಗೂ ಹೊರಗೆ ಬಂದಿದ್ದಾನೆ. ಆಸ್ಪತ್ರೆ ಮುಂದೆ ಬಂದಿರುವ ಕರ್ಣ, ನನ್ನ ಮೇಲಿನ ದ್ವೇಷಕ್ಕಾಗಿ ಆಸ್ಪತ್ರೆಯನ್ನು ದಾಳವಾಗಿ ಬಳಸಿಕೊಳ್ಳಲಾಯ್ತು. ಈ ಕುತಂತ್ರದ ಹಿಂದರೋರು ಯಾರು ಎಂಬುದನ್ನು ಪತ್ತೆ ಮಾಡುತ್ತೇನೆ ಎಂದು ಕರ್ಣ ಶಪಥ ಮಾಡಿದ್ದಾನೆ.
ರಮೇಶ್
ಇತ್ತ ಕರ್ಣ ಜೈಲು ಸೇರಿದ್ದರಿಂದ ಅಜ್ಜಿ ಅನ್ನಪೂರ್ಣ ಆಸ್ಪತ್ರೆ ಮುಂದೆಯೇ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದಳು. ಕರ್ಣ ಬರುತ್ತಿದ್ದಂತೆ ರಮೇಶ್ ಎಲ್ಲಿದ್ದಾನೋ ಏನು? ಆಸ್ಪತ್ರೆಗೆ ಬೀಗ ಹಾಕಿದ್ದರಿಂದ ರಮೇಶ್ ನೊಂದುಕೊಂಡಿರುತ್ತಾನೆ ಎಂದು ಅಜ್ಜಿ ಕಣ್ಣೀರು ಹಾಕುತ್ತಾಳೆ. ಇದರ ನಂತರ ಅಭಿಜಿತ್ ಅವರನ್ನು ತೋರಿಸಲಾಗಿದೆ.
ಇದನ್ನೂ ಓದಿ: ಕರ್ಣ ಸೀರಿಯಲ್‌ನಿಂದ ಹೊರ ಬಂದ ಟಿಎಸ್ ನಾಗಾಭರಣ; ಹೊಸ ವಿಲನ್ ಆಗಿ ಸ್ಟಾರ್ ನಟನ ಬಿಗ್ ಎಂಟ್ರಿ
ಪಿಂಡ
ರಮೇಶ್ ನೊಂದುಕೊಂಡಿದ್ದಾನೆ ಅಂತ ಅಂದ್ಕೊಂಡಿದ್ರೆ ಆತ ನಿತ್ಯಾ, ನಿಧಿ ಮತ್ತು ಕರ್ಣನ ಫೋಟೋಗೆ ಪೂಜೆ ಸಲ್ಲಿಸಿ ಪಿಂಡ ಬಿಡುತ್ತಿದ್ದಾನೆ. ಇನ್ಮುಂದೆ ನೀನು ಇರಿಸುವ ಪ್ರತಿಯೊಂದು ಹೆಜ್ಜೆ ಏನಾಗಿರಬೇಕು ಎಂದು ನಾನು ನಿರ್ಧರಿಸುತ್ತೇನೆ ಎಂದು ರಮೇಶ್ ಹೇಳಿದ್ದಾನೆ.
ಇದನ್ನೂ ಓದಿ: ಈ ಕೆಟ್ಟ ಸಂಸ್ಕೃತಿಯನ್ನು ನಾವು ಕೊನೆಗಾಣಿಸಲೇಬೇಕು: ಕಾಂತಾರ ನಟಿ ಸಪ್ತಮಿ ಗೌಡ ಆಗ್ರಹ
ಸೀರಿಯಲ್ ಬಿಟ್ಟಿದ್ಯಾಕೆ ಟಿಎಸ್ ನಾಗಾಭರಣ?
ವೈಯಕ್ತಿಕ ಕಾರಣಗಳಿಂದ ಟಿ.ಎಸ್.ನಾಗಾಭರಣ ಸೀರಿಯಲ್‌ನಿಂದ ಹೊರ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ. ಮುಂದಿನ ದಿನಗಳಲ್ಲಿ ರಮೇಶ್ ನಾಗಿ ಅಭಿಜಿತ್ ನಟಿಸಲಿದ್ದಾರೆ. ರಮೇಶ್‌ನ ಪಾತ್ರಕ್ಕೆ ನಾಗಾಭರಣ ಒಂದು ರೂಪ ನೀಡಿದ್ದು, ಅದನ್ನು ಮುಂದುವರಿಸಿಕೊಂಡು ಹೋಗುವ ಜವಾಬ್ದಾರಿ ಅಭಿಜಿತ್ ಮೇಲಿದೆ.
ಇದನ್ನೂ ಓದಿ:
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

